Tuesday, January 10, 2017


ಕಾರುಗಳ ಅಪಘಾತ
                   ದಿನಾಂಕ 08-1-2017 ರಂದು ವಿರಾಜಪೇಟೆ ತಾಲೂಕಿನ ಕೈಕೇರಿ ಗ್ರಾಮದ ವಾಸಿ ಶ್ರೀಮತಿ ಸ್ವಪ್ನ ಕರುಂಬಯ್ಯನವರು ತಮ್ಮ ಕಾರಿನಲ್ಲಿ ಗೋಣಿಕೊಪ್ಪಲುವಿನಿಂದ ತಮ್ಮ ತಂದೆಯ ಮನೆಗೆ ಹೋಗುತ್ತಿರುವಾಗ ಗೋಣಿಕೊಪ್ಪ ನಗರದಲ್ಲಿ ಎದುರುಗಡೆಯಿಂದ ಬಂದ ಸ್ಕಾರ್ಪಿಯೋ ಕಾರನ್ನು ಅದರ ಚಾಲಕ ಗಣಪತಿ ಎಂಬುವವರು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿ ಸ್ವಪ್ನ ಕರುಂಬಯ್ಯನವರ ಕಾರಿಗೆ ಡಿಕ್ಕಿಪಡಿಸಿದ್ದು, ಅವರ ಪತಿ ಕರುಂಬಯ್ಯನವರಿಗೆ ಗಾಯವಾಗಿದ್ದು ಈ ಬಗ್ಗೆ ಸ್ವಪ್ನ ಕರುಂಬಯ್ಯನವರು ನೀಡಿದ ದೂರಿನ ಮೇರೆಗೆ ಗೋಣೀಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಹಳೇ ದ್ವೇಷ ವ್ಯಕ್ತಿಯ ಮೇಲೆ ಹಲ್ಲೆ
                     ದಿನಾಂಕ 8-1-2017 ರಂದು ರಾತ್ರಿ 9-00 ಗಂಟೆಗೆ ವಿರಾಜಪೇಟೆ ತಾಲೂಕಿನ ಬಿಳುಗುಂದ ಗ್ರಾಮದ ಬೆಳ್ಳಿಯಪ್ಪ ಎಂಬುವವರು ತನ್ನ ಮಗನನ್ನು ಕರೆದುಕೊಂಡು ಬರಲು ಪಕ್ಕದ ಮನೆಯ ಸುಬ್ರಮಣಿಯವರ ಮನೆಗೆ ಹೋಗುತ್ತಿರುವಾಗಅದೇ ಗ್ರಾಮದ ದೀಪಕ್ ಎಂಬುವವರು ದಾರಿ ತಡೆದು ಹಳೇ ದ್ವೇಷದಿಂದ ದೊಣ್ಣೆಯಿಂದ ಹೊಡೆದು ಗಾಯಪಡಿಸಿದ್ದು ಈ ಬಗ್ಗೆ ಬೆಳ್ಳಿಯಪ್ಪನವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಮನೆ ಕಳವು
                       ಸೋಮವಾರಪೇಟೆ ನಗರದಲ್ಲಿ ವಾಸವಿರುವ ಉದಯ ಎಂಬುವವರ ಮನೆಯ ಮಲಗುವ ಕೋಣೆಯಿಂದ 8 ಗ್ರಾಂ ಚಿನ್ನದ ಉಂಗುರ ಮತ್ತು 20 ಗ್ರಾಂ ಚಿನ್ನದ ಚೈನ್ ಕಾಣೆಯಾಗಿದ್ದು, ಈ ಬಗ್ಗೆ ಔಟ್ ಹೌಸ್ ನಲ್ಲಿ ವಾಸವಿದ್ದ ಕಮಲರವರು ಕಳವು ಮಾಡಿರುವುದಾಗಿ ಗುಮಾನಿ ಇರುವುದಾಗಿ ಉದಯರವರು ನೀಡಿದ ದೂರಿಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯ ಮೇಲೆ ಹಲ್ಲೆ
                      ದಿನಾಂಕ 09-01-2017 ರಂದು ಮಡಿಕೇರಿ ತಾಲೂಕಿನ ಮೊಣ್ಣಂಗೇರಿಯ ನಿವಾಸಿ ಭುವಿತ್ ಎಂಬುವವರು ಶರತ್, ಚೇತನ್ ರವರು ಗಾಳಿಬೀಡಿನ ಬಿ.ಎಸ್.ಎನ್.ಎಲ್. ಆಫೀಸಿನ ಹತ್ತಿರ ಮಾತನಾಡಿಕೊಂಡಿರುವಾಗ ಗಾಳಿಬೀಡಿನ ಅಯ್ಯರಣ್ಣಿಯಂಡ ಸುಬ್ರಮಣಿ ಎಂಬುವವರು ಬಂದು ಊರಿನ ದೇವರ ಹಬ್ಬದ ವಿಚಾರದಲ್ಲಿ ಜಗಳ ತೆಗೆದು ಕತ್ತಿಯಿಂದ ಹಲ್ಲೆ ನಡೆಸಿದ್ದು ಈ ಬಗ್ಗೆ ಭವಿತ್ ರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.