Sunday, December 4, 2016

ಚಿನ್ನಾಭರಣ ಅಪಹರಣ
                        ಮಹಿಳೆಯೊಬ್ಬರನ್ನು ವಂಚಿಸಿ ಚಿನ್ನದ ಸರ ಅಪಹರಿಸಿರುವ ಘಟನೆ  ಕುಶಾಲನಗರದಲ್ಲಿ ನಡೆದಿದೆ. ದಿನಾಂಕ 25/1/2016ರಂದು ಪಿರಿಯಾಪಟ್ನ ನಿವಾಸಿ ರತ್ನಬಾಯಿ ಎಂಬವರು ಕುಶಾಲನಗರದ ಆಂಜನೇಯ ದೇವಸ್ಥಾನದ ಬಳಿ ಬರುತ್ತಿರುವಾಗ ಓರ್ವ ಅಪರಿಚಿತ ಪುರುಷ ಮತ್ತು ಇಬ್ಬರು ಹೆಂಗಸರು ಆಕೆಯನ್ನು ಮಾತನಾಡಿಸಿ ಅವರ ಮಗಳ ಮದುವೆಗಾಗಿ ಚಿನ್ನಾಭರಣಗಳನ್ನು ಮಾಡಿಸಬೇಕಿದ್ದು ಅದಕ್ಕಾಗಿ ರತ್ನಾಬಾಯಿಯವರ ಚಿನ್ನದ ಆಭರಣಗಳನ್ನು ತೋರಿಸುವಂತೆ ಕೋರಿ ಆಕೆಯ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಮತ್ತು ಕಿವಿಗಳ ಓಲೆಯನ್ನು ಬಿಚ್ಚಿಸಿಕೊಂಡು ಆಕೆಗೆ ಅವರ ಬಳಿ ಇದ್ದ ಕರಿಮಣಿ ಸರದಂತಹ ಒಂದು ಸರವನ್ನು ನೀಡಿದ್ದು, ರತ್ನಬಾಯಿಯವರು ಆ ಸರವನ್ನು ನೋಡುತ್ತಿರುವಾಗ ಅವರು ಮೂವರೂ ರತ್ನಬಾಯಿಯವರ ಸುಮಾರು ರೂ.25,000 ಮೌಲ್ಯದ ಚಿನ್ನಾಭರಣಗಳೊಂದಿಗೆ ಪರಾರಿಯಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿ  ತನಿಖೆ ಕೈಗೊಂಡಿದ್ದಾರೆ.