Wednesday, January 4, 2017

 ಲಾರಿ ಡಿಕ್ಕಿ ಪಾದಚಾರಿ ಸ್ಥಳದಲ್ಲೇ ಸಾವು:

     ರಸ್ತೆಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಗೆ ಲಾರಿ ಡಿಕ್ಕಿಯಾಗಿ ಸ್ಥಳದಲ್ಲೇ ಮೃತಪಟ್ಟ ಘಟನೆ ಕುಶಾಲನಗರ ಗ್ರಾಮಾಂತರ ಠಾಣಾ ವ್ಯಾಪ್ತಿಯ ಅರಸಿನಗುಪ್ಪೆ ಗ್ರಾಮದಲ್ಲಿ ನಡೆದಿದೆ. ದಿನಾಂಕ 3-1-2017 ರಂದು ರಾತ್ರಿ 08-00 ಗಂಟೆಗೆ ಕುಶಾಲನಗರ ಹೋಬಳಿಯ ಸಿದ್ದಲಿಂಗಪುರ ಗ್ರಾಮದ ನಿವಾಸಿ ಶ್ರೀಮತಿ ಅವ್ವಣ್ಣ ಮತ್ತು ಆಕೆಯ ಗಂಡ ಅರುಣರವರು ಸಿದ್ದಲಿಂಗಪುರ ಗ್ರಾಮದ ಅಂಗಡಿಗೆ ಹೋಗಿ ವಾಪಾಸ್ಸು ಅರಶಿನ ಗುಪ್ಪೆಯಲ್ಲಿರುವ ಮನೆಗೆ ರಸ್ತೆಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಅರಸಿನಗುಪ್ಪೆ ಕಡೆಯಿಂದ ಬಂದ ನಂ ಕೆ.ಎ.01 ಎ.ಎ. 5940 ರ ಲಾರಿ ಅರುಣ ರವರಿಗೆ ಡಿಕ್ಕಿಯಾದ ಪರಿಣಾಮ ಅವರು ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದು, ಕುಶಾಲನಗರ ಗ್ರಾಮಾಂತರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ. 

ಅಕ್ರಮ ಮರಳು ಸಂಗ್ರಹ ಪ್ರಕರಣ ದಾಖಲು:

      ವ್ಯಕ್ತಿಯೊಬ್ಬರು ಮೋಟಾರ್  ಯಂತ್ರ ಬಳಸಿ ಗದ್ದೆಮಣ್ಣಿನಿಂದ ಮರಳನ್ನು ಮಾರಾಟಕ್ಕೆ ಸಂಗ್ರಹಿಸುತ್ತಿದ್ದುದನ್ನು ಪತ್ತೆ ಹಚ್ಚಿದ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ದಿನಾಂಕ 2-1-2017 ರಂದು ವಿರಾಜಪೇಟೆ ಗ್ರಾಮಾಂತರ ಠಾಣೆಯ ಎ.ಎಸ್.ಐ. ರವರಿಗೆ ದೊರೆತ ಮಾಹಿತಿ ಆದಾರದ ಮೇರೆಗೆ ಸಿಬ್ಬಂದಿಯೊಂದಿಗೆ ವಿರಾಜಪೇಟೆ ಹತ್ತಿರದ ಕಂಡಂಗಾಲ ಗ್ರಾಮಕ್ಕೆ ಹೋಗಿ ಸದರಿ ಗ್ರಾಮದ ನಿವಾಸಿ ಸುಳ್ಳಿಮಾಡ ಲೋಕೇಶ್ ಎಂಬವರುತಮಗೆ ಸೇರಿದ ಗದ್ದೆಯ ಮಣ್ಣನ್ನು ಮೋಟಾರ್ ಬಳಸಿ ತೊಳೆದು ಮರಳನ್ನು ಸಂಗ್ರಹಿಸುತ್ತಿದ್ದುದನ್ನು ಪತ್ತೆಹಚ್ಚಿ ಅಕ್ರಮವಾಗಿ ಸಂಗ್ರಹಿಸಿಟ್ಟ ಒಂದು ಲಾರಿಯಷ್ಟು ಮರಳನ್ನು ಮತ್ತು ಮೋಟಾರ್ ಯಂತ್ರವನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.

ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಗೆ ಕಾರು ಡಿಕ್ಕಿ:

     ದಿನಾಂಕ 30.12.16 ರಂದು ಸಮಯ 03.30 ಪಿ.ಎಂ.ಗೆ ಹೊಸಕೋಟೆ ಗ್ರಾಮದ ನಿವಾಸಿ ಬಿ.ಎಂ. ಅಬ್ದುಲ್ ಖಾದರ್ ಎಂಬವರು 7ನೇ ಹೋಸಕೋಟೆ ಗ್ರಾಮದಲ್ಲಿ ರಸ್ತೆಯ ಎಡ ಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ್ಗ ಮಸೀದಿಯ ಕೌಂಪೌಂಡ್ ಹತ್ತಿರ ತಲುಪುವಾಗ್ಗ ಎದುರು ಗಡೆಯಿಂದ ಬಂದ ನಂ ಕೆ ಎ 09 ಬಿ 8399 ರ ಇನೋವಾ ಕಾರನ್ನು ಅದರ ಚಾಲಕ ಅತೀವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ಅಬ್ದುಲ್ ಖಾದರ್ ರವರಿಗೆ ಡಿಕ್ಕಿ ಪಡಿಸಿದ ಪರಿಣಾಮ ಬಲ ಕಾಲು, ಸೊಂಟದ ಬಲ ಭಾಗಕ್ಕೆ ಮತ್ತು ಭುಜಕ್ಕೆ ಗಾಯವಾಗಿದ್ದು, ಈ ಸಂಬಂಧ ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಬೇಲಿ ಕಡಿದ ವಿಚಾರದಲ್ಲಿ ಅಣ್ಣ-ತಮ್ಮನ ನಡುವೆ ಜಗಳ ಪ್ರತ್ಯೇಕ ಪ್ರಕರಣ ದಾಖಲು:

     ಸೋಮವಾರಪೇಟೆ ಠಾಣಾ ಸರಹದ್ದಿನ ದೊಡ್ಡತೋಳೂರು ಗ್ರಾಮದಲ್ಲಿ ಡಿ.ಪಿ. ಸುರೇಶ್ ಮತ್ತು ಅವರ ಸಹೋದರ ಡಿ.ಪಿ. ರಾಜುರವರು ಅಕ್ಕಪಕ್ಕ ಮನೆಗಳಲ್ಲಿ  ವಾಸವಾಗಿದ್ದು ದಿನಾಂಕ 3-1-2017 ರಂದು ಪಿ.ಡಿ ಸುರೇಶ ತಮ್ಮಮನೆಯ ಮತ್ತು ಸಹೋದರ ಡಿ.ಪಿ. ರಾಜುರವರ ಮನೆಯ ನಡುವೆ ಇದ್ದ ಬೇಲಿಯನ್ನು ಕಡಿಯುತ್ತಿದ್ದಾದ ಡಿ.ಪಿ. ರಾಜು ರವರು ಜಗಳ ಮಾಡಿ ಕತ್ತಿಯಿಂದ  ಹಲ್ಲೆ ಮಾಡಿರುತ್ತಾರೆಂದು ಮತ್ತು ಪಿ.ಡಿ. ರಾಜು ರವರು ತಮ್ಮ ಮನೆಯ ಹತ್ತಿರ ವಿರುವ ಬೇಲಿಯನ್ನು ಕಡಿದ ವಿಚಾರದಲ್ಲಿ ಸಹೋದರ ಡಿ.ಪಿ. ಸುರೇಶ ರವರು ಜಗಳ ಮಾಡಿ ದೊಣ್ಣೆಯಿಂದ ಹಲ್ಲೆ ಮಾಡಿ ಗಾಯಪಡಿಸಿರುತ್ತಾರೆಂದು  ಪ್ರತ್ಯೇಕವಾಗಿ ನೀಡಿದ ದೂರುಗಳ ಮೇರೆಗೆ ಪ್ರತ್ಯೇಕ ಎರಡು ಪ್ರಕರಣಗಳನ್ನು ಸೋಮವಾರಪೇಟೆ ಠಾಣೆಯಲ್ಲಿ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.