Monday, January 2, 2017

ಹಳೆ ದ್ವೇಷ, ವ್ಯಕ್ತಿ ಮೇಲೆ ಹಲ್ಲೆ:

     ಸುಂಟಿಕೊಪ್ಪ ಠಾಣಾ ಸರಹದ್ದಿನ ಹೆರೂರು ಗ್ರಾಮದ ನಿವಾಸಿ ಫಿರ್ಯಾದಿ ಕರುಣ ಕುಮಾರ್ ಎಂಬವರು ದಿನಾಂಕ 31.12.16ರಂದು ಹೊಸ ವರ್ಷದ ಆಚರಣೆ ಸಂಬಂದ ಹೇರೂರಿನ ಪ್ರಕೃತಿ ಹೋಂಸ್ಟೇ ಗೆ ಹೋಗಿ ಸಂಭ್ರಮಾಚರಣೆಯನ್ನು ಮುಗಿಸಿಕೊಂಡು ನಂತರ ವಾಪಾಸ್ಸು ಮನೆಗೆ ರಾತ್ರಿ 12.30 ಗಂಟೆಗೆ ಪೆರ್ ಮುಂಡ ಗಣಪತಿ ರವರ ಜಾಗದ ಪಕ್ಕದ ರಸ್ತೆಯಲ್ಲಿ ಪಿರ್ಯಾದಿ ಮೋಟಾರ್ ಸೈಕಲ್ ನಲ್ಲಿ ಹೋಗುತ್ತಿರುವಾಗ್ಗೆ ಕುಶೀಲ್ ಕುಮಾರ್ ಎಂಬುವವನು ಪಿರ್ಯಾದಿಯ ಮೋಟಾರ್ ಸೈಕಲನ್ನು ಅಡ್ಡಗಟ್ಟಿ ಹಳೆ ದ್ವೇಷದಿಂದ ಜಗಳ ಮಾಡಿ ಕೈಯಲ್ಲಿದ್ದ ದೋಣ್ಣೆ ಎಡ ಕೈಗೆ ಹೊಡೆದು ನೋವನ್ನುಂಟುಮಾಡಿದ್ದು ಅಲ್ಲದೆ ಕೊಲೆ ಬೆದರಿಕೆ ಹಾಕಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದಾರಿ ತಡೆದು ವ್ಯಕ್ತಿ ಮೇಲೆ ಹಲ್ಲೆ, ಕೊಲೆ ಬೆದರಿಕೆ:

     ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬರ ದಾರಿಯನ್ನು ತಡೆದ 6 ಜನರಿದ್ದ ಗುಂಪು ವ್ಯಕ್ತಿ ಮೇಲೆ ಹಲ್ಲೆ ನಡೆಸಿ ಕೊಲೆ ಬೆದರಿಕೆ ಒಡ್ಡಿರುವ ಘಟನೆ ಸಿದ್ದಾಪುರ ಠಾಣಾ ವ್ಯಾಪ್ತಿಯ ತ್ಯಾಗತ್ತೂರು ಗಿರಿಜನ ಕಾಲೋನಿಯ ಬಳಿ ನಡೆದಿದೆ. ದಿನಾಂಕ 01/01/2017 ರಂದು ತ್ಯಾಗತ್ತೂರು ಗ್ರಾಮದ ನಿವಾಸಿ ಎನ್. ಉಮೇಶ್ ಎಂಬವರು ಸಮಯ ಸುಮಾರು 4.30 ಪಿ ಎಂ ಗೆ ಮನೆಗೆ ಹೋಗಲು ತ್ಯಾಗತ್ತೂರು ಗಿರಿಜನ ಕಾಲೋನಿಯ ಸಮೀಪದ ರಸ್ತೆ ಬದಿಯಲ್ಲಿ ನೆಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಅಲ್ಲಿನ ಕಾಲೋನಿ ನಿವಾಸಿಗಳಾದ ರಾಜು, ಮಧು, ಕುಳ್ಳಜ್ಜ, ಪಾರ್ವತಿ, ರಮ್ಯ, ಹರೀಶ್, ಮತ್ತು ಇತರರು ಇದ್ದ ತಂಡ ರನ್. ಉಮೇಶ್ ರಚರೊಂದಿಗೆ ವಿನಾ ಕಾರಣ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ನಿಂದಿಸಿ ಸೌದೆಯ ಬಡಿಗೆಗಳಿಂದ ಮತ್ತು ಚಪ್ಪಲಿಗಳಿಂದ ಪಿರ್ಯಾದಿಯವರ ಮೇಲೆ ಹಲ್ಲೆ ಮಾಡಿದ್ದು ಅಲ್ಲದೆ ಕೊಲೆಮಾಡುವುದಾಗಿ ಕೊಲೆ ಬೆದರಿಕೆ ಹಾಕಿರುತ್ತಾರೆ ಎಂಬುದಾಗಿ ನೀಡಿದ ದೂರಿನ ಮೇರೆಗೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿ ಮೇಲೆ ಗುಂಡು ಹಾರಿಸಿ ಕೊಲೆಗೆ ಯತ್ನ:
 ಕುಶಾಲನಗರದ ಬಲಮುರಿ ದೇವಸ್ಥಾನದ ಹತ್ತಿರ ವಾಸವಾಗಿರುವ ಫಿರ್ಯದಿ ಜಗದೀಶ್ ಎಂಬವರು ದಿನಾಂಕ 31.01.2016 ರಂದು ತನ್ನ ಸ್ನೇಹಿತ ಮೈಸೂರಿನ ಕಿರಣ್‌ ಎಂಬವರೊಂದಿಗೆ ತನ್ನ ಇನ್ನೊಬ್ಬ ಸ್ನೇಹಿತನಾದ ನಂಜರಾಯಪಟ್ಟಣ ಗ್ರಾಮದ ರಾಖೇಶ್‌ ಎಂಬವರ ಮನೆಯಲ್ಲಿ ಹೊಸ ವರ್ಷಾಚರಣೆ ಮುಗಿಸಿ ವಾಪಾಸ್ಸು ಕಿರಣ್‌ರವರನ್ನು ಮೈಸೂರಿಗೆ ಕಳುಹಿಸಲು ರಾಖೇಶ್‌ರವರ ಕಾರಿನಲ್ಲಿ ಕುಶಾಲನಗರ ಕಡೆ ಹೋಗುತ್ತಿದ್ದಾಗ ರಂಗಸಮುದ್ರ ಬಸ್‌ ನಿಲ್ದಾಣ ಬಳಿ ಕಾರು ನಿಲ್ಲಿಸಿಕೊಂಡಿರುವಾಗ ನಂಜರಾಯಪಟ್ಟಣ ಕಡೆಯಿಂದ ಬಂದ ಒಂದು ಕಾರಿನಲ್ಲಿದ್ದವರು ಕಾರಿಗೆ ಸೈಡ್ ಕೊಡುವ ವಿಚಾರದಲ್ಲಿ ಗಲಾಟೆ ಮಾಡಿ ಹೋಗಿದ್ದು ನಂತರ ದಿನಾಂಕ 1-1-2017ರಂದು ಬೆಳಗಿನ ಜಾವ 03-40 ಗಂಟೆಗೆ ಫಿರ್ಯಾದಿ ಜಗದೀಶ್ ಕಿರಣ್ ರವರೊಂದಿಗೆ ಕುಶಾಲನಗರದ ಕಡೆಗೆ ಬರುತ್ತಿದ್ದಾಗ ಗುಡ್ಡೆಹೊಸೂರಿನ ರಾಜೇಶ್‌ ಎಂಬವರ ಇಂಟರ್‌ ಲಾಕ್ ಫ್ಯಾಕ್ಟರಿ ಹತ್ತಿರ ತಲುಪುವಾಗ್ಗೆ ರಾತ್ರಿ ಗಲಾಟೆ ಮಾಡಿದ್ದ ಅದೇ ಕಾರಿನಲ್ಲಿದ್ದ ವ್ಯಕ್ತಿಗಳಾದ ಕಬಿನ್‌ ಮತ್ತು ಬಿದ್ದಪ್ಪ ಎಂಬವರು ಪಿರ್ಯಾದಿಯವರ ಕಾರನ್ನು ತಡೆದು ನೀವು ಕಾರಿಗೆ ಸೈಡ್‌ ಕೊಡುವ ವಿಚಾರದಲ್ಲಿ ಗಲಾಟೆ ಮಾಡಿದವರಲ್ಲವೇ, ನಿಮ್ಮನ್ನು ಕೊಲ್ಲದೆ ಬಿಡುವುದಿಲ್ಲ ಎಂದು ಹೇಳಿ ಬಿದ್ದಪ್ಪ ಎಂಬಾತನು ಕಾರಿನಿಂದ ರಿವಾಲ್ವರ್‌ ತೆಗೆದು ಹಾರಿಸಿದ ಗುಂಡು ಕಿರಣ್‌ರವರ ತೊಡೆ ಹಾಗೂ ಭುಜಕ್ಕೆ ತಾಗಿ ರಕ್ತಗಾಯವಾಗಿದ್ದು, ಅವರನ್ನು ಚಿಕಿತ್ಸೆಗೆ ಮೈಸೂರಿನ ಲಕ್ಷ್ಮೇಶರ ಆಸ್ಪತ್ರೆಗೆ ದಾಖಲಿಸಿದ್ದು, ಈ ಸಂಬಂಧ ಕುಶಾಲನಗರ ಗ್ರಾಮಾಂತರ ಠಾಣೆಯಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಕೌಟುಂಕ ಸಮಸ್ಯೆ ವ್ಯಕ್ತಿ ಆತ್ಮಹತ್ಯೆ:
     ವ್ಯಕ್ತಿಯೋರ್ವ ಕೌಟುಂಬಿಕ ಸಮಸ್ಯೆಯಿಂದ ಬೇಸತ್ತು ನೇಣು ಬಿಗಿದುಕೊಂಡು ಆತ್ನಹತ್ಯೆ ಮಾಡಿಕೊಂಡ ಘಟನೆ ಮಡಿಕೇರಿ ಗ್ರಾಮಾಂತರ ಠಾಣಾ ವ್ಯಾಪ್ತಿಯ ಕೆ.ನಿಡುಗಣೆ ಗ್ರಾಮದಲ್ಲಿ ನಡೆದಿದೆ. ಕೆ.ನಿಡುಗಣೆ ಗ್ರಾಮದ ಸಿದ್ದಿಕಾಡು ಎಂಬಲ್ಲಿ ವಾಸವಾಗಿರುವ ಶ್ರೀಮತಿ ಜ್ಯೋತಿ ಎಂಬವರ ಪತಿ ಜಾನ್ಸಿ ಪಾಸ್ವಾನ್ ಎಂಬವರು ಕೌಟುಂಬಿಕ ವಿಚಾರದಲ್ಲಿ ಬೇಸತ್ತು ದಿನಾಂಕ 1-12-2016 ರಂದು ಮನೆಯಿಂದ ಹೋಗಿದ್ದು ಸದರಿಯವರ ಮೃತದೇಹವು ದಿನಾಂಕ 1-1-2017 ರಂದು ಸಿದ್ದಿಕಾಡುವಿನಲ್ಲಿ ಮರವೊಂದಕ್ಕೆ ನೇಣುಬಿಗಿದುಕೊಂಡು ಕೊಳೆತ ಸ್ಥಿತಿಯಲ್ಲಿ ಕಂಡುಬಂದಿದ್ದು, ಮೃತ ವ್ಯಕ್ತಿಯ ಪತ್ನಿ ಶ್ರೀಮತಿ ಜ್ಯೋತಿರವರು ನೀಡಿದ ದೂರಿನನ್ವಯ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಜರುಗಿಸಿರುತ್ತಾರೆ.