Sunday, February 5, 2017

ಶಂಕಾಸ್ಪದ ವ್ಯಕ್ತಿಯ ಬಂಧನ
                ದಿನಾಂಕ 04/02/2017ರ ಬೆಳಗಿನ ಜಾವ ಕುಶಾಲನಗರ ಗ್ರಾಮಾಂತರ ಠಾಣೆಯ ಎಎಸ್‌ಐ ಹೆಚ್‌.ಸಿ.ಸ್ವಾಮಿರವರು ಸಿಬ್ಬಂದಿಗಳೊಂದಿಗೆ ಗಸ್ತು ಕರ್ತವ್ಯದಲ್ಲಿರುವಾಗ ಕೂಡ್ಲೂರು ಬಳಿಯ ಎಸ್‌.ಎಲ್‌.ಎನ್‌. ಕಾಫಿ ವರ್ಕ್ಸ್ ಬಳಿ ಅನುಮಾನಾಸ್ಪದವಾಗಿ ನಿಂತಿದ್ದ ಓರ್ವ ವ್ಯಕ್ತಿಯನ್ನು ಕಂಡು ವಿಚಾರಿಸಿದಾಗ ಆತನು ಸುಂಟಿಕೊಪ್ಪ ಬಳಿಯ ನಾಕೂರು ವಾಸಿ ಸುನಿಲ್‌ ಕುಮಾರ್‌ ಎಂಬುದಾಗಿ ತಿಳಿಸಿದ್ದು ಆ ಪ್ರದೇಶದಲ್ಲಿ ಆತನ ಇರುವಿಕೆಯ ಬಗ್ಗೆ ಸೂಕ್ತ ಕಾರಣಗಳನ್ನು ನೀಡಲು ವಿಫಲನಾಗಿದ್ದು ಆತನು ಯಾವುದೋ ಅಪರಾಧ ಕೃತ್ಯ ಎಸಗು ಉದ್ದೇಶದಿಂದ ಅಲ್ಲಿದ್ದಿರಬಹುದೆಂದು ಶಂಕಿಸಿ ಆತನನ್ನು ಠಾಣೆಗೆ ಕರೆತಂದು ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಬಾಲಕನಿಗೆ ಕಾರು ಡಿಕ್ಕಿ
                   ದಿನಾಂಕ 04.02.2017ರಂದು ಕೊಡ್ಲಿಪೇಟೆ ಬಳಿಯ ಮೂದರವಳ್ಳಿ ನಿವಾಸಿ ಎಂ.ಆರ್‌.ಮೂರ್ತಿ ಎಂಬವರ ಮಗ ರೋಹಿತನು ಶನಿವಾರಸಂತೆ ಕಾವೇರಿ ಪಬ್ಲಿಕ್ ಸ್ಕೂಲ್ ಗೆ ಹೋಗಿ ವಾಪಾಸ್ಸು ಬಸ್ಸಿನಲ್ಲಿ ಬಂದು ಮೂದ್ರವಳ್ಳಿ ಬಸ್ ನಿಲ್ದಾಣದಲ್ಲಿ ಬಸ್ ಇಳಿದು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತರುವಾಗ ಕೊಡ್ಲಿಪೇಟೆ ಕಡೆಯಿಂದ ಕೆಎ-12 ಝಡ್ ‍-8297ರ ಕಾರನ್ನು ಅದರ ಚಾಲಕ ಅರುಣ ಕುಮಾರ್ ಎಂಬುವವರು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ರೋಹಿತನಿಗೆ ಡಿಕ್ಕಿ ಪಡಿಸಿದ ಪರಿಣಾಮ ಬಾಲಕ ರೋಹಿತನಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕಾರಿಗೆ ಜೀಪು ಡಿಕ್ಕಿ
                    ದಿನಾಂಕ 04/02/2017ರಂದು ಭಾಗಮಂಡಲ  ವ್ಯಾಪ್ತಿಯ  ಕರಿಕೆ ನಿವಾಸಿ ಮಹಮದ್ ಅಯಾಸ್‌ ಎಂಬವರು ಅವರ ಕುಟುಬದವರೊಂದಿಗೆ ಕೆಎಲ್‌-14-ಕೆ-977ರ ಮಾರುತಿ ಕಾರಿನಲ್ಲಿ ಎಮ್ಮೆಮಾಡು ದರ್ಗಾಕ್ಕೆ ಹೋಗುತ್ತಿರುವಾಗ ಬಲ್ಲಮಾವಟಿ ಗ್ರಾಮದ ಬಳಿ ಕೆಎ-15-ಎಂ-64ರ ಜೀಪನ್ನು ಅದರ ಚಾಲಕ ಕುಂಟೇಗೌಡ ಎಂಬವರು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಕಾರಿಗೆ ಡಿಕ್ಕಿ ಪಡಿಸಿದ ಪರಿಣಾಮ ಕಾರು ಹಾಗೂ ಜೀಪುಗಳಲ್ಲಿದ್ದ ಪ್ರಯಾಣಿಕರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ನಾಪೋಕ್ಲು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕಾಫಿ ಕಳವು
                     ಮರಗೋಡು ಬಳಿಯ ಹೊಸ್ಕೇರಿ ನಿವಾಸಿ ಕೆ.ಕೆ.ಬಸಪ್ಪ ಎಂಬವರು ಅವರ ಕಾಫಿ ತೋಟದಿಂದ ಕುಯ್ಲು ಮಾಡಿದ ಕಾಫಿಯನ್ನು ಅವರ ನಿರ್ಮಾಣದ ಹಂತದಲ್ಲಿರುವ ಹೊಸ ಮನೆಯ ಮುಂಭಾಗದ ಕಣದಲ್ಲಿ ಒಣಗಲು ಹಾಕಿದ್ದು, ದಿನಾಂಕ 04-02-2017 ರಂದು ಬೆಳಿಗ್ಗೆ ಸಮಯ ಕಣದಲ್ಲಿದ್ದ ಕಾಫಿಯನ್ನು ಚೀಲಕ್ಕೆ ತುಂಬಿಸಲು ಹೋದಾಗ ಒಣಗಲು ಹಾಕಿದ್ದ 3 ತಾಟ್ ನಲ್ಲಿದ್ದ ಕಾಫಿಯಲ್ಲಿ ಸುಮಾರು ರೂ.45,000/- ಮೌಲ್ಯದ 15 ರಿಂದ 16 ಚೀಲದಷ್ಟು ಕಾಫಿಯನ್ನು ಯಾರೋ ಕಳವು ಮಾಡಿಕೊಂಡು ಹೋಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಕಾರು ಡಿಕ್ಕಿ
                          ದಿನಾಂಕ 04/02/2017 ರಂದು ಬೆಳಿಗ್ಗೆ  ಬೆಂಗಳೂರು ನಿವಾಸಿ ರಾಜೇಂದ್ರ ರಾಮ್‌ ರಾವ್‌ ಪಾಂಡ್ರೆ ಎಂಬವರು ಅವರ ಕೆಎ-03-ಎಡಿ-9628 ರ ಕಾರಿನಲ್ಲಿ ತಲಕಾವೇರಿ ಕಡೆಗೆ ಹೋಗುತ್ತಿರುವಾಗ ತಲಕಾವೇರಿ ಕಡೆಯಿಂದ ಭಾಗಮಂಡಲ ಕಡೆಗೆ ಬರುತ್ತಿದ್ದ ಕೆಎ- 51 ಡಿ-6556 ರ ಟಾಟಾ ಇಂಡಿಕಾ ಕಾರನ್ನು ಅದರ ಚಾಲಕ ರಾಜೇಶ್‌ ಕುಮಾರ್‌ ಎಂಬವರು  ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಪೂರ್ಣ ಬಲಭಾಗಕ್ಕೆ ಬಂದು ರಾಜೇಂದ್ರ ರಾಮ್‌ ರಾವ್‌ ಪಾಂಡ್ರೆಯವರ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಕಾರಿನ ಮುಂಭಾಗ ಸಂಪೂರ್ಣ ಜಖಂ ಆಗಿರುತ್ತದೆ ಎಂಬುದಾಗಿ ನೀಡಿದ ದೂರಿನ ಮೇರೆಗೆ ಭಾಗಮಂಡಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕಟ್ಟಡ ಕೆಡವಿದ ಪ್ರಕರಣ
                       ದಿನಾಂಕ 01-02-2017ರ ಹಿಂದೆ ಗೋಣಿಕೊಪ್ಪ ಗ್ರಾಮ ಪಂಚಾಯಿತಿಗೆ ಸಂಬಂದಪಟ್ಟ ಕುರಿ ಮಾಂಸ ಅಂಗಡಿ ಮುಂದಿನ ಗ್ರಾಮ ಪಂಚಾಯಿತಿ ಕಟ್ಟಡವನ್ನು ಕೆಎ-12-ಝೆಡ್-8688ರ ಜೆಸಿಬಿ ಯಂತ್ರದ ಚಾಲಕ ಹಾಗೂ ಕೆಎ-17-ಬಿ-9296ರ ಟಿಪ್ಪರ್‌ ಲಾರಿ ಚಾಲಕ ಇಬ್ಬರೂ ಸೇರಿಕೊಂಡು ಯಾವುದೇ ಅನುಮತಿ ಇಲ್ಲದೆ ಕೆಡವಿ ಸಾಮಾಗ್ರಿಗಳನ್ನು ತೆರವುಗೊಳಿಸಿ ಗ್ರಾಮ ಪಂಚಾಯಿತಿಗೆ ನಷ್ಟ ಉಂಟು ಮಾಡಿರುವುದಾಗಿ ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸೆಲ್ವಿರವರು ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 
 
ಬೈಕ್‌ಗೆ ರಿಕ್ಷಾ ಡಿಕ್ಕಿ
                     ದಿನಾಂಕ 04-02-2017ರಂದು ಧನುಗಾಲ ನಿವಾಸಿ ಪಿ.ಕೆ.ಶೇಖರ್‌ ಎಂಬವರು ಅವರ ಮೋಟಾರ್‌‌ ಸೈಕಲ್‌‌ ನಂ ಕೆಎ-12-ಕ್ಯೂ-9663ರಲ್ಲಿ ಹಿಂಬದಿ ಸವಾರ ಸುನಿಲ್‌ರವರನ್ನು ಕೂರಿಸಿಕೊಂಡು ಪರಿಮಳ ಮಂಗಳ ವಿಹಾರದಿಂದ ಉಮಾಮಹಶ್ವರಿ ದೇವಸ್ಥಾನಕಡೆಯಿಂದ ಖಾಸಗಿ ಬಸ್‌ ನಿಲ್ದಾಣಕ್ಕೆಂದು ಹೋಗುತ್ತಿರುವಾಗ ಗೋಣಿಕೊಪ್ಪ ವೃತ್ತ ಕಛೇರಿಯ ಮುಂದಿನ ತಿರುವು ರಸ್ತೆಯಲ್ಲಿ ಎದುರಿನಿಂದ ಆಟೋ ನಂ ಕೆಎ-12-ಬಿ-0687 ನ್ನು ಅದರ ಚಾಲಕ ಚೇತನ್‌ ಎಂಬಾತನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ಮೋಟಾರ್‌‌ ಸೈಕಲ್‌‌ಗೆ ಡಿಕ್ಕಿಪಡಿಸಿದ ಪರಿಣಾಮ ಶೇಖರ್‌ರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.