Friday, January 13, 2017

ಕ್ಷುಲ್ಲಕ ಕಾರಣಕ್ಕೆ ಹಲ್ಲೆ:
         ವಿರಾಜಪೇಟೆ ನಗರದ ಮೀನುಪೇಟೆಯ ನಿವಾಸಿ ತಮೀಮ್ ರವರು ವಿರಾಜಪೇಟೆಯ ಅಟ್ಲಾಸ್ ಗೋಲ್ಡ್ ನಲ್ಲಿ ಕಾರು ಚಾಲಕನಾಗಿ ಕೆಲಸಮಾಡಿಕೊಂಡಿದ್ದು ದಿನಾಂಕ 12-1-2016 ರಂದು ಅಟ್ಲಾಸ್ ಗೋಲ್ಡ್ ಸ್ಕಿಮ್ ಕಲೆಕ್ಷೆನ್ ಹಾಗೂ ಮೆಂಬರ್ ಶಿಫ್ ಕೆಲಸಕ್ಕೆ ಸಾಬೀತ್ ಹಾಗೂ ಅಭಿಜೀತ್ ರವರುಗಳೊಂದಿಗೆ ಕಾರಿನಲ್ಲಿ ನೆಲ್ಲಿಹುದಿಕೇರಿ, ಸಿದ್ದಾಪುರ, ಅಮ್ಮತ್ತಿಗೆ ಹೋಗಿ ಮದ್ಯಾಹ್ನ ಸಿದ್ದಾಪುರ ಚರ್ಚ್ ಹಾಲ್ ನಲ್ಲಿ ಮದುವೆಗೆ ಹೋಗಲು ಚರ್ಚ್ ಹಾಲ್ ಎದರು ಕಾರನ್ನು ಪಾರ್ಕ್ ಮಾಡುವ ಸಂದರ್ಭ ಹಂಸ ಮತ್ತು ಇತರ 3 ಜನರು ಕಾರಿನಲ್ಲಿ ಬಂದು ಕ್ಷುಲ್ಲಕ ಕಾರಣಕ್ಕೆ ಜಗಳ ತೆಗೆದು ಮೂರು ಜನರಿಗೂ ಹಲ್ಲೆ ನಡೆಸಿದ್ದು ಈ ಬಗ್ಗೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಬರೆ ಜರಿದು ಮಗು ಸಾವು :
    
ದಿನಾಂಕ 12-1-2017 ರಂದು ಮಡಿಕೇರಿ ನಗರದ ಕನ್ನಂಡಬಾಣೆಯ ರವಿಕಿರಣ್ ಎಂಬುವವರ ಜಾಗದಲ್ಲಿ ಮನೆ ನಿರ್ಮಿಸುವ ಜಾಗದ ಕೆಲಸವನ್ನು ಕಾಂಟ್ರಾಕ್ಟರ್ ಶಂಕರ್‌ರವರು ಹಾಸನದ ಬೋವಿ ಕಾಲೋನಿಯ ನಿವಾಸಿ ಶ್ರೀಮತಿ ಶಾಂತಮ್ಮ, ಅವರ ತಮ್ಮ ಸ್ವಾಮಿ ಮತ್ತು ಇತರರಿಂದ ಮಾಡಿಸುತ್ತಿದ್ದು ಸದರಿ ಜಾಗದ ಒತ್ತಿನಲ್ಲಿರುವ ಬರೆ ಮಣ್ಣನ್ನು ತೆಗೆಯುತ್ತಿರುವಾಗ ಅಲ್ಲೆ ಇದ್ದ ಸ್ವಾಮಿಯವರ ನಾಲ್ಕುವರೆ ವಯಸ್ಸಿನ ಪ್ರಜ್ವಲ್ ನ ಮೇಲೆ ಬರೆ ಮಣ್ಣು ಜರಿದು ಬಿದ್ದು ಮಗು ಮೃತಪಟ್ಟಿದ್ದು ಈ ಬಗ್ಗೆ ಮಡಿಕೇರಿ ನಗರದಲ್ಲಿ ಪ್ರಕರಣ ದಾಖಲಾಗಿರುತ್ತದೆ