Thursday, February 23, 2017

 ವಿಷ ಸೇವಿಸಿ ಆತ್ಮಹತ್ಯೆ:

     ವಿರಾಜಪೇಟೆ ಗ್ರಾಮಾಂತರ ಠಾಣಾ ಸರಹದ್ದಿನ ಚೆಂಬೆಬಳ್ಳೂರು ಗ್ರಾಮದ ನಿವಾಸಿ ಬಿ.ಎಸ್. ಶಿವಪ್ಪ ಎಂಬವರು ಜೀವನದಲ್ಲಿ ಜುಗುಪ್ಸೆಗೊಂಡು ದಿನಾಂಕ 22-2-2017 ರಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಬಿ.ಎಸ್. ದಿಲೀಪ್ ನವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.

ಬೈಕಿಗೆ ವ್ಯಾನ್ ಡಿಕ್ಕಿ:

     ವಿರಾಜಪೇಟೆ ತಾಲೋಕು ಬೊಳ್ಳುಮಾಡು ಗ್ರಾಮದ ನಿವಾಸಿ ಬೆಳ್ಳಿಯಪ್ಪ ಎಂಬವರು ದಿನಾಂಕ 22-2-2017 ರಂದು ವಿರಾಜಪೇಟೆ ನಗರದಲ್ಲಿ ತಮ್ಮ ಮೋಟಾರ್ ಸೈಕಲಿನಲ್ಲಿ ಹೋಗುತ್ತಿದ್ದಾಗ ಗೋಣಿಕೊಪ್ಪ ರಸ್ತೆಯ ಟೆಂಡರ್ ಚಿಕ್ಕನ್ ಅಂಗಡಿ ಮುಂಭಾಗ ಎದುರಿನಿಂದ ಬಂದ ಮಾರುತಿ ವ್ಯಾನ್ ಡಿಕ್ಕಿಯಾಗಿದ್ದು, ಬೈಕ್ ಸವಾರ ಬೆಳ್ಳಿಯಪ್ಪನವರು ಗಾಯಗೊಂಡಿದ್ದು, ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಬಾಗಿಲು ಮುರಿದು ಚಿನ್ನಾಭರಣ ಕಳವು:

     ದಿನಾಂಕ 22-2-2017 ರಂದು ಸೋಮವಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಅಬ್ಬೂರುಕಟ್ಟೆ ಗ್ರಾಮದ ನಿವಾಸಿ ಜಯಮ್ಮ ಎಂಬವರ ಮನೆಯ ಹಿಂಬಾಗಿಲನ್ನು ತೆರೆದು ಒಳನುಗ್ಗಿದ ಯಾರೋ ಕಳ್ಳರು ಮನೆಯ ಒಳಗಿನಲ್ಲಿಟ್ಟಿದ್ದ ಗಾಡ್ರೇಜ್ ಬೀರುವಿನಿಂದ (1) 38 ಗ್ರಾಂ ತೂಕದ ಒಂದು ಚಿನ್ನದ ಲಾಂಗ್ ಸರ,(2) 38 ಗ್ರಾಂ ತೂಕದ ಒಂದು ಚಿನ್ನದ ನೆಕ್ಲೇಸ್, (3) 26 ಗ್ರಾಂ ತೂಕದ 2 ಚಿನ್ನದ ಬಳೆಗಳು, (4) 30 ಗ್ರಾಂ ತೂಕದ 2 ಚಿನ್ನದ ಬಳೆಗಳು,(5) 3 ಜೊತೆ ಚಿನ್ನದ ಓಲೆ ಅಂದಾಜು 12 ಗ್ರಾಂ, (6) 3 ಚಿನ್ನದ ಉಂಗುರ ಅಂದಾಜು 14 ಗ್ರಾಂ, (7) 3 ಜೊತೆ ಬೆಳ್ಳಿ ಕಾಲು ಚೈನು ಅಂದಾಜು 100 ಗ್ರಾಂ 8) ಸುಮಾರು 30,000/- ಮತ್ತು ಫಿರ್ಯಾದಿ ಜಯಮ್ಮನವರ ಮಗನ ಕೋಣೆಯಲ್ಲಿದ್ದ ಗಾಡ್ರೇಜ್ ಬೀರುವಿನಲ್ಲಿಟ್ಟ ಅಂದಾಜು 30 ಗ್ರಾಂ ತೂಕದ ಒಂದು ಬೆಳ್ಳಿ ಚೈನ್ ನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಕಳ್ಳತನವಾದ ಒಟ್ಟು ಚಿನ್ನಾಭರಣ ಮತ್ತು ನಗದು ಮೊತ್ತ 4,20,000/-ಗಳಾಗಿದ್ದು, ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.  

ಆಟೋ ರಿಕ್ಷಾಕ್ಕೆ ಬೈಕ್ ಡಿಕ್ಕಿ:

    ಸೋಮವಾರಪೇಟೆ ತಾಲೋಕು ನಂಜರಾಯಪಟ್ಟಣದ ನಿವಾಸಿ ಲತಿಫುದ್ದೀನ್ ಎಂಬವರು ದಿನಾಂಕ 22/2/2017 ರಂದು ಸಮಯ 07-30 ಪಿ.ಎಂಗೆ ಕುಶಾಲನಗರದಿಂದ ನಂಜರಾಯಪಟ್ಟಣದ ತಮ್ಮ ಮನೆಗೆ ತಮ್ಮ ಬಾಪ್ತು ಕೆ ಎ 12 ಎ 7379 ರ ಆಟೋವನ್ನು ಚಾಲನೆ ಮಾಡಿಕೊಂಡು ಹೋಗುತ್ತಿರುವಾಗ್ಗೆ ನಂಜರಾಯಪಟ್ಟಣದ ಮಸೀದಿ ಮುಂದೆ ಎದುರುಗಡೆಯಿಂದ ಬಂದ ಕೆ ಎ 12 ಹೆಚ್ 684 ರ ಬೈಕ್ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಬಂದು ಲತಿಫುದ್ದೀನ್ ರವರ ಆಟೋಕ್ಕೆ ಡಿಕ್ಕಿ ಪಡಿಸಿದ ಪರಿಣಾಮ ಆಟೋ ಗ್ಲಾಸ್ ಒಡೆದುಜಖಂಗೊಂಡಿದ್ದು ಬೈಕ್ ಸವಾರ ರಸ್ತೆಯಲ್ಲಿ ಬಿದ್ದು ಗಾಯಗೊಂಡಿದ್ದು, ಕುಶಾಲನಗರ ಟ್ರಾಫಿಕ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. 

ಅಕ್ರಮ ಮರ ಸಾಗಾಟ: 

     ಅಕ್ರಮವಾಗಿ ಲಾರಿಯಲ್ಲಿ ಮರಳನ್ನು ಸಾಗಾಟ ಮಾಡುತ್ತಿದ್ದುದನ್ನು ಪತ್ತೆಹಚ್ಚಿದ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ದಿನಾಂಕ 22-2-2017 ರಂದು ಶನಿವಾರಸಂತೆ ಠಾಣಾಧಿಕಾರಿ ಹೆಚ್.ಎಂ. ಮರಿಸ್ವಾಮಿರವರಿಗೆ ಬಂದ ಮಾಹಿತಿ ಆದಾರದ ಮೇರೆಗೆ ಸಿಬ್ಬಂದಿಯೊಂದಿಗೆ ಠಾಣಾ ಸರಹದ್ದಿನ ಕಾಜೂರು ಗ್ರಾಮದ ಐಶ್ವರ್ಯ ಇಟ್ಟಿಗೆ ಬಳಿ ಒಂದು ಲಾರಿಯಲ್ಲಿ ಅಕ್ರಮವಾಗಿ ಬಳಂಜಿ ಮರಗಳನ್ನು ತುಂಬಿಸಿ ಸಾಗಾಟ ಮಾಡಲು ಇಟ್ಟಿದ್ದನ್ನು ಪತ್ತೆಹಚ್ಚಿ, ಆರೋಪಿ ಸಿ.ಎಲ್. ರೇವಣ್ಣ, ಗುಂಡೂರಾವ್ ಬಡಾವಣೆ ರವರನ್ನು ಮತ್ತು ಲಾರಿಯನ್ನು ವಶಕ್ಕೆ ಪಡೆದು ಆರೋಪಿ ವಿರುದ್ಧ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.