Thursday, January 12, 2017

ವ್ಯಕ್ತಿಯ ಆತ್ಮಹತ್ಯೆ
        ಜೀವನದಲ್ಲಿ ಜುಗುಪ್ಸೆಗೊಂಡು ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೋಮವಾರಪೇಟೆ ತಾಲೂಕಿನ ಶನಿವಾರಸಂತೆಯಲ್ಲಿ ವರದಿಯಾಗಿದೆ. ಶನಿವಾರಸಂತೆಯ ತ್ಯಾಗರಾಜ ಕಾಲೋನಿಯ ನಿವಾಸಿ ಜಗದೀಶ ಎಂಬುವವರು ವಿಪರೀತ ಮದ್ಯಪಾನ ಮಾಡುತ್ತಿದ್ದು ದಿನಾಂಕ 11-1-2017 ರಂದು ಬಾತ್ ರೂಂನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಈ ಬಗ್ಗೆ ಮೃತನ ಪತ್ನಿ ರೂಪರವರು ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಪಾದಚಾರಿಗೆ ಕಾರು ಡಿಕ್ಕಿ
             ದಿನಾಂಕ 10-1-2017 ರಂದು ರಾತ್ರಿ  ಕುಶಾಲನಗರದ ಬಸವನಹಳ್ಳಿಯ ನಿವಾಸಿ ಬಿ ಟಿ ದಿನೇಶ್ ರವರು ಅವರ ಭಾವ ರಾಜುರವರೊಂದಿಗೆ ಗುಡ್ಡೆಹೊಸೂರುವಿನಿಂದ ಬಸವನಹಳ್ಳಿಗೆ ನಡೆದುಕೊಂಡು ಹೋಗುತ್ತಿರುವಾಗ ಮಡಿಕೇರಿ ಕಡೆಯಿಂದ ಆಲ್ಟೋ ಕಾರನ್ನು ಅದರ ಚಾಲಕ ಅತಿವೇಗ ಹಾಗೂ ಅಜಾಗರೂಕತೆಯಿಂದ ಚಾಲಿಸಿಕೊಂಡು ಹೋಗಿ ದಿನೇಶ ಮತ್ತು ಅವರ ಭಾವ ರಾಜುರವರಿಗೆ ಡಿಕ್ಕಿಪಡಿಸಿದ್ದು, ಇಬ್ಬರಿಗೂ ಗಾಯಗಳಾಗಿದ್ದು ಈ ಬಗ್ಗೆ ಕುಶಾಲನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ವ್ಯಕ್ತಿಯ ಮೇಲೆ ಹಲ್ಲೆ
               ದಿನಾಂಕ 10-1-2017 ರಂದು ಕೊಡ್ಲಿಪೇಟೆಯ ಕೆರಗನಹಳ್ಳಿಯ ನಿವಾಸಿ ಗೋವಿಂದೇಗೌಡರವರು ಯೋಗೇಶ್ ಮತ್ತು ಧರ್ಮರವರೊಂದಿಗೆ ಕೊಡ್ಲಿಪೇಟೆ ನಗರದ ಮಂಜುಳ ವೈನ್ ಶಾಪ್ ನಲ್ಲಿ ಒಟ್ಟಿಗೇ ಮದ್ಯ ಸೇವಿಸಿದ್ದು, ನಂತರ ಗೊವಿಂದೇಗೌಡರು ಮಂಜುಳ ವೈನ್ಸ್ ನಿಂದ ಹೊರಗೆ ಬಂದು ನಿಂತಿರುವಾಗ ಧರ್ಮ ಮತ್ತು ಯೋಗೇಶ್‍ರವರು ಏಕಾ ಏಕಿ ಗೋವಿಂದೇಗೌಡರ ಮೇಲೆ ಹಲ್ಲೆ ನಡೆಸಿದ್ದು ಈ ಬಗ್ಗೆ ಗೋವಿಂದೇಗೌಡರವರು ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಮಗನಿಂದ ತಂದೆಯ ಮೇಲೆ ಹಲ್ಲೆ
                 ಸೊಮವಾರಪೇಟೆ ತಾಲೂಕಿನ ಕೂತಿ ಗ್ರಾಮದ ನಿವಾಸಿ ಚಿಣ್ಣಪ್ಪನವರು ದಿನಾಂಕ 10-1-2017 ರಂದು ರಾತ್ರಿ ತನ್ನ ಮನೆಯಲ್ಲಿ ಟಿ.ವಿ ನೋಡಿಕೊಂಡಿರುವಾಗ ಅವರ ಮಗ ಮಧುಸೂದನನು ಹೊರಗೆ ಹೋಗಿದ್ದವನು ಮನೆಗೆ ಬಂದು ವಿನಾ ಕಾರಣ ಜಗಳ ತೆಗೆದು ತಂದೆಗೆ ಕೈಯಿಂದ ಮತ್ತು ಕತ್ತಿಯಿಂದ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ್ದು ಈ ಬಗ್ಗೆ ಚಿಣ್ಣಪ್ಪನವರು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
 
ಮಹಿಳೆಗೆ ಬಸ್ಸು ಡಿಕ್ಕಿ
               ನಾಪೋಕ್ಲುವಿನ ಹಳೇ ತಾಲೂಕಿನ ನಿವಾಸಿ ಆಸಿಯಾರವರು ದಿನಾಂಕ 11-1-2017 ರಂದು ವಿರಾಜಪೇಟೆಗೆ ಹೋಗಿ ವಾಪಾಸ್ಸು ಎಸ್‌.ಜಿ.ಆರ್‌.ಎಂ.ಎಸ್. ಬಸ್‌ನಲ್ಲಿ ವಿರಾಜಪೇಟೆಯಿಂದ ನಾಪೋಕ್ಲುವಿಗೆ ಬಂದು ಹಳೇತಾಲ್ಲೂಕು ಬಳಿ ಬಸ್ಸು ಇಳಿಯುತ್ತಿರುವಾಗ ಬಸ್ಸಿನ ಚಾಲಕ ಬಾವಾ ಎಂಬವರು ಬಸ್ಸನ್ನು ಅಜಾಗರೂಕತೆಯಿಂದ ಏಕಾಏಕಿ ಚಾಲನೆ ಮಾಡಿದ್ದು ಆಸಿಯಾರವರು ಬಸ್ಸಿನಿಂದ ಕೆಳಗೆ ಬಿದ್ದು ಬಲಗಾಲಿನ ಮೇಲೆ ಬಸ್ಸಿನ ಚಕ್ರ ಹರಿದು ಕಾಲು ಮುರಿದು ಹೋಗಿದ್ದು, ಈ ಬಗ್ಗೆ ಗಾಯಾಳುನಿನ ಮಗ ಕಮರುದ್ದೀನ್ ರವರು ನೀಡಿದ ದೂರಿನ ಮೇರೆ ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.