Monday, January 16, 2017

 ಪತ್ನಿ ಮೇಲೆ ಪತ್ನಿಯಿಂದ ಹಲ್ಲೆ:

     ಮದ್ಯಪಾನ ಮಾಡಿದ ವ್ಯಕ್ತಿಯೋರ್ವ ತನ್ನ ಹೆಂಡತಿ ಮೇಲೆ ಹತ್ತಿಯಿಂದ ಹಲ್ಲೆ ಮಾಡಿ ಕೈಬರಳುಗಳನ್ನು ತುಂಡರಿಸಿದ ಘಟನೆ ಶನಿವಾರಸಂತೆ ಠಾಣಾ ಸರಹದ್ದಿನ ಕಟ್ಟೆಪುರ ಗ್ರಾಮದಲ್ಲಿ ನಡೆದಿದೆ. ದಿನಾಂಕ 14-1-2017 ರಂದು ಕಟ್ಟೆಪುರ ಗ್ರಾಮದ ನಿವಾಸಿ ಜೇನುಕುರುಬರ ಅಣ್ಣಯ್ಯ ಎಂಬವರು ಮದ್ಯಪಾನ ಮಾಡಿಕೊಂಡು ತನ್ನ ಮನೆಗೆ ಬಂದು ವಿನಾಕಾರಣ ತನ್ನ ಪತ್ನಿ ಶ್ರೀಮತಿ ಜೇನುಕುರುಬರ ಯಶೋಧರವರ ಮೇಲೆ ಕತ್ತಿಯಿಂದ ಹಲ್ಲೆ ಮಾಡಿ ಕೈಬೆಳಗಳನ್ನು ತುಂಡರಿಸಿದ್ದು, ಈ ಬಗ್ಗೆ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ. 
ಮಹಿಳೆ ಕಾಣೆ:

     ವಿರಾಜಪೇಟೆ ತಾಲೋಕು ಚೆಂಬೆಬೆಳ್ಳೂರು ಗ್ರಾಮದ ನಿವಾಸಿ ಹೆಚ್.ಬಿ. ಕುಮಾರ ಎಂಬವರ ಪತ್ನಿ ಶ್ರೀಮತಿ ಸರೋಜ @ ಪುಷ್ಪ ಎಂಬವರು ಕೆಲವು ದಿವಸಗಳಿಂದ ಮಾನಸಿಕವಾಗಿ ಅಸ್ವಸ್ಥಗೊಂಡಿದ್ದು,  ದಿನಾಂಕ 11-1-2017 ರಂದು ಬೆಳಗಿನ ಜಾವ 3-00 ಗಂಟೆಯ ಸಮಯದಿಂದ ಮನೆಯಿಂದ ಕಾಣಿಯಾಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಕಾರು ಮರಕ್ಕೆ ಡಿಕ್ಕಿ ಚಾಲಕ ಸಾವು:

     ಕಾರೊಂದು ರಸ್ತೆಬದಿಯ ಮರಕ್ಕೆ ಡಿಕ್ಕಿಹೊಡೆದ ಪರಿಣಾಮ ಕಾರಿನ ಚಾಲಕ ಸಾವನಪ್ಪಿದ ಘಟನೆ ಮಡಿಕೇರಿ ಸಮೀಪದ ಮದೆನಾಡು ಗ್ರಾಮದಲ್ಲಿ ನಡೆದಿದೆ. ದಿನಾಂಕ 14-1-2017 ರಂದು ರಾತ್ರಿ 8-30 ಗಂಟೆಯ ಸಮುಯದಲ್ಲಿ ಮಡಿಕೇರಿ ತಾಲೋಕು ಮದೆನಾಡು ಗ್ರಾಮದ ನಿವಾಸಿ ಯು.ಎ. ಶೇಷಪ್ಪ ಎಂಬವರ ಪುತ್ರ ಅರುಣ್ ಕುಮಾರ್ (40) ರವರು ತಮ್ಮ ಮನೆಯ ಕಡೆಗೆ ತಮ್ಮ ಕಾರನ್ನು ಚಾಲಿಸಿಕೊಂಡು ಹೋಗುತ್ತಿದ್ದಾಗ ಕಾರು ರಸ್ತೆ ಬದಿಯ ಮರವೊಂದಕ್ಕೆ ಡಿಕ್ಕಿ ಯಾಗಿ ಸದರಿಯವರು ತೀವ್ರವಾಗಿ ಗಾಯಗೊಂಡು ಮೃತಪಟ್ಟಿದ್ದು, ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.