Tuesday, February 28, 2017

ಆಟೋ ಮಗುಚಿ ಬಿದ್ದು ಪ್ರಯಾಣಿಕರಿಗೆ ಗಾಯ
                   ಆಟೋವನ್ನು ಚಾಲಕ ಅಜಾಗರೂಕತೆಯಿಂದ ಚಾಲನೆ ಮಾಡಿ ಮಗುಚಿ ಬಿದ್ದು ಪ್ರಯಾಣಿಕರಿಗೆ ಗಾಯವಾದ ಘಟನೆ ಗೋಣಿಕೊಪ್ಪಲುವಿನ ಹರಿಶ್ಚಂದ್ರಪುರದಲ್ಲಿ ವರದಿಯಾಗಿದೆ. ದಿನಾಂಕ 27-02-2017 ರಂದು ಮಾಯಮುಡಿ ಗ್ರಾಮದ ನಿವಾಸಿಯಾದ ಖಾಸಿಂ ಮಾಲಿಕ್ ಎಂಬುವವರು ಅಬ್ಬಾಸ್ ಮತ್ತು ಆತನ ಪತ್ನಿ, ಮಕ್ಕಳ ಜೊತೆ ಕೆಎ-12-ಎ-2125 ರ ಆಟೊರಿಕ್ಷಾದಲ್ಲಿ ಮಾಯಮುಡಿಯಿಂದ ಗೋಣಿಕೊಪ್ಪಲುವಿನ ಕಡೆಗೆ ಹೋಗುತ್ತಿರುವಾಗ ಹಿಂಬದಿಯಿಂದ ಬರುತ್ತಿದ್ದ ಜೀಪಿಗೆ ಸೈಡು ಕೊಡುವ ಸಮಯದಲ್ಲಿ ಚಾಲಕ ಕೈಕೇರಿ ಗ್ರಾಮದ ರಿಯಾಜ್ ಎಂಬುವವರು ನಿರ್ಲಕ್ಷತನದಿಂದ ಚಾಲನೆ ಮಾಡಿ ನಿಯಂತ್ರಣ ತಪ್ಪಿ ರಸ್ತೆಯ ಬದಿಗೆ ಮಗುಚಿ ಬಿದ್ದು ಪ್ರಯಾಣಿಕರೆಲ್ಲರಿಗೂ ಗಾಯಗಳಾಗಿದ್ದು ಈ ಬಗ್ಗೆ ಖಾಸಿಂ ಮಾಲಿಕ್ ರವರು ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರರಕಣ ದಾಖಲಾಗಿರುತ್ತದೆ.

ಸಾರ್ವಜನಿಕ ಸ್ಥಳದಲ್ಲಿ ಹೊಡೆದಾಟ

                 ದಿನಾಂಕ 27-2-2017 ರಂದು ವಿರಾಜಪೇಟೆ ನಗರ ಠಾಣೆಯ ಸಿಬ್ಬಂದಿಯವರಾದ ಜಗದೀಶ್ ಮತ್ತು ಲೋಹಿತ್ ರವರು ರಾತ್ರಿ ಗಸ್ತು ಮಾಡುತ್ತಿರುವಾಗ ಸಮಯ 9-15 ಪಿ ಎಂ ಗೆ ಮೂರ್ನಾಡು ಜಂಕ್ಷನ್ ಬಳಿ ಗಣೇಶ ವೈನ್ಸ್ ಅಂಗಡಿಯ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಪರಸ್ಪರ ಹೊಡೆದಾಡುತ್ತಿದ್ದ ಕಡಂಗ ಗ್ರಾಮದ ಮನೋಜ್ ಮತ್ತು ವಿನ್ಸೆಂಟ್, ಕಂಡಂಗಾಲ ಗ್ರಾಮದ ಜೀವನ್ ರವರ ಮೇಲೆ ಜಗದೀಶ್ ರವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿರುತ್ತದೆ.

ಜೀವನದಲ್ಲಿ ಜಿಗುಪ್ಸೆ ವ್ಯಕ್ತಿಯ ಆತ್ಮಹತ್ಯೆ

            ಜೀವನದಲ್ಲಿ ಜಿಗುಪ್ಸೆಗೊಂಡು ವ್ಯಕ್ತಿಯೊಬ್ಬ ನೇಣುಬಿಗಿದುಕೊಂಡು ಆತ್ಮ ಹತ್ಯೆ ಮಾಡಿಕೊಂಡಿರುವ ಘಟನೆ ಸಿದ್ದಾಪುರದಲ್ಲಿ ವರದಿಯಾಗಿದೆ. ಸಿದ್ದಾಪುರದ ಕೆ ಆರ್ ಎಸ್ಟೇಟ್ ನ ಲೈನ್ ಮನೆಯಲ್ಲಿ ವಾಸವಿರುವ ಮಂಜುನಾಥ ಎಂಬುವವರು ವಿಪರಿತ ಮದ್ಯಪಾನ ಮಾಡುತ್ತಿದ್ದು, ತಂಗಿಯ ಮದುವೆಗೆ ಹಣ ಕೊಡಲು ಸಾದ್ಯವಾಗುತ್ತಿಲ್ಲ ಎಂದು ಬೇಸರಮಾಡುತ್ತಿದ್ದು, ಇದೇ ವಿಚಾರದಲ್ಲಿ ಮನನೊಂದು ದಿನಾಂಕ 27-2-2017 ರಂದು ಲೈನ್ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಬಗ್ಗೆ ಮೃತನ ತಂಗಿ ಶಕುಂತಲಾರವರು ನೀಡಿದ ದೂರಿನ ಮೇರೆಗೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಪಾದಚಾರಿಗೆ ಕಾರು ಡಿಕ್ಕಿ

            ದಿನಾಂಕ 27-2-2017 ರಂದು ಚೆನ್ನಯ್ಯನಕೋಟೆಯ ನಿವಾಸಿ ಪಾಪು ಎಂಬುವವರು ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಕೆಎ-05-ಎನ್-1636 ರ ಮಾರುತಿ 800 ಕಾರನ್ನು ಚಾಲಕ ಸುದೀ ಎಂಬುವವರು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೊಗಿ ಹಿಂದಿನಿಂದ ಪಾಪುರವರಿಗೆ ಡಿಕ್ಕಿಪಡಿಸಿ ಗಾಯಗಳಾಗಿದ್ದು, ಈ ಬಗ್ಗೆ ಪಾಪುರವರು ನೀಡಿದ ದೂರಿನ ಮೇರೆಗೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.