Wednesday, February 1, 2017

ಕಾರು ಅಪಘಾತ

                 ದಿನಾಂಕ 28-1-2016 ರಂದು ತಾತ್ಕಾಲಿಕ ನೊಂದಣಿ ಸಂಖ್ಯೆಯ KL-14-G-TEMP-8453 ರ ಕಾರನ್ನು ಚಾಲಕ ಕೇರಳ ರಾಜ್ಯದ ಕಾಸರಗೋಡುವಿನ ನಿವಾಸಿ ಶಫೀಕ್ ರವರು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿ ಮಡಿಕೇರಿ ಸಂಪಾಜೆ ರಸ್ತೆಯ ಕಾಟಗೇರಿ ಎಂಬಲ್ಲಿ ಕಾರು ಅಪಘಾತವಾಗಿ ಕಾರು ಜಖಂಗೊಂಡಿದ್ದು ಈ ಬಗ್ಗೆ ಕಾಸರಗೋಡುವಿನ ನಿವಾಸಿ ಮುಜೀಬ್ ರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ವ್ಯಕ್ತಿಯ ಆತ್ಮಹತ್ಯೆ

                  ಜೀವನದಲ್ಲಿ ಜಿಗುಪ್ಸೆಗೊಂಡು ವ್ಯಕ್ತಿಯೊಬ್ಬ ನೇಣು ಬಿಗಿದುಕೊಂಡು ಆತ್ಮ ಹತ್ಯೆ ಮಾಡಿಕೊಂಡಿರುವ ಘಟನೆ ವಿರಾಜಪೇಟೆ ತಾಲೂಕಿನ ಕೈಕೇರಿಯಲ್ಲಿ ನಡೆದಿರುತ್ತದೆ. ಕೊಡಂದೇರ ತಮ್ಮಯ್ಯನವರ ಲೈನ್ ಮನೆಯಲ್ಲಿ ವಾಸವಿರುವ ಪಣಿಯವರವರ ಮಾದರವರು ತನ್ನ ಪತ್ನಿಯೊಂದಿಗೆ ಆಗಾಗ ಜಗಳ ಮಾಡುತ್ತಿದ್ದು, ಪತ್ನಿ ತವರು ಮನೆಗೆ ಹೋಗಿ ಬಾರದೇ ಇದ್ದು ಇದೇ ವಿಚಾರದಲ್ಲಿ ಜಿಗುಪ್ಸೆಗೊಂಡು ಮದ್ಯಪಾನ ಮಾಡಿ ದಿನಾಂಕ 30-01-2017 ರಂದು ರಾತ್ರಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಈ ಬಗ್ಗೆ ಆತನ ತಂದೆ ಬೋಜರವರು ನೀಡಿದ ಪುಕಾರಿಗೆ ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಮೋಟಾರು ಸೈಕಲಿಗೆ ವ್ಯಾನು ಡಿಕ್ಕಿ
                ಮೋಟಾರು ಸೈಕಲಿಗೆ ಹಿಂಬದಿಯಿಂದ ಮಿನಿ ವ್ಯಾನು ಡಿಕ್ಕಿಪಡಿಸಿದ ಪ್ರಕರಣ ಸೋಮವಾರಪೇಟೆ ತಾಲೂಕಿನ ಕರಡಿಗೋಡುವಿನಲ್ಲಿ ನಡೆದಿರುತ್ತದೆ. ದಿನಾಂಕ 31-1-2017 ರಂದು ಸೋಮವಾರಪೇಟೆಯ ಜನತಾ ಕಾಲೋನಿಯ ನಿವಾಸಿ ಮಂಜುನಾಥರವರು ಮೋಟಾರು ಸೈಕಲಿನಲ್ಲಿ ತನ್ನ ಪತ್ನಿಯೊಂದಿಗೆ ಕೂಗೇಕೋಡಿ ಎಂಬಲ್ಲಿಗೆ ತಲುಪುವಾಗ ಹಿಂದುಗಡೆಯಿಂದ ಮಾರುತಿ ಓಮಿನಿ ವ್ಯಾನ್ನನು ಅದರ ಚಾಲಕ ಅಜಾಗರೂಕತೆಯಿಂದ ಚಾಲನೆಮಾಡಿಕೊಂಡು ಹೋಗಿ ಡಿಕ್ಕಿಪಡಿಸಿದ್ದು, ಮಂಜುನಾಥ ಮತ್ತು ಆತನ ಪತ್ನಿಯವರಿಗೆ ಗಾಯವಾಗಿರುವುದಾಗಿ ಮಂಜುನಾಥನವರು ನೀಡಿದ ಪುಕಾರಿಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.