Friday, January 6, 2017

ಕಾರ್ಮಿಕನ ಮೇಲೆ ವ್ಯಕ್ತಿಯಿಂದ ಹಲ್ಲೆ:
     ಕೆಲಸಕ್ಕೆ ಕರೆದರೆ ಬರಲಿಲ್ಲವೆಂಬ ಕಾರಣಕ್ಕೆ ವ್ಯಕ್ತಿಯೊಬ್ಬರು ಕಾರ್ಮಿಕನೊಬ್ಬನ ದಾರಿ ತಡೆದು ಹಲ್ಲೆ ಮಾಡಿದ ಘಟನೆ ಮಡಿಕೇರಿ ಸಮೀಪದ ಮಕ್ಕಂದೂರು ಗ್ರಾಮದಲ್ಲಿ ನಡೆದಿದೆ.  ದಿನಾಂಕ 5-1-2017 ರಂದು ಮಕ್ಕಂದೂರು ಗ್ರಾಮದಲ್ಲಿ ವಾಸವಾಗಿರುವ ಚೆಲುವರಾಜು ಎಂಬವರು ಕೆಲಸ ಮುಗಿಸಿ ಸಂಜೆ 4-15 ಗಂಟೆಯ ಸಮಯದಲ್ಲಿ ತಮ್ಮ ಮನೆಯ ಕಡೆಗೆ ಹೋಗುತ್ತಿದ್ದ ವೇಳೆ ಪಳಂಗಪ್ಪ ಎಂಬವರು ಅವರ ದಾರಿ ತಡೆದು ಕೆಲಸ ಬಾರದೇ ಇರುವ ವಿಚಾರದಲ್ಲಿ ದೊಣ್ಣೆಯಿಂದ ಹಲ್ಲೆ ಮಾಡಿ  ನೋವನ್ನುಂಟು ಮಾಡಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಸ್ಪೀಟ್ ಜೂಜಾಟ, ಪ್ರಕರಣ ದಾಖಲು:
     ಅಕ್ರಮವಾಗಿ ಹಣವನ್ನು ಪಣವನ್ನಾಗಿಟ್ಟು ಜೂಜಾಟವಾಡುತ್ತಿದ್ದ  10 ಜನರಿದ್ದ ಗುಂಪಿನ ಮೇಲೆ ದಾಳಿ ಮಾಡಿದ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.  ಶನಿವಾರಸಂತೆ ಠಾಣಾಧಿಕಾರಿ ಶ್ರೀ ಹೆಚ್.ಎಂ. ಮರಿಸ್ವಾಮಿ ರವರಿಗೆ ಬಂದ ಖಚಿತ ವರ್ತಮಾನದ ಮೇರೆಗೆ ದಿನಾಂಕ 5-1-2017 ರಂದು ಸಮಯ 7-00 ಪಿ.ಎಂ. ಗೆ ಸಿಬ್ಬಂದಿಗಳೊಂದಿಗೆ ಶನಿವಾರಸಂತೆ ಠಾಣಾ ಸರಹದ್ದಿನ ಆಲೂರು ಸಿದ್ದಾಪುರ ಗ್ರಾಮದ ಕಡ್ಲೆಮಕ್ಕಿ ಗದ್ದೆಯ ಹಳ್ಳದ ಪೈಸಾರಿ ಜಾಗದಲ್ಲಿ ಹಣವನ್ನು ಪಣವನ್ನಾಗಿಟ್ಟು ಇಸ್ಪೀಟ್ ಜೂಜಾಟವಾಡುತ್ತಿದ್ದ 10 ಮಂದಿ ಜನರ ಮೇಲೆ ದಾಳಿ ಮಾಡಿ, ರೂ.1530/- ನಗದು ಹಾಗು ಜೂಜಾಟಕ್ಕೆ ಬಳಸಿದ ವಸ್ತುಗಳನ್ನು ವಶಕ್ಕೆ ಪಡೆದು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.