Monday, January 9, 2017

ಹಳೇ ದ್ವೇಷ ವ್ಯಕ್ತಿಯ ಮೇಲೆ ಹಲ್ಲೆ

         ಹಳೇ ದ್ವೇಷದಿಂದ ವ್ಯಕ್ತಿಯ ಮೇಲೆ ಹಲ್ಲೆ ನಡೆದಿರುವ ಬಗ್ಗೆ ಪೊನ್ನಂಪೇಟೆಯಲ್ಲಿ ವರದಿಯಾಗಿದೆ. ದಿನಾಂಕ 7-1-2017 ರಂದು ಶ್ರೀಮಂಗಲದ ನಿವಾಸಿ ಪವಿತ್ರನ್ ಎಂಬುವವರು ಪೊನ್ನಂಪೇಟೆಯ ಕೊಡವ ಸಮಾಜಕ್ಕೆ ರಾತ್ರಿ ಮದುವೆಗೆ ಬಂದಿದ್ದು, ಊಟ ಮುಗಿಸಿ ಕೈತೊಳೆಯಲು ಹೊರಗೆ ಬಂದಾಗ ಟಿ ಶೆಟ್ಟಿಗೇರಿ ಗ್ರಾಮದ ನಿವಾಸಿಗಳಾದ ಮಚ್ಚಮಾಡ ರಂಜಿ ಮತ್ತು ಚಿಮ್ಮಂಗಡ ಗಣೇಶ ರವರು ಹಳೇ ದ್ವೇಷದಿಂದ ಪವಿತ್ರನ್ ರವರು ಮೇಲೆ ಹಲ್ಲೆ ನಡೆಸಿದ್ದು ಈ ಬಗ್ಗೆ ಪವಿತ್ರನ್ ರವರು ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
 
ಕಾಫಿ ಕಳವು

          ಕುಯಿದು ಇಟ್ಟಿದ್ದ ಕಾಫಿಯನ್ನು ಕಳವು ಮಾಡಿದ ಪ್ರಕರಣ ವಿರಾಜಪೇಟೆ ತಾಲೂಕಿನ ಚಿಕ್ಕಮಂಡೂರು ಗ್ರಾಮದಲ್ಲಿ ನಡೆದಿದೆ. ಚಿಕ್ಕಮಂಡೂರು ಗ್ರಾಮದ ನಿವಾಸಿ ದೇವಿದಾಸ್ ಹನುಮಂತ ನಾಯಕ್ ಎಂಬುವವರು ತನ್ನ ತೋಟದಲ್ಲಿ ಬೆಳೆದ ಕಾಫಿಯನ್ನು ಕುಯಿದು ತೋಟದ ಶೆಡ್ ನಲ್ಲಿ ಇಟ್ಟಿದ್ದು ದಿನಾಂಕ 07-01-2017 ರಂದು ತೋಟಕ್ಕೆ ಹೋಗುವಾಗ ಮಾಣಿರ ಮುತ್ತಣ್ಣ @ ವಾಸು, ಕೊಟ್ರ ಮಾಡ ವಿಕ್ರಂ ,ಮಾಣಿರ ವಿಜಯ ನಂಜಪ್ಪ, ಮಾಣಿರ ಸೋಮಣ್ಣ , ರವರುಗಳು ಮಾಣಿರ ವಿಜಯ ನಂಜಪ್ಪರವರಿಗೆ ಸೇರಿದ ಬಿಳಿ ಬಣ್ಣದ ಪಿಕ್ ಅಪ್ ವಾಹನ ಹಾಗೂ ಕೊಟ್ರ ಮಾಡ ವಿಕ್ರಂ ರವರಿಗೆ ಸೇರಿದ ಮಾರುತಿ ರಿಡ್ಜ್ ಕಾರಿನಲ್ಲಿ ದೇವಿದಾಸ್ ಹುನುಮಂತ ನಾಯಕ್ ರವರು ಕುಯ್ದಿಟ್ಟಿದ್ದ ಕಾಫಿಯನ್ನು ತುಂಬಿಸಿಕೊಂಡು ಬರುತ್ತಿದ್ದುದ್ದನ್ನು ಕಂಡು ಕೇಳಿದಾಗ ಬೆದರಿಕೆ ಹಾಕಿ ಹಲ್ಲೆಗೆ ಪ್ರಯತ್ನಿಸಿದ್ದು ಸುಮಾರು 15,000 ಬೆಲೆಯ ಕಾಫಿಯನ್ನಯ ತೆಗೆದುಕೊಂಡು ಹೋಗಿದ್ದು ಈ ಬಗ್ಗೆ ದೇವಿದಾಸ್ ನಾಯಕ್ರವರು ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
 
ಕಾರಿಗೆ ಲಾರಿ ಡಿಕ್ಕಿ

          ದಿನಾಂಕ 8-01-17 ರಂದು ಶ್ರೀಮಂಗಲದ ಅಜ್ಜಮಾಡ ಕಟ್ಟಿ ಮಂದಯ್ಯ ಮತ್ತು ಅವರ ಪತ್ನಿಪುಷ್ಪಾ ರವರು ಪೊನ್ನಂಪೇಟೆ ಕೊಡವ ಸಮಾಜದಲ್ಲಿ ಮದುವೆ ಸಮಾರಂಭವನ್ನು ಮುಗಿಸಿ ಕೆಎ 12-ಝೆಡ್ 4681 ರ ಆಲ್ಟೋ ಕಾರಿನಲ್ಲಿ ವಾಪಾಸ್ಸು ಹೋಗುತ್ತಿರುವಾಗ ಹುದಿಕೇರಿ ಗ್ರಾಮದ 7ನೇ ಮೈಲು ಎಂಬಲ್ಲಿಗೆ ತಲುಪುವಾಗ್ಗೆ ಎದುರುಗಡೆಯಿಂದ ಬಂದ ಲಾರಿಯನ್ನು ಅದರ ಚಾಲಕ ನಿರ್ಲಕ್ಷ್ಯ ತನದಿಂದ ಚಾಲನೆಮಾಡಿ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಕಾರನ್ನು ಚಾಲನೆ ಮಾಡುತ್ತಿದ್ದ ಕಟ್ಟಿ ಮಂದಣ್ಣ ಅವರ ಪತ್ನಿಗೆ ಗಾಯವಾಗಿದ್ದು ಈ ಬಗ್ಗೆ ಕಟ್ಟಿಮಂದಣ್ಣನವರ ಮಗಳು ರಿಸ್ತಾ ಚಂಗಪ್ಪನವರು ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಬೈಕ್ ಅಪಘಾತ

          ದಿನಾಂಕ 08-01-2017 ರಂದು ಗೋಣಿಕೊಪ್ಪಲುವಿನ ನಿವಾಸಿ ಜೋಶ್ ಎಂಬುವವರು ಗೋಣಿಕೊಪ್ಪದಿಂದ ಕೈಕೇರಿ ಕಡೆಗೆ ಅವರ ಬಾಪ್ತು ಬೈಕ್ ನಂ ಕೆಎಲ್-14 ಆರ್-6023 ರಲ್ಲಿ ಹೋಗುತ್ತಿರುವಾಗ ಬೈಕನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡುತ್ತಿದ್ದು ರಸ್ತೆಯ ಮದ್ಯೆ ನಾಯಿ ಅಡ್ಡ ಬಂದಾಗ ನಿಯಂತ್ರಣ ತಪ್ಪಿ ರಸ್ತೆಯ ಮೇಲೆ ಬಿದಿದ್ದು ಜೋಶ್ ರವರ ತಲೆಗೆ ಮತ್ತು ಮುಖಕ್ಕೆ ಗಾಯ ಉಂಟಾಗಿದ್ದು ಈ ಬಗ್ಗೆ ಗೋಣಿಕೊಪ್ಪಲುವಿನ ನಿವಾಸಿ ಶೇಖರ ಬುವವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿರುತ್ತದೆ.

ಅಕ್ರಮ ಮರಳು ಸಾಗಾಟ ಲಾರಿ ವಶಕ್ಕೆ

          ದಿನಾಂಕ 08-01-17 ವಿರಾಜಪೇಟೆ ಗ್ರಾಮಾಂತರ ಠಾಣೆಯ ಉಪನಿರೀಕ್ಷಕರಾದ ನಂಜುಂಡಸ್ವಾಮಿಯವರು ರಾತ್ರಿ ಗಸ್ತು ಮಾಡುತ್ತಿರುವಾಗ ಮಂಗಲ ಜಂಕ್ಷನ್ ಬಳಿ ತಲುಪುವಾಗ ವಿರಾಜಪೇಟೆ ಕಡೆಯಿಂದ ಐಮಂಗಲ ಕಡೆಗೆ ಕೆಎ.12.ಎ.4864ರ ಟಿಪ್ಪರ್ ಲಾರಿಯನ್ನು ತಡೆದು ಪರಿಶೀಲಿಸಿದಾಗ ಮರಳು ತುಂಬಿದ್ದು ಸದರಿ ಮರಳನ್ನು ಕಂಡಂಗಾಲ ಗ್ರಾಮ ಭರತ್ ಎಂಬುವವರು ಅವರ ಜಾಗದಿಂದ ತೆಗೆದಿದ್ದಾಗಿ ತಿಳಿಸಿದ್ದು, ಈ ಬಗ್ಗೆ ಭರತ್ ಹಾಗೂ ಲಾರಿಯ ಚಾಲಕ ಕೆ.ಎಂ. ಅಬ್ದುಲ್ ಸಮ್ಮದ್ ರವರ ಮೇಲೆ ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 
 
ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯ ಮೇಲೆ ಹಲ್ಲೆ

          ದಿನಾಂಕ 08-01-17 ರಂದು ವಿರಾಜಪೇಟೆ ತಾಲೂಕಿನ ಕಂಡಂಗಾಲ ಗ್ರಾಮದ ಬಬ್ಬಿರ ರಾಜು ದೇವಯ್ಯ ಎಂಬುವವರು ಅದೇ ಗ್ರಾಮದ ಕೆಂಜಂಗಡ ಉಮೇಶ್ ರವರಲ್ಲಿಂದ ಒಣ ಹುಲ್ಲನ್ನು ಖರೀದಿಸಿ ಶಶಿ ಎಂಬುವವರ ಟಾಟಾ ಎ.ಸಿ. ವಾಹನದಲ್ಲಿ ತುಂಬಿಸಿ ತನ್ನ ಮನೆಗೆ ತೆಗೆದುಕೊಂಡು ಹೋಗುತ್ತಿರುವಾಗ ರಾಜು ದೇವಯ್ಯನವರ ಮನೆಯ ಹತ್ತಿರ ಅವರ ತಮ್ಮ ಜೋಯಪ್ಪ @ ಮನು ರವರು ರಸ್ತೆಯ ಮಧ್ಯದಲ್ಲಿ ತನ್ನ ಆಟೋವನ್ನು ನಿಲ್ಲಿಸಿದ್ದರಿಂದ ಹುಲ್ಲು ತುಂಬಿಸಿದ ವಾಹನಕ್ಕೆ ದಾರಿ ಕೊಡುವಂತೆ ಕೇಳಿದಾಗ ಆತನು ಆಟೋದಿಂದ ಒಂದು ಕಬ್ಬಿಣದ ರಾಡನ್ನು ತೆಗೆದು ಏಕಾಏಕಿ ಬಂದು ರಾಜು ದೇವಯ್ಯನವರ ನವರ ಮೇಲೆ ಹಲ್ಲೆ ನಡೆಸಿದ್ದು ಈ ಬಗ್ಗೆ ರಾಜು ದೇವಯ್ಯನವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.