Thursday, January 5, 2017

 ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯ ಮೇಲೆ ಹಲ್ಲೆ

           ನಾಪೋಕ್ಷುವಿನ ನಿವಾಸಿ ರವಿಕುಮಾರ್ ಎಂಬುವವರು ಕೆಲವು ದಿನಗಳ ಹಿಂದೆ ರಾಮಚಂದ್ರ ಎಂಬುವವರಿಗೆ 20,000 ರೂ ಹಣವನ್ನು ಸಾಲಕೊಟ್ಟಿದ್ದು, ದಿನಾಂಕ 04-01-2017 ರಂದು ನಾಪೋಕ್ಲು ನಗರದಲ್ಲಿರುವ ವರುಣ ಬಾರ್ ಮುಂದೆ ರಾಮಚಂದ್ರ ರವರು ನಿಂತುಕೊಂಡಿರುವಾಗ ಅಲ್ಲಿಗೆ ಹೋಗಿ ಸಾಲದ ಹಣವನ್ನು ಕೊಡುವಂತೆ ಕೇಳೀದಾಗ ರಾಮಚಂದ್ರರವರು ಸದರಿ ವಿಚಾರವಾಗಿ ಬಿಯರ್ ಬಾಟಲಿಯಿಂದ ರವಿಕುಮಾರ್ ರವರ ಮೇಲೆ ಹಲ್ಲೆ ನಡೆಸಿದ್ದು ಈ ಬಗ್ಗೆ ರವಿಕುಮಾರ್ ರವರು ನೀಡಿದ ದೂರಿನ ಮೇರೆಗೆ ನಾಪೋಕ್ಲು ಪೊಲೀಸರು ಪ್ರಕರಣ ದಾಖಲಿಸಿರುತ್ತಾರೆ. 

ಪಾದಚಾರಿಗೆ ಮಾರುತಿ ಓಮಿನಿ ವ್ಯಾನು ಡಿಕ್ಕಿ

         ದಿನಾಂಕ 04-01-2017 ರಂದು ಗೋಣಿಕೊಪ್ಪ ನಗರದ ನಿವಾಸಿ ಮೋಹನ್ ಎಂಬುವವರೊಂದಿಗೆ .ಅವರ ಸಂಬಂದಿ ಕುಮಾರರವರೊಂದಿಗೆ ಗೋಣಿಕೊಪ್ಪ ನಗರದ ಪೊನ್ನಂಪೇಟೆ ಜಂಕ್ಷನ್ ಬಳಿ ನಡೆದುಕೊಂಡು ಹೋಗುತ್ತಿರುವಾಗ ಮಾರುತಿ ಓಮಿನಿ ವ್ಯಾನನ್ನು ಅದರ ಚಾಲಕನು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಡಿಕ್ಕಿ ಪಡಿಸಿದ್ದು, ಕುಮಾರರವರಿಗೆ ಗಾಯಗಳಾಗಿದ್ದು ಈ ಬಗ್ಗೆ ಮೋಹನ್ ರವರು ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿಕೊಂಡಿರುತ್ತಾರೆ.

ನೇಣು ಬಿಗಿದು ವ್ಯಕ್ತಿಯ ಆತ್ಮಹತ್ಯೆ 
         ದಿನಾಂಕ 04-01-2017 ರಂದು ಗೋಣಿಕೊಪ್ಪಲುವಿನ ಚೆನ್ನಂಗೊಲ್ಲಿ ನಿವಾಸಿ ಬಿಂದುರವರ ಪತಿ ಅನೀಶ್ ರವರು 10 ವರ್ಷಗಳಿಂದ ಹೃದಯಕ್ಕೆ ಸಂಭಂದಿಸಿದ ಖಾಯಿಲೆಯಿಂದ ಬಳಲುತ್ತಿದ್ದು ಇದರಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದು, ದೇ ವಿಚಾರದಲ್ಲಿ ಅನೀಶ್ ರವರು ಜಿಗುಪ್ಸೆಗೊಂಡು ತಮ್ಮ ಮನೆಯಲ್ಲಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮ ಹತ್ಯೆ ಮಾಡಿಕೊಂಡಿದ್ದು ಸದರಿಯವರ ಪತ್ನಿ ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿಕೊಂಡಿರುತ್ತಾರೆ.