Tuesday, February 28, 2017

ಆಟೋ ಮಗುಚಿ ಬಿದ್ದು ಪ್ರಯಾಣಿಕರಿಗೆ ಗಾಯ
                   ಆಟೋವನ್ನು ಚಾಲಕ ಅಜಾಗರೂಕತೆಯಿಂದ ಚಾಲನೆ ಮಾಡಿ ಮಗುಚಿ ಬಿದ್ದು ಪ್ರಯಾಣಿಕರಿಗೆ ಗಾಯವಾದ ಘಟನೆ ಗೋಣಿಕೊಪ್ಪಲುವಿನ ಹರಿಶ್ಚಂದ್ರಪುರದಲ್ಲಿ ವರದಿಯಾಗಿದೆ. ದಿನಾಂಕ 27-02-2017 ರಂದು ಮಾಯಮುಡಿ ಗ್ರಾಮದ ನಿವಾಸಿಯಾದ ಖಾಸಿಂ ಮಾಲಿಕ್ ಎಂಬುವವರು ಅಬ್ಬಾಸ್ ಮತ್ತು ಆತನ ಪತ್ನಿ, ಮಕ್ಕಳ ಜೊತೆ ಕೆಎ-12-ಎ-2125 ರ ಆಟೊರಿಕ್ಷಾದಲ್ಲಿ ಮಾಯಮುಡಿಯಿಂದ ಗೋಣಿಕೊಪ್ಪಲುವಿನ ಕಡೆಗೆ ಹೋಗುತ್ತಿರುವಾಗ ಹಿಂಬದಿಯಿಂದ ಬರುತ್ತಿದ್ದ ಜೀಪಿಗೆ ಸೈಡು ಕೊಡುವ ಸಮಯದಲ್ಲಿ ಚಾಲಕ ಕೈಕೇರಿ ಗ್ರಾಮದ ರಿಯಾಜ್ ಎಂಬುವವರು ನಿರ್ಲಕ್ಷತನದಿಂದ ಚಾಲನೆ ಮಾಡಿ ನಿಯಂತ್ರಣ ತಪ್ಪಿ ರಸ್ತೆಯ ಬದಿಗೆ ಮಗುಚಿ ಬಿದ್ದು ಪ್ರಯಾಣಿಕರೆಲ್ಲರಿಗೂ ಗಾಯಗಳಾಗಿದ್ದು ಈ ಬಗ್ಗೆ ಖಾಸಿಂ ಮಾಲಿಕ್ ರವರು ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರರಕಣ ದಾಖಲಾಗಿರುತ್ತದೆ.

ಸಾರ್ವಜನಿಕ ಸ್ಥಳದಲ್ಲಿ ಹೊಡೆದಾಟ

                 ದಿನಾಂಕ 27-2-2017 ರಂದು ವಿರಾಜಪೇಟೆ ನಗರ ಠಾಣೆಯ ಸಿಬ್ಬಂದಿಯವರಾದ ಜಗದೀಶ್ ಮತ್ತು ಲೋಹಿತ್ ರವರು ರಾತ್ರಿ ಗಸ್ತು ಮಾಡುತ್ತಿರುವಾಗ ಸಮಯ 9-15 ಪಿ ಎಂ ಗೆ ಮೂರ್ನಾಡು ಜಂಕ್ಷನ್ ಬಳಿ ಗಣೇಶ ವೈನ್ಸ್ ಅಂಗಡಿಯ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಪರಸ್ಪರ ಹೊಡೆದಾಡುತ್ತಿದ್ದ ಕಡಂಗ ಗ್ರಾಮದ ಮನೋಜ್ ಮತ್ತು ವಿನ್ಸೆಂಟ್, ಕಂಡಂಗಾಲ ಗ್ರಾಮದ ಜೀವನ್ ರವರ ಮೇಲೆ ಜಗದೀಶ್ ರವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿರುತ್ತದೆ.

ಜೀವನದಲ್ಲಿ ಜಿಗುಪ್ಸೆ ವ್ಯಕ್ತಿಯ ಆತ್ಮಹತ್ಯೆ

            ಜೀವನದಲ್ಲಿ ಜಿಗುಪ್ಸೆಗೊಂಡು ವ್ಯಕ್ತಿಯೊಬ್ಬ ನೇಣುಬಿಗಿದುಕೊಂಡು ಆತ್ಮ ಹತ್ಯೆ ಮಾಡಿಕೊಂಡಿರುವ ಘಟನೆ ಸಿದ್ದಾಪುರದಲ್ಲಿ ವರದಿಯಾಗಿದೆ. ಸಿದ್ದಾಪುರದ ಕೆ ಆರ್ ಎಸ್ಟೇಟ್ ನ ಲೈನ್ ಮನೆಯಲ್ಲಿ ವಾಸವಿರುವ ಮಂಜುನಾಥ ಎಂಬುವವರು ವಿಪರಿತ ಮದ್ಯಪಾನ ಮಾಡುತ್ತಿದ್ದು, ತಂಗಿಯ ಮದುವೆಗೆ ಹಣ ಕೊಡಲು ಸಾದ್ಯವಾಗುತ್ತಿಲ್ಲ ಎಂದು ಬೇಸರಮಾಡುತ್ತಿದ್ದು, ಇದೇ ವಿಚಾರದಲ್ಲಿ ಮನನೊಂದು ದಿನಾಂಕ 27-2-2017 ರಂದು ಲೈನ್ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಬಗ್ಗೆ ಮೃತನ ತಂಗಿ ಶಕುಂತಲಾರವರು ನೀಡಿದ ದೂರಿನ ಮೇರೆಗೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಪಾದಚಾರಿಗೆ ಕಾರು ಡಿಕ್ಕಿ

            ದಿನಾಂಕ 27-2-2017 ರಂದು ಚೆನ್ನಯ್ಯನಕೋಟೆಯ ನಿವಾಸಿ ಪಾಪು ಎಂಬುವವರು ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಕೆಎ-05-ಎನ್-1636 ರ ಮಾರುತಿ 800 ಕಾರನ್ನು ಚಾಲಕ ಸುದೀ ಎಂಬುವವರು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೊಗಿ ಹಿಂದಿನಿಂದ ಪಾಪುರವರಿಗೆ ಡಿಕ್ಕಿಪಡಿಸಿ ಗಾಯಗಳಾಗಿದ್ದು, ಈ ಬಗ್ಗೆ ಪಾಪುರವರು ನೀಡಿದ ದೂರಿನ ಮೇರೆಗೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Sunday, February 26, 2017

ಬೈಕಿಗೆ ಆಟೋ ಡಿಕ್ಕಿ

              ದಿನಾಂಕ 25-02-2017 ರಂದು ಮಡಿಕೇರಿ ತಾಲೂಕಿನ ಪೆರೂರು ಗ್ರಾಮದ ನಿವಾಸಿ ಎ. ಬಿ. ಉದಯರವರು ಮನೆಗೆ ಸಾಮಾಗ್ರಿ ತರಲೆಂದು ಅಚ್ಚಯ್ಯರವರೊಂದಿಗೆ ಮೋಟಾರು ಸೈಕಲಿನಲ್ಲಿ ನಾಪೋಕ್ಲುವಿಗೆ ಹೋಗಿ ತೆಗೆದುಕೊಂಡು ಮನೆಗೆ ಹೋಗುತ್ತಿರುವಾಗ ಎಮ್ಮೆ ಮಾಡು ಜಂಕ್ಷನ್ ತಲುಪುವಾಗ ಎದುರುಗಡೆಯಿಂದ ಗೂಡ್ಸ್ ಆಟೋವನ್ನುಚಾಲಕ ಶಕೀಲ್ ರವರು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆಮಾಡಿಕೊಂಡು ಹೋಗಿ ಬೈಕಿಗೆ ಡಿಕ್ಕಿಪಡಿಸಿದ್ದು, ಇಬ್ಬರಿಗೂ ಗಾಯಗಳಾಗಿದ್ದು ಈ ಬಗ್ಗೆ ಉದಯರವರು ನೀಡಿದ ದೂರಿನ ಮೇರೆಗೆ ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಬೈಕಿಗೆ ಕಾರು ಡಿಕ್ಕಿಯಾಗಿ ಬೈಕು ಸವಾರ ದುರ್ಮರಣ

            ಬೈಕಿಗೆ ಕಾರು ಡಿಕ್ಕಿಯಾಗಿ ಬೈಕು ಸವಾರ ಮರಣ ಹೊಂದಿದ ಘಟನೆ ವಿರಾಜಪೇಟೆ ತಾಲೂಕಿನ ಅಂಬಟ್ಟಿ ಎಂಬಲ್ಲಿ ನಡೆದಿದೆ. ದಿನಾಂಕ 25-2-2017 ರಂದು ವಿರಾಜಪೇಟೆ ನಗರದ ದಖ್ಖನ್ನಿಮೊಹಲ್ಲಾದ ನಿವಾಸಿ ರವಿಕುಮಾರ ರವರ ಮಗ ಆಕಾಶ ಎಂಬುವವನು ಮೋಟಾರು ಸೈಕಲಿನಲ್ಲಿ ವಿರಾಜಪೇಟೆಯಿಂದ ಬಿಟ್ಟಂಗಾಲದ ಕಡೆಗೆ ಹೋಗುತ್ತಿರುವಾಗ ಅಂಬಟ್ಟಿ ಎಂಬಲ್ಲಿಗೆ ತಲುಪುವಾಗ ಎದುರುಗಡೆಯಿಂದ ಕೆ. ಎಲ್-10-ಹೆಚ್-234 ರ ಕಾರನ್ನು ಅದರ ಚಾಲಕ ಬಾಬುಕುಟ್ಟನ್ ರವರು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಬೈಕಿಗೆ ಡಿಕ್ಕಿಪಡಿಸಿದ್ದು, ಆಕಾಶ್ ರವರ ತಲೆ ಮತ್ತು ಶರೀರದ ಭಾಗಗಳಿಗೆ ಗಾಯವಾಗಿದ್ದು, ಚಿಕಿತ್ಸೆಯ ಬಗ್ಗೆ ಆಕಾಶರವರನ್ನು ವಿರಾಜಪೇಟೆ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮೃತಪಟ್ಟಿದ್ದು, ಈ ಬಗ್ಗೆ ಎಂ ಕೆ ಗಣೇಶರವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಕ್ಷುಲ್ಲಕ ಕಾರಣಕ್ಕೆ ಹಲ್ಲೆ

            ಕ್ಷುಲ್ಲಕ ಕಾರಣಕ್ಕೆ ಮಹಿಳೆಯ ಮೇಲೆ ಹಲ್ಲೆ ನಡೆಸಿದ ಪ್ರಕರಣ ಸೋಮವಾರಪೇಟೆ ತಾಲೂಕಿನ ಕೊಡ್ಲಿಪೇಟೆಯ ಶಿರವಳ್ಳಿ ಗ್ರಾಮದಲ್ಲಿ ವರದಿಯಾಗಿದೆ. ದಿನಾಂಕ 24-02-2017 ರಂದು ಶಿರವಳ್ಳಿ ಗ್ರಾಮದ ನಿವಾಸಿ ಈರಪ್ಪನವರ ಕರು ಅಣ್ಣ ಕುಶಾಲರವರ ತೋಟಕ್ಕೆ ನುಗ್ಗಿದ ವಿಚಾರದಲ್ಲಿ ಕುಶಾಲ ಮತ್ತು ಅವರ ಪತ್ನಿ ಸವಿತರವರು ಸೇರಿಕೊಂಡು ಈರಪ್ಪನವರ ಪತ್ನಿ ಇಂದ್ರ ರವರಿಗೆ ಅವಾಚ್ಯ ಶಬ್ದಗಳಿಂದ ಬೈದು ಇಟ್ಟಿಗೆಯಿಂದ ಹೊಡೆದು ನೋವು ಪಡಿಸಿದ್ದು ಈ ಬಗ್ಗೆ ಈರಪ್ಪನವರು ನೀಡಿದ ದೂರಿಗೆ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.


Saturday, February 25, 2017

ಸರ ಅಪಹರಣ
             ಮೋಟಾರು ಸೈಕಲಿನಲ್ಲಿ ಬಂದ ಇಬ್ಬರು ಅಪರಿಚಿತರು ಮಹಿಳೆಯ ಕತ್ತಿನಿಂದ ಚಿನ್ನದ ಸರವನ್ನು ಕಿತ್ತುಕೊಂಡು ಹೋದ ಘಟನೆ ಮಡಿಕೇರಿ ನಗರದಲ್ಲಿ ನಡೆದಿದೆ. ದಿನಾಂಕ 24-2-2017 ರಂದು ಮಡಿಕೇರಿಯ ಜ್ಯೋತಿ ನಗರದ ನಿವಾಸಿ ಸುಮಿತ್ರ ಎಂಬುವವರು ಮಡಿಕೇರಿ ನಗರದ ಕಾನ್ವೆಂಟ್ ಜಂಕ್ಷನ್ ನಲ್ಲಿರುವ ಪಣೀಂದ್ರರವರ ಮನೆಯಲ್ಲಿ ಅಡುಗೆ ಕೆಲಸ ಮುಗಿಸಿ ವಾಪಾಸ್ಸು ಮನೆಗೆ ನಡೆದುಕೊಂಡು ಹೋಗುತ್ತಿರುವಾಗ ಜ್ಯೋತಿ ನಗರ ತಲುಪುವಾಗ ಸಮಯ ಮದ್ಯಾಹ್ನ 1-45 ಗಂಟೆಗೆ ಕಪ್ಪು ಬಣ್ಣದ ಮೋಟಾರು ಸೈಕಲಿನಲ್ಲಿ ಇಬ್ಬರು ಅಪರಿಚಿತರು ಹೋಗಿ, ಹಿಂಬದಿಯಲ್ಲಿ ಕುಳಿತ್ತಿದ್ದ ವ್ಯಕ್ತಿಯು ಸುಮಿತ್ರರವರ ಕತ್ತಿನಲ್ಲಿದ್ದ ಚಿನ್ನದ ಸರವನ್ನು ಕಿತ್ತುಕೊಂಡು ಮೋಟಾರು ಸೈಕಲಿನಲ್ಲಿ ಹೋಗಿದ್ದು ಈ ಬಗ್ಗೆ ಸುಮಿತ್ರರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ

ಬಸ್ಸು ಅಪಘಾತ
                ದಿನಾಂಕ 24-2-2017 ರಂದು ತಮಿಳುನಾಡುವಿನ ಸರ್ಕಾರಿ ತಾಂತ್ರಿಕ ವಿಧ್ಯಾಲಯ ಶ್ರೀರಂಗಂ ಗೆ ಸೇರಿದ 48 ವಿದ್ಯಾರ್ಥಿಗಳು ಬೆಂಗಳೂರಿನಿಂದ ಕೆಎ-44-7722 ರ ಬಸ್ಸಿನಲ್ಲಿ ಕೊಡಗು ಜಿಲ್ಲೆಯ ತಲಕಾವೇರಿಗೆ ಪ್ರವಾಸಕ್ಕೆ ಬರುತ್ತಿರುವಾಗ ಮಡಿಕೇರಿ ನಗರದ ಅರಣ್ಯ ಭವನದ ತಿರುವು ರಸ್ತೆಯಲ್ಲಿ ಬಸ್ಸು ಚಾಲಕ ಮೂರ್ತಿ @ ಶ್ರೀನಿವಾಸ್ ರವರು ಅಜಾಗರೂಕತೆಯಿಂದ ಚಾಲನೆ ಮಾಡಿ ರಸ್ತೆಯ ಎಡ ಬಾಗಕ್ಕೆ ಬಸ್ಸು ಮಗುಚಿ ಬಿದ್ದು ಸುಮಾರು 11 ವಿದ್ಯಾರ್ಥಿಗಳಿಗೆ ಗಾಯಗಳಾಗಿದ್ದು ಈ ಬಗ್ಗೆ ತಿರುಚಿ ಜಿಲ್ಲೆಯ ವಸಂತ ಎಂಬುವವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಕ್ಲುಲ್ಲಕ ಕಾರಣಕ್ಕೆ ವ್ಯಕ್ತಿಯ ಮೇಲೆ ಹಲ್ಲೆ
           ದಿನಾಂಕ 24-2-2017 ರಂದು ವಿರಾಜಪೇಟೆ ತಾಲೂಕಿನ ನಾಲ್ಕೇರಿ ಗ್ರಾಮದ ಬಣ್ಣಮೊಟ್ಟೆಯ ನಿವಾಸಿ ಪಂಜರಿಎರವರ ಗಣೇಶ ಎಂಬುವವರು ಮನೆಯಲ್ಲಿರುವಾಗೆ ತಮ್ಮ ರಾಜು ಮತ್ತು ಆತನ ಮಕ್ಕಳಾದ ಅಯ್ಯಪ್ಪರವರು ಹೋಗಿ, ಬೋಜ ರವರು ಮಾವ ಕುಳಿಯರವರ ತೋಟದಿಂದ ಮೆಣಸು ಕುಯಿದ ವಿಚಾರದಲ್ಲಿ ಜಗಳ ತೆಗೆದು ದೊಣ್ಣೆಯಿಂದ ಹೊಡೆದು, ಕಾಲಿನಿಂದ ಒದ್ದು ಹಲ್ಲೆ ನಡೆಸಿದ್ದು ಈ ಬಗ್ಗೆ ಗಣೇಶರವರು ನೀಡಿದ ದೂರಿನ ಮೇರೆಗೆ ಕುಟ್ಟ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ದನಿವಾಸಿ ದೆ.

ಅಕ್ರಮ ಜೂಜಾಟ
             ದಿನಾಂಕ 24-2-2017 ರಂದು ಸೋಮವಾರಪೇಟೆ ತಾಲೂಕಿನ ಹಳೆ ಕೂಡಿಗೆ ಗ್ರಾಮದ ಸರ್ಕಾರಿ ಶಾಲೆಯ ಆವರಣದಲ್ಲಿ ಇಸ್ಪೇಟು ಎಲೆಗಳಿಂದ ಜೂಜಾಟ ಆಡುತ್ತಿದ್ದ ಸ್ಥಳಕ್ಕೆ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯ ಉಪನಿರೀಕ್ಷಕರಾದ ಮಹೇಶ್ ಮತ್ತು ಸಿಬ್ಬಂದಿಯವರು ದಾಳಿ ಮಾಡಿ 4 ಜನ ರೋಪಿಗಳನ್ನು ಹಾಗೂ 2,200 ರೂ ಹಣವನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

Friday, February 24, 2017

ಮಹಿಳೆ ಆತ್ಮಹತ್ಯೆ 
                            ದಿನಾಂಕ 22/02/2017ರಂದು ಪೊನ್ನಂಪೇಟೆ ಬಳಿಯ ರುದ್ರಬೀಡು ಗ್ರಾಮದ ನಿವಾಸಿ ರಮೇಶ ಎಂಬವರ ಪತ್ನಿ ತನುಜಾ ಎಂಬಾಕೆಯು ಕ್ರಿಮಿನಾಶಕ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು ಹಣಕಾಸಿನ ಮುಗ್ಗಟ್ಟಿನಿಂದ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಬೈಕ್‌ ಮಗುಚಿ ಅಪಘಾತ
                        ದಿನಾಂಕ 22/02/2017ರಂದು ಕುಶಾಲನಗರದ ಐಬಿ ರಸ್ತೆಯ ಬಳಿ ಬೈಚನಹಳ್ಳಿ ನಿವಾಸಿ ನವೀನ ಎಂಬಾತನು ಕೆಎ-21-ಜೆ-2885ರ ಮೋಟಾರು ಬೈಕನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿದ ಪರಿಣಾಮ ಬೈಕು ಆತನ ನಿಯಂತ್ರಣ ತಪ್ಪಿ ಮಗುಚಿಕೊಂಡು ನವೀನನಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.  

ವ್ಯಕ್ತಿಯ ಆತ್ಮಹತ್ಯೆ
                         ಕುಶಾಲನಗರ ಆರ್‌ಎಂಸಿ ಕಚೇರಿಯ ಹಿಂಭಾಗದ ನಿರ್ಜನ ಪ್ರದೇಶದಲ್ಲಿ ಮಾದಾಪಟ್ನ ನಿವಾಸಿ ಸೋಮಯ್ಯ ಎಂಬ ವ್ಯಕ್ತಿಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು ಯಾವುದೋ ಕಾರಣಕ್ಕೆ ಜುಗುಪ್ಸೆಗೊಂಡು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರಬಹುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವ್ಯಕ್ತಿಯ ಆತ್ಮಹತ್ಯೆ
                           ದಿನಾಂಕ 23/02/2017ರಂದು ಕುಶಾಲನಗರ ಬಳಿಯ ಮಾದಾಪಟ್ನದ ಅತಿಥಿ ಹೋಟೆಲಿನ ಹಿಂಭಾಗದ ಕಾವೇರಿ ಹೊಳೆ ಬದಿಯಲ್ಲಿ ಓರ್ವ ಅಪರಿಚಿತ ವ್ಯಕ್ತಿಯು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಕುಶಾಲನಗರ ಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಬೈಕಿಗೆ ಬಸ್ ಡಿಕ್ಕಿ
                      ದಿನಾಂಕ 27/12/2016ರಂದು ಬಿದರೂರು ನಿವಾಸಿ ರಾಜು ಎಂಬವರು ಅವರ ಸ್ನೇಹಿತನೊಂದಿಗೆ ಕೆಎ-12-ಎಲ್-7152ರ ಮೋಟಾರು ಬೈಕಿನಲ್ಲಿ ಹೋಗುತ್ತಿರುವಾಗ ಕಾಗಡಿಕಟ್ಟೆ ಗ್ರಾಮದ ಬಳಿ ಕೆಎ-12-ಬಿ-777ರ ಖಾಸಗಿ ಬಸ್ಸನ್ನು ಅದರ ಚಾಲಕ ಸ್ವಾಮಿ ಎಂಬಾತನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿದ ಪರಿಣಾಮ ಬಸ್ ರಾಜುರವರು ಹೋಗುತ್ತಿದ್ದ ಬೈಕಿಗೆ ಡಿಕ್ಕಿಯಾಗಿ ರಾಜುರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Thursday, February 23, 2017

 ವಿಷ ಸೇವಿಸಿ ಆತ್ಮಹತ್ಯೆ:

     ವಿರಾಜಪೇಟೆ ಗ್ರಾಮಾಂತರ ಠಾಣಾ ಸರಹದ್ದಿನ ಚೆಂಬೆಬಳ್ಳೂರು ಗ್ರಾಮದ ನಿವಾಸಿ ಬಿ.ಎಸ್. ಶಿವಪ್ಪ ಎಂಬವರು ಜೀವನದಲ್ಲಿ ಜುಗುಪ್ಸೆಗೊಂಡು ದಿನಾಂಕ 22-2-2017 ರಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಬಿ.ಎಸ್. ದಿಲೀಪ್ ನವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.

ಬೈಕಿಗೆ ವ್ಯಾನ್ ಡಿಕ್ಕಿ:

     ವಿರಾಜಪೇಟೆ ತಾಲೋಕು ಬೊಳ್ಳುಮಾಡು ಗ್ರಾಮದ ನಿವಾಸಿ ಬೆಳ್ಳಿಯಪ್ಪ ಎಂಬವರು ದಿನಾಂಕ 22-2-2017 ರಂದು ವಿರಾಜಪೇಟೆ ನಗರದಲ್ಲಿ ತಮ್ಮ ಮೋಟಾರ್ ಸೈಕಲಿನಲ್ಲಿ ಹೋಗುತ್ತಿದ್ದಾಗ ಗೋಣಿಕೊಪ್ಪ ರಸ್ತೆಯ ಟೆಂಡರ್ ಚಿಕ್ಕನ್ ಅಂಗಡಿ ಮುಂಭಾಗ ಎದುರಿನಿಂದ ಬಂದ ಮಾರುತಿ ವ್ಯಾನ್ ಡಿಕ್ಕಿಯಾಗಿದ್ದು, ಬೈಕ್ ಸವಾರ ಬೆಳ್ಳಿಯಪ್ಪನವರು ಗಾಯಗೊಂಡಿದ್ದು, ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಬಾಗಿಲು ಮುರಿದು ಚಿನ್ನಾಭರಣ ಕಳವು:

     ದಿನಾಂಕ 22-2-2017 ರಂದು ಸೋಮವಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಅಬ್ಬೂರುಕಟ್ಟೆ ಗ್ರಾಮದ ನಿವಾಸಿ ಜಯಮ್ಮ ಎಂಬವರ ಮನೆಯ ಹಿಂಬಾಗಿಲನ್ನು ತೆರೆದು ಒಳನುಗ್ಗಿದ ಯಾರೋ ಕಳ್ಳರು ಮನೆಯ ಒಳಗಿನಲ್ಲಿಟ್ಟಿದ್ದ ಗಾಡ್ರೇಜ್ ಬೀರುವಿನಿಂದ (1) 38 ಗ್ರಾಂ ತೂಕದ ಒಂದು ಚಿನ್ನದ ಲಾಂಗ್ ಸರ,(2) 38 ಗ್ರಾಂ ತೂಕದ ಒಂದು ಚಿನ್ನದ ನೆಕ್ಲೇಸ್, (3) 26 ಗ್ರಾಂ ತೂಕದ 2 ಚಿನ್ನದ ಬಳೆಗಳು, (4) 30 ಗ್ರಾಂ ತೂಕದ 2 ಚಿನ್ನದ ಬಳೆಗಳು,(5) 3 ಜೊತೆ ಚಿನ್ನದ ಓಲೆ ಅಂದಾಜು 12 ಗ್ರಾಂ, (6) 3 ಚಿನ್ನದ ಉಂಗುರ ಅಂದಾಜು 14 ಗ್ರಾಂ, (7) 3 ಜೊತೆ ಬೆಳ್ಳಿ ಕಾಲು ಚೈನು ಅಂದಾಜು 100 ಗ್ರಾಂ 8) ಸುಮಾರು 30,000/- ಮತ್ತು ಫಿರ್ಯಾದಿ ಜಯಮ್ಮನವರ ಮಗನ ಕೋಣೆಯಲ್ಲಿದ್ದ ಗಾಡ್ರೇಜ್ ಬೀರುವಿನಲ್ಲಿಟ್ಟ ಅಂದಾಜು 30 ಗ್ರಾಂ ತೂಕದ ಒಂದು ಬೆಳ್ಳಿ ಚೈನ್ ನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಕಳ್ಳತನವಾದ ಒಟ್ಟು ಚಿನ್ನಾಭರಣ ಮತ್ತು ನಗದು ಮೊತ್ತ 4,20,000/-ಗಳಾಗಿದ್ದು, ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.  

ಆಟೋ ರಿಕ್ಷಾಕ್ಕೆ ಬೈಕ್ ಡಿಕ್ಕಿ:

    ಸೋಮವಾರಪೇಟೆ ತಾಲೋಕು ನಂಜರಾಯಪಟ್ಟಣದ ನಿವಾಸಿ ಲತಿಫುದ್ದೀನ್ ಎಂಬವರು ದಿನಾಂಕ 22/2/2017 ರಂದು ಸಮಯ 07-30 ಪಿ.ಎಂಗೆ ಕುಶಾಲನಗರದಿಂದ ನಂಜರಾಯಪಟ್ಟಣದ ತಮ್ಮ ಮನೆಗೆ ತಮ್ಮ ಬಾಪ್ತು ಕೆ ಎ 12 ಎ 7379 ರ ಆಟೋವನ್ನು ಚಾಲನೆ ಮಾಡಿಕೊಂಡು ಹೋಗುತ್ತಿರುವಾಗ್ಗೆ ನಂಜರಾಯಪಟ್ಟಣದ ಮಸೀದಿ ಮುಂದೆ ಎದುರುಗಡೆಯಿಂದ ಬಂದ ಕೆ ಎ 12 ಹೆಚ್ 684 ರ ಬೈಕ್ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಬಂದು ಲತಿಫುದ್ದೀನ್ ರವರ ಆಟೋಕ್ಕೆ ಡಿಕ್ಕಿ ಪಡಿಸಿದ ಪರಿಣಾಮ ಆಟೋ ಗ್ಲಾಸ್ ಒಡೆದುಜಖಂಗೊಂಡಿದ್ದು ಬೈಕ್ ಸವಾರ ರಸ್ತೆಯಲ್ಲಿ ಬಿದ್ದು ಗಾಯಗೊಂಡಿದ್ದು, ಕುಶಾಲನಗರ ಟ್ರಾಫಿಕ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. 

ಅಕ್ರಮ ಮರ ಸಾಗಾಟ: 

     ಅಕ್ರಮವಾಗಿ ಲಾರಿಯಲ್ಲಿ ಮರಳನ್ನು ಸಾಗಾಟ ಮಾಡುತ್ತಿದ್ದುದನ್ನು ಪತ್ತೆಹಚ್ಚಿದ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ದಿನಾಂಕ 22-2-2017 ರಂದು ಶನಿವಾರಸಂತೆ ಠಾಣಾಧಿಕಾರಿ ಹೆಚ್.ಎಂ. ಮರಿಸ್ವಾಮಿರವರಿಗೆ ಬಂದ ಮಾಹಿತಿ ಆದಾರದ ಮೇರೆಗೆ ಸಿಬ್ಬಂದಿಯೊಂದಿಗೆ ಠಾಣಾ ಸರಹದ್ದಿನ ಕಾಜೂರು ಗ್ರಾಮದ ಐಶ್ವರ್ಯ ಇಟ್ಟಿಗೆ ಬಳಿ ಒಂದು ಲಾರಿಯಲ್ಲಿ ಅಕ್ರಮವಾಗಿ ಬಳಂಜಿ ಮರಗಳನ್ನು ತುಂಬಿಸಿ ಸಾಗಾಟ ಮಾಡಲು ಇಟ್ಟಿದ್ದನ್ನು ಪತ್ತೆಹಚ್ಚಿ, ಆರೋಪಿ ಸಿ.ಎಲ್. ರೇವಣ್ಣ, ಗುಂಡೂರಾವ್ ಬಡಾವಣೆ ರವರನ್ನು ಮತ್ತು ಲಾರಿಯನ್ನು ವಶಕ್ಕೆ ಪಡೆದು ಆರೋಪಿ ವಿರುದ್ಧ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Wednesday, February 22, 2017

ದಾರಿ ತಡೆದು ಹಲ್ಲೆ, ಕೊಲೆ ಬೆದರಿಕೆ:

     ಜೀಪನ್ನು ತಡೆದು ಚಾಲಕನ ಮೇಲೆ ವ್ಯಕ್ತಿಯೊಬ್ಬರು ಹಲ್ಲೆ ನಡೆಸಿ ಕೊಲೆ ಬೆದರಿಕೆ ಒಡ್ಡಿರುವ ಘಟನೆ ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಮುಕ್ಕೋಡ್ಲು ಗ್ರಾಮದಲ್ಲಿ ನಡೆದಿದೆ. ಸೋಮವಾರಪೇಟೆ ತಾಲೋಕು ಹೊಸತೋಟದ ನಿವಾಸಿ ಜಿ. ಅಶೋಕ ಎಂಬವರು ದಿನಾಂಕ 21-2-2017 ರಂದು 10-00 ಎ.ಎಂ.ಗೆ ತನ್ನ ಬಾಪ್ತು ಜೀಪಿನಲ್ಲಿ ಕೆಲಸದವರನ್ನು ಕರೆದುಕೊಂಡು ಮುಕ್ಕೋಡ್ಲು ಗ್ರಾಮದ ಕಾಳಚಂಡ ಸೋಮಯ್ಯನವರ ಕಾಫಿ ತೋಟಕ್ಕೆ ಬಿಟ್ಟು ಅಲ್ಲಿಂದ ಮರಳುವಾಗ ಅರೋಪಿ ಕಾಳಚಂಡ ರವಿ ತಮ್ಮಯ್ಯ ಎಂಬವರು ಜಿ. ಅಶೋಕನವರ ಜೀಪನ್ನು ತಡೆದು ರಸ್ತೆಯ ವಿಚಾರದಲ್ಲಿ ಜಗಳ ಮಾಡಿ ಕಬ್ಬಿಣದ ರಾಡಿನಿಂದ ಹಲ್ಲೆ ನಡೆಸಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಸ್ತಿ ವಿವಾದ, ಅಣ್ಣನಿಂದ ತಮ್ಮನ ಕೊಲೆಗೆ ಯತ್ನ:

     ಕಾಫಿ ಕಣದಲ್ಲಿ ಕಾರನ್ನು ನಿಲ್ಲಿಸಲು ಬಿಡದ ತಮ್ಮನ ಮೇಲೆ ಅಣ್ಣ ರಿವಾಲ್ವರ್ ನಿಂದ ಗುಂಡುಹಾರಿಸಿ ಕೊಲೆಗೆ ಯತ್ನಿಸಿದ ಘಟನೆ ಸೋಮವಾರಪೇಟೆ ತಾಲೋಕು ಯಡವಾರೆ ಗ್ರಾಮದಲ್ಲಿ ನಡೆದಿದೆ. ಫಿರ್ಯಾದಿ ಯಡೆವಾರೆ ಗ್ರಾಮದ ನಿವಾಸಿ ಎಂ.ಎನ್. ಬೆಳ್ಳಿಯಪ್ಪ ಎಂಬವರು ದಿನಾಂಕ 21-2-2017 ರಂದು ತಮ್ಮ ಮನೆಯ ಪಕ್ಕದ ಕಾಫಿ ಕಣದಲ್ಲಿ ಕಾಫಿ ಕೆಲಸ ಮಾಡುತ್ತಿದ್ದಾಗ ಅವರ ಅಣ್ಣ ಎಂ.ಎನ್. ಚಂಗಪ್ಪ ನವರು ಅಲ್ಲಿಗೆ ಕಾರಿನಲ್ಲಿ ಬಂದು ಕಾಫಿ ಕಣದಲ್ಲಿ ವಾಹನವನ್ನು ನಿಲ್ಲಿಸುವ ಬಗ್ಗೆ ಜಗಳ ಮಾಡಿ ತನ್ನ ಬಳಿಯಿದ್ದ ರಿವಾಲ್ವರ್ ನಿಂದ ತಮ್ಮ ಎಂ.ಎನ್. ಬೆಳ್ಳಿಯಪ್ಪನವರ ಮೇಲೆ ಗುಂಡು ಹಾರಿಸಿ ಕೊಲೆಗೆ ಯತ್ನಿಸಿರುತ್ತಾರೆಂದು ಸದರಿ ಬೆಳ್ಳಿಯಪ್ಪನವರು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಆಕಸ್ಮಿಕ ಬೆಂಕಿ ತಗುಲು ಮಹಿಳೆ ಸಾವು:

     ಒಲೆಗೆ ಸೀಮೆಣ್ಣೆಸುರಿದು ಬೆಂಕಿಹಚ್ಚುವ ಸಂದರ್ಭದಲ್ಲಿ ಮಹಿಳೆಯೊಬ್ಬರಿಗೆ ಬೆಂಕಿತಗುಲಿ ಆಸ್ಪತ್ರೆಯಲ್ಲಿ ಸಾವನಪ್ಪಿದ ಘಟನೆ ನಡೆದಿದೆ. ಕುಶಾಲನಗರ ನಗರ ಠಾಣಾ ಸರಹದ್ದಿನ ರಾಧಾಕೃಷ್ಣ ಬಡಾವಣೆಯಲ್ಲಿ ವಾಸವಾಗಿರುವ ಲೋಕೇಶ್ ಎಂಬವರ ಪತ್ನಿ ಶ್ರೀಮತಿ ರಾಣಿ ಎಂಬವರು ದಿನಾಂಕ 14-2-2017 ರಂದು ತಮ್ಮ ಮನೆಯಲ್ಲಿ ನೀರನ್ನು ಬಿಸಿಮಾಡುವ ಸಲುವಾಗಿ ಒಲೆಗೆ ಸೀಮೆಣ್ಣೆಯನ್ನು ಸುರಿದು ಬೆಂಕಿಹಚ್ಚುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಅವರ ಸೀರೆಗೆ ಬೆಂಕಿ ತಗುಲಿ ಕೈ ಮತ್ತು ಶರೀರಕ್ಕೆ ತೀವ್ರತರಹದ ಗಾಯಗಳಾಗಿದ್ದು ಆಕೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸದರಿ ಮಹಿಳೆ ದಿನಾಂಕ 21-2-2017 ರಂದು ಮೃತರಾಗಿದ್ದು, ಕುಶಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಆಸ್ತಿ ವಿವಾದ ವ್ಯಕ್ತಿ ಮೇಲೆ ಹಲ್ಲೆ:
   ಕುಶಾಲನಗರ ಗ್ರಾಮಾಂತರ ಠಾಣಾ ಸರಹದ್ದಿನ ಗೋಂದಿಬಸವನಳ್ಳಿ ಗ್ರಾಮದ ನಿವಾಸಿ ಟಿ.ಪಿ. ದೇವನಾಯ್ಕ ಎಂಬವರು ತಮಗೆ ಸೇರಿದ ಜಾಗವನ್ನು ಸರ್ವೆ ಮಾಡಿಸಿ ಹದ್ದುಬಸ್ತನ್ನು ಗುರುತಿಸುತ್ತಿರುವಾಗ ಅದೇ ಗ್ರಾಮನ ವಾಸಿಗಳಾದ ಕುಮಾರ್ ಮತ್ತು ರಾಜು ಎಂಬವರುಗಳು ಅಲ್ಲಿಗೆ ಬಂದು ಜಾಗದ ಬಗ್ಗೆ ಜಗಳ ಮಾಡಿ ಅವಾಚ್ಯವಾಗಿ ಬೈದು ಹಲ್ಲೆ ನಡೆಸಿರುತ್ತಾರೆಂದು ದೂರನ್ನು ನೀಡಿದ್ದು, ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಾಗದ ವಿಚಾರದಲ್ಲಿ ಜಗಳ:

     ಕುಶಾಲನಗರ ಗ್ರಾಮಾಂತರ ಠಾಣಾ ವ್ಯಾಪ್ತಿಯ ಗೋಂದಿಬಸವನಳ್ಳಿ ಗ್ರಾಮದ ನಿವಾಸಿಗಳಾದ ಗೌಡಯ್ಯ ಮತ್ತು ದೇವನಾಯ್ಕ ಎಂಬವರುಗಳ ನಡುವೆ ಜಾಗದ ಹದ್ದಿನ ವಿಷಯದಲ್ಲಿ ಜಗಳ ವಾಗಿ ದೇವನಾಯ್ಕ, ನಾರಾಯಣ ಮತ್ತು ಇತರರು ಸೇರಿ ಫಿರ್ಯಾದಿ ಗೌಡಯ್ಯನವರ ಮಕ್ಕಳಾದ ಕುಮಾರ ಮತ್ತು ರಾಜುರವರನ್ನು ಅವಾಚ್ಯವಾಗಿ ಬೈದು ಕೊಲೆಬೆದರಿಕೆ ಒಡ್ಡಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Tuesday, February 21, 2017

ಕಾರು ಅಪಘಾತ, ಇಬ್ಬರಿಗೆ ಗಾಯ:

    ಅಡ್ಡಬಂದ ನಾಯಿಗೆ ಅಪಘಾತವಾಗುವುದನ್ನು ತಪ್ಪಿಸಲು ಹೋಗಿ ಕಾರು ಅಪಘಾತಕ್ಕೀಡಾಗಿ ಚಾಲಕ ಸೇರಿದಂತೆ ಮೂವರು ಗಾಯಗೊಂಡ ಘಟನೆ ಕುಟ್ಟ ಠಾಣಾ ಸರಹದ್ದಿನ ನಾಲ್ಕೇರಿ ಗ್ರಾಮದಲ್ಲಿ ನಡೆದಿದೆ. ದಿನಾಂಕ 19-2-2017 ರಂದು ಫಿರ್ಯಾದಿ ಕಟ್ಟೆಂಗಡ ಬಿ.ಪೂವಪ್ಪ ಮತ್ತು ಶತರ್ ಎಂಬವರು ತಮ್ಮ ಸ್ನೇಹಿತ ಕಾಳಿಮಾಡ ಮಾಚಯ್ಯರವರ ಕಾರಿನಲ್ಲಿ ಕುಟ್ಟ ಪಟ್ಟಣದಿಂದ ನಾಲ್ಕೇರಿ ಗ್ರಾಮದ ಕಡೆಗೆ ಹೋಗುತ್ತಿದ್ದಾಗ ಕಾರಿಗೆ ಅಡ್ಡವಾಗಿ ನಾಯಿಯೊಂದು ಬಂದು ಅದಕ್ಕೆ ಅಪಘಾತವಾಗುವುದನ್ನು ತಪ್ಪಿಸಲು ಪ್ರಯತ್ನಿಸಿದ ಚಾಲಕ ಕಾರಿನ ಮೇಲೆ ತನ್ನ ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿದ್ ಮರವೊಂದಕ್ಕೆ ಕಾರು ಡಿಕ್ಕಿಯಾಗಿ ಅಪಘಾತಕ್ಕೀಡಾದ ಪರಿಣಾಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಚಾಲಕ, ಕಾಳಿಮಾಡ ಮಾಚಯ್ಯ ಮತ್ತು ಕೆ.ಬಿ. ಪೂವಪ್ಪರವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಶರತ್ ರವರಿಗೆ ಹೆಚ್ಚಿನ ಗಾಯವಾದ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕುಟ್ಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ನೇಣುಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ:

      ಜೀವನದಲ್ಲಿ ಜಿಗುಪ್ಸೆಗೊಂಡ ವ್ಯಕ್ತಿಯೋರ್ವ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ವಿರಾಜಪೇಟೆ ಗ್ರಾಮಾಂತರ ಠಾಣಾ ವ್ಯಾಪ್ತಿಯ ನಲ್ವತ್ತೊಕ್ಲು ಗ್ರಾಮದಲ್ಲಿ ವಾಸವಾಗಿದ್ದ ಪಣಿಎರವರ ಕರಿಯ ಎಂಬವರ ಮಗ ಚಿಮ್ಮಿ ಎಂಬಾತ ಜೀವನದಲ್ಲಿ ಜುಗುಪ್ಸೆಗೊಂಡು ದಿನಾಂಕ 19-2-2017 ರಂದು ತಾನು ವಾಸವಾಗಿದ್ದ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮನೆಗೆ ಅಕ್ರಮ ಪ್ರವೇಶ, ಹಲ್ಲೆ:

       ಕುಶಾಲನಗರ ಗ್ರಾಮಾಂತರ ಠಾಣಾ ವ್ಯಾಪ್ತಿಯ ಬೊಳ್ಳೂರು ಗ್ರಾಮದ ವಾಸಿ ಶ್ರೀಮತಿ ಬಿ.ಸಿ. ಜ್ಯೋತಿ ಎಂಬವರು ದಿನಾಂಕ 20-02-2017 ರಂದು ತಮ್ಮ ಮನೆಯಲ್ಲಿದ್ದಾಗ ಸಮಯ 09 30 ಗಂಟೆಗೆ ಅವರ ಸಂಬಂಧಿಯಾದ ಸಂಬಂಧಿಯಾದ ಧನು ಎಂಬ ವ್ಯಕ್ತಿ ಜ್ಯೋತಿರವರ ಮನೆಗೆ ಅಕ್ರಮ ಪ್ರವೇಶ ಮಾಡಿ ದೂರವಾಣಿ ಕರೆಯನ್ನು ಸ್ವೀಕರಿಸದೇ ಇರುವ ವಿಚಾರದಲ್ಲಿ ಜಗಳ ಮಾಡಿ ಎಡಗೆನ್ನೆಗೆ ಹೊಡೆದು ನೋವು ಪಡಿಸಿದಲ್ಲದೆ ಚಾಕುವಿನಿಂದ ಬಲಗೈಬೆರಳಿಗೆ ಚುಚ್ಚಿ ಗಾಯ ಪಡಿಸಿ ತಳ್ಳಿ ಬೀಳಿಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಕರಿಮೆಣಸು ಕಳವು:

        ವಿರಾಜಪೇಟೆ ತಾಲೋಕು ಅಮ್ಮತ್ತಿ ಗ್ರಾಮದ ನಿವಾಸಿಗಳಾದ ಎಂ.ಕೆ.ಚಿಟ್ಟಿಯಪ್ಪ ಮತ್ತು ವಿಶ್ವನಾಥ ಎಂಬ ಸಹೋದರರ ನಡುವೆ ಆಸ್ತಿ ವಿವಾದವಿದ್ದು, ನ್ಯಾಯಾಲಯದಲ್ಲಿ ಸದರಿ ವಿವಾದದ ಸಂಬಂಧ ದಾವೆ ನಡೆಯುತ್ತಿದ್ದು, ದಿನಾಂಕ 19-2-2017 ರಂದು ಹಿರಿಯ ಸಹೋದರ ವಿಶ್ವನಾಥ, ಅವರ ಪತ್ನಿ ರೋಹಿಣಿ ಮತ್ತು ಮೇಸ್ತ್ರಿ ಮುರುಗನ್ ರವರುಗಳು ಸೇರಿ ಕಿರಿಯ ಸಹೋದರ ಎಂ.ಕೆ. ಚಿಟ್ಟಿಯಪ್ಪನವರ ತೋಟದಿಂದ ಸುಮಾರು 26,000/ ರೂ ಬೆಲೆಬಾಳುವ ಕರಿಮೆಣಸನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಎಂಬುದಾಗಿ ಎಂ.ಕೆ. ಚಿಟ್ಟಿಯಪ್ಪನವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ಕಾರು ಡಿಕ್ಕಿ:

         ಮಡಿಕೇರಿ ನಗರದ ಮಂಗಳಾದೇವಿನಗರದ ವಾಸಿ ಶ್ರೀಮತಿ ಟಿ.ಸುಧಾ ಎಂಬವರ ಪತಿ ಶಂಭುದೇವಯ್ಯ ಎಂಬವರು ದಿನಾಂಕ 19-2-2017 ರಂದು ರಾತ್ರಿ 9-45 ಗಂಟೆಯ ಸಮಯದಲ್ಲಿ ಮಡಿಕೇರಿ ನಗರದ ಮೈಸೂರು ರಸ್ತೆಯ ಕಾಫಿ ಡೇ ಬಳಿ ರಸ್ತೆಯ ಇನ್ನೊಂದು ಕಡೆಗೆ ದಾಟುತ್ತಿದ್ದಾಗ ಜನರಲ್ ತಿಮ್ಮಯ್ಯ ವೃತ್ತದ ಕಡೆಯಿಂದ ಬಂದ ಒಂದು ನೀಲಿ ಬಣ್ಣದ ಕಾರು ಡಿಕ್ಕಿಯಾಗಿ ಶಂಭುರವರ ತಲೆ ಹಾಗು ಶರೀರಕ್ಕೆ ಗಾಯಗಳಾಗಿದ್ದು, ಮಡಿಕೇರಿ ಟ್ರಾಫಿಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Monday, February 20, 2017

ಅಕ್ರಮ ಜೂಜಾಟ 
             ದಿನಾಂಕ 19-2-2017 ರಂದು ಕುಶಾಲನಗರದ ಸುಂದರನಗರ ಗ್ರಾಮದಲ್ಲಿ ಇಸ್ಪೇಟು ಎಲೆಗಳಿಂದ ಜೂಜಾಟ ಆಡುತ್ತಿದ್ದ ಸ್ಥಳಕ್ಕೆ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯ ಉಪನಿರೀಕ್ಷಕರಾದ ಮಹೇಶ್ ಮತ್ತು ಸಿಬ್ಬಂದಿಯವರು ದಾಳಿ ಮಾಡಿ 5 ಜನ ಆರೋಪಿಗಳನ್ನು ಹಾಗೂ 3,220 ರೂ ಹಣವನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಕಾರಿಗೆ ಲಾರಿ ಡಿಕ್ಕಿ
              ದಿನಾಂಕ 19-2-2017 ರಂದು ಮಂಗಳೂರಿನ ಬಿಜೈನ ನಿವಾಸಿ ಶ್ರೇಯಸ್ ಕೆ ಭಟ್ ರವರು ತಮ್ಮ ತಂದೆ ಮತ್ತು ತಾಯಿಯವರೊಂದಿಗೆ ಕಾರಿನಲ್ಲಿ ಮಂಳೂರಿನಿಂದ ಮೈಸೂರಿಗೆ ಹೋಗುತ್ತಿರುವಾಗ ಕಾಟಕೇರಿಯ ತಿರುವು ರಸ್ತೆಯಲ್ಲಿ ಎದುರುಗಡೆಯಿಂದ ಬಂದ ಲಾರಿಯನ್ನು ಚಾಲಕ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಕಾರಿಗೆ ಡಿಕ್ಕಿ ಪಡಿಸಿದ್ದು, ಶ್ರೇಯಸ್ ರವರ ತಂದೆ ತಾಯಿಯವರಿಗೆ ಗಾಯವಾಗಿದ್ದು ಈ ಬಗ್ಗೆ ಶ್ರೇಯಸ್ ರವರು ನೀಡಿದ ದೂರಿಗೆ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Sunday, February 19, 2017

 ಅಕ್ರಮ ಮರಳು ಸಾಗಾಟ:

     ಅಕ್ರಮವಾಗಿ ವಾಹನದಲ್ಲಿ ಮರಳನ್ನು ಸಾಗಾಟಾ ಮಾಡುತ್ತಿದ್ದುದನ್ನು ಪತ್ತೆಹಚ್ಚಿದ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ದಿನಾಂಕ `18-2-2017 ರಂದು ಬೆಳಿಗ್ಗೆ 8-00 ಗಂಟೆಯ ಸಮಯದಲ್ಲಿ ಕೆಎ-12 ಬಿ-3261 ರ ಬೋಲೇರೋ ಪಿಕ್ ಆಫ್ ವಾಹನದಲ್ಲಿ ಅಕ್ರಮವಾಗಿ ಮರಳನ್ನು ಸಾಗಾಟ ಮಾಡುತ್ತಿದ್ದನ್ನು ಸಿದ್ದಾಪುರ ಠಾಣೆಯ ಎಎಸ್ಐ ಹಾಗು ಸಿಬ್ಬಂದಿಯವರು ಪತ್ತೆಹಚ್ಚಿ ಮರಳು ತುಂಬಿದ ವಾಹನವನ್ನು ವಶಪಡಿಸಿ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. 

ಅಕ್ರಮ ಮರಳನ್ನು ಸಾಗಿಸುತ್ತಿದ್ದ 2 ಲಾರಿಗಳು ಪೊಲೀಸ್ ವಶಕ್ಕೆ:

     ಅಕ್ರಮವಾಗಿ 2 ಲಾರಿಗಳಲ್ಲಿ ಮರಳನ್ನು ಸಾಗಾಟ ಮಾಡುತ್ತಿದ್ದ ವ್ಯಕ್ತಿಗಳನ್ನು ಲಾರಿ ಸಮೇತವಾಗಿ ವಶಕ್ಕೆ ಪಡೆದ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಮಡಿಕೇರಿ ಗ್ರಾಮಾಂತರ ಠಾಣಾಧಿಕಾರಿ ಶ್ರೀ ಎಸ್. ಶಿವಪ್ರಕಾಶ್ ರವರಿಗೆ ಬಂದ ಖಚಿತ ಮಾಹಿತಿ ಆದಾರದ ಮೇರೆಗೆ ಮಂಗಳೂರು ಕಡೆಯಿಂದ ಮಡಿಕೇರಿ ಕಡೆಗೆ ಅಕ್ರಮವಾಗಿ 2 ಲಾರಿಗಳಲ್ಲಿ ಮರಳನ್ನು ಸಾಗಾಟ ಮಾಡುತ್ತಿದ್ದವರ ಮೇಲೆ ಮಡಿಕೇರಿ ಗ್ರಾಮಾಂತರ ಠಾಣಾಧಿಕಾರಿ ಹಾಗು ಸಿಬ್ಬಂದಿಯವರು ಠಾಣಾ ಸರಹದ್ದಿನ ಸಂಪಾಜೆ ಗೇಟಿನ ಬಳಿ ದಾಳಿ ನಡೆಸಿ 5 ಮಂದಿ ಆರೋಪಿಗಳನ್ನು ಹಾಗು 2 ಮರಳು ತುಂಬಿದ ಲಾರಿಗಳನ್ನು ವಶಕ್ಕೆ ಪಡೆದು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ. 

ಜೀವನದಲ್ಲಿ ಜುಗುಪ್ಸೆ ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ:

     ವಿಪರೀತ ಸಾಲ ಮಾಡಿದ ವ್ಯಕ್ತಿಯೊಬ್ಬರು ಜೀವನದಲ್ಲಿ ಜುಗುಪ್ಸೆಗೊಂಡು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡು ಘಟನೆ ವಿರಾಜಪೇಟೆ ಗ್ರಾಮಾಂತರ ಠಾಣಾ ಸರಹದ್ದಿನ ಕೆದಮುಳ್ಳೂರು ಗ್ರಾಮದಲ್ಲಿ ನಡೆದಿದೆ. ವಿರಾಜಪೇಟೆ ತಾಲೋಕು ಕೆದಮುಳ್ಳೂರು ಗ್ರಾಮದ ನಿವಾಸಿ ಮಾಳೇಟ್ಟೀರ ಈರಪ್ಪ (58) ಎಂಬವರು ಬ್ಯಾಂಕ ಹಾಗು ಇತರೆ ಕಡೆಯಿಂದ ಸಾಲವನ್ನು ಪಡೆದು ಮನೆ ಕಟ್ಟುತ್ತಿದ್ದು, ಈ ನಡುವೆ ಕಾರು ಅಪಘಾತದಲ್ಲಿ ಎರಡೂ ಕಾಲುಗಳಿಗೆ ತೀವ್ರ ಜಖಂಗೊಂಡ ಕಾರಣ ಸದರಿಯವರು ಜೀವನದಲ್ಲಿ ಜುಗುಪ್ಸೆಗೊಂಡು ದಿನಾಂಕ 17-2-2017 ರಂದು ರಾತ್ರಿ 8-30 ಗಂಟೆಯ ಸಮಯದಲ್ಲಿ ಯಾವುದೋ ವಿಷ ಪದಾರ್ಥವನ್ನು ಸೇವಿಸಿದ್ದು ಸದರಿಯವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಸಮಯದಲ್ಲಿ ಸದರಿ ವ್ಯಕ್ತಿ ಸಾವನಪ್ಪಿದ್ದು, ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿ ಆತ್ಮಹತ್ಯೆ:

     ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿಯೋರ್ವ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕುಶಾಲನಗರ ಗ್ರಾಮಾಂತರ ಠಾಣಾ ಸರಹದ್ದಿನ ಹಳೆಕೂಡಿಗೆ ಗ್ರಾಮದಲ್ಲಿ ವಾಸವಾಗಿದ್ದ ರಾಜೇಶ ಎಂಬ ವ್ಯಕ್ತಿ ಕೆಲವು ಸಮಯದಿಂದ ಹೊಟ್ಟೆನೋವಿನಿಂದ ಬಳಲುತ್ತಿದ್ದು, ಇದೇ ವಿಚಾರವಾಗಿ ಬೇಸತ್ತು ದಿನಾಂಕ 17-2-2017 ರಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಅಕ್ರಮ ಮರಳು ಸಾಗಾಟ ಪತ್ತೆ:

     ಸುಂಟಿಕೊಪ್ಪ ಠಾಣಾಧಿಕಾರಿ ಶ್ರೀ ಅನೂಪ್ ಮಾದಪ್ಪ ನವರಿಗೆ ದಿನಾಂಕ 18-2-2017 ರಂದು ಬಂದ ಮಾಹಿತಿಯ ಮೇರೆಗೆ ಸಿಬ್ಬಂದಿಯೊಂದಿಗೆ ಗರಗಂದೂರು ಗ್ರಾಮದಲ್ಲಿ ಆರೋಪಿಗಳಾದ ಎಂ.ಕೆ. ಶಂಭು ಹಾಗು ಎ.ಕೆ. ಲೋಹಿತ್ ಎಂಬವರುಗಳು ಪಿಕ್ಅಪ್ ವಾಹನದದಲ್ಲಿ ಅಕ್ರಮವಾಗಿ ಮರಳನ್ನು ತುಂಬಿಸಿ ಸಾಗಾಟ ಮಾಡುತ್ತಿದ್ದುದನ್ನು ಪತ್ತೆಹೆಚ್ಚಿ ವಾಹನ ಹಾಗು ಆರೋಪಿಗಳನ್ನು ವಶಕ್ಕೆ ಪಡೆದು ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. 

Saturday, February 18, 2017

ಬೈಕಿಗೆ ಓಮಿನಿ ವ್ಯಾನು ಡಿಕ್ಕಿ
              ದಿನಾಂಕ 17-2-2017 ರಂದು ಅರಕಲಗೋಗುವಿನ ದೊಡ್ಡಮಗ್ಗೆ ಗ್ರಾಮದ ನಿವಾಸಿ ಗಿರೀಶ ಎಂಬುವವರು ಮೋಟಾರು ಸೈಕಲಿನಲ್ಲಿ ಮಾದಾಪುರದ ಮುವತ್ತೋಕ್ಲು ಗ್ರಾಮದಲ್ಲಿರುವ ಭದ್ರಕಾಳಿ ದೇವಸ್ಥಾನಕ್ಕೆ ಹೋಗುತ್ತಿರುವಾಗ ಗರ್ವಾಲೆ ಗ್ರಾಮಕ್ಕೆ ತಲುಪುವಾಗ ಎದುರುಗಡೆಯಿಂದ ಓಮಿನಿ ವ್ಯಾನನ್ನು ಅದರ ಚಾಲಕ ಸೋಮವಾರಪೇಟೆಯ ನಿವಾಸಿ ಅಣ್ಣಯ್ಯ ಎಂಬುವವರು ಅಜಾಗರೂಕತೆಯಿಂದ ಚಾಲನೆ ಮಾಡಿ ಮೋಟಾರು ಸೈಕಲಿಗೆ ಡಿಕ್ಕಿಪಡಿಸಿ ಗಿರೀಶರವರಿಗೆ ಗಾಯಗಳಾಗಿದ್ದು ಈ ಬಗ್ಗೆ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಅಕ್ರಮ ಜೂಜಾಟ
                  ದಿನಾಂಕ 17-2-2017 ರಂದು ವಿರಾಜಪೇಟೆ ನಗರ ಠಾಣೆಯ ಉಪನಿರೀಕ್ಷಕರಾದ ಸಂತೋಷ್ ಕಶ್ಯಪ್ ರವರು ನೆಹರು ನಗರದ ಅನ್ಸಾರ್ ಎಂಬುವವರ ಬಾಡಿಗೆ ಮನೆಗೆ ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಅಕ್ರಮ ಜೂಜಾಟವಾಡುತ್ತಿದ್ದ 12 ಜನರನ್ನು ಹಾಗೂ ಜೂಜಾಟಕ್ಕೆ ಬಳಸಿದ  12,050 ರೂ ಹಣವನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.

ಜಾನುವಾರು ಕಳವು
              ವಿರಾಜಪೇಟೆ ತಾಲೂಕಿನ ಬೊಳ್ಳರಿಮಾಡು ಗ್ರಾಮದ ಬಿದ್ದಂಡ ಸುಬ್ಬಯ್ಯ ಹಾಗೂ ತಾತೀರ ಪೂವಯ್ಯ ಎಂಬುವವರಿಗೆ ಸೇರಿದ ಮೇಯಲು ಬಿಟ್ಟ 2 ಹಸುಗಳನ್ನು ದಿನಾಂಕ 8-2-2017 ರಂದು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿ ಸುಬ್ಬಯ್ಯನವರು ನೀಡಿದ ದೂರಿಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ನೇಣು ಬಿಗಿದುಕೊಂಡು ಯುವಕನ ಆತ್ಮಹತ್ಯೆ
                ಯುವಕನೊಬ್ಬ ಜೀವನದಲ್ಲಿ ಜಿಗುಪ್ಸೆಗೊಂಡು ನೇಣು ಬಿದುಕೊಂಡು ಆತ್ಮ ಹತ್ಯೆ ಮಾಡಿಕೊಂಡಿರುವ ಘಟನೆ ಚೇರಳ ಶ್ರೀಮಂಗಲ ಗ್ರಾಮದಲ್ಲಿ ನಡೆದಿದೆ. ದಿನಾಂಕ 17-2-2017 ರಂದು ಚೇರಳ ಶ್ರೀಮಂಗಲ ಗ್ರಾಮದ ನಿವಾಸಿ ರಫಿಕ್ ಎಂಬುವವರ ಮಗ ರಾಸಿಕ್ ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಈ ಬಗ್ಗೆ ತಂದೆ ರಫಿಕ್ ರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

Friday, February 17, 2017

ಲಾರಿ ಅಪಘಾತ:

     ಚಲಿಸುತ್ತಿದ್ದ ಲಾರಿಯೊಂದು ಅಪಘಾತಕ್ಕೀಡಾಗಿ ರಸ್ತೆಬದಿಯ ಸಿಗ್ನಲ್ ಕಂಬ ಮತ್ತು ಮನೆಯ ಕಾಂಪೌಂಡ್ಗೆ ಹಾನಿಹಾದ ಘಟನೆ ಕುಶಾಲನಗರ ಬಳಿಯ ಕೂಡ್ಲೂರು ಗ್ರಾಮದಲ್ಲಿ ನಡೆದಿದೆ. ದಿನಾಂಕ 16-2-2017 ರಂದು ಈ ದಿನ ಬೆಳಗ್ಗೆ 06.45 ಎ ಎಂಗೆ ಕುಶಾಲನಗರ ಕಡೆ ಹೋಗುತ್ತಿದ್ದ ಕೆ ಎ 18 ಬಿ 4689 ಲಾರಿಯನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿದ ಪರಿಣಾಮ ರಸ್ತೆಬದಿಯ ಎರಡು ಚೆವರ್ ಲೆಟ್ ಸಿಗ್ನಲ್ ಕಂಬಗಳು ಮತ್ತು ಒಂದು ಸಾರ್ವಜನಿಕ ವಿದ್ಯತ್ ಕಂಬಕ್ಕೆ ಡಿಕ್ಕಿ ಹಾಗಿದ್ದು ಅಲ್ಲದೆ ಕುಶಾಲನಗರದ ಕೂಡ್ಲೂರು ಗ್ರಾಮದ ನಿವಾಸಿ ಎಂ.ಯು. ತಾಜುದ್ದೀನ್ ಎಂಬವರ ಮನೆಯ ಗೇಟ್ ,ಕಾಂಪೌಂಡ್ ಹಾಗು ಮನೆಯ ಮುಂದಿನ ಆರ್ ಸಿ ಸಿ ಬಾಗಕ್ಕೆ ಡಿಕ್ಕಿಯಾಗಿ ಅಂದಾಜು 250000 ನಷ್ಟ ಆಗಿದ್ದು ಈ ಸಂಬಂಧ ಕುಶಾಲನಗರ ಟ್ರಾಫಿಕ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. 

ಮೋಟಾರ್ ಬೈಕ್ ಗೆ ಜೀಪು ಡಿಕ್ಕಿ:

    ಮೋಟಾರ್ ಸೈಕಲಿಗೆ ಜೀಪೊಂದು ಡಿಕ್ಕಿಯಾಗಿ ಬೈಕ್ ಸವಾರ ಗಾಯಗೊಂಡ ಘಟನೆ ಸೋಮವಾರಪೇಟೆ ನಗರದ ಕಾಲೇಜು ರಸ್ತೆಯಲ್ಲಿ ಸಂಭವಿಸಿದೆ. ದಿನಾಂಕ 16-2-2017 ರಂದು ಫಿರ್ಯಾದಿ ಸೋಮವಾರಪೇಟೆ ಆಸ್ಪತ್ರೆ ವಸತಿ ಗೃಹದಲ್ಲಿ ವಾಸವಾಗಿರುವ ಎಸ್.ಬಿ. ಅಶೋಕ ಎಂಬವರು ತಮ್ಮ ಬಾಪ್ತು ಮೋಟಾರ್ ಸೈಕಲಿನಲ್ಲಿ ಸೋಮವಾರಪೇಟೆ ನಗರದ ಖಾಸಗಿ ಬಸ್ಸು ನಿಲ್ದಾಣದಿಂದ ಜೂನಿಯರ್ ಕಾಲೇಜು ಕಡೆಗೆ ಹೋಗುತ್ತಿದ್ದಾಗ ಎದುರುಗಡೆಯಿಂದ ಬಂದ ಜೀಪು ಡಿಕ್ಕಿಯಾಗಿ ಗಾಯಗೊಂಡಿದ್ದು, ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೀಗ ಮುರಿದು ನಗದು ಮತ್ತು ಚಿನ್ನಾಭರಣ ಕಳವು:

      ಸೋಮವಾರಪೇಟೆ ಠಾಣಾ ವ್ಯಾಪ್ತಿಯ ಹೊನ್ನವಳ್ಳಿ ಗ್ರಾಮದ ನಿವಾಸಿಗಳಾದ ಹೆಚ್. ಎನ್. ಮಹೇಶ ಮತ್ತು ಹೆಚ್.ಎನ್. ಮಂಜುನಾಥ ಎಂಬವರು ತಮ್ಮ ದೊಡ್ಡಮ್ಮನವರ ಮೊಮ್ಮಗ ತೀರಿಕೊಂಡಿದ್ದರಿಂದ ಶವಸಂಸ್ಕಾರಕ್ಕೆಂದು ದಿನಾಂಕ 16.02.2017 ರಂದು ಬೆಳಿಗ್ಗೆ 10:00 ಗಂಟೆಗೆ ಶನಿವಾರಸಂತೆಗೆ ಹೋಗಿದ್ದು ವಾಪಾಸ್ಸು ಮಧ್ಯಾಹ್ನ 02:00 ಗಂಟೆಗೆ ಬಂದು ನೋಡಲಾಗಿ ಹೆಚ್. ಎನ್. ಮಹೇಶ ಮತ್ತು ಹೆಚ್.ಎನ್. ಮಂಜುನಾಥರವರುಗಳ ಮನೆಯ ಮುಂಬಾಗಿಲಿನ ಬೀಗವನ್ನು ಯಾರೋ ಕಳ್ಳರು ಯಾವುದೋ ಆಯುಧದಿಂದ ಒಡೆದು ಹಾಕಿದ್ದು, ಹೆಚ್. ಎನ್. ಮಹೇಶರವರ ಮನೆಯ ಒಳಗಡಿ ಇಟ್ಟಿದ್ದ  ಗಾಡ್ರೇಜ್ ಬೀರುವಿನಿಂದ 12,000/- ರೂ ನಗದು ಹಣ ಹಾಗೂ 4 ಗ್ರಾಂ ತೂಕದ ಚಿನ್ನದ ಸರವನ್ನು ಹಾಗೆಯೇ ಹೆಚ್.ಎನ್. ಮಂಜುನಾಥರವರ ಮನೆಯಲ್ಲಿಟ್ಟಿದ್ದ ಗಾಡ್ರೇಜ್ ಬೀರುವಿನಿಂದ 10,000/- ರೂ ನಗದು ಹಣ ಹಾಗೂ 4 ಗ್ರಾಂ ತೂಕದ ಚಿನ್ನದ ಸರವನ್ನು ಕಳವು ಮಾಡಿಕೊಂಡು ಹೋಗಿದ್ದು, ಈ ಸಂಬಂಧ ಸೋಮವಾರಪೇಟೆ ಪೊಲೀಸರು 2 ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಮಗನಿಂದ ತಾಯಿ ಮೇಲೆ ಹಲ್ಲೆ:

      ಮಡಿಕೇರಿ ತಾಲೋಕು ಮುತ್ತಾರ್ ಮುಡಿ ಗ್ರಾಮದ ನಿವಾಸಿ ಶ್ರೀಮತಿ ರುಕ್ಮಿಣಿ ಎಂಬವರ ಮಗ ದಿನಾಂಕ 14-2-2017 ರಂದು ರಾತ್ರಿ 10-30 ಗಂಟೆ ಸಮಯದಲ್ಲಿ ಮದ್ಯಪಾನ ಮಾಡಿಕೊಂಡು ಮನೆಗೆ ಬಂದು ವಿನಾಕಾರಣ ತನ್ನ ತಾಯಿ ರುಕ್ಮಿಣಿರವರೊಂದಿಗೆ ಜಗಳ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ದೊಣ್ಣೆಯಿಂದ ಹಲ್ಲೆ ಮಾಡಿದ್ದು ಅಲ್ಲದೆ ಕಡೆಯುವ ಗುಂಡುಕಲ್ಲನ್ನು ಕಾಲಿನ ಮೇಲೆ ಎತ್ತಿಹಾಕಿ ಗಾಯಪಡಿಸಿದ್ದು, ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಶ್ರೀಮತಿ ರುಕ್ಮಿಣಿರವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

Thursday, February 16, 2017


ಅಕ್ರಮವಾಗಿ ಹೊಳೆಯಿಂದ ಮರಳು ತುಂಬಿಸುತ್ತಿದ್ದ ಲಾರಿಗಳ ವಶ
          ದಿನಾಂಕ 15-2-2017 ರಂದು ವಿರಾಜಪೇಟೆ ತಾಲೂಕಿನ ಅರಮೇರಿ ಗ್ರಾಮದ ಕದನೂರು ಹೊಳೆಯ ದಡದಲ್ಲಿ ಅಕ್ರಮವಾಗಿ ಲಾರಿಗಳಿಗೆ ಮರಳು ತುಂಬಿಸುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯ ಉಪನಿರೀಕ್ಷಕರು ಮತ್ತು ಸಿಬ್ಬಂದಿಯವರು ದಾಳಿ ಮಾಡಿ ಮರಳನ್ನು ತುಂಬಿಸುತ್ತಿದ್ದ ಎರಡು ಲಾರಿಗಳನ್ನು ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಂಡಿರುತ್ತಾರೆ.

ಅಪಘಾತ ಪ್ರಕರಣ
           ದಿನಾಂಕ 15-2-2017 ರಂದು ವಿರಾಜಪೇಟೆ ತಾಲೂಕಿನ ಮಾಯಮುಡಿ ಗ್ರಾಮದ ಮಡಿಕೆಬೀಡುವಿನ ನಿವಾಸಿ ಅಭಿಷೇಕ್ ರವರು ಧನುಗಾಲ ಗ್ರಾಮದ ನಿವಾಸಿ ಹೇಮಂತ್ ಕುಮಾರ್ ರರೊಂದಿಗೆ ಮೋಟಾರು ಸೈಕಲ್ ನಲ್ಲಿ ಗೋಣಿಕೊಪ್ಪಲುವಿನ ಕಡೆಗೆ ಹೋಗುತ್ತಿರುವಾಗ ಬಾಳಾಜಿ ಗ್ರಾಮದ ಕಮಟೆ ದೇವಸ್ಥಾನದ ಹತ್ತಿರ ತಲುಪುವಾಗ ಚಾಲಕ ಹೇಮಂತ್ ಕುಮಾರ್ ರವರು ಮೋಟಾರು ಸೈಕಲನ್ನು ಅಜಾಗರೂಕತೆಯಿಂದ ಚಾಲನೆ ಮಾಡಿ ಮುಂದಿನಿಂದ ಬರುತ್ತಿದ್ದ ಮಾರುತಿ ವ್ಯಾನಿಗೆ ಡಿಕ್ಕಿ ಪಡಿಸಿದ್ದು, ಅಭಿಷೇಕ್ ಮತ್ತು ಹೇಮಂತ್ ಕುಮಾರ್ ರವರಿಗೆ ಗಾಯಗಳಾಗಿದ್ದು, ಅಭಿಷೇಕ್ ರವರು ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಗೂಡ್ಸ್ ಆಟೋ ಅಪಘಾತ
            ದಿನಾಂಕ 15-2-2017 ರಂದು ಚೇಲವಾರ ಗ್ರಾಮದ ನಿವಾಸಿ ಶಂಕರರವರು ತಮ್ಮ ಬಾಪ್ತು ಗೂಡ್ಸ್ ಆಟೋದಲ್ಲಿ ಚಾಲಕ ದಿನೇಶರವರೊಂದಿಗೆ ಮೂರ್ನಾಡುವಿನಿಂದ ಕೊಂಡಂಗೇರಿಗೆ ಹೋಗುತ್ತಿರುವಾಗ ಆಟೊವನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿ ರಸ್ತೆಯ ಪಕ್ಕದ ಗುಂಡಿಗೆ ಬೀಳಿಸಿದ ಪರಿಣಾಮ ಆಟೋ ಜಖಂ ಗೊಂಡಿದ್ದು, ಈ ಬಗ್ಗೆ ಶಂಕರರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಬ್ಯಾಂಕ್ ವಿವರ ಕೇಳಿ ವಂಚಿಸಲು ಯತ್ನ
         ಮಡಿಕೇರಿ ತಾಲೂಕಿನ ಮುತ್ತಾರ್ಮುಡಿ ಗ್ರಾಮದ ನಿವಾಸಿ ಬಿ ಎಂ ತಿಮ್ಮಯ್ಯ ಎಂಬುವವರಿಗೆ ಮೊ ಸಂ 917654971568 ರಿಂದ ಅಪರಿಚಿತ ವ್ಯಕ್ತಿಯು ಕರೆ ಮಾಡಿ ಮಾತನಾಡಿ ನಾನು ಬ್ಯಾಂಕಿನ ಮ್ಯಾನೇಜರ್ ಮಾತಾಡುವುದು, ನಿಮ್ಮ ಎ.ಟಿ.ಎಂ ನ್ನು ಬಂದ್ ಮಾಡಬೇಕಾಗಿದೆ, ನಿಮ್ಮ ಎ.ಟಿ.ಎಂ ನಂ ಕೊಡಿ ಎಂದು ಕೇಳಿ ವಂಚಿಸಲು ಪ್ರಯತ್ನಿಸಿದ್ದು ಈ ಬಗ್ಗೆ ತಿಮ್ಮಯ್ಯನವರು ದಿನಾಂಕ 15-2-2017 ರಂದು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.
          ಇಂತಹ ಘಟನೆಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ವರದಿಯಾಗುತ್ತಿದ್ದು ಸಾರ್ವಜನಿಕರಿಗೆ ಯಾವುದೇ ಅನಾಮಧೇಯ ವ್ಯಕ್ತಿಯಿಂದ ಬ್ಯಾಂಕ್ ಖಾತೆಯ ವಿವರಗಳನ್ನು ಕೇಳುವುದು ಇತ್ಯಾದಿ ಮಾಡಿದಲ್ಲಿ ಅಂತಹ ಕರೆಗಳಿಗೆ ಸ್ಪಂದಿಸದೇ ಜಾಗ್ರತೆ ರಾದಲ್ಲಿ ಇಂತಹ ಘಟನೆಗಳನ್ನು ತಡೆಗಟ್ಟಲು ಸಹಕಾರಿಯಾಗುತ್ತದೆ.

Wednesday, February 15, 2017

ಶಾಲೆಗೆ ನುಗ್ಗಿ ಕಳ್ಳತನ
            ದಿನಾಂಕ 13-2-2017 ರಂದು ರಾತ್ರಿ ವಿರಾಜಪೇಟೆ ತಾಲೂಕಿನ ಹುದಿಕೇರಿಯ ಜನತಾ ಪ್ರೌಢ ಶಾಲೆಗೆ ಯಾರೋ ಅಪರಿಚಿತರು ನುಗ್ಗಿ ಮುಖ್ಯ ಶಿಕ್ಷಕರ ಕೊಠಡಿಯಿಂದ 5,000 ರೂ ನಗದು ಹಾಗೂ ಒಂದು ಮೊಬೈಲ್ ಫೋನನ್ನು ಕಳವು ಮಾಡಿದ್ದು ಈ ಬಗ್ಗೆ ಶಾಲೆಯ ಅದ್ಯಕ್ಷರಾದ ಮುದ್ದಪ್ಪನವರು ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಕೆಲಸ ಮಾಡುವಾಗ ಮರ ಬಿದ್ದು ಮಹಿಳೆಯ ಆಕಸ್ಮಿಕ ಮರಣ
           ದಿನಾಂಕ 14-2-2017 ರಂದು ಸುಂಟಿಕೊಪ್ಪದ 7ನೇ ಹೊಸಕೋಟೆಯ ನಿವಾಸಿ ಚಂದ್ರರವರ ಪತ್ನಿ ಶೋಭಾರವರು ಹೊಸಕೋಟೆ ಗ್ರಾಮದ ಸಂದೀಪ್ ರವರ ಕಾಫಿ ತೋಟಕ್ಕೆ ಕಾಫಿ ಕುಯ್ಯಲು ಕೂಲಿ ಕೆಲಸಕ್ಕೆ ಹೋಗಿದ್ದು, ಕೆಲಸ ಮಾಡುತ್ತಿರುವಾಗ ಗಾಳಿ ಬಂದು ಬಳಂಜಿ ಮರ ತುಂಡಾಗಿ ಶೋಭರವರ ಮೇಲೆ ಬಿದ್ದು ಮೃತಪಟ್ಟಿದ್ದು, ಈ ಬಗ್ಗೆ ಶೋಭರವರ ಪತಿ ಚಂದ್ರರವರು ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Tuesday, February 14, 2017

ಮದ್ಯಪಾನ ಮಾಡಿದ ವ್ಯಕ್ತಿ ನೀರಿಗೆ ಬಿದ್ದು ಸಾವು:

      ಮದ್ಯಪಾನ ಮಾಡಿದ ವ್ಯಕ್ತಿಯೋರ್ವ ನೀರಿಗೆ ಬಿದ್ದು ಸಾವನಪ್ಪಿದ ಘಟನೆ ಕುಶಾಲನಗರ ಸಮೀಪದ ಹಾರಂಗಿ ಹೊಳೆಯಲ್ಲಿ ಸಂಭವಿಸಿದೆ. ಕುಶಾಲನಗರ ಗ್ರಾಮಾಂತರ ಠಾಣಾ ವ್ಯಾಪ್ತಿಯ ದೊಡ್ಡತ್ತೂರು ಗ್ರಾಮದ ನಿವಾಸಿ ರವಿಕುಮಾರ್ ಎಂಬಾತ ದಿನಾಂಕ 13-2-2017 ರಂದು ಮದ್ಯಪಾನ ಮಾಡಿಕೊಂಡು ಬಂದು ಸಮಯ 12-30 ಗಂಟೆಗೆ ಬಟ್ಟೆ ಹೊಗೆಯುವ ಮತ್ತು ಸ್ನಾನ ಮಾಡುವ ಸಲುವಾಗಿ ಹಾರಂಗಿ ಹೊಳೆಗೆ ಹೋಗಿ ಸ್ನಾನ ಮಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು, ಮೃತವ್ಯಕ್ತಿಯ ತಂದೆಯಾದ ಆರ್. ಚಂದ್ರರವರು ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಜರುಗಿಸಿರುತ್ತಾರೆ.

ಜಮೀನಿಗೆ ವ್ಯಕ್ತಿಯಿಂದ ಅಕ್ರಮ ಪ್ರವೇಶ, ಹಲ್ಲೆ:

     ಹಳೆ ದ್ವೇಷವನ್ನಿಟ್ಟುಕೊಂಡು ವ್ಯಕ್ತಿಯೋರ್ವ ಮತ್ತೊಬ್ಬ ವ್ಯಕ್ತಿಯ ಜಮೀನಿಗೆ ಅಕ್ರಮ ಪ್ರವೇಶ ಮಾಡಿ ಹಲ್ಲೆ ನಡೆಸಿದ ಘಟನೆ ಮಡಿಕೇರಿ ತಾಲೋಕು ಪೆರೂರು ಗ್ರಾಮದಲ್ಲಿ ನಡೆದಿದೆ. ಪೆರೂರು ಗ್ರಾಮದ ನಿವಾಸಿ ಬಿ.ಸಿ. ಮೇದಪ್ಪ ಎಂಬವರು ದಿನಾಂಕ 12-2-2017 ರಂದು ಸಂಜೆ 4-00 ಗಂಟೆಯ ಸಮಯದಲ್ಲಿ ತಮ್ಮ ಜಮೀನಿನಲ್ಲಿ ಬಾಳೆ ಕೃಷಿಯನ್ನು ನೋಡಿಕೊಂಡಿರುವ ಸಮಯದಲ್ಲಿ ಆರೋಪಿಯಾದ ಅದೇ ಗ್ರಾಮದ ಸುಂದರ ಎಂಬವರು ಅಲ್ಲಿಗೆ ಬಂದು ಜಮೀನಿಗೆ ಅಕ್ರಮ ಪ್ರವೇಶ ಮಾಡಿ ಹಳೆ ದ್ವೇಷದ ಹಿನ್ನೆಲೆಯಲ್ಲಿ ಜಗಳ ಮಾಡಿ ಮರದ ದೊಣ್ಣೆಯಿಂದ ಹಲ್ಲೆ ನಡೆಸಿ ಗಾಯಪಡಿಸಿದ್ದಾರೆಂದು ನೀಡಿದ ದೂರಿನ ಮೇರೆಗೆ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮನೆಗೆ ನುಗ್ಗಿ ಚಿನ್ನಾಭರಣ ಕಳವು:

      ವಿರಾಜಪೇಟೆ ನಗರ ಠಾಣಾ ಸರಹದ್ದಿನ ಮಗ್ಗುಲ ಗ್ರಾಮದ ಸಬಾಸ್ಟಿನ್ ಜಾನ್ ಲೋಬೋ ಎಂಬವರು ದಿನಾಂಕ 13-2-2017 ರಂದು ಬೆಳಿಗ್ಗೆ 8-45 ಗಂಟೆಗೆ ಮನೆಗೆ ಬೀಗ ಹಾಕದೇ ಕಾಫಿ ಕೆಲಸಕ್ಕೆ ಹೋಗಿ ಮಧ್ಯಾಹ್ನ ಮನೆಗೆ ಬಂದು ನೋಡಿದಾಗ ಯಾರೋ ಕಳ್ಳರು ಮನೆಯೊಳಗೆ ನುಗ್ಗಿ ಗಾಡ್ರೇಜ್ ಬೀರುವಿನ ಲಾಕರ್ ನ್ನು ತೆರೆದು 28 ಗ್ರಾಂ ಚಿನ್ನದ ಚೈನು ಮತ್ತು 4 ಗ್ರಾಂ ತೂಕದ 2 ಉಂಗುರಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 
ನಿಲ್ಲಿಸಿದ ಮಾರುತಿ ವ್ಯಾನ್ ಗೆ ಬೆಂಕಿ:
     ಶ್ರೀಮಂಗಲ ಠಾಣಾ ವ್ಯಾಪ್ತಿಯ ಬೆಳ್ಳೂರು ಗ್ರಾಮದ ನಿವಾಸಿ ನೂರೇರ ಅಯ್ಯಪ್ಪ ಎಂಬವರು ತಮ್ಮ ಬಾಪ್ತು ಮಾರುತಿ ವ್ಯಾನ್ ನ್ನು ಮನೆಯ ಹತ್ತಿರದ ಶೆಡ್ಡಿನಲ್ಲಿ ನಿಲ್ಲಿಸಿದ್ದು, ದಿನಾಂಕ 12-2-2017 ರಂದು ಸಮಯ 11-30 ಗಂಟೆಯ ಸಮಯದಲ್ಲಿ ಮನೆಯ ನಾಯಿ ಬೊಳಗಿದ ಶಬ್ದಕೇಳಿ ಮನೆಯಿಂದ ಹೊರಗಡೆ ಬಂದು ನೋಡಿದಾಗ ಶೆಡ್ಡಿನಲ್ಲಿ ನಿಲ್ಲಿಸಿದ್ದ ವ್ಯಾನಿಗೆ ಬೆಂಕಿ ಹೊತ್ತಿಕೊಂಡು ಉರಿಯುತ್ತಿದ್ದು, ಯಾರೋ ಕಿಡಿಗೇಡಿಗಳು ಫಿರ್ಯಾದಿ ಅಯ್ಯಪ್ಪನವರಿಗೆ ನಷ್ಟವನ್ನುಂಟುಮಾಡುವ ಉದ್ದೇಶದಿಂದ ಈ ಕೃತ್ಯವನ್ನು ಎಸಗಿರಬಹುದಾಗಿದೆ ಎಂಬುದಾಗಿ ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.  

ಯುವಕ ಕಾಣೆ:

     ಪೊನ್ನಂಪೇಟೆ ಠಾಣಾ ಸರಹದ್ದಿನ ಮುಗುಟಗೇರಿ ಗ್ರಾಮದಲ್ಲಿ ವಾಸವಾಗಿರುವ ಪಿರ್ಯಾದಿ ಮೋಳಿ ಎಂಬವರ ಮಗ ಪ್ರಿನ್ಸ್ ನು ಮಾಪಿಳ್ಳೆತೋಡು ಬಾಜಿ ಎಂಬವರಲ್ಲಿ ಶಾಮಿಯಾನ ಕೆಲಸ ಮಾಡಿಕೊಂಡಿದ್ದು ದಿನಾಂಕ 4/01/2017 ರಂದು ಬೆಳಿಗ್ಗೆ 7-00 ಗಂಟೆಗೆ ಪಿರ್ಯಾದಿಯವರು ಗೋಣಿಕೊಪ್ಪ ಆಸ್ಪತ್ರೆಯಲ್ಲಿ ರುವಾಗ್ಗೆ ಮಗ ಪ್ರಿನ್ಸ್ ನು ಆಸ್ಪತ್ರೆಗೆ ಬಂದು ನಾನು ವಿರಾಜಪೇಟೆಯಲ್ಲಿರುವ ನನ್ನ ಸ್ನೇಹಿತ ಅಭಿಷೇಕ್ ರವರ ಮನೆಗೆ ಹೋಗಿ ಬರುತ್ತೇನೆಂದು ಹೇಳಿ ಹೋಗಿದ್ದು ಅದೇ ದಿನ ರಾತ್ರಿ ಪಿರ್ಯಾದಿಯವರು ಮಗನ ಮೊಬೈಲ್ ಗೆ ಕರೆ ಮಾಡಿದಾಗ ಸ್ವಿಚ್ ಆಪ್ ಆಗಿದ್ದು ನಂತರ ಸ್ನೇಹಿತ ಅಭಿಷೇಕ್ ನ ಮೊಬೈಲ್ ಗೆ ಕರೆ ಮಾಡಿ ಕೇಳಿದಾಗ ರಾತ್ರಿ 9-00 ಗಂಟೆಗೆ ವಿರಾಜಪೇಟೆ ಬಸ್ ನಿಲ್ದಾಣಕ್ಕೆ ಬಿಟ್ಟು ಬಂದಿರುವುದಾಗಿ ತಿಳಿದು ಬಂದಿದ್ದು, ಆದರೆ ಮಗ ಮನೆಗೆ ಬಾರದೇ ಕಾಣೆಯಾಗಿರುತ್ತಾನೆಂದು ಫಿರ್ಯಾದಿ ಮೋಳಿರವರು ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Monday, February 13, 2017

ಮೋಟಾರ್ ಸೈಕಲಿಗೆ ಲಾರಿ ಡಿಕ್ಕಿ ಸವಾರ ಸಾವು:
     ಮೋಟಾರ್ ಸೈಕಲ್ ಗೆ ಲಾರಿ ಡಿಕ್ಕಿಯಾದ ಪರಿಣಾಮ ಸವಾರ ಸಾವನಪ್ಪಿದ ಘಟನೆ ಶ್ರೀಮಂಗಲ ಠಾಣಾ ವ್ಯಾಪ್ತಿಯ ಚಿಕ್ಕಮಂಡೂರು ಗ್ರಾಮದಲ್ಲಿ ನಡೆದಿದೆ.  ಶ್ರೀಮಂಗಲ ವ್ಯಾಪ್ತಿಯ ತೂಚಮಕೇರಿ ಗ್ರಾಮದ ನಿವಾಸಿ ರವಿ ಎಂಬವರ ಮಗ ರೋಷನ್ ಎಂಬವರು ದಿನಾಂಕ 12-2-2017 ರಂದು ತಮ್ಮ ಬಾಪ್ತು ಮೋಟಾರ್ ಸೈಕಲಿನಲ್ಲಿ ಪೊನ್ನಂಪೇಟೆ ಕಡೆಯಿಂದ ತೂಚಮಕೇರಿಯಲ್ಲಿರುವ ತಮ್ಮ ಮನೆಯ ಕಡೆಗೆ ಹೋಗುತ್ತಿದ್ದಾಗ ಚಿಕ್ಕಮಂಡೂರು ಗ್ರಾಮದಲ್ಲಿ ಎದುರುಗಡೆಯಿಂದ ಬಂದ ಲಾರಿಯೊಂದು ಡಿಕ್ಕಿಯಾದ ಪರಿಣಾಮ ತೀವ್ರವಾಗಿ ಗಾಯಗೊಂಡ ರೋಷನ್ ರವರನ್ನು ಆಸ್ಪತ್ರೆಗೆ ಸಾಗಿಸುವಾಗ ಸಾವನಪ್ಪಿದ್ದು, ಶ್ರೀಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಾದಚಾರಿಗೆ ಬೈಕ್ ಡಿಕ್ಕಿ, ಗಾಯ:
     ದಿನಾಂಕ 11-2-2017 ರಂದು ಶಿವ ಎಂಬ ವ್ಯಕ್ತಿ ತನ್ನ ಪತ್ನಿಯೊಂದಿಗೆ ವಿರಾಜಪೇಟೆ ನಗರದ ಶಿವಾಸ್ ಜಂಕ್ಷನ್ ಬಳಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಬಸ್ ನಿಲ್ದಾಣದ ಕಡೆಯಿಂದ ವ್ಯಕ್ತಿಯೋರ್ವ ತನ್ನ ಮೋಟಾರ್ ಸೈಕಲನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ನಡೆದುಕೊಂಡು ಹೋಗುತ್ತಿದ್ದ ಶಿವರವರಿಗೆ ಡಿಕ್ಕಿಪಡಿಸಿದ ಪರಿಣಾಮ ಸದರಿ ಶಿವರವರು ಗಾಯಗೊಂಡಿದ್ದು, ಅವರನ್ನು ವಿರಾಜಪೇಟೆ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮನುಷ್ಯ ಕಾಣೆ:
     ಕುಶಾಲನಗರ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಗುಮ್ಮನಕೊಲ್ಲಿ ಯಲ್ಲಿ ವಾಸವಾಗಿರುವ ಶ್ರೀಮತಿ ಜಯಲಕ್ಷ್ಮಿ ಎಂಬವರ ಪತಿ 49 ವರ್ಷ ಪ್ರಾಯದ ಲೋಕೇಶ್ ಎಂಬ ವ್ಯಕ್ತಿ ದಿನಾಂಕ 1-2-2017 ರಂದು ಮನೆಯಿಂದ ಹೊರಗಡೆ ಹೋದವರು ಮತ್ತೆ ಮನೆಗೆ ಬಾರದೆ ಕಾಣೆಯಾಗಿರುತ್ತಾರೆಂದು ಶ್ರೀಮತಿ ಜಯಲಕ್ಷ್ಮಿರವರು ನೀಡಿದ ದೂರಿನ ಮೇರೆಗೆ ಕುಶಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೀಗಮುರಿದು ಕಳ್ಳತನ:
    ಸೋಮವಾರಪೇಟೆ ಠಾಣಾ ಸರಹದ್ದಿನ ಅಬ್ಬೂರುಕಟ್ಟೆ ಗ್ರಾಮದ ನಿವಾಸಿ ಕೆ.ಗಣೇಶ್ ಎಂಬವರ ಮನೆಗೆ ದಿನಾಂಕ 10-2-2017 ರಿಂದ 12-2-2017ರ ನಡುವಿನ ಅವದಿಯಲ್ಲಿ ಯಾರೋ ಕಳ್ಳರು ಮನೆಯ ಬೀಗವನ್ನು ಮುರಿದು ಮನೆಗೆ ಪ್ರವೇಶಿಸಿ ಮನೆಯ  ಗಾಡ್ರೇಜ್ ಬೀರ್ ಮತ್ತು ಟ್ರಂಕ್ ಗಳನ್ನು ಒಡೆದು ಅದರಲ್ಲಿದ್ದ  ಬಟ್ಟೆ ಹಾಗೂ ಇತರೇ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿ  ಸುಮಾರು 2,000/- ರೂ ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಹಣದ ವಿಚಾರದಲ್ಲಿ ಜಗಳ, ವ್ಯಕ್ತಿಯ ಕೊಲೆಗೆ ಯತ್ನ:
     ಹಣದ ವಿಚಾರದಲ್ಲಿ ಜಗಳ ಮಾಡಿ ವ್ಯಕ್ತಿಯ ದಾರಿ ತಡೆದು ಕಬ್ಬಿಣದ ರಾಡಿನಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಘಟನೆ ಸೋಮವಾರಪೇಟೆ ನಗರದ ಜನತಾ ಕಾಲೋನಿಯಲ್ಲಿ ನಡೆದಿದೆ. ಜನತಾ ಕಾಲೋನಿ ನಿವಾಸಿ ಪ್ರಮೋದ್ ಕುಮಾರ್ ಎಂಬವರು ದಿನಾಂಕ 7-2-2017 ರಂದು ರಾತ್ರಿ 11-30 ಗಂಟೆಯ ಸಮಯದಲ್ಲಿ ನಗರದ ಸುವಿಧ್ ಬಾರಿನ ಮುಂದುಗಡೆ ನಡೆದುಕೊಂಡು ಹೋಗುತ್ತಿದ್ದಾಗ ಆರೋಪಿ ಹರ್ಷಿತ್ ಎಂಬವರು ಸ್ಕೂಟರಿನಲ್ಲಿ ಬಂದು ಪ್ರಮೋದ್ ಕುಮಾರ್ ರವರನ್ನು ತಡೆದು ನಿಲ್ಲಿಸಿ ಹಣದ ವಿಚಾರದಲ್ಲಿ ಜಗಳ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಕೊಲೆ ಮಾಡುವ ಉದ್ದೇಶದಿಂದ ಕಬ್ಬಿಣದ ರಾಡಿನಿಂದ ಪ್ರಮೋದ್ ಕುಮಾರ್ ರವರ ತಲೆಯ ಮೇಲೆ ಹಲ್ಲೆ ಮಾಡಿ ಕೊಲೆಗೆ ಯತ್ನಿಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
 
 
 

Sunday, February 12, 2017


ಅಕ್ರಮ ಮರಳು ಸಾಗಾಟ ಲಾರಿಗಳ ವಶ
                ದಿನಾಂಕ 10-2-2017 ರಂದು ಶನಿವಾರಸಂತೆಯ ಪೊಲೀಸ್ ಉಪ ನಿರೀಕ್ಷಕರಾದ ಮರಿಸ್ವಾಮಿಯವರು ರಾತ್ರಿ ಗಸ್ತುವಿನಲ್ಲಿರುವಾಗ ಲಾರಿಯಲ್ಲಿ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದಾರೆಂಬ ಮಾಹಿತಿ ಬಂದ ಮೇರೆಗೆ ಕೊಡ್ಲಿಪೇಟೆಯಲ್ಲಿ ಲಾರಿಗಳನ್ನು ಚೆಕ್ ಮಾಡಲಾಗಿ 4 ಲಾರಿಗಳಲ್ಲಿ ಪರವಾನಿಗೆ ಇಲ್ಲದೇ ಮರಳನ್ನು ಸಾಗಾಟ ಮಾಡುತ್ತಿದ್ದುದ್ದನ್ನು ಪತ್ತೆಹಚ್ಚಿ ಲಾರಿಗಳನ್ನು ವಶಕ್ಕೆ ಪಡೆದು 4 ಪ್ರತ್ಯೇಕ ಪ್ರಕರಣವನ್ನು ಲಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

Saturday, February 11, 2017

ಅಸ್ವಾಭಾವಿಕ ಸಾವು
                       ಕುಟ್ಟ ಬಳಿಯ ಹೂವಿನ ಕಾಡು ತೋಟದ ನಿವಾಸಿ ತಮಿಳರ ಜಯಮೂರ್ತಿ ಎಂಬಾತನ ದೇಹವು ದಿನಾಂಕ 09/02/2017ರಂದು ಕುಟ್ಟ ಬಳಿಯ ನಾಥಂಗಲ್‌ ಬಳಿಯ ಹೋಟೆಲ್‌ ಒಂದರ ಮೆಟ್ಟಿಲ ಬಳಿ  ಮೃತ ಸ್ಥಿತಿಯಲ್ಲಿ ಪತ್ತೆಯಾಗಿದ್ದು ವಿಪರೀತ ಮದ್ಯ ವ್ಯಸನಿಯಾದ ಈತನು ವಿಪರೀತ ಮದ್ಯಪಾನ ಮಾಡಿ ಹೋಟೆಲಿನಿಂದ ಮೆಟ್ಟಿಲಿನಿಂದ ಬಿದ್ದು ಸಾವಿಗೀಡಾಗಿರಬಹುದೆಂಬುದಾಗಿ ಸಂಶಯಿಸಿ ನೀಡಿದ ದೂರಿನ ಮೇರೆಗೆ ಕುಟ್ಟ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ  ಕೈಗೊಂಡಿದ್ದಾರೆ. 

ಟ್ರ್ಯಾಕ್ಟರ್ ಮಗುಚಿ ವ್ಯಕ್ತಿಯ ಸಾವು
                        ದಿನಾಂಕ 09/02/2017ರಂದು ಚಿಕ್ಕಮಗಳೂರು ಜಿಲ್ಲೆಯ ನಿವಾಸಿ ಶಂಕರ ಎಂಬವರು ಕಾರುಗುಂದ ಬಳಿಯ ಕಾವ್ಯ ಮಾದಪ್ಪ ಎಂಬವರ ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ತೋಟದೊಳಗೆ ಸುನಿಲ್  ಕುಮಾರ್‌ ಎಂಬಾತನು ಕೆಎ-18-ಟಿಎ-3849ರ ಟ್ರ್ಯಾಕ್ಟರನ್ನು ಅಜಾಗರೂಕತೆಯಿಂದ ಚಾಲಿಸಿದ ಪರಿಣಾಮ ಟ್ರ್ಯಾಕ್ಟರ್‌ ನಡೆದುಕೊಂಡು ಹೋಗುತ್ತಿದ್ದ ಶಂಕರರವರ ಮೇಲೆ ಹರಿದು ಶಂಕರರವರು ಮೃತರಾಗಿರುವುದಾಗಿ ನೀಡಿದ ದೂರಿನ ಮೇರೆಗೆ ನಾಪೋಕ್ಲು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ  ಕೈಗೊಂಡಿದ್ದಾರೆ.

ಹಸುಗಳ ಅಸ್ವಾಭಾವಿಕ ಸಾವು
                    ಸಿದ್ದಾಪುರ ಬಳಿಯ ಚೆನ್ನಂಗಿ ಗ್ರಾಮದ ನಿವಾಸಿ ಜೆ.ಎಸ್‌.ರಾಜು ಎಂಬವರು ಅವರ ಎರಡು ಹಸುಗಳನ್ನು ದಿನಾಂಕ  09/02/2017ರಂದು ಮೇಯಲು ಬಿಟ್ಟಿದ್ದು ಎರಡು ಹಸುಗಳು ಸಮೀಪದ ಮಲ್ಲೇಂಗಡ ಬೆಳ್ಯಪ್ಪ ಎಂಬವರ ತೋಟದಲ್ಲಿ ಸಾವಿಗೀಡಾಗಿದ್ದು ಮಲ್ಲೇಂಗಡ ಬೆಳ್ಯಪ್ಪನವರು ಹಸುಗಳಿಗೆ ವಿಷವಿಟ್ಟು ಸಾಯಿಸಿರುವುದಾಗಿ ಸಂಶಯವಿರುತ್ತದೆ ಎಂದು ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆಕೈಗೊಂಡಿದ್ದಾರೆ.

ಮಹಿಳೆ ಆತ್ಮಹತ್ಯೆ
                  ದಿನಾಂಕ 09/02/2017ರಂದು ಕಡಗದಾಳು ಬಳಿಯ ನೀರುಕೊಲ್ಲಿ ನಿವಾಸಿ ಪವನ್‌ಕುಮಾರ್‌ ಎಂಬವರ ಪತ್ನಿ ಸುಜಾತ ಎಂಬಾಕೆಯು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Friday, February 10, 2017

ರಿಕ್ಷಾಕ್ಕೆ ಕಾರು ಡಿಕ್ಕಿ
                           ದಿನಾಂಕ 09/02/2017ರಂದು ಕೊಟ್ಟಮುಡಿ ನಿವಾಸಿ ಸೈಫುಲ್‌ ಎಂಬವರು ಅವರ ತಾಯಿ ಸಾಕಿತೋನ್‌ರವರ ಚಿಕಿತ್ಸೆಯ ಸಲುವಾಗಿ ಕೆಎ-12-ಎ-9508ರ ರಿಕ್ಷಾದಲ್ಲಿ ನಾಪೋಕ್ಲಿನ ಆಸ್ಪತ್ರೆಗೆ ಹೋಗುತ್ತಿರುವಾಗ ಕೊಟ್ಟಮುಡಿ ಮೂರ್ನಾಡು ಜಂಕ್ಷನ್‌ ಬಳಿ ನಾಪೋಕ್ಲು ಕಡೆಯಿಂದ ಕೆಎ-09-ಎಂ-9487ರ ಕಾರನ್ನು ಅದರ ಚಾಲಕ ರಾಧಾಕೃಷ್ಣ ಎಂಬವರು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಸೈಫುಲ್‌ರವರು ಪ್ರಯಾಣಿಸುತ್ತಿದ್ದ ರಿಕ್ಷಾಕ್ಕೆ ಡಿಕ್ಕಿಪಡಿಸಿದ ಪರಿಣಾಮ ಸೈಫುಲ್‌ ಮತ್ತು ಸಾಕಿತೋನ್‌ರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ನಾಪೋಕ್ಲು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಅಕ್ರಮ ಮರಳು ಸಾಗಾಟ ಪ್ರಕರಣ
                         ದಿನಾಂಕ 09/02/2017ರಂದು  ಕುಂದಳ್ಳಿ ಗ್ರಾಮದಿಂದ ಸೋಮವಾರಪೇಟೆ ಕಡೆಗೆ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿರುವ ಬಗ್ಗೆ ದೊರೆತ ಸುಳಿವಿನ ಮೇರೆಗೆ ಸೋಮವಾರಪೇಟೆ ವೃತ್ತ ನಿರೀಕ್ಷಕರಾದ ಪರಶಿವಮೂರ್ತಿರವರು ಸಿಬ್ಬಂದಿಗಳೊಂದಿಗೆ ತೆರಳಿ ಅಬ್ಬಿಮಠ ಬಾಚಳ್ಳಿಗೆ  ಹೋಗುವ ರಸ್ತೆಯ ಬಳಿ ಬಂದ ಕೆಎ-18-ಬಿ-1223ರ ಟಿಪ್ಪರ್ ಲಾರಿಯನ್ನು ತಡೆದು ನಿಲ್ಲಿಸಿದಾಗ ಲಾರಿಯಲ್ಲಿದ್ದ ಮೂವರಲ್ಲಿ ಇಬ್ಬರು ಓಡಿಹೋಗಿದ್ದು ನಂತರ ಲಾರಿಯನ್ನು ಪರಿಶೀಲಿಸಿದಾಗ ಲಾರಿಯಲ್ಲಿ ಸರ್ಕಾರದ ಪರವಾನಗಿಯಿಲ್ಲದೆ ಮರಳನ್ನು ಸಾಗಾಟ ಮಾಡುತ್ತಿದ್ದುದು ಪತ್ತೆಯಾಗಿದ್ದು ಲಾರಿಯಲ್ಲಿದ್ದ ಪ್ರದೀಪ ಎಂಬವನನ್ನು ಬಂಧಿಸಿ ಓಡಿ ಹೋದ ನಂದೀಶ ಮತ್ತು ರಾಕೇಶ ಎಂಬವರನ್ನೊಳಗೊಂಡಂತೆ ಮೂವರ ವಿರುದ್ದ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವಿನಾ ಕಾರಣ ವ್ಯಕ್ತಿಯ ಮೇಲೆ ಹಲ್ಲೆ
                    ದಿನಾಂಕ 09/02/2017ರಂದು ಸೋಮವಾರಪೇಟೆ ಬಳಿಯ ಗಣಗೂರು ನಿವಾಸಿ ಜಿ.ಕೆ.ರವಿ ಎಂಬವರು ಮನೆಯಲ್ಲಿರುವಾಗ ಯತೀಶ ಎಂಬಾತನು ಮನೆಗೆ ಪ್ರವೇಶಿಸಿ ವಿನಾ ಕಾರಣ ರವಿಯವರ ಮೇಲೆ ಫೈಬರ್‌ ಕುರ್ಚಿಯಿಂದ ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವೃದ್ದ ಮಹಿಳೆ ಕಾಣೆ
                       ದಿನಾಂಕ 03/02/2017ರಂದು ಕುಶಾಲನಗರ ಬಳಿಯ ಹಾರಂಗಿ ನಿವಾಸಿ ಮೂರ್ತಿ ಎಂಬವರು ಮತ್ತು ಅವರ ಪತ್ನಿ ಕೆಲಸದ ನಿಮಿತ್ತ ಮನೆಯಿಂದ ಹೊರಗೆ ಹೋಗಿದ್ದು ವಾಪಾಸು ಮನೆಗೆ ಮೂರ್ತಿರವರ ಪತ್ನಿ ಬಂದು ನೋಡಿದಾಗ ಮನೆಯಲ್ಲಿದ್ದ  ಮೂರ್ತಿರವರ ತಾಯಿ 65 ವರ್ಷ ಪ್ರಾಯದ  ವೃದ್ದೆ ಸರಸಮ್ಮ ಎಂಬವರು  ಮನೆಯಲ್ಲಿ ಇಲ್ಲದೆ ಇದ್ದು  ಎಲ್ಲಾಕಡೆ  ಹುಡುಕಿದರೂ ಪತ್ತೆಯಾಗಿರುವುದಿಲ್ಲ ಎಂಬುದಾಗಿ  ನೀಡಿದ  ದೂರಿನ ಮೇರೆಗೆ ಕುಶಾಲನಗರ  ಗ್ರಾಮಾಂತರ  ಪೊಲೀಸರು ಪ್ರಕರಣ ದಾಖಲಿಸಿ  ತನಿಖೆ  ಕೈಗೊಂಡಿದ್ದಾರೆ.

Thursday, February 9, 2017

ಜಾಗದ ವಿಷಯದಲ್ಲಿ ಜಗಳ, 2 ಪ್ರಕರಣಗಳು ದಾಖಲು:

       ಶನಿವಾರಸಂತೆ ಠಾಣಾ ಸರಹದ್ದಿನ ಶೆಟ್ಟಿಗನಹಳ್ಳಿ ಗ್ರಾಮದ ನಿವಾಸಿ ಫಿರ್ಯಾದಿ ಶ್ರೀಮತಿ ಜಿ.ಎಂ. ಶಿವಮಣಿ ಯವರು ತಮ್ಮ ಪತಿಯೊಂದಿಗೆ ದಿನಾಂಕ 07-02-2017 ರಂದು ಸಮಯ 11-30 ಗಂಟೆಗೆ ಶೆಟ್ಟಿಗನಹಳ್ಳಿಯಲ್ಲಿರುವ ತಮ್ಮ ತೋಟಕ್ಕೆ ಹೋಗಿದ್ದಾಗ ಆರೋಪಿಗಳಾದ ಹರೀಶ, ಕಮಲ ಹಾಗು ಭರತ ಎಂಬವರುಗಳು ಅಲ್ಲಿಗೆ ಬಂದು ಜಾಗದ ವಿಷಯದಲ್ಲಿ ಜಗಳ ತೆಗೆದು ದೊಣ್ಣೆಯಿಂದ ಫಿರ್ಯಾದಿಯವರ ಮೇಲೆ ಹಲ್ಲೆನಡೆಸಿ ನೋವನ್ನುಂಟುಮಾಡಿರುತ್ತಾರೆಂದೂ ಅಲ್ಲದೆ ಇದೇ ಪ್ರಕರಣದ ಆರೋಪಿಯಾದ ಶ್ರೀಮತಿ ಕಮಲ ರವರು ಸಹ ಠಾಣೆಗೆ ದೂರನ್ನು ನೀಡಿ ದಿನಾಂಕ 7-2-2017ರಂದು ತನ್ನ ಮಗ ಭರತ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ರಾಜಶೇಖರ ಮತ್ತು ಆತನ ಪತ್ನಿ ಶಿವಮಣಿ ರವರು ಜಗಳ ಮಾಡಿ ಭರತನ ಮೇಲೆ ಹಲ್ಲೆ ನಡೆಸಿರುತ್ತಾರೆಂದು ನೀಡಿದ ದೂರಿನ ಮೇರೆ ಶನಿವಾರಸಂತೆ ಪೊಲೀಸರು ಪ್ರತ್ಯೇಕ 2 ಪರಕರಣಗಳ್ನು ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಅಕ್ರಮ ಪ್ರವೇಶ, ಹಲ್ಲೆ:

   ದಿನಾಂಕ 8-2-2016 ರಂದು ಶನಿವಾರಸಂತೆ ಪೊಲೀಸ್ ಠಾಣಾ ಸರಹದ್ದಿನ ಒಡೆಯನಪುರ ಗ್ರಾಮದ ನಿವಾಸಿ ಶ್ರೀಮತಿ ರಜಿತ ಎಂಬವರು ಒಡೆಯನ ಪುರ ಗ್ರಾಮದ ತಮ್ಮ ಮನೆಯಲ್ಲಿ ಇರುವಾಗ್ಗೆ ಸಮಯ 7:00 ಪಿ.ಎಂ.ಗೆ ಆರೋಪಿ ಶಾಂತಿ ಎಂಬವರು ಫಿರ್ಯಾದಿ ರಜಿತರವರ ಮನೆಗೆ ಬಂದು ಏಕಾಏಕಿ ಅಕ್ರಮ ಪ್ರವೇಶ ಮಾಡಿ ಎಲ್ಲರು ಮನೆಯಿಂದ ಖಾಲಿ ಮಾಡಿ ಎಂದು ಹೇಳಿ ಮನೆಯಲ್ಲಿದ್ದ ಫಿರ್ಯಾದಿ, ಫಿರ್ಯಾದಿಯ ತಂಗಿ ಪ್ರೇಮ, ತಂದೆ ರಾಮೇಗೌಡ ರವರ ಮೇಲೆ ದೊಣ್ಣೆಯಿಂದ ಹಲ್ಲೆ ಮಾಡಿ ನೋವನ್ನುಂಟು ಮಾಡಿದ್ದು ಅಲ್ಲದೆ ಮನೆಗೆ ಬೆಂಕಿಹಚ್ಚಿ ಎಲ್ಲರನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಅಕ್ರಮ ಗಾಂಜಾ ಮಾರಾಟ, ಪ್ರಕರಣ ದಾಖಲು:

     ಕುಶಾಲನಗರ ಗ್ರಾಮಾಂತರ ಠಾಣಾ ಪಿ.ಎಸ್.ಐ. ಜೆ.ಇ. ಮಹೇಶರವರಿಗೆ ದೊರೆತ ಖಚಿತ ವರ್ತಮಾನದ ಮೇರೆಗೆ ದಿನಾಂಕ 8-2-2017 ರಂದು 1-00 ಪಿ.ಎಂ.ಗೆ ಸಿಬ್ಬಂದಿಯೊಂದಿಗೆ ದೊಡ್ಡಬೆಟ್ಟಗೇರಿ ಗ್ರಾಮದ ತೆಪ್ಪಡಕಂಡಿ ತೂಗುಸೇತುವೆಯ ಬಳಿ ಇರುವ ಗೌರಮ್ಮ ಎಂಬವರ ಅಂಗಡಿಯ ಹತ್ತಿರ ಎಂ.ಎಂ. ಗಣೇಶ @ ರವಿ ಎಂಬವರು ಅಕ್ರಮವಾಗಿ ಗಾಂಜಾವನ್ನು ಮಾರಾಟ ಮಾಡುತ್ತಿದ್ದುದನ್ನು ಪತ್ತೆಹಚ್ಚಿ ಸದರಿ ವ್ಯಕ್ತಿಯಿಂದ 100 ಗ್ರಾಂ ಗಾಂಜಾವನ್ನು ವಶಕ್ಕೆ ಪಡೆದುಕೊಂಡು ಆರೋಪಿ ಎಂ.ಎಂ. ಗಣೇಶ @ ರವಿ, ಮರೂರು ಗ್ರಾಮ, ಕೊಪ್ಪ ಅಂಚೆ, ಪಿರಿಯಾಪಟ್ಟಣ ತಾಲೋಕು ರವರನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ. 

 ಬೀಗಮುರಿದು ಕಳ್ಳತನ:

 ದಿನಾಂಕ 7-2-2017 ರಂದು ಪೊನ್ನಂಪೇಟೆ ಠಾಣಾ ಸರಹದ್ದಿನ ಬಾಳೆಲೆ ಎಪಿಸಿಎಂಎಸ್ ಅಂಗಡಿಯ ರೋಲಿಂಗ ಶೆಟ್ಟರ್ಸ್ ನ ಬೀಗವನ್ನು ಯಾರೋ ಕಳ್ಳರು ಮುರಿದು ಅಂಗಡಿಯ ಒಳಗೆ ಪ್ರವೇಶಿಸಿ ಹತ್ಯಾರು ವಿಭಾಗದಲ್ಲಿ ವ್ಯಾಪಾರ ಮಾಡಿ ಇಟ್ಟ ಹಣ ರೂ.2218/- ಗಳನ್ನು ಡ್ರಾಯರ್ ಸಮೇತ ಕಳವು ಮಾಡಿಕೊಂಡು ಹೋಗಿರುವುದಾಗಿ ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Wednesday, February 8, 2017

ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯ ಮೇಲೆ ಹಲ್ಲೆ

                 ದಿನಾಂಕ 5-2-2017 ರಂದು ಸೋಮವಾರಪೇಟೆ ತಾಲೂಕಿನ ಮಾದಾಪುರದ ನಿವಾಸಿ ವಜು ಎಂಬುವವರು ಇಗ್ಗೋಡು ಗ್ರಾಮದ ನಿವಾಸಿ ಆಟೋ ಚಾಲಕ ಶಿವರಾಮ್ ಎಂಬುವವರಿಗೆ ಮಾದಾಪುರ ನಗರದಿಂದ ಬ್ರಾಂದಿಯನ್ನು ತರಲು ಹೇಳಿದ ಮೇರೆಗೆ ತೆಗೆದುಕೊಂಡು ಹೋಗಿ ಕೊಟ್ಟು ಆಟೋ ರಿಕ್ಷಾದ ಬಾಡಿಗೆ ಹಣವನ್ನು ಕೇಳೀದಾಗ ಬಾಡಿಗೆ ಹಣವನ್ನು ಕೊಡುವುದಿಲ್ಲವೆಂದು ಹೇಳಿ ಜಗಳ ತೆಗೆದು ಕಲ್ಲಿನಿಂದ ಮೂಗಿಗೆ ಗುದ್ದಿ ನೋವುಪಡಿಸಿದ್ದು ಈ ಬಗ್ಗೆ ಶಿವರಾಮ್ ರವರು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿರುತ್ತಾರೆ.

ವ್ಯಕ್ತಿಯ ಮೇಲೆ ಹಲ್ಲೆ
                  ವಿರಾಜಪೇಟೆ ತಾಲೂಕಿನ ಕೋತೂರು ಗ್ರಾಮದ ನಿವಾಸಿ ತಮ್ಮಯ್ಯ ಎಂಬುವವರು ರಮೇಶ ಎಂಬುವವರ ಆಸ್ತಿಯನ್ನು ಖರೀದಿಸಿದ್ದು, ತಮ್ಮಯ್ಯನವರು ದಿನಾಂಕ 7-2-2017 ರಂದು ಕೋತೂರುವಿನ ಬಸ್ಸು ತಂಗುದಾಣದ ಮುಂದೆ ನಾಗರಾಜು, ತಿಲಕ ಮತ್ತು ಸಂಪತ್ ರವರೊಂದಿಗೆ ಮಾತನಾಡಿಕೊಂಡಿರುವಾಗ ಅದೇ ಗ್ರಾಮದ ಆಕಾಶ್ ರವರು ಬಂದು ಖರೀದಿಸಿದ ಆಸ್ತಿಯನ್ನು ತನಗೆ ಮಾರಬೇಕೆಂದು ಹೇಳಿ ಜಗಳ ತೆಗೆದು ಹಲ್ಲೆ ನಡೆಸಿದ್ದು ಈ ಬಗ್ಗೆ ತಮ್ಮಯ್ಯನವರು ನೀಡಿದ ದೂರಿಗೆ ಕುಟ್ಟ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Tuesday, February 7, 2017

ಅನಾರೋಗ್ಯದಿಂದ ವ್ಯಕ್ತಿಯ ಸಾವು
                 ಮಡಿಕೇರಿ ನಗರದ ನಿವಾಸಿ ಕಾರ್ಮಿಕ ಮಂಗಲ್ ಗೋಡ್ ಎಂಬುವವರು ದಿನಾಂಕ 05-02-2017 ರಂದು ರಕ್ತ ವಾಂತಿ ಮಾಡಿಕೊಂಡು ಅಸ್ವಸ್ಥರಾಗಿದ್ದು, ಸದರಿಯವರನ್ನು ಚಿಕಿತ್ಸೆಗಾಗಿ ಮಡಿಕೇರಿಯ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆಯ ವೇಳೆ ಸದರಿ ವ್ಯಕ್ತಿಯು ಸಾವನ್ನಪ್ಪಿದ್ದು, ಈ ಬಗ್ಗೆ ಸುನಿಲ್ ಮಹಾನಿ ಎಂಬುವವರು ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Monday, February 6, 2017

ಜೀಪಿಗೆ ಕಾರು ಡಿಕ್ಕಿ
                            ದಿನಾಂಕ 05-02-2017ರಂದು ಸುಂಟಿಕೊಪ್ಪ ಬಳಿಯ ಅಂದಗೋವೆ ನಿವಾಸಿ ನವೀನ್‌ ಕುಮಾರ್‌ ಎಂಬವರು ಅವರ ಪಿಕ್‌ಅಪ್ ಜೀಪು ಸಂಖ್ಯೆ ಕೆಎ-12 ಬಿ 3831 ರಲ್ಲಿ ಅರಕಲಗೋಡಿಗೆ  ಅಡಿಕೆ ಗಿಡ ತರಲು ಹೋಗಿ ವಾಪಾಸು ಬರುತ್ತಿರುವಾಗ ಶಿರಂಗಾಲ ಗ್ರಾಮದ ಸೇತುವೆಯ ಬಳಿ ಇರುವ ಬಸವೇಶ್ವರ ದೇವಾಲಯದ ಬಳಿ ಎದುರುಗಡೆಯಿಂದ ಕೆಎ-03-ಎಡಿ-8437 ರ ಕಾರನ್ನು ಅದರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ನವೀನ್‌ ಕುಮಾರ್‌ರವರ ಪಿಕ್ಅಪ್ ಜೀಪಿಗೆ ಡಿಕ್ಕಿಪಡಿಸಿದ ಪರಿಣಾಮ ಜೀಪು ಹಾಗೂ ಕಾರಿಗೆ ಹಾನಿಯುಂಟಾಗಿದ್ದು ಕಾರಿನಲ್ಲಿದ್ದ ಪ್ರಯಾಣಿಕರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಬೈಕಿಗೆ ಕಾರು ಡಿಕ್ಕಿ
                          ದಿನಾಂಕ 05/02/2017ರಂದು ಸಂಜೆ ಶನಿವಾರಸಂತೆ ಬಳಿಯ ಮಾದರೆ ನಿವಾಸಿ ಮಂಜುನಾಥ ಎಂಬವರ  ಭಾವ ಸದಾಶಿವ, ಅಕ್ಕ ಪವಿತ್ರ, ಮತ್ತು ಚಿಕ್ಕಪ್ಪನ ಮಗಳಾದ ಖುಷಿವರುಗಳು ಶನಿವಾರಸಂತೆಯಿಂದ ಎಡೆಹಳ್ಳಿಕಡೆಗೆ ಸದಾಶಿವರವರ ಮೋಟಾರು ಸೈಕಲ್ ನಂ ಕೆಎ-12-ಎಲ್-6548 ರಲ್ಲಿ ಹೋಗುತ್ತಿರುವಾಗ ವೆಂಟೇಶ್ವರ ಕಲ್ಯಾಣ ಮಂಟಪದ ಹತ್ತಿರ ಚಂಗಡಹಳ್ಳಿ ಕಡೆಯಿಂದ ಶನಿವಾರಸಂತೆಗೆ ಬರುತ್ತಿದ್ದ ಕೆಎ-12-ಎನ್-5905 ರ I-10 ಕಾರನ್ನು ಅದರ ಚಾಲಕ ಗಣೇಶ ಎಂಬಾತನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಮೊಟಾರ್ ಸೈಕಲ್ ಗೆ ಡಿಕ್ಕಿ ಪಡಿಸಿದ ಪರಿಣಾಮ ಬೈಕಿನಲ್ಲಿದ್ದ  ಸದಾಶಿವ, ಪವಿತ್ರ ಮತ್ತು  ಖುಷಿರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಲಾರಿಗೆ ಬೈಕು ಡಿಕ್ಕಿ
                        ದಿನಾಂಕ 05-02-2016 ರಂದು ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ನೇರಳೆ ಗ್ರಾಮದ ನಿವಾಸಿ ಮಂಜುನಾಥ ಸ್ವಾಮಿ ಎಂಬವರು ವಿಆರ್‌ಎಲ್ ಕಂಪನಿಯ ಕೆಎ-25-ಬಿ-4232 ರ ಲಾರಿಯಲ್ಲಿ ಮೈಸೂರಿನಿಂದ ಪಾರ್ಸಲ್ ಗಳನ್ನು ತೆಗೆದುಕೊಂಡು ಮಡಿಕೇರಿಗೆ ಬಂದು ಮಡಿಕೇರಿಯ ವಿಆರ್‌ಎಲ್ ಸಂಸ್ಥೆಯ ಕಚೇರಿಯಲ್ಲಿ ಪಾರ್ಸಲ್ ಗಳನ್ನು ಇಳಿಸಿ ನಂತರ ಲಾರಿಯಲ್ಲಿ ಮಡಿಕೇರಿಯಿಂದ ಮೈಸೂರಿಗೆ ಹೊಗುತ್ತಿರುವಾಗ  ಮಡಿಕೇರಿ ಬಳಿಯ ಸಿಂಕೋನದ ತಿರುವು ರಸ್ತೆಯಲ್ಲಿ  ಲಾರಿಯ ಹಿಂದಿನಿಂದ ಕೆಎ-12-ಕ್ಯೂ-9122 ರ ಮೋಟಾರ್ ಬೈಕ್ ಅನ್ನು ಅದರ ಚಾಲಕನು ಅತೀವೇಗ ಹಾಗೂ ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ಲಾರಿಯ ಹಿಂಬದಿಯ ಮಧ್ಯ ಭಾಗಕ್ಕೆ ಡಿಕ್ಕಿ ಪಡಿಸಿದ ಪರಿಣಾಮ ಬೈಕ್ ಜಖಂಗೊಂಡು ಬೈಕ್ ನ ಚಾಲಕ ಹಾಗೂ ಬೈಕ್ ನ ಹಿಂಬದಿಯಲ್ಲಿ ಇದ್ದವರಿಗೆ ಗಾಯಗಳಾಗಿರುತ್ತದೆಂದು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕಾರು ಅಫಘಾತ
                    ದಿನಾಂಕ 05/02/2017ರಂದು ಕುಶಲನಗರ ನಿವಾಸಿ ಚಂದ್ರಶೇಖರ್ ಎಂಬವರು ಅವರ ಕಾರು ಸಂಖ್ಯೆ ಕೆಎ-05-ಎಂಸಿ-4608 ರ ಇನ್ನೋವಾ ಕಾರಿನಲ್ಲಿ ನವನೀತ್‌ ಮತ್ತು ಲೋಕೇಶ್ ಎಂಬವರೊಂದಿಗೆ ಸೋಮವಾರಪೇಟೆಗೆ ಕೆಲಸ ನಿಮಿತ್ತ ಬರುತ್ತಿರುವಾಗ ಕೋವರ್ ಕೊಲ್ಲಿ ಬಳಿ ಕಾರನ್ನು ಚಾಲನೆ ಮಾಡುತ್ತಿದ್ದ ಲೋಕೇಶ್ ರವರು ಕಾರನ್ನು ಅತಿವೇಗವಾಗಿ ಚಾಲನೆ ಮಾಡಿ  ರಸ್ತೆಯ ಎಡ ಬದಿಯಲ್ಲಿರುವ ಕಾಂಕ್ರಿಟ್ ತಡೆಗೋಡೆಗೆ ಡಿಕ್ಕಿಪಡಿಸಿದ್ದರಿಂದ ಕಾರಿನ ಮುಂಬಾಗ ಸಂಪೂರ್ಣ ವಾಗಿ ಹಾನಿಗೊಂಡಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Sunday, February 5, 2017

ಶಂಕಾಸ್ಪದ ವ್ಯಕ್ತಿಯ ಬಂಧನ
                ದಿನಾಂಕ 04/02/2017ರ ಬೆಳಗಿನ ಜಾವ ಕುಶಾಲನಗರ ಗ್ರಾಮಾಂತರ ಠಾಣೆಯ ಎಎಸ್‌ಐ ಹೆಚ್‌.ಸಿ.ಸ್ವಾಮಿರವರು ಸಿಬ್ಬಂದಿಗಳೊಂದಿಗೆ ಗಸ್ತು ಕರ್ತವ್ಯದಲ್ಲಿರುವಾಗ ಕೂಡ್ಲೂರು ಬಳಿಯ ಎಸ್‌.ಎಲ್‌.ಎನ್‌. ಕಾಫಿ ವರ್ಕ್ಸ್ ಬಳಿ ಅನುಮಾನಾಸ್ಪದವಾಗಿ ನಿಂತಿದ್ದ ಓರ್ವ ವ್ಯಕ್ತಿಯನ್ನು ಕಂಡು ವಿಚಾರಿಸಿದಾಗ ಆತನು ಸುಂಟಿಕೊಪ್ಪ ಬಳಿಯ ನಾಕೂರು ವಾಸಿ ಸುನಿಲ್‌ ಕುಮಾರ್‌ ಎಂಬುದಾಗಿ ತಿಳಿಸಿದ್ದು ಆ ಪ್ರದೇಶದಲ್ಲಿ ಆತನ ಇರುವಿಕೆಯ ಬಗ್ಗೆ ಸೂಕ್ತ ಕಾರಣಗಳನ್ನು ನೀಡಲು ವಿಫಲನಾಗಿದ್ದು ಆತನು ಯಾವುದೋ ಅಪರಾಧ ಕೃತ್ಯ ಎಸಗು ಉದ್ದೇಶದಿಂದ ಅಲ್ಲಿದ್ದಿರಬಹುದೆಂದು ಶಂಕಿಸಿ ಆತನನ್ನು ಠಾಣೆಗೆ ಕರೆತಂದು ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಬಾಲಕನಿಗೆ ಕಾರು ಡಿಕ್ಕಿ
                   ದಿನಾಂಕ 04.02.2017ರಂದು ಕೊಡ್ಲಿಪೇಟೆ ಬಳಿಯ ಮೂದರವಳ್ಳಿ ನಿವಾಸಿ ಎಂ.ಆರ್‌.ಮೂರ್ತಿ ಎಂಬವರ ಮಗ ರೋಹಿತನು ಶನಿವಾರಸಂತೆ ಕಾವೇರಿ ಪಬ್ಲಿಕ್ ಸ್ಕೂಲ್ ಗೆ ಹೋಗಿ ವಾಪಾಸ್ಸು ಬಸ್ಸಿನಲ್ಲಿ ಬಂದು ಮೂದ್ರವಳ್ಳಿ ಬಸ್ ನಿಲ್ದಾಣದಲ್ಲಿ ಬಸ್ ಇಳಿದು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತರುವಾಗ ಕೊಡ್ಲಿಪೇಟೆ ಕಡೆಯಿಂದ ಕೆಎ-12 ಝಡ್ ‍-8297ರ ಕಾರನ್ನು ಅದರ ಚಾಲಕ ಅರುಣ ಕುಮಾರ್ ಎಂಬುವವರು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ರೋಹಿತನಿಗೆ ಡಿಕ್ಕಿ ಪಡಿಸಿದ ಪರಿಣಾಮ ಬಾಲಕ ರೋಹಿತನಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕಾರಿಗೆ ಜೀಪು ಡಿಕ್ಕಿ
                    ದಿನಾಂಕ 04/02/2017ರಂದು ಭಾಗಮಂಡಲ  ವ್ಯಾಪ್ತಿಯ  ಕರಿಕೆ ನಿವಾಸಿ ಮಹಮದ್ ಅಯಾಸ್‌ ಎಂಬವರು ಅವರ ಕುಟುಬದವರೊಂದಿಗೆ ಕೆಎಲ್‌-14-ಕೆ-977ರ ಮಾರುತಿ ಕಾರಿನಲ್ಲಿ ಎಮ್ಮೆಮಾಡು ದರ್ಗಾಕ್ಕೆ ಹೋಗುತ್ತಿರುವಾಗ ಬಲ್ಲಮಾವಟಿ ಗ್ರಾಮದ ಬಳಿ ಕೆಎ-15-ಎಂ-64ರ ಜೀಪನ್ನು ಅದರ ಚಾಲಕ ಕುಂಟೇಗೌಡ ಎಂಬವರು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಕಾರಿಗೆ ಡಿಕ್ಕಿ ಪಡಿಸಿದ ಪರಿಣಾಮ ಕಾರು ಹಾಗೂ ಜೀಪುಗಳಲ್ಲಿದ್ದ ಪ್ರಯಾಣಿಕರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ನಾಪೋಕ್ಲು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕಾಫಿ ಕಳವು
                     ಮರಗೋಡು ಬಳಿಯ ಹೊಸ್ಕೇರಿ ನಿವಾಸಿ ಕೆ.ಕೆ.ಬಸಪ್ಪ ಎಂಬವರು ಅವರ ಕಾಫಿ ತೋಟದಿಂದ ಕುಯ್ಲು ಮಾಡಿದ ಕಾಫಿಯನ್ನು ಅವರ ನಿರ್ಮಾಣದ ಹಂತದಲ್ಲಿರುವ ಹೊಸ ಮನೆಯ ಮುಂಭಾಗದ ಕಣದಲ್ಲಿ ಒಣಗಲು ಹಾಕಿದ್ದು, ದಿನಾಂಕ 04-02-2017 ರಂದು ಬೆಳಿಗ್ಗೆ ಸಮಯ ಕಣದಲ್ಲಿದ್ದ ಕಾಫಿಯನ್ನು ಚೀಲಕ್ಕೆ ತುಂಬಿಸಲು ಹೋದಾಗ ಒಣಗಲು ಹಾಕಿದ್ದ 3 ತಾಟ್ ನಲ್ಲಿದ್ದ ಕಾಫಿಯಲ್ಲಿ ಸುಮಾರು ರೂ.45,000/- ಮೌಲ್ಯದ 15 ರಿಂದ 16 ಚೀಲದಷ್ಟು ಕಾಫಿಯನ್ನು ಯಾರೋ ಕಳವು ಮಾಡಿಕೊಂಡು ಹೋಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಕಾರು ಡಿಕ್ಕಿ
                          ದಿನಾಂಕ 04/02/2017 ರಂದು ಬೆಳಿಗ್ಗೆ  ಬೆಂಗಳೂರು ನಿವಾಸಿ ರಾಜೇಂದ್ರ ರಾಮ್‌ ರಾವ್‌ ಪಾಂಡ್ರೆ ಎಂಬವರು ಅವರ ಕೆಎ-03-ಎಡಿ-9628 ರ ಕಾರಿನಲ್ಲಿ ತಲಕಾವೇರಿ ಕಡೆಗೆ ಹೋಗುತ್ತಿರುವಾಗ ತಲಕಾವೇರಿ ಕಡೆಯಿಂದ ಭಾಗಮಂಡಲ ಕಡೆಗೆ ಬರುತ್ತಿದ್ದ ಕೆಎ- 51 ಡಿ-6556 ರ ಟಾಟಾ ಇಂಡಿಕಾ ಕಾರನ್ನು ಅದರ ಚಾಲಕ ರಾಜೇಶ್‌ ಕುಮಾರ್‌ ಎಂಬವರು  ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಪೂರ್ಣ ಬಲಭಾಗಕ್ಕೆ ಬಂದು ರಾಜೇಂದ್ರ ರಾಮ್‌ ರಾವ್‌ ಪಾಂಡ್ರೆಯವರ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಕಾರಿನ ಮುಂಭಾಗ ಸಂಪೂರ್ಣ ಜಖಂ ಆಗಿರುತ್ತದೆ ಎಂಬುದಾಗಿ ನೀಡಿದ ದೂರಿನ ಮೇರೆಗೆ ಭಾಗಮಂಡಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕಟ್ಟಡ ಕೆಡವಿದ ಪ್ರಕರಣ
                       ದಿನಾಂಕ 01-02-2017ರ ಹಿಂದೆ ಗೋಣಿಕೊಪ್ಪ ಗ್ರಾಮ ಪಂಚಾಯಿತಿಗೆ ಸಂಬಂದಪಟ್ಟ ಕುರಿ ಮಾಂಸ ಅಂಗಡಿ ಮುಂದಿನ ಗ್ರಾಮ ಪಂಚಾಯಿತಿ ಕಟ್ಟಡವನ್ನು ಕೆಎ-12-ಝೆಡ್-8688ರ ಜೆಸಿಬಿ ಯಂತ್ರದ ಚಾಲಕ ಹಾಗೂ ಕೆಎ-17-ಬಿ-9296ರ ಟಿಪ್ಪರ್‌ ಲಾರಿ ಚಾಲಕ ಇಬ್ಬರೂ ಸೇರಿಕೊಂಡು ಯಾವುದೇ ಅನುಮತಿ ಇಲ್ಲದೆ ಕೆಡವಿ ಸಾಮಾಗ್ರಿಗಳನ್ನು ತೆರವುಗೊಳಿಸಿ ಗ್ರಾಮ ಪಂಚಾಯಿತಿಗೆ ನಷ್ಟ ಉಂಟು ಮಾಡಿರುವುದಾಗಿ ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸೆಲ್ವಿರವರು ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 
 
ಬೈಕ್‌ಗೆ ರಿಕ್ಷಾ ಡಿಕ್ಕಿ
                     ದಿನಾಂಕ 04-02-2017ರಂದು ಧನುಗಾಲ ನಿವಾಸಿ ಪಿ.ಕೆ.ಶೇಖರ್‌ ಎಂಬವರು ಅವರ ಮೋಟಾರ್‌‌ ಸೈಕಲ್‌‌ ನಂ ಕೆಎ-12-ಕ್ಯೂ-9663ರಲ್ಲಿ ಹಿಂಬದಿ ಸವಾರ ಸುನಿಲ್‌ರವರನ್ನು ಕೂರಿಸಿಕೊಂಡು ಪರಿಮಳ ಮಂಗಳ ವಿಹಾರದಿಂದ ಉಮಾಮಹಶ್ವರಿ ದೇವಸ್ಥಾನಕಡೆಯಿಂದ ಖಾಸಗಿ ಬಸ್‌ ನಿಲ್ದಾಣಕ್ಕೆಂದು ಹೋಗುತ್ತಿರುವಾಗ ಗೋಣಿಕೊಪ್ಪ ವೃತ್ತ ಕಛೇರಿಯ ಮುಂದಿನ ತಿರುವು ರಸ್ತೆಯಲ್ಲಿ ಎದುರಿನಿಂದ ಆಟೋ ನಂ ಕೆಎ-12-ಬಿ-0687 ನ್ನು ಅದರ ಚಾಲಕ ಚೇತನ್‌ ಎಂಬಾತನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ಮೋಟಾರ್‌‌ ಸೈಕಲ್‌‌ಗೆ ಡಿಕ್ಕಿಪಡಿಸಿದ ಪರಿಣಾಮ ಶೇಖರ್‌ರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.