Sunday, January 1, 2017

ನೇಣುಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ:   

     ಜೀವನದಲ್ಲಿ ಜಿಗುಪ್ಸೆಗೊಂಡು ವ್ಯಕ್ತಿಯೋರ್ವ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ವಿರಾಜಪೇಟೆ ಸಮೀಪದ ಮಾಕುಟ್ಟ ಎಂಬಲ್ಲಿ ನಡೆದಿದೆ. ವಿರಾಜಪೇಟೆ ತಾಲೋಕು ಮಾಕುಟ್ಟದ ಗಿರಿಜನ ಕಾಲೋನಿಯಲ್ಲಿ ವಾಸವಾಗಿರುವ ವೈ.ಎಸ್. ವಿಜೇಶನ್ ಎಂಬವರ ತಂದೆ ಸತೀಶನ್ (50) ರವರು ಯಾವುದೋ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಕುತ್ತಿಗೆಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸರ್ಕಾರಿ ಜಾಗ ತೆರವಿಗೆ ಅಡ್ಡಿ:
     ವಿರಾಜಪೇಟೆ ತಾಲೋಕು ಅಮ್ಮತ್ತಿ ಹೋಬಳಿ ಅಮ್ಮತ್ತಿ ಗ್ರಾಮದ ಸರ್ಕಾರಿ ಪೈಸಾರಿ ಸರ್ವೆ ನಂ. 151ರ 10.22 ಎಕ್ರೆ ಜಮೀನನ್ನು ಪಟ್ಟಡ ಕರುಂಬಯ್ಯ ಹಾಗು ಪಟ್ಟಡ ಕಾರ್ಯಪ್ಪ ಎಂಬವರಿಂದ ಸರ್ಕಾರದ ವಶಕ್ಕೆ ಪಡೆದು ಸದರಿ ಜಾಗವನ್ನು ಖುಲ್ಲಾಪಡಿಸಿ ತೆರವುಗೊಳಿಸಲು ದಿನಾಂಕ 31-12-16ರಂದು ಸಮಯ ಬೆಳಿಗ್ಗೆ 9-00ಎ.ಎಂ.ಗೆ ವಿರಾಜಪೇಟೆ ತಾಲೋಕು ತಹಶೀಲ್ದಾರ್ ರವರು ಸಿಬ್ಬಂದಿಯವಗಳೊಂದಿಗೆ ಜೆ.ಸಿ.ಬಿ. ಯಂತ್ರ ಮತ್ತು ಸಲಕರಣೆಗಳೊಂದಿಗೆ ತೆರವು ಸ್ಥಳಕ್ಕೆ ಹೋದಾಗ ಸ್ಥಳದಲ್ಲಿದ್ದ ಪಟ್ಟಡ ಕರುಂಬಯ್ಯ ಮತ್ತು ಪಟ್ಟಡ ಕಾರ್ಯಪ್ಪ ರವರು ಜಾಗಕ್ಕೆ ತೆರಳುವ ರಸ್ತೆಯ ಗೇಟ್ ಮುಚ್ಚಿ ಬೀಗ ಅಳವಡಿಸಿ ತೆರವು ಕಾರ್ಯಾಚರಣೆಗೆ ಅಡ್ಡಿಪಡಿಸಿರು ವುದಲ್ಲದೆ, ಸದರಿಯವರು ಸರ್ಕಾರಿ ಜಮೀನಿಗೆ ಅಕ್ರಮ ಪ್ರವೇಶ ಮತ್ತು ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿರುತ್ತಾರೆಂದು ವಿರಾಜಪೇಟೆ ತಹಶೀಲ್ದಾರ್ ರವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ರಸ್ತೆಬದಿ ನಿಂತಿದ್ದ ವ್ಯಕ್ತಿಗೆ ಬೈಕ್ ಡಿಕ್ಕಿ:

       ರಸ್ತೆಬದಿಯಲ್ಲಿ ನಿಂತಿದ್ದ ವ್ಯಕ್ತಿಯೊಬ್ಬರಿಗೆ ಮೋಟಾರ್ ಬೈಕ್ ಡಿಕ್ಕಿಯಾಗಿ ಗಾಯಗೊಂಡ ಘಟನೆ ನಡೆದಿದೆ. ದಿನಾಂಕ 27/12/2016 ರಂದು ಸಂಜೆ 7-30 ಗಂಟೆಗೆ ಪಿರ್ಯಾದಿ ತಿತಿಮತಿ ಗ್ರಾಮದ ವಿ.ಎ.ರವಿರವರ ಸಹೋದರ ನಟರಾಜ್ ಎಂಬವರು ಮನೆಯ ಮುಂದೆ ರಸ್ತೆಯ ಬದಿ ನಿಂತಿರುವಾಗ ಮೈಸೂರು ಕಡೆಯಿಂದ ಗೋಣಿಕೊಪ್ಪ ಕಡೆಗೆ ಹೋಗುತ್ತಿದ್ದ ಕೆಎ-45-ಕೆ-3499 ರ ಮೋಟಾರ್ ಸೈಕಲನ್ನು ಅದರ ಸವಾರ ನಟರಾಜ್ ರವರಿಗೆ ಡಿಕ್ಕಿ ಪಡಿಸಿ ಮೋಟಾರ್ ಸೈಕಲನ್ನು ನಿಲ್ಲಿಸದೇ ಹೋಗಿದ್ದು, ಗಾಯಾಳು ವನ್ನು ತಿತಿಮತಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ವೈಧ್ಯರ ಸಲಹೆ ಮೇರೆ ಹೆಚ್ಚಿನ ಚಿಕಿತ್ಸೆ ಬಗ್ಗೆ ಮೈಸೂರಿನ ಜೆ.ಎಸ್.ಎಸ್. ಆಸ್ಪತ್ರೆಯಲ್ಲಿ ದಾಖಲಿಸಿದ್ದು, ಈ ಸಂಬಂಧ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.