Friday, February 3, 2017

ಹಣದ ವಿಚಾರದಲ್ಲಿ ವ್ಯಕ್ತಿಯ ಕೊಲೆ:
 
     ಹಣದ ವಿಚಾರದಲ್ಲಿ ಇಬ್ಬರ ನಡುವೆ ಜಗಳ ಏರ್ಪಟ್ಟು, ಒಬ್ಬಾತ ಕೊಲೆಗೀಡಾಡ ಘಟನೆ ಗೋಣಿಕೊಪ್ಪ ನಗರದಲ್ಲಿ ನಡೆದಿದೆ.  ದಿನಾಂಕ 28-1-2017 ರಂದು ಗೋಣಿಕೊಪ್ಪ ನಗರದ 2ನೇ ವಿಭಾಗದ ನಿವಾಸಿಗಳಾದ ಕೂಲಿ ಕಾರ್ಮಿಕ ಜಿ. ಗಿರೀಶ ಹಾಗು ಮೋಹನ ಎಂಬವರ ನಡುವೆ ಹಣದ ವಿಚಾರದಲ್ಲಿ ಜಗಳವಾಗಿದ್ದು, ಜಿ. ಗಿರೀಶ ಎಂಬಾತ ಮೋಹನನ ಮೇಲೆ ಚೂರಿಯಿಂದ ತಿವಿದು ಗಾಯಪಡಿಸಿದ್ದು,  ಸದರಿ ಗಾಯಾಳು ಮೋಹನನನ್ನು ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲಿಸಿದ್ದು ದಿನಾಂಕ 2-2-2017 ರಂದು ಸದರಿ ಮೋಹನ ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ್ದು, ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಜರುಗಿಸಿರುತ್ತಾರೆ.
 
ಯುವಕ ಕಾಣೆ, ಪ್ರಕರಣ ದಾಖಲು: 
 
     ಮನೆಯಿಂದ ರಿಪೇರಿಗೆ ನೀಡಿದ ಮಾರುತಿ ವ್ಯಾನ್ ವಾಹನವನ್ನು ತರುವುದಾಗಿ ಹೇಳಿ ಹೋದ ವ್ಯಕ್ತಿಯೋರ್ವ ಕಾಣೆಯಾದ ಬಗ್ಗೆ ವರದಿಯಾಗಿದೆ.  ವಿರಾಜಪೇಟೆ ಗ್ರಾಮಾಂತರ ಠಾಣಾ ಸರಹದ್ದಿನ ಕಣ್ಣಂಗಾಲ ಗ್ರಾಮದ ನಿವಾಸಿ ವಿ.ಎ. ಮಂಜಯ್ಯ ಎಂಬವರ ಮಗ ವಿ.ಎಂ. ಸುಮನ್ ಎಂಬ ವ್ಯಕ್ತಿ ದಿನಾಂಕ 30-1-2017 ರಂದು ತನ್ನ ಬಾಪ್ತು ಮಾರುತಿ ವ್ಯಾನ್ ನ್ನು ರಿಪೇರಿ ಕೆಲಸಕ್ಕೆಂದು ವರ್ಕ್ ಶಾಫ್ ಗೆ ಬಿಟ್ಟಿದ್ದು ಅದನ್ನು ತರುವುದಾಗಿ ಹೇಳಿ ಮನೆಯಿಂದ ಹೋಗಿ ನಂತರ ಮನೆಗೆ ಬಾರದೆ ಕಾಣೆಯಾಗಿರುವುದಾಗಿ ಸದರಿಯವರ ತಂದೆ ವಿ.ಎ. ಮಂಜಯ್ಯನವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
 
ಮಹಿಳೆಯ ಅಸಹಜ ಸಾವು:
 
     ಕುಶಾಲನಗರ ಠಾಣಾ ಸರಹದ್ದಿನ ಹೆಗ್ಗಡೆಹಳ್ಳಿ ಗ್ರಾಮದ ನಿವಾಸಿ ಶ್ರೀಮತಿ ಜಾನಕಿ ಎಂಬವರ ಮಗಳಾದ 24 ವರ್ಷದ ಜಲಜಾಕ್ಷಿ ಎಂಬವರು ದಿನಾಂಕ 2-2-2017 ರಂದು ತಮ್ಮ ಮನೆಯಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ರಕ್ತ ವಾಂತಿ ಮಾಡಿದ್ದು ಆಕೆಯನ್ನು ಆಸ್ಪತ್ರೆಗೆ ಚಿಕಿತ್ಸೆಗೆ ಸಾಗಿಸುವಾಗ ರಸ್ತೆ  ಮದ್ಯೆ ಸಾವನಪ್ಪಿದ್ದು, ಈ ಸಂಬಂಧ ಕುಶಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಜರುಗಿಸಿರುತ್ತಾರೆ.