Friday, January 20, 2017

ಜೀವನದಲ್ಲಿ ಜಿಗುಪ್ಸೆ ಮಹಿಳೆ ಆತ್ಮಹತ್ಯೆ:
 
     ಮಡಿಕೇರಿ ತಾಲೋಕು, ಕಗ್ಗೋಡ್ಲು ಗ್ರಾಮದ ನಿವಾಸಿ ಚೇತನ್ ಕುಮಾರ್ ಎಂಬವರ ತಾಯಿ ಸವಿತಾ ಎಂಬ ಮಹಿಳೆ ಸಂಸಾರಿಕ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 18-1-2017 ರಂದು ಅವರು ವಾಸವಾಗಿದ್ದ ಮನೆಯಲ್ಲಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಫಿರ್ಯಾದಿ ಚೇತನ್ ಕುಮಾರ್ ರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಜರುಗಿಸಿರುತ್ತಾರೆ.
 
ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿ ಮೇಲೆ ಹಲ್ಲೆ ಕೊಲೆ ಬೆದರಿಕೆ:
`
      ಸೋಮವಾರಪೇಟೆ ತಾಲೋಕು ಜಂಬೂರು ಗ್ರಾಮದ ನಿವಾಸಿ ಪಿರ್ಯಾದಿ ಮಂಜುನಾಥ ಎಂಬವರು ದಿನಾಂಕ 19-01-2017 ರಂದು ಮಧ್ಯಾಹ್ನ 1-30 ಗಂಟೆ ಸಮಯದಲ್ಲಿ ಮಾದಾಪುರದ ಅಂಚೆ ಕಛೇರಿಯ ಮುಂಭಾಗದಲ್ಲಿ ನಿಂತುಕೊಂಡಿರುವಾಗ್ಗೆ, ಕಿಕ್ಕರಳ್ಳಿ ಗ್ರಾಮದ ವಾಸಿ ಸೇದು ಮುಡಿರ ನಟೇಶ ಎಂಬವರು ಅಲ್ಲಿಗೆ ಬಂದು ಮಂಜುನಾಥರವರನ್ನು ಕರೆದು ನನ್ನ ಕಾರಿಗೆ ಯಾಕೆ ಸೈಡು ಕೊಟ್ಟಿಲ್ಲ ಎಂದು ಹೇಳಿ ಅವಾಚ್ಯ ಶಬ್ದಗಳಿಂದ ಬೈದು ಮಂಜುನಾಥ ನವರ ಮುಖಕ್ಕೆ ಮತ್ತು ಶರೀರಕ್ಕೆ ಹಲ್ಲೆ ಮಾಡಿ ರಕ್ತಗಾಯ ಪಡಿಸಿದಲ್ಲದೆ, ಅಲ್ಲಿಯೇ ನಿಂತಿದ್ದ ಚಂದ್ರ ಹಾಗೂ ಹಾಲಪ್ಪ ನವರು ಹಲ್ಲೆ ಮಾಡದಂತೆ ತಡೆದಾಗ ಅವರ ಮೇಲೂ ಸಹ ನಟೇಶ ಹಲ್ಲೆ ನಡೆಸಿದ್ದು ಅಲ್ಲದೆ ಕೊಲೆ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 
ಮರಳು ಕಳ್ಳತನಕ್ಕೆ ಯತ್ನ ಪ್ರಕರಣ ದಾಖಲು:
 
     ಶನಿವಾರಸಂತೆ ಠಾಣಾಧಿಕಾರಿ ಶ್ರೀ ಹೆಚ್.ಎಂ. ಮರಿಸ್ವಾಮಿ ರವರಿಗೆ ದಿನಾಂಕ 19-01-2017 ರಂದು ರಾತ್ರಿ ಬಂದ ಮಾಹಿತಿ ಆದಾರದ ಮೇರೆಗೆ ಸಿಬ್ಬಂದಿಯೊಂದಿಗೆ ಶನಿವಾರಸಂತೆ ಠಾಣಾ ಸರಹದ್ದಿನ ಬೆಸೂರು ಗ್ರಾಮದ ನ್ಯಾಯಾದಳ್ಳ ಹೊಳೆಯಲ್ಲಿ ಕೂಡ್ಲೂರು ಗ್ರಾಮದ ರವಿ ಎಂಬವರು ಸರ್ಕಾರದ ಯಾವುದೇ ಪರವಾನಿಗೆಯನ್ನು ಪಡೆಯದೇ ಸರ್ಕಾರದ ಸೊತ್ತಾದ ಮರಳನ್ನು ಕಳ್ಳತನ ಮಾಡಿ ಕೆಎ-13 ಬಿ-7980ಪಿಕ್ ಅಫ್ ವಾಹನದಲ್ಲಿ ತುಂಬಿಸಲು ಪ್ರಯತ್ನಿಸುತ್ತಿದ್ದುನ್ನು ಪತ್ತೆಹಚ್ಚಿ  ಅವರ ಮೇಲೆ ದಾಳಿ ಮಾಡಿ, ಆರೋಪಿ ವಿರುದ್ಧ ಮೊಕದ್ದಮೆ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.