Tuesday, January 31, 2017

ಚಿನಾಭರಣ ಕಳವು:
     ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಕಾಂತೂರು ಮುರ್ನಾಡು ಗ್ರಾಮದ ನಿವಾಸಿ ಶ್ರೀಮತಿ ಸುಮ ಸುಬ್ಬಯ್ಯ ಎಂಬವರ ಮನೆಯ ಕೋಣೆಯಲ್ಲಿದ್ದ ಫಿಡ್ಜ್ ಮೇಲೆ ಕುತ್ತಿಗೆಯಲ್ಲಿದ್ದ ಮಾಂಗಲ್ಯ ಸರ ಮತ್ತು ಎರಡು ಕೈ ಉಂಗುರಗಳನ್ನು ಇಟ್ಟಿದ್ದು ಸದರಿ ಚಿನ್ನಾಭರಣಗಳನ್ನು ದಿನಾಂಕ 26-1-2016 ರಂದು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ದಿನಾಂಕ 26-01-2017 ರಂದು ಮೈಸೂರಿನಿಂದ ಗೌತಮ್ ಎಂಬಾತ ಮನೆಗೆ 11.00 ಗಂಟೆಗೆ ಬಂದು ಸದರಿ ಫಿಡ್ಜ್ ನ್ನು ರಿಪೇರಿ ಮಾಡಲು ಬಂದು ನಂತರ ದಿನಾಂಕ 27-1-2017 ರಂದು ಪ್ರೇಮ್ ಕುಮಾರ್‌ ಮತ್ತು ಪ್ರಜ್ವಲ್ ಎಂಬುವವರು ಮನೆಗೆ ಬಂದು ಸದರಿ ಫಿಡ್ಜ್ನ್ನು ರಿಪೇರಿ ಮಾಡಿಹೋಗಿದ್ದು ಸದರಿ ವ್ಯಕ್ತಿಗಳು ಫಿಡ್ಜ್ ಮೇಲೆ ಇಟ್ಟಿದ್ದ ಚಿನ್ನಾಭರಣಗಳನ್ನು ಕಳವುಮಾಡಿರುವ ಸಾಧ್ಯತೆಗಳು ಇವೆ ಎಂಬುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. 

ಹಣದ ವಿಚಾರದಲ್ಲಿ ಜಗಳ, ಹಲ್ಲೆ:
ನಾಪೋಕ್ಲು ಠಾಣಾ ಸರಹದ್ದಿನ ಬೇತು ಗ್ರಾಮದ ನಿವಾಸಿ ಹನುಮಂತ ಎಂಬ ವ್ಯಕ್ತಿ ದಿನಾಂಕ 29-1-2016 ರಂದು ಸುರೇಶ ಎಂಬ ವ್ಯಕ್ತಿಗೆ ರೂ.500/-ಗಳನ್ನು ಸಾಲವಾಗಿ ಕೊಟ್ಟಿದ್ದು ಸದರಿ ಸಾಲದ ಹಣವನ್ನು ನೀಡುವಂತೆ ಫಿರ್ಯಾದಿ ಹನುಮಂತನ ಕೇಳೊಕೊಂಡಾಗ ಆರೋಪಿ ಸುರೇಶ ಹನುಮಂತನೊಂದಿಗೆ ಜಗಳ ಮಾಡಿ ದೊಣ್ಣೆಯಿಂದ ಹಲ್ಲೆ ನಡೆಸಿ ನೋವನ್ನುಂಟುಮಾಡಿದ್ದು ಅಲ್ಲದೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಜರುಗಿಸಿರುತ್ತಾರೆ.

ಮಹಿಳೆಗೆ ಕೊಲೆ ಬೆದರಿಕೆ:
   ಶನಿವಾರಸಂತೆ ಠಾಣಾ ಸರಹದ್ದಿನ ನಿಡಿಗೇರೆ ಗ್ರಾಮದ ವಾಸಿ ಶ್ರೀಮತಿ ಜ್ಯೋತಿ ಎಂಬವರು ದಿನಾಂಕ 29.01.2017 ರಂದು ಕೊಡ್ಲಿಪೇಟೆಗೆ ಸಂತೆಗೆ ಹೋಗಿ ಮನೆಗೆ ಹೋಗಲು ಕೊಡ್ಲಿಪೇಟೆಯ ರೀಲಿಫ್ ಬಾರ್ ಅಂಗಡಿಯ ಮುಂದೆ ಇರುವ ಸಾರ್ವಜನಿಕ ರಸ್ತೆಯಲ್ಲಿ ಆಟೋವನ್ನು ಕಾಯುತ್ತಿರುವಾಗ್ಗೆ ನೀಡಿಗೆರೆ ಗ್ರಾಮದ ನಿವಾಸಿಯಾದ ಕೆಂಚಯ್ಯರವರ ಮಗ ಮಂಜುನಾಥ ಎಂಬುವವರು ಅಲ್ಲಿಗೆ ಬಂದು ಹಳೆದ್ವೇಷದಿಂದ ಜಗಳ ಮಾಡಿ ಕೊಲೆ ಬೆದರಿಕೆಯನ್ನು ಹಾಕಿ ಪಿರ್ಯಾದಿಯವರ ಕೈಯನ್ನು ಹಿಡಿದು ಎಳೆದು ಗಾಯಪಡಿಸಿರುತ್ತಾನೆಂದು ನೀಡಿರುವ ದೂರಿನ ಮೇರೆಗೆ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನಕ್ರಮ ಕೈಗೊಂಡಿದ್ದಾರೆ. 

ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ:
     ವ್ಯಕ್ತಿಯೊಬ್ಬರು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ವಿರಾಜಪೇಟೆ ನಗರ ಠಾಣಾ ಸರಹದ್ದಿನ ಕಲ್ಲುಬಾಣೆಯಲ್ಲಿ ನಡೆದಿದೆ. ಆರ್ಜಿಗ್ರಾಮದ ಕಲ್ಲುಬಾಣೆ ಎಂಬಲ್ಲಿ ವಾಸವಾಗಿರುವ ಶ್ರೀಮತಿ ಇಂದಿರಾ ಎಂಬವರ ಮಗ ಎನ್. ಆರ್. ಅಶೋಕ್ ಎಂಬ ವ್ಯಕ್ತಿ ಜೀವನದಲ್ಲಿ ಜಿಗುಪ್ಸೆಗೊಂಡು ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ನಹತ್ಯೆ ಮಾಡಿಕೊಂಡಿದ್ದು, ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Monday, January 30, 2017

ಗಂಡಸು ಕಾಣೆ 
                      ದಿನಾಂಕ: 19-01-17ರಂದು ಕಾಕೋಟು ಪರಂಬು ಬಳಿಯ ನಾಲ್ಕೇರಿ ನಿವಾಸಿ ಮಗೇಂದ್ರ ಎಂಬವರ ಪತ್ನಿ ಕೆ.ಎಂ.ಕಾವೇರಿ ಎಂಬವರು  ಕೆಲಸಕ್ಕೆ ಹೋಗಿದ್ದು, ನಂತರ ಮದ್ಯಾಹ್ನ 12-30ಗೆ ಮನೆಗೆ ಬಂದು ನೋಡಿದಾಗ ಆಕೆಯ ಪತಿ ಮಗೇಂದ್ರ ಎಂಬವರು ಮನೆಯಲ್ಲಿ ಕಾಣದೇ ಇದ್ದು,  ಪತಿ ವಿರಾಜಪೇಟೆ ನಗರಕ್ಕೆ ಹೋಗಿರ ಬಹುದೆಂದು ಭಾವಿಸಿದ್ದು ರಾತ್ರಿಯಾದರೂ  ಮನೆಗೆ ಬಾರದ ಕಾರಣ ಎಲ್ಲಾ ಕಡೆ ಹುಡುಕಾಡಿ ಪತ್ತೆಯಾಗಿರುವುದಿಲ್ಲವೆಂದು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ವ್ಯಕ್ತಿಯ ಮೇಲೆ ಹಲ್ಲೆ 
                                ದಿನಾಂಕ 28-01-2017 ರಂದು ಗೋಣಿಕೊಪ್ಪ ನಗರದ   2ನೇ ಬ್ಲಾಕ್‌‌ನಲ್ಲಿರುವ ಅಂಬೇಡ್ಕರ್‌‌ ಕಮ್ಯೂನಿಟಿ ಹಾಲ್ ನ ಬಳಿ ಮೋಹನ್‌‌ ಹಾಗೂ ಗಿರೀಶ್‌‌ ಎಂಬವರು ಬಾಯಿ ಮಾತಿನಲ್ಲಿ ಹಣದ ವಿಚಾರದಲ್ಲಿ ಜಗಳ ಮಾಡುತ್ತಿದ್ದು, ಏಕಾ ಏಕಿ ಗಿರೀಶ್‌‌ನು ಮಲಗುವ ತಲೆ ದಿಂಬುವಿನ ಕೆಳಗಿನಿಂದ ಒಂದು ದೊಡ್ಡ ಹರಿತವಾದ ವಸ್ತುವನ್ನು ತಂದು ಮೋಹನ್‌‌ ಎಂಬುವವರ ಹೊಟ್ಟೆಗೆ ಕುತ್ತಿಗೆ ಬಾಗಕ್ಕೆ ಬೆನ್ನಿಗೆ  ತಿವಿದು ಗಾಯಾಪಡಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಮಹಿಳೆಯ ಮೇಲೆ ಹಲ್ಲೆ
                  ದಿನಾಂಕ 28/01/2017ರಂದು ಕುಟ್ಟ ಬಳಿಯ ಕೆ.ಬಾಡಗ ಗ್ರಾಮದ ನಿವಾಸಿ ಕೆ.ಎನ್‌.ವನಜಾಕ್ಷಿ ಎಂಬವರ ಮಗ ಕೆ.ಎನ್‌.ಬೋಪಣ್ಣ ಎಂಬಾತನು ತಾಯಿಯೊಂದಿಗೆ ಆಸ್ತಿ ಪಾಲಿನ ವಿಚಾರವಾಗಿ ಜಗಳವಾಡಿ ಕತ್ತಿಯಿಂದ ತಾಯಿ ವನಜಾಕ್ಷಿಯವರ ಮೇಲೆ ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಕುಟ್ಟ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಿಕ್ಷಾ ಮಗುಚಿ ಮೂವರಿಗೆ ಗಾಯ
                      ದಿನಾಂಕ 29/01/2017ರಂದು ಕುಶಾಲನಗರ ಬಳಿಯ ಕೂಡ್ಲೂರು ಗ್ರಾಮದ ರಾಜ್ಯ ಹೆದ್ದಾರಿಯಲ್ಲಿ ಸಫಿಯಾ, ಅನೀಸ್‌ ಮತ್ತು ಹರೀಶ್‌ ಎಂಬವರು ಕೆಎ-12-ಹೆಚ್‌-6924ರ ರಿಕ್ಷಾವೊಂದರಲ್ಲಿ ಕುಶಾಲನಗರದಿಂದ ಕೂಡ್ಲೂರು ಕಡೆಗೆ ಬರುತ್ತಿರುವಾಗ ರಿಕ್ಷಾ ಚಾಲಕನು ರಿಕ್ಷಾವನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿದ ಪರಿಣಾಮ ರಿಕ್ಷಾ ರಸ್ತೆಯಲ್ಲಿ ಮಗುಚಿಕೊಂಡು ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಮೂವರಿಗೂ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ  ಕೈಗೊಂಡಿದ್ದಾರೆ.

ಅಕ್ರಮ ಗಾಂಜಾ ಮಾರಾಟ
                          ದಿನಾಂಕ 29/01/2017ರಂದು ಕುಶಾಲನಗರ ಬಳಿಯ ದೊಡ್ಡಬೆಟ್ಟಗೇರಿ ಗ್ರಾಮದಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ದೊರೆತ ಸುಳಿವಿನ  ಮೇರೆಗೆ ಕುಶಾಲನಗರ ಗ್ರಾಮಾಂತರ ಠಾಣಾ ಪಿಎಸ್‌ಐ ಜೆ.ಇ.ಮಹೇಶ್‌ರವರು ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ತೆರಳಿ ದೊಡ್ಡಬೆಟ್ಟಗೇರಿಯ ತೂಗು ಸೇತುವೆ ಬಳಿ  ಸರ್ಕಾರದ ಪರವಾನಗಿ ಇಲ್ಲದೆ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ದೊಡ್ಡಬೆಟ್ಟಗೇರಿ ನಿವಾಸಿ ಸತೀಶ ಎಂಬಾತನನ್ನು ಬಂಧಿಸಿ ಆತನಿಂದ ಸುಮಾರು 300 ಗ್ರಾಂ ಒಣಗಿದ ಗಾಂಜಾವನ್ನು ವಶಪಡಿಸಿಕೊಂಡು ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಮಹಿಳೆಯ ಮೇಲೆ ಹಲ್ಲೆ
                             ದಿನಾಂಕ 27/01/2017ರಂದು ಶನಿವಾರಸಂತೆ ಬಳಿಯ ಹೆಮ್ಮನೆ ನಿವಾಸಿ ವಿಶಾಲಾಕ್ಷಮ್ಮ ಎಂಬವರಿಗೆ ಅವರ ನೆರೆಮನೆಯ ಜ್ಯೋತಿ, ಕಾಳಮ್ಮ ಮತ್ತು ಜಯಪ್ಪ ಎಂಬವರು ವಿನಾ ಕಾರಣ ಹಲ್ಲೆ ಮಾಡಿರುವುದಾಗಿ ನೀಡಿದ  ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವ್ಯಕ್ತಿಯ ಮೇಲೆ ಹಲ್ಲೆ
                            ದಿನಾಂಕ 29/01/2017ರಂದು ಕಾಲೂರು ಗ್ರಾಮದ ಮಾಂದಲಪಟ್ಟಿ ಬಳಿ ಐಲಪಂಡ ಲೋಕೇಶ್‌ ಎಂಬವರು ನಿಂತಿದ್ದಾಗ ಅಲ್ಲಿಗೆ ಬಂದ ಕಾಳಚಂಡ ಸುಜು ಅಲಿಯಾಸ್‌ ವಿಜಯಕುಮಾರ್‌ ಎಂಬವರು ಬಂದು ಮಾಂದಲಪಟ್ಟಿಗೆ ಪ್ರವಾಸಿಗರನ್ನು ಜೀಪಿನಲ್ಲಿ  ಬಾಡಿಗೆಗೆ ಕರೆದೊಯ್ಯುವ ವಿಚಾರದಲ್ಲಿ ಜಗಳವಾಡಿ ಸೌದೆ ತುಂಡಿನಿಂದ ಐಲಪಂಡ ಲೋಕೇಶ್‌ರವರ ಮೇಲೆ ಹಲ್ಲೆ ನಡೆಸಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ನೇಣು ಬಿಗಿದು ವ್ಯಕ್ತಿಯ ಆತ್ಮಹತ್ಯೆ 
                              ದಿನಾಂಕ 29/01/2017ರಂದು ಸಿದ್ದಾಪುರ ಬಳಿಯ ಗುಹ್ಯ ಗ್ರಾಮದ ನಿವಾಸಿ ಎರವರ ಅಣ್ಣು ಎಂಬವರು ಅವರ ಮನೆಯ ಬಳಿ ಇರುವ ಕೆರೆಯ ಪಕ್ಕದ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ವಿಪರೀತ ದಮ್ಮು ಕಾಯಿಲೆ ಇರುವ ಕಾರಣ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರಬಹದಾಗಿ ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Saturday, January 28, 2017


ಮಹಿಳೆ ಆತ್ಮಹತ್ಯೆ

      ಜೀವನದಲ್ಲಿ ಜಿಗುಪ್ಸೆಗೊಂಡು ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿರಾಜಪೇಟೆ ತಾಲೂಕಿನ ಭದ್ರಗೊಳ ಗ್ರಾಮದಲ್ಲಿ ನಡೆದಿದೆ. ಭದ್ರಗೋಳ ಗ್ರಾಮದ ನೆಹರು ಕಾಲೋನಿಯ ನಿವಾಸಿ 65 ವರ್ಷ ಪ್ರಾಯದ ಗಂಗೆಯವರು ಸುಮಾರು ಒಂದು ವರ್ಷದಿಂದ ಪಾರ್ಶ್ವವಾಯುವಿನಿಂದ ಬಳಲುತ್ತಿದ್ದು ಇದೇ ವಿಚಾರದಲ್ಲಿ ಮನನೊಂದು ದಿನಾಂಕ 27-1-2017 ರಂದು ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮಗ ಪಣಿಯರವರ ಹರೀಶರವರು ನೀಡಿದ ಪುಕಾರಿಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿರುತ್ತಾರೆ.

Friday, January 27, 2017

ಜೂಜಾಟವಾಡುತ್ತಿದ್ದವರ ಬಂಧನ
            ದಿನಾಂಕ 26-1-2017 ರಂದು ಶನಿವಾರಸಂತೆ ಪೊಲೀಸ್ ಠಾಣೆಯ ಉಪನಿರೀಕ್ಷಕರಾದ ಮರಿಸ್ವಾಮಿ ಮತ್ತು ಸಿಬ್ಬಂದಿಯವರು ಚಿಕ್ಕಳವಾರ ಗ್ರಾಮದಲ್ಲಿ 9 ಜನರು ಅಕ್ರಮವಾಗಿ ಜೂಜಾಡುತ್ತಿದ್ದ ಸ್ಥಳಕ್ಕೆ ದಾಳಿ ಮಾಡಿ ಆರೋಪಿಗಳನ್ನು ಬಂಧಿಸಿ ರೂ 5,800 ನಗದು, ಒಂದು ಸ್ಕೂಟರ್, ಒಂದು ಮೋಟಾರು ಸೈಕಲ್ ಮತ್ತು ಒಂದು ಆಟೋವನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿರುತ್ತಾರೆ.

Thursday, January 26, 2017

ನದಿಯಿಂದ ಅಕ್ರಮವಾಗಿ ಮರಳು ತೆಗೆಯುತ್ತಿದ್ದ ವ್ಯಕ್ತಿಯ ಬಂಧನ
                ದಿನಾಂಕ 25-1-2017 ರಂದು ಕುಶಾಲನಗರ ಗ್ರಾಮಾಂತರ ಠಾಣೆಯ ಠಾಣಾಧಿಕಾರಿಯವರಾದ ಮಹೇಶರವರು ರಾತ್ರಿ ಕರ್ತವ್ಯದಲ್ಲಿರುವಾಗ ಶಿರಂಗಾಲ ಗ್ರಾಮದ ಕಾವೇರಿ ಹೊಳೆಯ ದಡದಿಂದ ಅಕ್ರಮವಾಗಿ ಮರಳನ್ನು ತೆಗೆಯುತ್ತಿರುವುದಾಗಿ ಸಿಕ್ಕಿದ ಮಾಹಿತಿ ಮೇರೆಗೆ ಸ್ಥಳಕ್ಕೆ ಹೋಗಿ ದಾಳಿ ಮಾಡಿ ಮರಳನ್ನು ತುಂಬಿಸಿದ್ದ ಟ್ರ್ಯಾಕ್ಟರ್ ಹಾಗೂ ಶಿರಂಗಾಲ ಗ್ರಾಮದ ಗಿರೀಶ ಎಂಬುವವರು ವಶಕ್ಕೆ ಪಡೆದು  ಪ್ರಕರಣ ದಾಖಲಿಸಿಕೊಂಡಿರುತ್ತಾರೆ.

ಕ್ಷುಲ್ಲಕ ಕಾರಣಕ್ಕೆ ಮಗನಿಂದ ತಂದೆಯ ಮೇಲೆ ಹಲ್ಲೆ
               ಕ್ಷುಲ್ಲಕ ಕಾರಣಕ್ಕೆ ಮಗ ತಂದೆಯ ಮೇಲೆ ಹಲ್ಲೆ ನಡೆಸಿದ ಪ್ರಕರಣ ವಿರಾಜಪೇಟೆ ತಾಲೂಕಿನ  ಕಿರುಗೂರು ಗ್ರಾಮದಲ್ಲಿ ನಡೆದಿದೆ. ದಿನಾಂಕ 22-1-12017 ರಂದು ಕಿರುಗೂರುವಿನ ಪಂಜರಿ ಪೈಸಾರಿಯ ವಾಸಿ ಪುಟ್ಟಸ್ವಾಮಿ ಎಂಬುವವರು ಮನೆಯಲ್ಲಿರುವಾಗ ಆವರ ಮಗ ರಾಜೇಶ ಎಂಬುವವರು ಮನೆಯ ಹತ್ತಿರ ಬಂದು ನೀನು ತಾಯಿಯ ಜೊತೆ ಜಗಳ ಮಾಡುತ್ತೀಯಾ ಎಂದು ಹೇಳಿ ಕೈಯಿಂದ ಮೂಗಿನ ಭಾಗಕ್ಕೆ ಗುದ್ದಿದ್ದಲ್ಲದೇ, ದೊಣ್ಣೆಯಿಂದ ತಲೆಯ ಹಿಂಭಾಗಕ್ಕೆ ಹೊಡೆದು  ಗಾಯಪಡಿಸಿ ಬೆದರಿಕೆ ಹಾಕಿರುವುದಾಗಿ ಪುಟ್ಟಸ್ವಾಮಿಯವರು ನೀಡಿದ ಪುಕಾರಿಗೆ ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಕೆರೆಯಲ್ಲಿ ಮುಳುಗಿ ವ್ಯಕ್ತಿಯ ಸಾವು
                  ವಿರಾಜಪೇಟೆ ತಾಲೂಕಿನ ಕುಟ್ಟದ ತೈಲ ಗ್ರಾಮದಲ್ಲಿ  ವ್ಯಕ್ತಿಯೊಬ್ಬ ಕೆರೆಯಲ್ಲಿ ಸ್ನಾನ ಮಾಡಲು ಹೋಗಿ ಮೃತಪಟ್ಟಿರುವ ಘಟನೆ ನಡೆದಿರುತ್ತದೆ. ದಿನಾಂಕ 24-1-2017 ರಂದು ಸುಬ್ರಮಣಿ ಎಂಬುವವರ ಲೈನ್ ಮನೆಯಲ್ಲಿ ವಾಸವಿರುವ ಪಂಜರಿಯರವರ ಬಾಲ ಮತ್ತು ಆತನ ಪತ್ನಿ ಕಾವೇರಿಯವರು ಸುಬ್ರಮಣಿಯವರ ಕೆರೆಗೆ ಬಟ್ಟೆ ಒಗೆಯಲು ಹೋಗಿದ್ದು, ಬಾಲರವರು ಕೆರೆಗೆ ಸ್ನಾನ ಮಾಡಲು ಇಳಿದವರು ಮುಳುಗಿ ಮೃತಪಟ್ಟಿದ್ದು ಈ ಬಗ್ಗೆ ಪತ್ನಿ ಕಾವೇರಿಯವರು ನೀಡಿದ ದೂರಿನ ಮೇರೆಗೆ ಕುಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ

Wednesday, January 25, 2017

ರಸ್ತೆ ಬದಿ ನಿಂತಿದ್ದ ವ್ಯಕ್ತಿಗೆ ಬೈಕ್ ಡಿಕ್ಕಿ

               ರಸ್ತೆ ಬದಿ ನಿಂತಿದ್ದ ವ್ಯಕ್ತಿಗೆ ಬೈಕ್ ಡಿಕ್ಕಿಯಾಗಿ ಗಾಯಗೊಂಡ ಘಟನೆ ವಿರಾಜಪೇಟೆ ನಗರದಲ್ಲಿ ನಡೆದಿದೆ. ದಿನಾಂಕ 24-1-2017 ರಂದು ವಿರಾಜಪೇಟೆಯ ನೆಹರು ನಗರದ ನಿವಾಸಿ ಕೃಷ್ಣಪ್ಪ ಎಂಬುವವರು ಸರ್ವೋದಯ ಕಾಲೇಜಿನ ಮುಂದುಗಡೆಯ ಗಗನ್ ಕಾಂಪ್ಲೆಕ್ಸ್ ಮುಂಭಾಗ ನಿಂತುಕೊಂಡಿರುವಾಗ ವಿರಾಜಪೇಟೆ ನಗರದ ಕಡೆಯಿಂದ ಮೋಟಾರು ಸೈಕಲನ್ನು ಅದರ ಚಾಲಕ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಕೃಷ್ಣಪ್ಪನವರಿಗೆ ಡಿಕ್ಕಿಪಡಿಸಿದ್ದು, ಕೃಷ್ಣಪ್ಪನವರ ಬಲಕಾಲಿನ ಮುಂಗಾಲಿಗೆ ಗಾಯವಾಗಿದ್ದು ಈ ಬಗ್ಗೆ ಕೃಷ್ಣಪ್ಪನವರು ನೀಡಿದ ಪುಕಾರಿಗೆ ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಕಾರುಗಳ ಅಪಘಾತ
          ದಿನಾಂಕ 24-1-2017 ರಂದು ಕುಶಾಲನಗರ ನಿವಾಸಿ ಕುಶಾಲಪ್ಪ ಎಂಬುವವರು ಕುಶಾಲನಗರದಿಂದ ವಿರಾಜಪೇಟೆಗೆ ಹೋಗುತ್ತಿರುವಾಗ ಅಭ್ಯತ್ ಮಂಗಲ ಎಂಬಲ್ಲಿಗೆ ತಲುಪುವಾಗ ಎದುರಿನಿಂದ ಬಂದ ಕಾರನ್ನು ಅದರ ಚಾಲಕ ಇಬ್ರಾಹಿಂ ಎಂಬುವವರು ಅತೀ ವೇಗ ಹಾಗೂ ಅಜಾಗರುಕತೆಯಿಂದ ಚಾಲನೆ ಮಾಡಿ ಕುಶಾಲಪ್ಪನವರ ಕಾರಿಗೆ ಡಿಕ್ಕಿಪಡಿಸಿದ್ದು ಎರಡೂ ಕಾರುಗಳು ಜಖಂಗೊಂಡಿದ್ದು ಈ ಬಗ್ಗೆ ಕುಶಾಲಪ್ಪನವರು ನೀಡಿದ ಪುಕಾರಿಗೆ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಲಾರಿಗೆ ಕಾರು ಡಿಕ್ಕಿ
               ದಿನಾಂಕ 24-1-2017 ರಂದು ಹಾಸನ ಜಿಲ್ಲೆಯ ಕೆಂಚಮ್ಮನ ಹೊಸಕೋಟೆಯ ನಿವಾಸಿ ಲಾರಿ ಚಾಲಕ ಚಂದ್ರಪ್ಪ ಎಂಬುವವರು ಕೆಂಚಮ್ಮನ ಹೊಸಕೋಟೆಯಿಂದ ಹೆಂಚು ಮತ್ತು ಇಟ್ಟಿಗೆಯನ್ನು ತುಂಬಿಸಿಕೊಂಡು ಸಿದ್ದಾಪುರಕ್ಕೆ ಹೋಗುತ್ತಿರುವಾಗ ಬಾಳುಗೋಡು ಎಂಬಲ್ಲಿಗೆ ತಲುಪುವಾಗ ಎದುರುಗಡೆಯಿಂದ ಬಾಳುಗೋಡುವಿನ ನಿವಾಸಿ ಮಹೇಶ ಎಂಬುವವರು ಓಮಿನಿ ವ್ಯಾನನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಲಾರಿಗೆ ಡಿಕ್ಕಿಪಡಿಸಿದ್ದು, ವ್ಯಾನಿನಲ್ಲಿದ್ದ ಚಾಲಕ ಮತ್ತು ಮಹಿಳೆಗೆ ಗಾಯವಾಗಿದ್ದು ಈ ಬಗ್ಗೆ ಲಾರಿ ಚಾಲಕ ಚಂದ್ರಪ್ಪನವರು ನೀಡಿದ ಪುಕಾರಿಗೆ ಕುಶಾಲನಗರದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Tuesday, January 24, 2017

ಸಂಶಯಾಸ್ಪದ ವ್ಯಕ್ತಿ ಬಂಧನ
                        ದಿನಾಂಕ 23.01.2017 ರಂದು ಶನಿವಾರಸಂತೆ ಠಾಣಾ ಪಿಎಸ್‌ಐ ಹೆಚ್‌.ಎಂ.ಮರಿಸ್ವಾಮಿರವರು ರಾತ್ರಿ ಗಸ್ತು ಕರ್ತವ್ಯದಲ್ಲಿರುವಾಗ ಶನಿವಾರಸಂತೆ ನಗರದ ಬೈಪಾಸ್ ರಸ್ತೆ ಬಳಿ ಇರುವ ಪ್ರಾಥಮಿಕ ಕೃಷಿ ಪತ್ತಿ ಸಹಕಾರ ಬ್ಯಾಂಕಿನ ಕಛೇರಿಯ ಹತ್ತಿರ ಒಬ್ಬ ವ್ಯಕ್ತಿ ಅನುಮಾನಾಸ್ಪಾದವಾಗಿ ನಿಂತಿದ್ದು ಪೊಲೀಸ್‌ ಸಿಬ್ಬಂದಿಗಳನ್ನು ಕಂಡು ಓಡಲು ಪ್ರಯತ್ನಿಸಿದಾಗ ಆತನನ್ನು ಹಿಡಿದು ಆತನ ಹೆಸರು ವಿಳಾಸವನ್ನು ಕೇಳಲಾಗಿ ಆತನು ಶನಿವಾರಸಂತೆಉ ಸುಳುಗಳಲೆ ಕಾಲೋನಿ ನಿವಾಸಿ ಕಾಂತರಾಜ್‌ ಎಂದು ತಿಳಿಸಿದ್ದು, ರಾತ್ರಿ ವೇಳೆಯಲ್ಲಿ ಆತನ ಇರುವಿಕೆಯ ಬಗ್ಗೆ ಸೂಕ್ತ ಕಾರಣಗಳನ್ನು ನೀಡಲು ವಿಫಲನಾಗಿದ್ದು, ಯಾವುದೋ ಅಪರಾಧ ಕೃತ್ಯವೆಸಗುವ ಉದ್ದೇಶದಿಂದ ಅಲ್ಲಿದ್ದಿರಬಹುದಾಗಿ ಸಂಶಯಿಸಿ ಆತನನ್ನು ಬಂಧಿಸಿ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 

ಸಂಶಯಾಸ್ಪದ ವ್ಯಕ್ತಿ ಬಂಧನ
                             ದಿನಾಂಕ 23.01.2017 ರಂದು ಶನಿವಾರಸಂತೆ ಠಾಣಾ ಪಿಎಸ್‌ಐ ಹೆಚ್‌.ಎಂ.ಮರಿಸ್ವಾಮಿರವರು ರಾತ್ರಿ ಗಸ್ತು ಕರ್ತವ್ಯದಲ್ಲಿರುವಾಗ ಶನಿವಾರಸಂತೆ ನಗರದ ಗುಡುಗಳಲೆ ಬಳಿ ಇರುವ ಕೆನರಾ ಬ್ಯಾಂಕಿನ ಕಛೇರಿಯ ಹತ್ತಿರ ಒಬ್ಬ ವ್ಯಕ್ತಿ ಅನುಮಾನಾಸ್ಪಾದವಾಗಿ ನಿಂತಿದ್ದು ಪೊಲೀಸ್‌ ಸಿಬ್ಬಂದಿಗಳನ್ನು ಕಂಡು ಓಡಲು ಪ್ರಯತ್ನಿಸಿದಾಗ ಆತನನ್ನು ಹಿಡಿದು ಆತನ ಹೆಸರು ವಿಳಾಸವನ್ನು ಕೇಳಲಾಗಿ ಆತನು ಶನಿವಾರಸಂತೆಯ ತ್ಯಾಗರಾಜ ಕಾಲೋನಿ ನಿವಾಸಿ ಎಂ.ಆರ್‌.ರವಿ ಎಂದು ತಿಳಿಸಿದ್ದು, ರಾತ್ರಿ ವೇಳೆಯಲ್ಲಿ ಆತನ ಇರುವಿಕೆಯ ಬಗ್ಗೆ ಸೂಕ್ತ ಕಾರಣಗಳನ್ನು ನೀಡಲು ವಿಫಲನಾಗಿದ್ದು, ಯಾವುದೋ ಅಪರಾಧ ಕೃತ್ಯವೆಸಗುವ ಉದ್ದೇಶದಿಂದ ಅಲ್ಲಿದ್ದಿರಬಹುದಾಗಿ ಸಂಶಯಿಸಿ ಆತನನ್ನು ಬಂಧಿಸಿ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.  

ಪರಸ್ಪರ ಬೈಕ್ ಡಿಕ್ಕಿ
                       ದಿನಾಂಕ 22/01/2017 ರಂದು ಕುಶಾಲನಗರ ಬಳಿಯ ಹೆಬ್ಬಾಲೆ ನಿವಾಸಿ ಅಕ್ಷಯ್ ಎಂಬವರು ಅವರ ಸ್ನೇಹಿತ ಜಿತಿನ್ ಎಂಬವರೊಂದಿಗೆ ಕೆಎ-12-ಕ್ಯೂ-6903 ರ ಮೋಟಾರು ಬೈಕ್ ನಲ್ಲಿ ಕುಶಾಲನಗರದಿಂದ ಹೆಬ್ಬಾಲೆ ಕಡೆಗೆ ಹೋಗುತ್ತಿರುವಾಗ  ಕುಶಾಲನಗರದ ಸೋಮೇಶ್ವರ ದೇವಸ್ಥಾನದ ಬಳಿ ಎದುರುಗಡೆಯಿಂದ ಕೆಎ-04-ಹೆಚ್‌ಕೆ-6871ರ ಬೈಕನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ಅಕ್ಷಯ್‌ರವರ ಸ್ನೇಹಿತ ಚಾಲಿಸುತ್ತಿದ್ದ ಬೈಕ್ ಗೆ  ಡಿಕ್ಕಿ ಪಡಿಸಿದ ಪರಿಣಾಮ ಇಬ್ಬರೂ ಕೆಳಗೆ ಬಿದ್ದು ಗಾಯಗಳಾಗಿರುವುದಾಗಿ ನೀಡಿದ  ದೂರಿನ ಮೇರೆಗೆ ಕುಶಾಲನಗರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವಿಷ ಸೇವಿಸಿ ವ್ಯಕ್ತಿಯ ಆತ್ಮಹತ್ಯೆ
                           ದಿನಾಂಕ 23/01/2017ರಂದು ನಾಪೋಕ್ಲು ಬಳಿಯ ನೆಲಜಿ ಗ್ರಾಮದ ನಿವಾಸಿ ಸುನೀತಾ ಎಂಬವರು ಅವರ ತಾಯಿಯ ಮನೆ ಇರುವ ಕಾರುಗುಂದ ಗ್ರಾಮಕ್ಕೆ ಹೋಗಿದ್ದಾಗ ಅವರ ಪತಿ ಪುಟ್ಟಗಣಪತಿ  ಎಂಬವರು ಮನೆಯಲ್ಲಿ ವಿಷ ಸೇವಿಸಿದ್ದು ಮಗ ಸೂರಜ್‌ ಮತ್ತು ಇತರರು ಸೇರಿ ಆಸ್ಪತ್ರೆಗೆ ದಾಖಲಿಸಿ  ಚಿಕಿತ್ಸೆ ನೀಡಿದರೂ ಫಲಕಾರಿಯಾಗದೆ ಮೃತರಾಗಿದ್ದು, ಮೃತ ಪುಟ್ಟ ಗಣಪತಿರವರು ವಿಪರೀತ ಮದ್ಯಪಾನ ಮಾಡಿ ದಿನವೂ ಪತ್ನಿಯೊಂದಿಗೆ ಜಗಳವಾಡುತ್ತಿದ್ದು ಇದೇ ಕಾರಣಕ್ಕೆ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದಾಗಿ ನೀಡಿದ ದೂರಿನ ಮೇರೆಗೆ ನಾಪೋಕ್ಲು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಬೈಕಿಗೆ ಕಾರು ಡಿಕ್ಕಿ
                          ದಿನಾಂಕ 22-01-2017 ರಂದು ಅಮ್ಮತ್ತಿ ಹೊಸಕೋಟೆ ನಿವಾಸಿ ಕೆ.ಎಂ.ವಿನೇಶ್‌ ಹಾಗೂ ಸ್ವಾಗತ್ ಎಂಬವರು ಕೆಎ-12-ಆರ್-0051 ರ ಮೋಟಾರ್ ಬೈಕ್ ನಲ್ಲಿ ವಿರಾಜಪೇಟೆಯಿಂದ ಮೂರ್ನಾಡುವಿಗೆ ಬರುತ್ತಿರುವಾಗ  ಎಂ.ಬಾಡಗ ಗ್ರಾಮದ ರಸ್ತೆಯಲ್ಲಿ  ಎದುರಿನಿಂದ ಕೆಎ-09-ಎಂಎ-3725 ರ ಕಾರನ್ನು ಅದರ ಚಾಲಕನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಾಲನೆಮಾಡಿಕೊಂಡು ಬಂದು ಸ್ವಾಗತ್ ರವರು ಓಡಿಸುತ್ತಿದ್ದ ಮೋಟಾರ್ ಬೈಕ್ ಗೆ ಡಿಕ್ಕಿ ಪಡಿಸಿದ ಪರಿಣಾಮ ವಿನೇಶ್‌ರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಕಾರಿಗೆ ಬೈಕು ಡಿಕ್ಕಿ
                      ದಿನಾಂಕ 23-1-2017 ರಂದು ವಿರಾಜಪೇಟೆ ಬಳಿಯ ಹಾತೂರು ನಿವಾಸಿ ಸಜಿತ್‌  ಪೊನ್ನಪ್ಪ ಎಂಬವರು ಕೆಲಸದ ನಿಮಿತ್ತ ತನ್ನ ಬಾಪ್ತು ಕಾರು ನಂಬರ್ ಕೆಎ-12-ಝಡ್-7699 ರ  ಕಾರಿನಲ್ಲಿ ಅವರ ನೆರೆಮನೆಯವರಾದ ನಡಿಕೇರಿಯಂಡ ಸುಬ್ಬಯ್ಯ ನವರೊಂದಿಗೆ ವಿರಾಜಪೇಟೆಗೆ ಬಂದು ಕೆಲಸ ಮುಗಿಸಿ ವಾಪಾಸು  ಹೋಗುತ್ತಿರುವಾಗ   ವಿರಾಜಪೇಟೆ ಸಮೀಪದ ನಿಸರ್ಗ ಲೇಔಟ್ ಬಳಿಯ ವಿರಾಜಪೇಟೆ-ಗೋಣಿಕೊಪ್ಪ ಮುಖ್ಯ ರಸ್ತೆಯಲ್ಲಿ ಸಂಚಾರ ನಿಯಂತ್ರಣಗೊಳಿಸಲು ಅಳವಡಿಸಿದ ಬ್ಯಾರಿಕೇಡ್ ಇದ್ದುದ್ದರಿಂದ ನಿಧಾನವಾಗಿ ಕಾರನ್ನು ಚಾಲನೆ ಮಾಡಿಕೊಂಡು  ಮುಂದಕ್ಕೆ ಹೋಗುವಾಗ ಹಿಂದಿನಿಂದ ಮೋಟಾರು ಸೈಕಲ್ ನಂಬರ್ ಕೆಎ-09-ಜೆ-7124 ರ ಚಾಲಕ ಪ್ರಸನ್ನ ಎಂಬುವರು ಮದ್ಯಪಾನ ಮಾಡಿ ಮೋಟಾರು ಸೈಕಲನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ಸಜಿತ್‌ ಪೊನ್ನಪ್ಪನವರು ಚಾಲಿಸುತ್ತಿದ್ದ ಕಾರಿನ ಮುಂದಿನ ಬಲಬದಿಯ ಬಾಗಿಲಿಗೆ ಡಿಕ್ಕಿಪಡಿಸಿದ ಪರಿಣಾಮ ಬೈಕ್ ನಲ್ಲಿದ್ದ ಇಬ್ಬರು ಕೆಳಗೆ ಬಿದ್ದ ಪರಿಣಾಮ  ರತ್ತು ಎಂಬುವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ  ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವ್ಯಕ್ತಿಯ ಮೇಲೆ ಹಲ್ಲೆ
                       ದಿನಾಂಕ 22/01/2017ರಂದು ವಿರಾಜಪೇಟೆ ಬಳಿಯ ವಿ.ಬಾಡಗ ನಿವಾಸಿ ಆನಂದ ಎಂಬವರು ಅವರ ಅಣ್ಣ ವಸಂತ ಎಂಬವರೊಂದಿಗೆ  ನಾಯಿಗೆ ವಿಷ ಹಾಕಿದ ವಿಚಾರವನ್ನು ಕೇಳಿದಾಗ ವಸಂತ ಹಾಗೂ ಆತನ ಪತ್ನಿ ಪವಿತ್ರ ಎಂಬವರು ಏಕಾ ಏಕಿ ಆನಂದರವರ ಮೇಲೆ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಬೈಕ್‌ ಕಳವು
                 ದಿನಾಂಕ 16-01-2017 ರಂದು ಗೋಣಿಕೊಪ್ಪ ಬಳಿಯ ಅರ್ವತೊಕ್ಲು ನಿವಾಸಿ ಸಮೀರ್‌ ಎಂಬವರು ಅವರ ಬಾಪ್ತು KA-12-J-8230 ರ ಯಮಹಾ  ಮೋಟಾರ್ ಬೈಕ್ ನಲ್ಲಿ ವ್ಯಾಪಾರಕ್ಕೆಂದು ವಿರಾಜಪೇಟೆ ನಗರಕ್ಕೆ ಬಂದು ವಿರಾಜಪೇಟೆ ನಗರದ ಸುಣ್ಣದ ಬೀದಿಯ ತುಳಸಿ ಮಾರಿಯಮ್ಮ ದೇವಸ್ಥಾನದ ಮುಂದಿನ ಸಾರ್ವಜನಿಕ ರಸ್ತೆಯಲ್ಲಿ ತನ್ನ ಬೈಕನ್ನು ನಿಲ್ಲಿಸಿ ವ್ಯಾಪಾರಕ್ಕೆಂದು ತೆರಳಿದ್ದು, ವಾಪಾಸ್ಸು ಸಮಯ ರಾತ್ರಿ 09-30 ಗಂಟೆಗೆ ಬಂದು ಬೈಕ್ ನಿಲ್ಲಿಸಿದ್ದ ಸ್ಥಳದಲ್ಲಿ ನೋಡುವಾಗ ಬೈಕ್ ಕಾಣದೇ ಇದ್ದು, ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಎಲ್ಲಾ ಕಡೆ ಹುಡುಕಾಡಿದ್ದಲ್ಲೂ ಬೈಕ್ ಪತ್ತೆಯಾಗಿರುವುದಿಲ್ಲವೆಂದು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

Sunday, January 22, 2017

ಕಾರು ಮಗುಚಿ ವ್ಯಕ್ತಿಯ ಸಾವು
                     ದಿನಾಂಕ 21/01/2017 ರಂದು ಬೆಳಿಗ್ಗೆ 8-00 ಗಂಟೆಗೆ ಪೊನ್ನಂಪೇಟೆ ಬಳೀಯ ಬೆಕ್ಕೆಸೊಡ್ಲೂರು ನಿವಾಸಿ ಸುಳ್ಳಿಮಾಡ ಉತ್ತಯ್ಯ ಎಂಬವರು ಅವರ ಕುಟುಂಬದವರಾದ ಲೀಲಾವತಿ, ರಜನಿ, ಮಾಚ್ಚಮಾಡ ಸರೋಜ ಎಂಬವರೊಂದಿಗೆ ಉತ್ತಯ್ಯನವರ ಬಾಪ್ತು ಮಾರುತಿ ವ್ಯಾನ್ ನಂ ಕೆಎ-12-ಎನ್-7254 ರಲ್ಲಿ ಅವರ ಮಗಳ ಮದುವೆಗೋಸ್ಕರ ಪೊನ್ನಂಪೇಟೆ ಕೊಡವ ಸಮಾಜಕ್ಕೆ ಮನೆಯಿಂದ ಬರುತ್ತಿದ್ದಾಗ ಬೆಕ್ಕೆಸೊಡ್ಲೂರಿನ ಸುಳ್ಳಿಮಾಡ ಕಾವೇರಪ್ಪ ಲಾಯರ್ ರವರ ಮನೆಯ ಮುಂದಿನ ಸಾರ್ವಜನಿಕ ರಸ್ತೆಯಲ್ಲಿ ಉತ್ತಯ್ಯನವರು ವ್ಯಾನನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸಿದ ಪರಿಣಾಮ ವ್ಯಾನ್ ಮಗುಚಿಕೊಂಡು ಉತ್ತಯ್ಯನವರು ತೀವ್ರವಾದ ಗಾಯಗಳಿಂದ ಮೃತರಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
 
ಅಕ್ರಮ ದನ ಮಾಂಸ ಸಾಗಾಟ
                  ದಿನಾಂಕ 21/01/2017ರಂದು ಕೊಡ್ಲಿಪೇಟೆ ಪೊಲೀಸ್‌ ಉಪ ಠಾಣೆ ಸಿಬ್ಬಂದಿ ಪ್ರದೀಪ್‌ ಕುಮಾರ್‌ ಎಂಬವರು ಕರ್ತವ್ಯದಲ್ಲಿದ್ದಾಗ ನೀರುಗುಂದ ಗ್ರಾಮದ ಬಳಿ ಕೆಎ-13-ಎ-1106ರ ಗೂಡ್ಸ್ ವಾಹನದಲ್ಲಿ ದನದ ಮಾಂಸವನ್ನು ಅಕ್ರಮವಾಗಿ ಸಾಗಿಸುತ್ತಿದ್ದುದನ್ನು ಪತ್ತೆ ಹಚ್ಚಿ ದನದ ಮಾಂಸ ಸಾಗಿಸುತ್ತಿದ್ದ ಲೋಕೇಶ್‌ ಹಾಗೂ ಇಂದ್ರಮ್ಮ ಎಂಬವರನ್ನು ಬಂಧಿಸಿ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಬಸ್ಸಿಗೆ ಲಾರಿ ಡಿಕ್ಕಿ
                  ದಿನಾಂಕ 21/01/2017ರಂದು ವಿರಾಜಪೇಟೆ ಬಳಿಯ ಬಿಟ್ಟಂಗಾಲ ಗ್ರಾಮದ ಅಂಬಟ್ಟಿ ಎಂಬಲ್ಲಿ ಕೆಎ-10-ಎಫ್‌-0169ರ ಕೆಎಸ್‌ಆರ್‌ಟಿಸಿ ಬಸ್ಸನ್ನು ಅದರ ಚಾಲಕ ಶಶಿಧರ್‌ ಎಂಬವರು ಚಾಲಿಸಿಕೊಂಡು ವಿರಾಜಪೇಟೆ ಕಡೆಗೆ ಬರುತ್ತಿರುವಾಗ ಎದುರುಗಡೆಯಿಂದ ಕೆಎ-12-ಬಿ-1377ರ ಲಾರಿಯನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಬಸ್ಸಿಗೆ ಡಿಕ್ಕಿಪಡಿಸಿದ ಪರಿಣಾಮ ಬಸ್ ಗೆ ಹಾನಿಯುಂಟಾಗಿದ್ದು ಚಾಲಕ ಶಶಿಧರ್‌ರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Saturday, January 21, 2017

ಹಳೆ ವೈಷಮ್ಯ, ವ್ಯಕ್ತಿ ಮೇಲೆ ಹಲ್ಲೆ:

      ಹಳೆ ದ್ವೇಷದ ಹಿನ್ನಲೆಯಲ್ಲಿ ವ್ಯಕ್ತಿಯ ದಾರಿ ತಡೆದು ಹಲ್ಲೆ ನಡೆಸಿದ ಘಟನೆ ಸೋಮವಾರಪೇಟೆ ಪೊಲೀಸ್ ಠಾಣಾ ಸರಹದ್ದಿನ ಕುಸುಬೂರು ಗ್ರಾಮದಲ್ಲಿ ನಡೆದಿದೆ. ದಿನಾಂಕ 14.01.2017 ರಂದು ಸಮಯ ಸಂಜೆ 18:00 ಗಂಟೆಗೆ ಕುಸುಬೂರು ಗ್ರಾಮದ ಮುಖ್ಯ ರಸ್ತೆಯಲ್ಲಿರುವ ಹಾಲಿನ ಡೈರಿಯ ಹತ್ತಿರ ಕುಸುಬೂರು ಗ್ರಾಮದ ಪ್ರಶಾಂತ ಎಂಬವರು ಹೋಗುತ್ತಿರುವಾಗ ಅದೇ ಗ್ರಾಮದ ನಿವಾಸಿಗಳಾದ ಪ್ರಪುಲ್ಲ ಮತ್ತು ವಿನೋದ್ ರವರು ಹಳೆ ವೈಷಮ್ಯದಿಂದ ದಾರಿ ತಡೆದು ಹಲ್ಲೆ ನಡೆಸಿದ್ದು ಅಲ್ಲದೆ ಅವಾಚ್ಯ ಶಬ್ದಗಳಿಂದ ಬೈದು ಕೊಲೆ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಸ್ಸಿನಿಂದ ಬಿದ್ದು ವ್ಯಕ್ತಿಗೆ ಗಾಯ:


      ವ್ಯಕ್ತಿಯೊಬ್ಬರು ಬಸ್ಸಿನಿಂದ ಇಳಿಯುವ ಸಂದರ್ಭದಲ್ಲಿ ಬಸ್ಸು ಮುಂದೆ ಸಾಗಿದ ಪರಿಣಾಮ ಕೆಳಗೆ ಬಿದ್ದು ಗಾಯಗೊಂಡ ಘಟನೆ ನಡೆದಿದೆ. ಸೋಮವಾರಪೇಟೆ ಠಾಣಾ ಸರಹದ್ದಿನ ಚಿಕ್ಕತ್ತೂರು ಗ್ರಾಮದ ನಿವಾಸಿ ಆಲ್ ವಿನ್ ಸಾಮ್ಸನ್ ಎಂಬವರು ದಿನಾಂಕ 18-1-2017 ರಂದು ಕುಶಾಲನಗರದಿಂದ ಸೋಮವಾರಪೇಟೆ ಕಡೆಗೆ ಹೋಗುವ ಬಸ್ಸಿನಲ್ಲಿ ಪ್ರಯಾಣಿಸಿ ಯಡವನಾಡು ಗ್ರಾಮದಲ್ಲಿ ಬಸ್ಸಿನಿಂದ ಇಳಿಯುವ ಸಂದರ್ಭದಲ್ಲಿ ನಿಂತ ಬಸ್ಸು ಮುಂದೆ ಚಲಿಸಿದ ಕಾರಣ ಸದರಿಯವರು ಬಸ್ಸಿನಿಂದ ಕೆಳಗೆ ಬಿದ್ದು ಗಾಯಗೊಂಡಿದ್ದು, ಈ ಬಗ್ಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಮಹಿಳೆ ಆತ್ಮಹತ್ಯೆ:

      ವಿರಾಜಪೇಟೆ ತಾಲೋಕು ಚೆಂಬೆಬೆಳ್ಳೂರು ಗ್ರಾಮದ ನಿವಾಸಿ ಹೆಚ್.ಬಿ. ಕುಮಾರ ಎಂಬವರ ಹೆಂಡತಿ ಸರೋಜ @ ಪುಷ್ಪ ಎಂಬವರು ಮಾನಸಿಕ ಅಸ್ವಸ್ಥರಾಗಿದ್ದು, ದಿನಾಂಕ 11-01-17 ರ ರಾತ್ರಿ 3-00 ಗಂಟೆಯಿಂದ ಕಾಣೆಯಾಗಿದ್ದು ಈ ಸಂಬಂಧವಾಗಿ ಅವರ ಪತಿ ಹೆಚ್.ಬಿ. ಕುಮಾರರವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು. ದಿನಾಂಕ 20-01-17ರಂದು ಸದರಿ ಕಾಣೆಯಾದ ಮಹಿಳೆ ಸರೋಜ @ ಪುಷ್ಪ ರವರ ಮೃತ ದೇಹವು ಚೇಂದಂಡ ರಮೇಶ್ ರವರಿಗೆ ಸೇರಿದ ಕೆರೆಯಲ್ಲಿ ಪತ್ತೆಯಾಗಿದ್ದು, ಈ ಬಗ್ಗೆ ಹೆಚ್.ಬಿ. ಕುಮಾರ ರವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಜರುಗಿಸಿರುತ್ತಾರೆ.

Friday, January 20, 2017

ಜೀವನದಲ್ಲಿ ಜಿಗುಪ್ಸೆ ಮಹಿಳೆ ಆತ್ಮಹತ್ಯೆ:
 
     ಮಡಿಕೇರಿ ತಾಲೋಕು, ಕಗ್ಗೋಡ್ಲು ಗ್ರಾಮದ ನಿವಾಸಿ ಚೇತನ್ ಕುಮಾರ್ ಎಂಬವರ ತಾಯಿ ಸವಿತಾ ಎಂಬ ಮಹಿಳೆ ಸಂಸಾರಿಕ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 18-1-2017 ರಂದು ಅವರು ವಾಸವಾಗಿದ್ದ ಮನೆಯಲ್ಲಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಫಿರ್ಯಾದಿ ಚೇತನ್ ಕುಮಾರ್ ರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಜರುಗಿಸಿರುತ್ತಾರೆ.
 
ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿ ಮೇಲೆ ಹಲ್ಲೆ ಕೊಲೆ ಬೆದರಿಕೆ:
`
      ಸೋಮವಾರಪೇಟೆ ತಾಲೋಕು ಜಂಬೂರು ಗ್ರಾಮದ ನಿವಾಸಿ ಪಿರ್ಯಾದಿ ಮಂಜುನಾಥ ಎಂಬವರು ದಿನಾಂಕ 19-01-2017 ರಂದು ಮಧ್ಯಾಹ್ನ 1-30 ಗಂಟೆ ಸಮಯದಲ್ಲಿ ಮಾದಾಪುರದ ಅಂಚೆ ಕಛೇರಿಯ ಮುಂಭಾಗದಲ್ಲಿ ನಿಂತುಕೊಂಡಿರುವಾಗ್ಗೆ, ಕಿಕ್ಕರಳ್ಳಿ ಗ್ರಾಮದ ವಾಸಿ ಸೇದು ಮುಡಿರ ನಟೇಶ ಎಂಬವರು ಅಲ್ಲಿಗೆ ಬಂದು ಮಂಜುನಾಥರವರನ್ನು ಕರೆದು ನನ್ನ ಕಾರಿಗೆ ಯಾಕೆ ಸೈಡು ಕೊಟ್ಟಿಲ್ಲ ಎಂದು ಹೇಳಿ ಅವಾಚ್ಯ ಶಬ್ದಗಳಿಂದ ಬೈದು ಮಂಜುನಾಥ ನವರ ಮುಖಕ್ಕೆ ಮತ್ತು ಶರೀರಕ್ಕೆ ಹಲ್ಲೆ ಮಾಡಿ ರಕ್ತಗಾಯ ಪಡಿಸಿದಲ್ಲದೆ, ಅಲ್ಲಿಯೇ ನಿಂತಿದ್ದ ಚಂದ್ರ ಹಾಗೂ ಹಾಲಪ್ಪ ನವರು ಹಲ್ಲೆ ಮಾಡದಂತೆ ತಡೆದಾಗ ಅವರ ಮೇಲೂ ಸಹ ನಟೇಶ ಹಲ್ಲೆ ನಡೆಸಿದ್ದು ಅಲ್ಲದೆ ಕೊಲೆ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 
ಮರಳು ಕಳ್ಳತನಕ್ಕೆ ಯತ್ನ ಪ್ರಕರಣ ದಾಖಲು:
 
     ಶನಿವಾರಸಂತೆ ಠಾಣಾಧಿಕಾರಿ ಶ್ರೀ ಹೆಚ್.ಎಂ. ಮರಿಸ್ವಾಮಿ ರವರಿಗೆ ದಿನಾಂಕ 19-01-2017 ರಂದು ರಾತ್ರಿ ಬಂದ ಮಾಹಿತಿ ಆದಾರದ ಮೇರೆಗೆ ಸಿಬ್ಬಂದಿಯೊಂದಿಗೆ ಶನಿವಾರಸಂತೆ ಠಾಣಾ ಸರಹದ್ದಿನ ಬೆಸೂರು ಗ್ರಾಮದ ನ್ಯಾಯಾದಳ್ಳ ಹೊಳೆಯಲ್ಲಿ ಕೂಡ್ಲೂರು ಗ್ರಾಮದ ರವಿ ಎಂಬವರು ಸರ್ಕಾರದ ಯಾವುದೇ ಪರವಾನಿಗೆಯನ್ನು ಪಡೆಯದೇ ಸರ್ಕಾರದ ಸೊತ್ತಾದ ಮರಳನ್ನು ಕಳ್ಳತನ ಮಾಡಿ ಕೆಎ-13 ಬಿ-7980ಪಿಕ್ ಅಫ್ ವಾಹನದಲ್ಲಿ ತುಂಬಿಸಲು ಪ್ರಯತ್ನಿಸುತ್ತಿದ್ದುನ್ನು ಪತ್ತೆಹಚ್ಚಿ  ಅವರ ಮೇಲೆ ದಾಳಿ ಮಾಡಿ, ಆರೋಪಿ ವಿರುದ್ಧ ಮೊಕದ್ದಮೆ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Thursday, January 19, 2017

ವ್ಯಕ್ತಿ ಆತ್ಮಹತ್ಯೆ:

      ನಾಪೋಕ್ಲು ಪೊಲೀಸ್ ಠಾಣಾ ಸರಹದ್ದಿನ ಕಡಿಯತ್ತೂರು ಗ್ರಾಮದ ನಿವಾಸಿ ಕೊಪ್ಪಡ ಎನ್. ಈರಪ್ಪ ಎಂಬವರ ತಂದೆ ನಾಣಯ್ಯ (75) ರವರು ಕೆಲವು ಸಮಯದಿಂದ ಉಬ್ಬಸ ಕಾಯಿಲೆಯಿಂದ ಬಳಲುತ್ತಿದ್ದು, ಇದೇ ಕಾರಣದಿಂದ ದಿನಾಂಕ  18-1-2016 ರಂದು ಯಾವುದೋ ವಿಷ ಪದಾರ್ಥವನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಸಂಬಂಧ ಎನ್. ಈರಪ್ಪ ನವರು ನೀಡಿದ ದೂರಿನ ಮೇರೆಗೆ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Wednesday, January 18, 2017

 ಆರ್.ಡಿ. ಹಣ ದುರುಪಯೋಗ:

       ಅಂಚೆ ಕಚೇರಿಯಲ್ಲಿ ಆರ್.ಡಿ. ಖಾತೆಯಲ್ಲಿ ತೊಡಗಿಸಿದ ಹಣವನ್ನು ಕಚೇರಿ ಸಿಬ್ಬಂದಿ ದುರುಪಯೋಗ ಪಡಿಸಿದ ಘಟನೆ ಸೋಮವಾರಪೇಟೆ ಠಾಣಾ ಸರಹದ್ದಿನ ಬೇಳೂರು ಅಂಚೆ ಕಚೇರಿಯಲ್ಲಿ ನಡೆದಿದೆ. ಸೋಮವಾರಪೇಟೆ ತಾಲೋಕಿನ ಬೇಳೂರು ಅಂಚೆ ಕಚೇರಿಯ ಆರ್.ಡಿ. ಖಾತೆಗಳಲ್ಲಿ ದಿನಾಂಕ 8-4-2011 ರಿಂದ 22-3-2016ರ ವರೆಗೆ ಗ್ರಾಮಸ್ಥರು ತೊಡಗಿಸಿದ ಹಣವನ್ನು ಕಟ್ಟದೆ ಅಂಚೆ ಕಚೇರಿ ಪಾಲಕರಾದ ಸೌಮ್ಯ ಎಂಬವರು ದುರುಪಯೋಗಪಡಿಸಿರುವ ಸಂಬಂಧ ಸೋಮವಾರಪೇಟೆ ಉಪ ವಿಭಾಗದ ಅಂಚೆ ನಿರೀಕ್ಷಕರಾದ ಬಿ. ಶಣ್ಮುಗ ರವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿದ ಸೋವಾರಪೇಟೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಲಾರಿಗೆ ಬೈಕ್ ಡಿಕ್ಕಿ:

     ಕುಶಾಲನಗರದ ಕೂಡ್ಲೂರು ಗ್ರಾಮದಲ್ಲಿ ವಾಸವಾಗಿರುವ ಚಿಕ್ಕಣ್ಣ ಎಂಬವರು ದಿನಾಂಕ 17-1-2017 ರಂದು ಸಮಯ 4-40 ಪಿ.ಎಂ. ಗೆ ತಮ್ಮ ಬಾಪ್ತು ಲಾರಿಯನ್ನು ಕುಶಾಲನಗರ ಕಡೆಗೆ ಚಾಲಿಸಿಕೊಂಡು ಬರುತ್ತಿದ್ದಾಗ ಎದುರುಗಡೆಯಿಂದ ಬಂದ ಮೋಟಾರ್ ಸೈಕಲಿನ ಸವಾರ ಅತೀ ವೇಗ ಮತ್ತು ಅಜಾಗರೂಕತೆಯಿಂದ ಮೋಟಾರ್ ಸೈಕಲನ್ನು ಚಾಲಿಸಿಕೊಂಡು ಬಂದು ಲಾರಿಗೆ ಡಿಕ್ಕಿಪಡಿಸಿದ ಪರಿಣಾಮ ಸದರಿ ಬೈಕ್ ಸವಾರ ಗಾಯಗೊಂಡಿದ್ದು, ಕುಶಾಲನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಪಾದಚಾರಿಗೆ ಕಾರು ಡಿಕ್ಕಿ:

     ದಿನಾಂಕ 17-1-2017 ರಂದು ಸಿದ್ದಾಪುರ ಠಾಣಾ ವ್ಯಾಪ್ತಿಯ ಪಾಲಿಬೆಟ್ಟ ಪಟ್ಟಣದಲ್ಲಿ ಪಾಲಿಬೆಟ್ಟ ನಿವಾಸಿ ಎಂ.ಬಿ. ಅಬ್ದುಲ್ ಸಲಾಂ ಎಂಬವರು ನಡೆದುಕೊಂಡು ಹೋಗುತ್ತಿದ್ದಾಗ ಅಜಿತ್ ಕರುಂಬಯ್ಯ, ಎಂಬವರು ತಮ್ಮ ಬಾಪ್ತು ಕಾರನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಎಂ.ಬಿ. ಅಬ್ದುಲ್ ಸಲಾಂ ರವರಿಗೆ ಡಿಕ್ಕಿಪಡಿಸಿದ ಪರಿಣಾಮ ತಲೆಯ ಭಾಗಕ್ಕೆ ತೀವ್ರಸ್ವರೂಪದ ಗಾಯವಾಗಿದ್ದು, ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Tuesday, January 17, 2017

 ಜಾಗದ ವಿಚಾರ, ವ್ಯಕ್ತಿಗೆ ಕೊಲೆ ಬೆದರಿಕೆ:

ಮಡಿಕೇರಿ ತಾಲೋಕು ಮರಗೋಡು ಗ್ರಾಮದ ನಿವಾಸಿ ಫಿರ್ಯಾದಿ ಚೆರಿಯಮನೆ ಸಿ. ವಿಠಲ ಎಂಬವರ ಕಟ್ಟೆಮಾಡುವಿನಲ್ಲಿರುವ ಜಾಗಕ್ಕೆ ದಿನಾಂಕ 8-1-2017 ರಂದು ಅಕ್ರಮ ಪ್ರವೇಶ ಮಾಡಿದ ಆರೋಪಿ ಉದಯಕುಮಾರ್ ಇಟಾಚಿ ಯಂತ್ರ ತರಿಸಿ ಕಾಫಿ ತೋಟದ ಬರೆಯನ್ನು ಹಾಗೂ ತೋಟದ ಬೇಲಿಯನ್ನು ಬೀಳಿಸಿ 5,000/ ರೂ ನಷ್ಟಪಡಿಸಿದಲ್ಲದೇ ದಿ.14/10/2016 ರಂದು ಬೆಳಿಗ್ಗೆ 10.00 ಗಂಟೆಗೆ ಪಿರ್ಯಾದಿಯವರು ಬರೆ ಕೊರೆದ ಜಾಗದಲ್ಲಿರುವಾಗ್ಗೆ ಉದಯಕುಮಾರ್ ಅಲ್ಲಿಗೆ ಬಂದಾಗ ಪಿರ್ಯಾದಿಯವರು ಆರೋಪಿಯನ್ನು ಈ ಬಗ್ಗೆ ಕೇಳಿದಾಗ ಅವಾಚ್ಯ ಶಬ್ದಗಳಿಂದ ಬೈದು ಕೊಲೆ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಾಲೆಯಿಂದ ಮನೆಗೆ ಮರಳುತ್ತಿದ್ದ ಮಕ್ಕಳಿಗೆ ಕಾರು ಡಿಕ್ಕಿ:

ಶಾಲೆಯಿಂದ ಮನೆಗೆ ಮರಳುತ್ತಿದ್ದ ಇಬ್ಬರು ಮಕ್ಕಳಿಗೆ ಆಲ್ಟೋ ಕಾರು ಡಿಕ್ಕಿಯಾಗಿ ಗಾಯಗೊಂಡ ಘಟನೆ ವಿರಾಜಪೇಟೆ ಹತ್ತಿರದ ಅಮ್ಮತ್ತಿಯಲ್ಲಿ ನಡೆದಿದೆ. ದಿನಾಂಕ 16-1-2017 ರಂದು ಪಿರ್ಯಾದಿ ಕಾವಾಡಿಚಂಡ ಯು. ಗಣಪತಿರವರ ಲೈನ್ ಮನೆಯಲ್ಲಿ ವಾಸವಾಗಿರುವ ಎರವರ ಅಪ್ಪುಣು ರವರ ಮಗ ಗಣೇಶ ರವರು ಹಾಗೂ ಬಿಳುಗುಂದ ಗ್ರಾಮದ ಮೊಕೊಂಡ ಸಿ. ಅಯ್ಯಪ್ಪ ನವರ ಲೈನ್ ಮನೆಯಲ್ಲಿ ವಾಸವಿರುವ ಎರವರ ಕಾಳ ರವರ ಮಗಳು ಶಾಂತಿ ರವರು ಅಮ್ಮತ್ತಿ ಪ್ರಾಥಮಿಕ ಶಾಲೆಯ ತರಗತಿಗೆ ಹೋಗಿ ವಾಪಾಸ್ಸು ಸಂಜೆ ಸಮಯ ಗಂಟೆ ಸಮಯದಲ್ಲಿ ಅಮ್ಮತ್ತಿ ಚೌಕಿಯ ಸಾರ್ವಜನಿಕ ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ವಿರಾಜಪೇಟೆ ಕಡೆಯಿಂದ ಕೆಎಲ್.12.ಇ.9396ರ ಆಲ್ಟೋ ಕಾರಿನ ಚಾಲಕನು ಸದರಿ ಕಾರನ್ನು ಅತೀವೇಗ ಹಾಗೂ ಅಜಾ ಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಗಣೇಶ ಮತ್ತು ಶಾಂತಿಗೆ ಡಿಕ್ಕಿಪಡಿಸಿದ ಪರಿಣಾಮ ಸದರಿ ಮಕ್ಕಳು ಕೆಳಗೆ ಬಿದ್ದು ಗಾಯಗೊಂಡಿದ್ದು, ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. `
ಕಾಣೆಯಾದ ಮಹಿಳೆಯ ಶವ ಪತ್ತೆ:


ಕೆಲ ದಿನಗಳ ಹಿಂದೆ ಕಾಣೆಯಾದ ಮಹಿಳೆಯ ಮೃತ ಶರೀರವು ಪತ್ತೆಯಾದ ಘಟನೆ ಶ್ರೀಮಂಗಲ ಠಾಣೆಯಲ್ಲಿ ವರದಿಯಾಗಿದೆ. ಶ್ರೀಮಂಗಲದ ನಿವಾಸಿ ಚೋನಿರ ಹರಿನ್ ಎಂಬವರ ಲೈನುಮನೆಯಲ್ಲಿ ವಾಸವಾಗಿರುವ ಪಣಿ ಎರವರ ಬೇರ ಎಂಬವರ ತಂಗಿ ಕುಳ್ಳಿ ಎಂಬಾಕೆ ದಿನಾಂಕ 9-1-2017 ರಂದು ಕಾಣೆಯಾಗಿದ್ದು, ಸದರಿ ಮಹಿಳೆಯ ಮೃತದೇಹವು ದಿನಾಂಕ 16-1-2017 ರಂದು ಶ್ರೀಮಂಗಲದ ಹತ್ತಿರದ ತೋಡಿನ ಬದಿಯಲ್ಲಿ ಪತ್ತೆಯಾಗಿದ್ದು, ಶ್ರೀಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನಕ್ರಮ ಕೈಗೊಂಡಿದ್ದಾರೆ. 

ದಾರಿಯ ವಿಚಾರದಲ್ಲಿ ಜಗಳ ವ್ಯಕ್ತಿ ಮೇಲೆ ಹಲ್ಲೆ:

ದಿನಾಂಕ 16-01-2017 ರಂದು ಸಮಯ ರಾತ್ರಿ 18.30 ಗಂಟೆಗೆ ಸೋಮವಾರಪೇಟೆ ಠಾಣಾ ಸರಹದ್ದಿನ ಹಟ್ಟಿಹೊಳೆ ಗ್ರಾಮದ ನಿವಾಸಿ ಫಿರ್ಯಾದಿ ಬೆನ್ನಿ ಡಿಸೋಜ ರವರು ತಮ್ಮ ಮನೆಯಿಂದ ಹೊರಗಡೆ ಬಂದಾಗ ಆರೋಪಿ ಪ್ರಾನ್ಸಿಸ್ ಡಿಸೋಜ ಎಂಬವರು ಪಿರ್ಯಾದಿಯವರೊಂದಿಗೆ ದಾರಿಯ ವಿಚಾರದಲ್ಲಿ ಜಗಳ ತೆಗೆದು ಕೈ ಯಿಂದ ತಲೆಗೆ ಹಲ್ಲೆ ಮಾಡಿದ್ದಲ್ಲದೆ , ಅವಾಚ್ಯ ಶಬ್ದಗಳಿಂದ ಬೈದು ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Monday, January 16, 2017

 ಪತ್ನಿ ಮೇಲೆ ಪತ್ನಿಯಿಂದ ಹಲ್ಲೆ:

     ಮದ್ಯಪಾನ ಮಾಡಿದ ವ್ಯಕ್ತಿಯೋರ್ವ ತನ್ನ ಹೆಂಡತಿ ಮೇಲೆ ಹತ್ತಿಯಿಂದ ಹಲ್ಲೆ ಮಾಡಿ ಕೈಬರಳುಗಳನ್ನು ತುಂಡರಿಸಿದ ಘಟನೆ ಶನಿವಾರಸಂತೆ ಠಾಣಾ ಸರಹದ್ದಿನ ಕಟ್ಟೆಪುರ ಗ್ರಾಮದಲ್ಲಿ ನಡೆದಿದೆ. ದಿನಾಂಕ 14-1-2017 ರಂದು ಕಟ್ಟೆಪುರ ಗ್ರಾಮದ ನಿವಾಸಿ ಜೇನುಕುರುಬರ ಅಣ್ಣಯ್ಯ ಎಂಬವರು ಮದ್ಯಪಾನ ಮಾಡಿಕೊಂಡು ತನ್ನ ಮನೆಗೆ ಬಂದು ವಿನಾಕಾರಣ ತನ್ನ ಪತ್ನಿ ಶ್ರೀಮತಿ ಜೇನುಕುರುಬರ ಯಶೋಧರವರ ಮೇಲೆ ಕತ್ತಿಯಿಂದ ಹಲ್ಲೆ ಮಾಡಿ ಕೈಬೆಳಗಳನ್ನು ತುಂಡರಿಸಿದ್ದು, ಈ ಬಗ್ಗೆ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ. 
ಮಹಿಳೆ ಕಾಣೆ:

     ವಿರಾಜಪೇಟೆ ತಾಲೋಕು ಚೆಂಬೆಬೆಳ್ಳೂರು ಗ್ರಾಮದ ನಿವಾಸಿ ಹೆಚ್.ಬಿ. ಕುಮಾರ ಎಂಬವರ ಪತ್ನಿ ಶ್ರೀಮತಿ ಸರೋಜ @ ಪುಷ್ಪ ಎಂಬವರು ಕೆಲವು ದಿವಸಗಳಿಂದ ಮಾನಸಿಕವಾಗಿ ಅಸ್ವಸ್ಥಗೊಂಡಿದ್ದು,  ದಿನಾಂಕ 11-1-2017 ರಂದು ಬೆಳಗಿನ ಜಾವ 3-00 ಗಂಟೆಯ ಸಮಯದಿಂದ ಮನೆಯಿಂದ ಕಾಣಿಯಾಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಕಾರು ಮರಕ್ಕೆ ಡಿಕ್ಕಿ ಚಾಲಕ ಸಾವು:

     ಕಾರೊಂದು ರಸ್ತೆಬದಿಯ ಮರಕ್ಕೆ ಡಿಕ್ಕಿಹೊಡೆದ ಪರಿಣಾಮ ಕಾರಿನ ಚಾಲಕ ಸಾವನಪ್ಪಿದ ಘಟನೆ ಮಡಿಕೇರಿ ಸಮೀಪದ ಮದೆನಾಡು ಗ್ರಾಮದಲ್ಲಿ ನಡೆದಿದೆ. ದಿನಾಂಕ 14-1-2017 ರಂದು ರಾತ್ರಿ 8-30 ಗಂಟೆಯ ಸಮುಯದಲ್ಲಿ ಮಡಿಕೇರಿ ತಾಲೋಕು ಮದೆನಾಡು ಗ್ರಾಮದ ನಿವಾಸಿ ಯು.ಎ. ಶೇಷಪ್ಪ ಎಂಬವರ ಪುತ್ರ ಅರುಣ್ ಕುಮಾರ್ (40) ರವರು ತಮ್ಮ ಮನೆಯ ಕಡೆಗೆ ತಮ್ಮ ಕಾರನ್ನು ಚಾಲಿಸಿಕೊಂಡು ಹೋಗುತ್ತಿದ್ದಾಗ ಕಾರು ರಸ್ತೆ ಬದಿಯ ಮರವೊಂದಕ್ಕೆ ಡಿಕ್ಕಿ ಯಾಗಿ ಸದರಿಯವರು ತೀವ್ರವಾಗಿ ಗಾಯಗೊಂಡು ಮೃತಪಟ್ಟಿದ್ದು, ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Sunday, January 15, 2017

ಬೈಕಿಗೆ ಸ್ಕೂಟರ್ ಡಿಕ್ಕಿ

               ಸೋಮವಾರಪೇಟೆ ತಾಲೂಕಿನ ಸುಂಟಿಕೊಪ್ಪದ ಗದ್ದೆಹಳ್ಳದ ನಿವಾಸಿ ಮನೋಜ್ ಎಂಬುವವರು ದಿನಾಂಕ 12-1-2017 ರಂದು ತನ್ನ ಸ್ನೇಹಿತ ಅಶ್ವತ್ ರವರೊಂದಿಗೆ ಮೋಟಾರು ಸೈಕಲಿನಲ್ಲಿ ಕುಶಾಲನಗರಕ್ಕೆ ಹೋಗಿ ವಾಪಾಸ್ಸು ಸುಂಟಿಕೊಪ್ಪಕ್ಕೆ ಬರುತ್ತಿರುವಾಗ ಸುಂಟಿಕೊಪ್ಪದ ಅಂದಗೋವೆ ಜಂಕ್ಷನ್ ಬಳಿ ತಲುಪುವಾಗ್ಗೆ ಮುಂದುಗಡೆಯಿಂದ ಕೆ ಎಸ್ ಆರ್ ಟಿ ಸಿ ಬಸ್ಸು ಬರುತ್ತಿದ್ದು ಅದನ್ನು ಸ್ಕೂಟಿಯ ಚಾಲಕ ಓವರ್ ಟೇಕ್ ಮಾಡಿಕೊಂಡು ಹೋಗಿ ಎದುರುಗಡೆಯಿಂದ ಬರುತ್ತಿದ್ದ ಮೋಟಾರು ಸೈಕಲಿಗೆ ಡಿಕ್ಕಿ ಪಡಿಸಿದ್ದು ಮೋಟಾರು ಸೈಕಲ್ ಚಾಲಕ ಮನೋಜ್ ರವರಿಗೆ ಗಾಯಗಳಾಗಿದ್ದು ಈ ಬಗ್ಗೆ ಮನೋಜ್ ರವರು ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಪಾದಾಚಾರಿಗೆ ಮೋಟಾರು ಸೈಕಲ್ ಡಿಕ್ಕಿ

            ಮಡಿಕೇರಿ ತಾಲೂಕಿನ ಭಾಗಮಂಡಲದ ನಿವಾಸಿ ದಿವಾಕರ ಎಂಬುವವರು ದಿನಾಂಕ 13-01-2017 ರಂದು ಹೆಂಡತಿ ಮತ್ತು ಮಕ್ಕಳಾದ ಮನ್ವಿತ್ ಮತ್ತು ಭುವನ್ ರವರನ್ನು ಕರೆದುಕೊಂಡು ರಸ್ತೆಯ ಪಕ್ಕದಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಹಿಂದಿನಿಂದ ಹೊಸೂರು ವೇಣೂಗೋಪಾಲ ಎಂಬುವವರು ಮೋಟಾರ್ ಸೈಕಲನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ದಿವಾಕರ ಮತ್ತು ಅವರ ಮಗಳು ಭುವನಳಿಗೆ ಡಿಕ್ಕಿ ಪಡಿಸಿ ಗಾಯವಾಗಿದ್ದು ಈ ಬಗ್ಗೆ ದಿವಾಕರರವರು ನೀಡಿದ ದೂರಿನ ಮೇರೆಗೆ ಭಾಗಮಂಡಲ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

 ಕಾರು ಮರಕ್ಕೆಡಿಕ್ಕಿಯಾಗಿ ಚಾಲಕನ ದುರ್ಮರಣ 

           ಮಡಿಕೇರಿ ತಾಲೂಕಿನ ಮದೆನಾಡು ಗ್ರಾಮದ ನಿವಾಸಿ ಅರುಣ್ ಕುಮಾರ್ ಎಂಬುವವರು ಮಡಿಕೇರಿಯ ಮೆಡಿಕಲ್ ಕಾಲೇಜಿನಲ್ಲಿ ಕಾರನ್ನು ಬಾಡಿಗೆಗೆ ಓಡಿಸುತ್ತಿದ್ದು ದಿನಾಂಕ 14-1-2017 ರಂದು ಸಂಜೆ ಮಡಿಕೇರಿಯಿಂದ ಮನೆಗೆ ಹೋಗುತ್ತಿರುವಾಗ ಕಾರನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಮದೆನಾಡುವಿನ ವಿಂಡ್ ವೀಲ್ ಎಸ್ಟೇಟ್ ಹತ್ತಿರದ ರಸ್ತೆಯಲ್ಲಿ ಕಾರು ಮರಕ್ಕೆ ಡಿಕ್ಕಿಯಾಗಿ ಅರುಣ್ ಕುಮಾರನಿಗೆ ತೀವೃ ತರಹದ ನೋವಾಗಿದ್ದು ಆಸ್ಪತ್ರೆಗೆ ಸಾಗಿಸುವಾಗ ಮೃಪಟ್ಟಿರುವುದಾಗಿ ಅರುಣ್ ಕುಮಾರ್ ರವರ ತಮ್ಮ ಪ್ರಭಾಕರರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Saturday, January 14, 2017

ಕಾರು ಕಳವು
              ಬೈಲಕುಪ್ಪೆಯ ಟಿಬೆಟಿಯನ್ ನಿರಾಶ್ತಿತರ ಕ್ಯಾಂಪಿನ ನಿವಾಸಿ ಪೇಮಾ ಸಂಘೆ ಎಂಬವರು ದಿನಾಂಕ 29/11/2016ರಂದು ಅವರ ಕುಟುಂಬಸ್ಥರೊಂದಿಗೆ ಕೆಎ-09-ಎನ್-2318ರ ಮೃಉತಿ ವ್ಯಾನಿನಲ್ಲಿ ಕುಶಾಲನಗರದ ಗುಂಡೂರಾವ್‌ ಬಡಾವಣೆಯ ಜಾತ್ರಾ ಮೈದಾನದಲ್ಲಿ ನಡೆಯುತ್ತಿದ್ದ ಜಾತ್ರೆ ವೀಕ್ಷಿಸಲು ಹೋಗಿದ್ದು ವ್ಯಾನನ್ನು ಜಾತ್ರಾ ಮೈದಾನದ ವಾಹನ ನಿಲುಗಡೆಯಲ್ಲಿ ನಿಲ್ಲಿಸಿ ಜಾತ್ರೆ ನೋಡಿಕೊಂಡು ವಾಪಾಸು ಬಂದು ನೋಡುವಾಗ ನಿಲ್ಲಿಸಿದ್ದ ವ್ಯಾನು ಕಾಣದೇ ಇದ್ದು, ಯಾರೋ ಕಳವು ಮಾಡಿಕೊಂಡು ಹೋಗಿರಬಹುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಅಕ್ರಮ ಮರಳು ಸಂಗ್ರಹ
                     ಕೂಡಿಗೆ ಬಳಿಯ ಹುದುಗೂರು ಗ್ರಾಮದ ಹಾರಂಗಿ ನಾಲೆಯ ಬಳಿ ಅಕ್ರಮವಾಗಿ ಮರಳು ಸಂಗ್ರಹ ಮಾಡಿರುವುದಾಗಿ ದೊರೆತ ಸುಳಿವಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಠಾಣೆ ಪಿಎಸ್‌ಐ ಜೆ.ಇ.ಮಹೇಶ್‌ರವರು ದಿನಾಂಕ 13/01/2017ರಂದು ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ತೆರಳಿದಾಗ ಹಾರಂಗಿ ನಾಲಯ ಬಳಿ ಓರ್ವ ವ್ಯಕ್ತಿ ಪೊಲೀಸರನ್ನು ಕಂಡು ಓಡಿಹೋಗಿದ್ದು, ಸ್ಥಳದಲ್ಲಿ ಮಾರಾಟ ಮಾಡುವ ಉದ್ದೇಶದಿಂದ ಸುಮಾರು 5-6 ಟ್ರ್ಯಾಕ್ಟರ್ ಲೋಡುಗಳಷ್ಟು ಮರಳನ್ನು ಅಕ್ರಮವಾಗಿ ಸಂಗ್ರಹಿಸಿರುವುದು ಪತ್ತೆಯಾಗಿದ್ದು, ಪೊಲೀಸರನ್ನು ಕಂಡು ಓಡಿಹೋದ ವ್ಯಕ್ತಿಯ ಬಗ್ಗೆ ವಿಚಾರಿಸಿದಾಗ ಆತನು ಹುದುಗೂರು ನಿವಾಸಿ ಕೃಷ್ಣೆಗೌಡ ಎಂಬುದಾಗಿ ತಿಳಿದು ಬಂದಿದ್ದು ಆತನೇ ಅಕ್ರಮವಾಗಿ ಮರಳನ್ನು ಸಂಗ್ರಹಿಸಿರುವುದಾಗಿ ತಿಳಿದು ಬಂದ ಮೇರೆಗೆ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಹಲ್ಲೆ ಪ್ರಕರಣ
                        ದಿನಾಂಕ 12/01/2017ರಂದು ಸೋಮವಾರಪೇಟೆ ನಗರದ ನಿವಾಸಿ ಮಂಜುನಾಥ ಎಂಬವರು ಹರಗ ಗ್ರಾಮದಲ್ಲಿ ಗಾರೆ ಕೆಲಸಕ್ಕೆ ಹೋಗಿದ್ದು, ಅಲ್ಲಿ ಪರಮೇಶ, ಧರ್ಮ ಮತ್ತು ಕುಶಾಲಪ್ಪ ಎಂಬವರು ಮಂಜುನಾಥರವರು  ಹರಗ ಗ್ರಾಮಕ್ಕೆ  ಕೆಲಸಕ್ಕೆ  ಬಂದ ಬಗ್ಗೆ ಆಕ್ಷೇಪಿಸಿ ಜಗಳವಾಡಿ ಮಂಜುನಾಥರವರ ಮೇಲೆ  ಹಲ್ಲೆ  ಮಾಡಿ ಕೊಲೆ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ  ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಆಸ್ತಿ ವಿವಾದ ಕೊಲೆ ಬೆದರಿಕೆ
                     ದಿನಾಂಕ 12/01/2017ರಂದು ವಿರಾಜಪೇಟೆ ಬಳಿಯ ಅಮ್ಮತ್ತಿ ನಿವಾಸಿ ಎಂ.ಕೆ.ಚಿಟ್ಟಿಯಪ್ಪ ಎಂಬವರು ವಿರಾಜಪೇಟೆ ನ್ಯಾಯಾಲಯದಲ್ಲಿ ಪ್ರಕರಣವೊಂದರ ವಿಚಾರಣೆಗೆ ಹಾಜರಾಗಿ ವಾಪಾಸು ಮನೆಗೆ ಹೋದಾಗ ವಿರಾಜಪೇಟೆ ನಿವಾಸಿಗಳಾದ ವಿಶ್ವನಾಥ್‌ ಮತ್ತು ರೋಹಿಣಿ ಎಂಬವರು ಚಿಟ್ಟಿಯಪ್ಪನವರ ಮನೆಯ ಬೀಗ ಮುರಿದು ಮನೆಯೊಳಗೆ ಅಕ್ರಮವಾಗಿ ಪ್ರವೇಶಿಸಿರುವುದು ಕಂಡು ಬಂದು ಅದನ್ನು ವಿಚಾರಿಸಿದಾಗ ವಿಶ್ವನಾಥರವರು ಚಿಟ್ಟಿಯಪ್ಪನವರನ್ನು ಗುಂಡು ಹೊಡೆದು ಕೊಲೆ ಮಾಡುವುದಾಗಿ ಬೆದರಿಸಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಮಹಿಳೆ ಆತ್ಮಹತ್ಯೆ
                      ದಿನಾಂಕ 13/01/2017ರಂದು ವಿರಾಜಪೇಟೆ ಬಳಿಯ ಅಮ್ಮತ್ತಿ  ನಿವಾಸಿ ಸಂತೋಷ್‌ ಎಂಬವರ ತಾಯಿ ಕಮಲ ಎಂಬವರು ಮನೆಯ ಹಿಂದಿನ ಮಾವಿನ ಮರಕ್ಕೆ  ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ದೀರ್ಘ ಸಮಯದಿಂದ ಕಮಲರವರು ಗರ್ಭಕೋಶದ ಕಾಯಿಲೆಯಿಂದ ನರಳುತ್ತಿದ್ದು, ಈ ಕಾರಣಕ್ಕೆ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.