Saturday, December 3, 2016

ಮನುಷ್ಯ ಕಾಣೆ:

      ಮನೆಯಿಂದ ಹೋದ ವ್ಯಕ್ತಿಯೊಬ್ಬರು ಮರಳಿ ಮನೆಗೆ ಬಾರದೆ ಕಾಣೆಯಾಗಿರುವ ಘಟನೆ ನಾಪೋಕ್ಲು ಠಾಣಾ ಸರಹದ್ದಿನ ಬಲಮುರಿ ಗ್ರಾಮದಲ್ಲಿ ನಡೆದಿದೆ. ಬಲಮುರಿ ಗ್ರಾಮದ ನಿವಾಸಿ ಶ್ರೀಮತಿ ನೀಲಮ್ಮ ಎಂಬವರ ಪತಿ 72 ವರ್ಷ ಪ್ರಾಯದ ಹೆಚ್.ಎಂ. ತಮ್ಮಯ್ಯ ಎಂಬವರು ದಿನಾಂಕ 3-11-2016 ರಂದು ಬೆಳಿಗ್ಗೆ 8-00 ಗಂಟೆ ಸಮಯದಲ್ಲಿ ಪತ್ನಿ ನೀಲಮ್ಮನವರಿಗೆ ತಾನು ಹೊರಗೆ ಹೋಗಿ ಬರುವುದಾಗಿ ತಿಳಿಸಿ ಹೋಗಿದ್ದು ತದನಂತರ ಮನೆಗೆ ಬಾರದೆ ಕಾಣೆಯಾಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಪಾದಚಾರಿಗೆ ವ್ಯಾನ್ ಡಿಕ್ಕಿ:

      ಪಾದಚಾರಿ ಮಹಿಳೆಯೊಬ್ಬರಿಗೆ ಮಾರುತಿ ವ್ಯಾನೊಂದು ಡಿಕ್ಕಿಯಾಗಿ ಗಾಯಗೊಂಡ ಘಟನೆ ಶ್ರೀಮಂಗಲ ಠಾಣಾ ವ್ಯಾಪ್ತಿಯ ನಾಂಗಾಲ ಗ್ರಾಮದಲ್ಲಿ ನಡೆದಿದೆ. ನಾಂಗಾಲ ಗ್ರಾಮದ ನಿವಾಸಿ ಪೂವಮ್ಮ ಎಂಬವರು ತನ್ನ ಮಗಳಾದ ಶ್ರೀಮತಿ ಶೋಭಾರವರೊಂದಿಗೆ ಹುದಿಕೇರಿ ಪಟ್ಟಣದಲ್ಲಿ ನಡೆದುಕೊಂಡು ಹೋಗುತ್ತಿದ್ದಾದ ಆರೋಪಿ ಕರ್ತಮಾಡ ಸೋಮಣ್ಣ ಎಂಬವರು ಮಾರುತಿ ವ್ಯಾನನ್ನು ದುಡುಕಿನಿಂದ ಚಾಲನೆ ಮಾಡಿಕೊಂಡು ಬಂದು ಪೂವಮ್ಮನವರಿಗೆ ಡಿಕ್ಕಿಪಡಿಸಿದ ಪರಿಣಾಮ ಸದರಿ ಪೂವಮ್ಮನವರ ತಲೆ, ಕಾಲೆ ಪೆಟ್ಟಾಗಿ ಗಾಯಗಳಾಗಿದ್ದು, ಶ್ರೀಮಂಗಲ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ನೇಣುಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ:

       ಕಳೆದ ಫೆಬ್ರವರಿ ತಿಂಗಳಲ್ಲಿ ಕಾಣೆಯಾದ ವ್ಯಕ್ತಿಯೊಬ್ಬರು ನೇಣುಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ. ಶ್ರೀಮಂಗಲ ಠಾಣಾ ಸರಹದ್ದಿನ ವೆಸ್ಟ್ ನೆಮ್ಮಲೆ ಗ್ರಾಮದ ನಿವಾಸಿ ಚೊಟ್ಟೆಯಂಡಮಾಡ ಪೂಣಚ್ಚ ಎಂಬವರ ತಂದೆ ಮಾದಪ್ಪ (79) ಎಂಬವರು ದಿನಾಂಕ ದಿನಾಂಕ 04-02-2016 ರಂದು ಮದ್ಯಾಹ್ನ ಯಾರಿಗೂ ತಿಳಿಸದೆ ಮನೆ ಬಿಟ್ಟು ಹೋಗಿದ್ದು ಮನೆಯವರು ಎಲ್ಲ ಕಡೆ ಹುಡುಕಿ ಸಿಗದಿದೇ ಇರುವ ಕಾರಣ ದಿನಾಂಕ 06-03-2016 ರಂದು ಶ್ರೀಮಂಗಲ ಠಾಣೆಯಲ್ಲಿ ದೂರನ್ನು ನೀಡಿದ್ದು ಅದರಂತೆ ಪ್ರಕರಣ ದಾಖಲಿಸಿದ ಶ್ರೀಮಂಗಲ ಪೊಲೀಸರು ತನಿಖೆ ಕೈಗೊಂಡಿದ್ದರು. ದಿನಾಂಕ 02-12-2016 ರಂದು ವೆಸ್ಟ್ ನೆಮ್ಮಲೆ ಅರಣ್ಯ ಪ್ರದೇಶದಲ್ಲಿ ಮರಕ್ಕೆ ನೈಲಾನ್ ಹಗ್ಗ ಕಟ್ಟಿ ಕುತ್ತಿಗೆಗೆ ನೇಣು ಬಿಗಿದು ಕೊಂಡ ವ್ಯಕ್ತಿಯ ಮೃತ ಶರೀರವೊಂದನ್ನು ಕಂಡ ಕಾರ್ಮಿಕ ಸಂಜು ಎಂಬ ವ್ಯಕ್ತಿ ಸದರಿ ಮಾಹಿತಿಯನ್ನು ಪಿರ್ಯಾದಿ ಬೊಟ್ಟೆಯಂಡಮಾಡ ಪೂಣಚ್ಚನವರಿಗೆ ನೀಡಿದ್ದು, ಫಿರ್ಯಾದಿಯವರು ಸದರಿ ಮೃತಶರೀರವನ್ನು ನೋಡಿ ತನ್ನ ತಂದೆಯವರ ಮೃತ ಶರೀರವೆಂದು ಗುರುತಿಸಿದ್ದು, ಈ ಸಂಬಂಧ ಶ್ರೀಮಂಗಲ ಪೊಲೀಸ್ ಠಾಣೆಗೆ ದೂರನ್ನು ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. 

ಅಕ್ರಮ ಮರಳು ಶೇಖರಣೆ, ಪ್ರಕರಣ ದಾಖಲು:

     ಅಕ್ರಮವಾಗಿ ಮಣ್ಣಿನಿಂದ ಮರಳನ್ನು ಬೇರ್ಪಡಿಸಿ ಮಾರಾಟ ಮಾಡಲು ಶೇಖರಿಸಿಟ್ಟ ಮರಳನ್ನು ಪತ್ತೆಹಚ್ಚಿದ ಪೊಲೀಸರು ಆರೋಪಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ವಿರಾಜಪೇಟೆ ಗ್ರಾಮಾಂತರ ಠಾಣಾ ಸರಹದ್ದಿನ ಕಂಡಂಗಾಲ ಗ್ರಾಮದ ನಿವಾಸಿ ಸುಳ್ಳಿಮಾಡ ಎಂಬವರು ಸರಕಾರದ ಪರವಾನಗಿ ಇಲ್ಲದೆ ಅಕ್ರಮವಾಗಿ ಕಂಡಂಗಾಲ ಗ್ರಾಮದಲ್ಲಿ ಮಣ್ಣಿಂದ ಮರಳನ್ನು ಬೇರ್ಪಡಿಸಿ ಒಂದು ಪಿಕ್ಅಪ್ ವಾಹನಕ್ಕೆ ತುಂಬುವಷ್ಟು ಮರಳನ್ನು ಶೇಖರಿಸಿಟ್ಟಿದ್ದನ್ನು ವಿರಾಜಪೇಟೆ ಗ್ರಾಮಾಂತರ ಠಾಣಾಧಿಕಾರಿ ಶ್ರೀ ಎಂ. ನಂಜುಂಡಸ್ವಾಮಿರವರು ಹಾಗು ಸಿಬ್ಬಂದಿಗಳು ದಿನಾಂಕ 2-12-2016 ರಂದು  ಪತ್ತೆಹೆಚ್ಚಿ ಆರೋಪಿ ವಿರುದ್ದ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. 

ಮದ್ಯದ ಅಮಲಿನಲ್ಲಿ ಬಿದ್ದು ಗಾಯಗೊಂಡ ವ್ಯಕ್ತಿಯ ಸಾವು:

       ಮದ್ಯ ಸೇವಿಸಿದ ವ್ಯಕ್ತಿಯೊಬ್ಬರು ಬಿದ್ದು ಗಾಯಗೊಂಡು ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ನಡೆದಿದೆ. ವಿರಾಜಪೇಟೆ ತಾಲೋಕಿನ ಹೆಗ್ಗಳ ಗ್ರಾಮದ ನಿರ್ಮಲಗಿರಿ ಎಂಬಲ್ಲಿ ವಾಸವಾಗಿದ್ದ ಹೆಚ್.ಎ. ರವಿಚಿಮ್ಮಣ್ಣ ಎಂಬವರು ದಿನಾಂಕ 1-12-2016 ರಂದು ವಿಪರೀತ ಮದ್ಯ ಸೇವಿಸಿ ನಡೆದುಕೊಂಡು ಹೋಗುತ್ತಿದ್ದಾಗ ಬಿದ್ದು ಗಾಯಗೊಂಡಿದ್ದು, ಸದರಿಯವರನ್ನು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿ ಚಿಕಿತ್ಸೆ ಫಲಕಾರಿಯಾಗದೆ ಸದರಿಯವರು ಮೃತಪಟ್ಟಿದ್ದು, ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೋಟಾರ್ ಸೈಕಲ್ ಕಳವು:

     ಶನಿವಾರಸಂತೆ ಠಾಣಾ ಸರಹದ್ದಿನ ಹಂಪಾಪುರ ಗ್ರಾಮದ ನಿವಾಸಿ ಹೆಚ್.ಆರ್. ಸತೀಶ್ ಎಂಬವರು ದಿನಾಂಕ 01.12.2016ರಂದು ರಾತ್ರಿ ಸಮಯ 09.15 ಪಿ.ಎಂಗೆ ತಮ್ಮ ಗ್ರಾಮದಿಂದ ಸ್ವಂತ ಕೆಲಸದ ನಿಮಿತ್ತ ಕೆಎ-12 ಎಲ್ -0148 ರ Hero Splendor ಬೈಕಿನಲ್ಲಿ ಕೊಡ್ಲಿಪೇಟೆಗೆ ಹೋಗಿ ಮೋಟಾರ್ ಸೈಕಲನ್ನು ಕೊಡ್ಲಿಪೇಟೆಯ ಎಸ್ ಎಲ್ .ಎನ್ ಬಾರ್ ಮುಂಭಾಗ ನಿಲ್ಲಿಸಿದ್ದು ಸದರಿ ಮೋಟಾರ್ ಸೈಕಲನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಿದ್ಯುತ್ ಸ್ವರ್ಷ್, ವ್ಯಕ್ತಿ ಸಾವು:

     ಕಟ್ಟಡ ಕೆಲಸ ನಿರ್ವಹಿಸುತ್ತಿದ್ದ ವೇಳೆ ವಿದ್ಯುತ್ ಸ್ವರ್ಷಗೊಂಡು ವ್ಯಕ್ತಿಯೋರ್ವ ಸಾವನಪ್ಪಿದ ಘಟನೆ ಸುಂಟಿಕೊಪ್ಪ ಸಮೀಪದ ಗದ್ದೆಹಳ್ಳ ಎಂಬಲ್ಲಿ ನಡೆದಿದೆ.  ದಿನಾಂಕ 2-12-2016 ರಂದು ಗದ್ದೆಹಳ್ಳದ ನಿವಾಸಿ ಟಿ.ವಿಜು ಎಂಬವರು ತನ್ನ ತಾಯಿ ಮತ್ತು ತಮ್ಮ ಸಬಾಸ್ಟಿನ್ ಎಂಬವರು ಸ್ನಾನದ ಮನೆಯ ಕೊಠಡಿಯ ಕೆಲಸವನ್ನು ಮಾಡುತ್ತಿದ್ದಾಗ ಸಿಮೆಂಟ್ ಇಟ್ಟಿಗೆಯನ್ನು  ಕರೆಂಟ್ ಯಂತ್ರದ ಮೂಲಕ ಕತ್ತರಿಸುತ್ತಿದ್ದಾಗ  ವಿದ್ಯುತ್ ಸಂಪರ್ಕದ ವಯರ್ ಹಾನಿಗೊಳಗಾಗಿ ನೀರಿಗೆ ಸ್ಪರ್ಷಗೊಂಡು  ಆ ಮೂಲಕ ಕೆಲಸ ಮಾಡುತ್ತಿದ್ದ ಸಬಾಸ್ಟಿನ್ ರವರು ವಿದ್ಯುತ್ ಸ್ಪರ್ಷಗೊಂಡು ಸಾವನಪ್ಪಿದ್ದು, ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.