Tuesday, January 24, 2017

ಸಂಶಯಾಸ್ಪದ ವ್ಯಕ್ತಿ ಬಂಧನ
                        ದಿನಾಂಕ 23.01.2017 ರಂದು ಶನಿವಾರಸಂತೆ ಠಾಣಾ ಪಿಎಸ್‌ಐ ಹೆಚ್‌.ಎಂ.ಮರಿಸ್ವಾಮಿರವರು ರಾತ್ರಿ ಗಸ್ತು ಕರ್ತವ್ಯದಲ್ಲಿರುವಾಗ ಶನಿವಾರಸಂತೆ ನಗರದ ಬೈಪಾಸ್ ರಸ್ತೆ ಬಳಿ ಇರುವ ಪ್ರಾಥಮಿಕ ಕೃಷಿ ಪತ್ತಿ ಸಹಕಾರ ಬ್ಯಾಂಕಿನ ಕಛೇರಿಯ ಹತ್ತಿರ ಒಬ್ಬ ವ್ಯಕ್ತಿ ಅನುಮಾನಾಸ್ಪಾದವಾಗಿ ನಿಂತಿದ್ದು ಪೊಲೀಸ್‌ ಸಿಬ್ಬಂದಿಗಳನ್ನು ಕಂಡು ಓಡಲು ಪ್ರಯತ್ನಿಸಿದಾಗ ಆತನನ್ನು ಹಿಡಿದು ಆತನ ಹೆಸರು ವಿಳಾಸವನ್ನು ಕೇಳಲಾಗಿ ಆತನು ಶನಿವಾರಸಂತೆಉ ಸುಳುಗಳಲೆ ಕಾಲೋನಿ ನಿವಾಸಿ ಕಾಂತರಾಜ್‌ ಎಂದು ತಿಳಿಸಿದ್ದು, ರಾತ್ರಿ ವೇಳೆಯಲ್ಲಿ ಆತನ ಇರುವಿಕೆಯ ಬಗ್ಗೆ ಸೂಕ್ತ ಕಾರಣಗಳನ್ನು ನೀಡಲು ವಿಫಲನಾಗಿದ್ದು, ಯಾವುದೋ ಅಪರಾಧ ಕೃತ್ಯವೆಸಗುವ ಉದ್ದೇಶದಿಂದ ಅಲ್ಲಿದ್ದಿರಬಹುದಾಗಿ ಸಂಶಯಿಸಿ ಆತನನ್ನು ಬಂಧಿಸಿ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 

ಸಂಶಯಾಸ್ಪದ ವ್ಯಕ್ತಿ ಬಂಧನ
                             ದಿನಾಂಕ 23.01.2017 ರಂದು ಶನಿವಾರಸಂತೆ ಠಾಣಾ ಪಿಎಸ್‌ಐ ಹೆಚ್‌.ಎಂ.ಮರಿಸ್ವಾಮಿರವರು ರಾತ್ರಿ ಗಸ್ತು ಕರ್ತವ್ಯದಲ್ಲಿರುವಾಗ ಶನಿವಾರಸಂತೆ ನಗರದ ಗುಡುಗಳಲೆ ಬಳಿ ಇರುವ ಕೆನರಾ ಬ್ಯಾಂಕಿನ ಕಛೇರಿಯ ಹತ್ತಿರ ಒಬ್ಬ ವ್ಯಕ್ತಿ ಅನುಮಾನಾಸ್ಪಾದವಾಗಿ ನಿಂತಿದ್ದು ಪೊಲೀಸ್‌ ಸಿಬ್ಬಂದಿಗಳನ್ನು ಕಂಡು ಓಡಲು ಪ್ರಯತ್ನಿಸಿದಾಗ ಆತನನ್ನು ಹಿಡಿದು ಆತನ ಹೆಸರು ವಿಳಾಸವನ್ನು ಕೇಳಲಾಗಿ ಆತನು ಶನಿವಾರಸಂತೆಯ ತ್ಯಾಗರಾಜ ಕಾಲೋನಿ ನಿವಾಸಿ ಎಂ.ಆರ್‌.ರವಿ ಎಂದು ತಿಳಿಸಿದ್ದು, ರಾತ್ರಿ ವೇಳೆಯಲ್ಲಿ ಆತನ ಇರುವಿಕೆಯ ಬಗ್ಗೆ ಸೂಕ್ತ ಕಾರಣಗಳನ್ನು ನೀಡಲು ವಿಫಲನಾಗಿದ್ದು, ಯಾವುದೋ ಅಪರಾಧ ಕೃತ್ಯವೆಸಗುವ ಉದ್ದೇಶದಿಂದ ಅಲ್ಲಿದ್ದಿರಬಹುದಾಗಿ ಸಂಶಯಿಸಿ ಆತನನ್ನು ಬಂಧಿಸಿ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.  

ಪರಸ್ಪರ ಬೈಕ್ ಡಿಕ್ಕಿ
                       ದಿನಾಂಕ 22/01/2017 ರಂದು ಕುಶಾಲನಗರ ಬಳಿಯ ಹೆಬ್ಬಾಲೆ ನಿವಾಸಿ ಅಕ್ಷಯ್ ಎಂಬವರು ಅವರ ಸ್ನೇಹಿತ ಜಿತಿನ್ ಎಂಬವರೊಂದಿಗೆ ಕೆಎ-12-ಕ್ಯೂ-6903 ರ ಮೋಟಾರು ಬೈಕ್ ನಲ್ಲಿ ಕುಶಾಲನಗರದಿಂದ ಹೆಬ್ಬಾಲೆ ಕಡೆಗೆ ಹೋಗುತ್ತಿರುವಾಗ  ಕುಶಾಲನಗರದ ಸೋಮೇಶ್ವರ ದೇವಸ್ಥಾನದ ಬಳಿ ಎದುರುಗಡೆಯಿಂದ ಕೆಎ-04-ಹೆಚ್‌ಕೆ-6871ರ ಬೈಕನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ಅಕ್ಷಯ್‌ರವರ ಸ್ನೇಹಿತ ಚಾಲಿಸುತ್ತಿದ್ದ ಬೈಕ್ ಗೆ  ಡಿಕ್ಕಿ ಪಡಿಸಿದ ಪರಿಣಾಮ ಇಬ್ಬರೂ ಕೆಳಗೆ ಬಿದ್ದು ಗಾಯಗಳಾಗಿರುವುದಾಗಿ ನೀಡಿದ  ದೂರಿನ ಮೇರೆಗೆ ಕುಶಾಲನಗರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವಿಷ ಸೇವಿಸಿ ವ್ಯಕ್ತಿಯ ಆತ್ಮಹತ್ಯೆ
                           ದಿನಾಂಕ 23/01/2017ರಂದು ನಾಪೋಕ್ಲು ಬಳಿಯ ನೆಲಜಿ ಗ್ರಾಮದ ನಿವಾಸಿ ಸುನೀತಾ ಎಂಬವರು ಅವರ ತಾಯಿಯ ಮನೆ ಇರುವ ಕಾರುಗುಂದ ಗ್ರಾಮಕ್ಕೆ ಹೋಗಿದ್ದಾಗ ಅವರ ಪತಿ ಪುಟ್ಟಗಣಪತಿ  ಎಂಬವರು ಮನೆಯಲ್ಲಿ ವಿಷ ಸೇವಿಸಿದ್ದು ಮಗ ಸೂರಜ್‌ ಮತ್ತು ಇತರರು ಸೇರಿ ಆಸ್ಪತ್ರೆಗೆ ದಾಖಲಿಸಿ  ಚಿಕಿತ್ಸೆ ನೀಡಿದರೂ ಫಲಕಾರಿಯಾಗದೆ ಮೃತರಾಗಿದ್ದು, ಮೃತ ಪುಟ್ಟ ಗಣಪತಿರವರು ವಿಪರೀತ ಮದ್ಯಪಾನ ಮಾಡಿ ದಿನವೂ ಪತ್ನಿಯೊಂದಿಗೆ ಜಗಳವಾಡುತ್ತಿದ್ದು ಇದೇ ಕಾರಣಕ್ಕೆ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದಾಗಿ ನೀಡಿದ ದೂರಿನ ಮೇರೆಗೆ ನಾಪೋಕ್ಲು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಬೈಕಿಗೆ ಕಾರು ಡಿಕ್ಕಿ
                          ದಿನಾಂಕ 22-01-2017 ರಂದು ಅಮ್ಮತ್ತಿ ಹೊಸಕೋಟೆ ನಿವಾಸಿ ಕೆ.ಎಂ.ವಿನೇಶ್‌ ಹಾಗೂ ಸ್ವಾಗತ್ ಎಂಬವರು ಕೆಎ-12-ಆರ್-0051 ರ ಮೋಟಾರ್ ಬೈಕ್ ನಲ್ಲಿ ವಿರಾಜಪೇಟೆಯಿಂದ ಮೂರ್ನಾಡುವಿಗೆ ಬರುತ್ತಿರುವಾಗ  ಎಂ.ಬಾಡಗ ಗ್ರಾಮದ ರಸ್ತೆಯಲ್ಲಿ  ಎದುರಿನಿಂದ ಕೆಎ-09-ಎಂಎ-3725 ರ ಕಾರನ್ನು ಅದರ ಚಾಲಕನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಾಲನೆಮಾಡಿಕೊಂಡು ಬಂದು ಸ್ವಾಗತ್ ರವರು ಓಡಿಸುತ್ತಿದ್ದ ಮೋಟಾರ್ ಬೈಕ್ ಗೆ ಡಿಕ್ಕಿ ಪಡಿಸಿದ ಪರಿಣಾಮ ವಿನೇಶ್‌ರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಕಾರಿಗೆ ಬೈಕು ಡಿಕ್ಕಿ
                      ದಿನಾಂಕ 23-1-2017 ರಂದು ವಿರಾಜಪೇಟೆ ಬಳಿಯ ಹಾತೂರು ನಿವಾಸಿ ಸಜಿತ್‌  ಪೊನ್ನಪ್ಪ ಎಂಬವರು ಕೆಲಸದ ನಿಮಿತ್ತ ತನ್ನ ಬಾಪ್ತು ಕಾರು ನಂಬರ್ ಕೆಎ-12-ಝಡ್-7699 ರ  ಕಾರಿನಲ್ಲಿ ಅವರ ನೆರೆಮನೆಯವರಾದ ನಡಿಕೇರಿಯಂಡ ಸುಬ್ಬಯ್ಯ ನವರೊಂದಿಗೆ ವಿರಾಜಪೇಟೆಗೆ ಬಂದು ಕೆಲಸ ಮುಗಿಸಿ ವಾಪಾಸು  ಹೋಗುತ್ತಿರುವಾಗ   ವಿರಾಜಪೇಟೆ ಸಮೀಪದ ನಿಸರ್ಗ ಲೇಔಟ್ ಬಳಿಯ ವಿರಾಜಪೇಟೆ-ಗೋಣಿಕೊಪ್ಪ ಮುಖ್ಯ ರಸ್ತೆಯಲ್ಲಿ ಸಂಚಾರ ನಿಯಂತ್ರಣಗೊಳಿಸಲು ಅಳವಡಿಸಿದ ಬ್ಯಾರಿಕೇಡ್ ಇದ್ದುದ್ದರಿಂದ ನಿಧಾನವಾಗಿ ಕಾರನ್ನು ಚಾಲನೆ ಮಾಡಿಕೊಂಡು  ಮುಂದಕ್ಕೆ ಹೋಗುವಾಗ ಹಿಂದಿನಿಂದ ಮೋಟಾರು ಸೈಕಲ್ ನಂಬರ್ ಕೆಎ-09-ಜೆ-7124 ರ ಚಾಲಕ ಪ್ರಸನ್ನ ಎಂಬುವರು ಮದ್ಯಪಾನ ಮಾಡಿ ಮೋಟಾರು ಸೈಕಲನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ಸಜಿತ್‌ ಪೊನ್ನಪ್ಪನವರು ಚಾಲಿಸುತ್ತಿದ್ದ ಕಾರಿನ ಮುಂದಿನ ಬಲಬದಿಯ ಬಾಗಿಲಿಗೆ ಡಿಕ್ಕಿಪಡಿಸಿದ ಪರಿಣಾಮ ಬೈಕ್ ನಲ್ಲಿದ್ದ ಇಬ್ಬರು ಕೆಳಗೆ ಬಿದ್ದ ಪರಿಣಾಮ  ರತ್ತು ಎಂಬುವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ  ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವ್ಯಕ್ತಿಯ ಮೇಲೆ ಹಲ್ಲೆ
                       ದಿನಾಂಕ 22/01/2017ರಂದು ವಿರಾಜಪೇಟೆ ಬಳಿಯ ವಿ.ಬಾಡಗ ನಿವಾಸಿ ಆನಂದ ಎಂಬವರು ಅವರ ಅಣ್ಣ ವಸಂತ ಎಂಬವರೊಂದಿಗೆ  ನಾಯಿಗೆ ವಿಷ ಹಾಕಿದ ವಿಚಾರವನ್ನು ಕೇಳಿದಾಗ ವಸಂತ ಹಾಗೂ ಆತನ ಪತ್ನಿ ಪವಿತ್ರ ಎಂಬವರು ಏಕಾ ಏಕಿ ಆನಂದರವರ ಮೇಲೆ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಬೈಕ್‌ ಕಳವು
                 ದಿನಾಂಕ 16-01-2017 ರಂದು ಗೋಣಿಕೊಪ್ಪ ಬಳಿಯ ಅರ್ವತೊಕ್ಲು ನಿವಾಸಿ ಸಮೀರ್‌ ಎಂಬವರು ಅವರ ಬಾಪ್ತು KA-12-J-8230 ರ ಯಮಹಾ  ಮೋಟಾರ್ ಬೈಕ್ ನಲ್ಲಿ ವ್ಯಾಪಾರಕ್ಕೆಂದು ವಿರಾಜಪೇಟೆ ನಗರಕ್ಕೆ ಬಂದು ವಿರಾಜಪೇಟೆ ನಗರದ ಸುಣ್ಣದ ಬೀದಿಯ ತುಳಸಿ ಮಾರಿಯಮ್ಮ ದೇವಸ್ಥಾನದ ಮುಂದಿನ ಸಾರ್ವಜನಿಕ ರಸ್ತೆಯಲ್ಲಿ ತನ್ನ ಬೈಕನ್ನು ನಿಲ್ಲಿಸಿ ವ್ಯಾಪಾರಕ್ಕೆಂದು ತೆರಳಿದ್ದು, ವಾಪಾಸ್ಸು ಸಮಯ ರಾತ್ರಿ 09-30 ಗಂಟೆಗೆ ಬಂದು ಬೈಕ್ ನಿಲ್ಲಿಸಿದ್ದ ಸ್ಥಳದಲ್ಲಿ ನೋಡುವಾಗ ಬೈಕ್ ಕಾಣದೇ ಇದ್ದು, ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಎಲ್ಲಾ ಕಡೆ ಹುಡುಕಾಡಿದ್ದಲ್ಲೂ ಬೈಕ್ ಪತ್ತೆಯಾಗಿರುವುದಿಲ್ಲವೆಂದು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.