Sunday, March 5, 2017

ಬೈಕ್‌ಗೆ ಕಾರು ಡಿಕ್ಕಿ
                          ದಿನಾಂಕ 01/03/2017ರಂದು ಅಮ್ಮತ್ತಿ ಬಳಿಯ ಪುಲಿಯೇರಿ ನಿವಾಸಿ ಶರಣ್‌ರಾಜ್‌ ಎಂಬವರು ಅವರ ಕೆಎ-12-ಎಲ್‌-6628ರ ಮೋಟಾರು ಸೈಕಲ್‌ನಲ್ಲಿ ಸಿದ್ದಾಪುರ ನಗರದಿಂದ ಮನೆಗೆ ಹೋಗುತ್ತಿರುವಾಗ ವಿರಾಜಪೇಟೆ ಕಡೆಯಿಂದ ಕೆಎ-12-ಎನ್‌-343ರ ಸ್ಕಾರ್ಪಿಯೋ ಕಾರನ್ನು ಅದರ ಚಾಲಕ ಸೋಮಯ್ಯ ಎಂಬವರು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಶರಣ್‌ರಾಜ್‌ರವರ ಬೈಕಿಗೆ ಡಿಕ್ಕಿ ಪಡಿಸಿದ ಪರಿಣಾಮ ಶರಣ್‌ರಾಜ್‌ರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕ್ಷುಲ್ಲಕ ಕಾರಣಕ್ಕೆ ಹಲ್ಲೆ
                         ದಿನಾಂಕ 04/03/2017ರಂದು ಶನಿವಾರಸಂತೆ ಚೆನ್ನಳ್ಳಿ ರಸ್ತೆಯ ಬಳಿ ಶನಿವಾರಸಂತೆ ನಿವಾಸಿ ದೇವರಾಜ ಎಂಬವರು ಅಪ್ಪಶೆಟ್ಟಳ್ಳಿ ಗ್ರಾಮದಿಂದ ಕೆಲಸ ಮುಗಿಸಿಕೊಂಡು ಮನೆಗೆ ಬರುತ್ತಿರುವಾಗ ಜಾಬೆಕೋಡಿ ಗ್ರಾಮದ ಮಲ್ಲಪ್ಪ ಎಂಬವರು ಸಿಕ್ಕಿ ದೇವರಾಜರವರು ಮಲ್ಲಪ್ಪನವರ ಮನೆಗೆ ಕೆಲಸಕ್ಕೆ ಹೋಗದ ಕಾರಣಕ್ಕೆ ಜಗಳವಾಡಿ ಕಲ್ಲಿನಿಂದ ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಬೈಕಿಗೆ ಕಾರು ಡಿಕ್ಕಿ
                      ದಿನಾಂಕ 24-02-2017 ರಂದು ಶನಿವಾರಸಂತೆ ಬಳಿಯ ಗೌಡಳ್ಳಿ ನಿವಾಸಿ ಹರೀಶ್‌ ಎಂಬರು ಅವರ ಪಕ್ಕದ ಮನೆಯ ನಿವಾಸಿಯಾದ ಜಿ.ಕೆ.ಮಹೇಶ್ ರವರ ಬೈಕ್ ನಂ ಕೆಎ-46-ಹೆಚ್-6903 ನ್ನು ಪಡೆದುಕೊಂಡು ಸ್ನೇಹಿತನಾದ ರೋಹಿತ್ ರವರನ್ನು ಕರೆದುಕೊಂಡು ಗೌಡಳ್ಳಿ ದೇವಸ್ಥಾದ ಬಳಿ ಬೈಕಿನಲ್ಲಿ ಹೋಗುತ್ತಿರುವಾಗ ಬೀಟಿಕಟ್ಟೆ ಕಡೆಯಿಂದ ಕಾರ್ ನಂ ಕೆಎ-03-ಪಿ-3098 ರ ಚಾಲಕ ಗೋಪಿನಾಥ್‌ ಎಂಬವರು ಕಾರನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ  ಚಾಲಿಸಿಕೊಂಡು ಬಂಧು ಹರೀಶ್‌ರವರು ಚಾಲಿಸುತ್ತಿದ್ದ ಬೈಕಿಗೆ ಡಿಕ್ಕಿ ಪಡಿಸಿದ ಪರಿಣಾಮ ಇಬ್ಬರಿಗೂ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಅಕ್ರಮ ಮರಳು ಸಾಗಾಟ
                           ದಿನಾಂಕ 04/03/2017ರಂದು ಸೋಮವಾರಪೇಟೆ ಠಾಣೆಯ ಪಿಎಸ್‌ಐ ಶಿವಣ್ಣರವರು ಗಸ್ತು ಕರ್ತವ್ಯದಲ್ಲಿರುವಾಗ ಯಡೂರು ಜಂಕ್ಷನ್ ಬಳಿ ಹೆತ್ತೂರು ಗ್ರಾಮದ ಚಂದ್ರಶೇಖರ್‌, ಯೆಸಳೂರು ಗ್ರಾಮದ ಅಶೋಕ್‌, ಕಾರ್ತಿಕ್‌ ಮತ್ತು ಗೊದ್ದು ಗ್ರಾಮದ ಕೌಶಿಕ್‌ ಎಂಬವರು ಕೆಎ-12-ಎ-7684 ಮತ್ತು ಕೆಎ-46-6839ರ ಟಿಪ್ಪರ್ ಲಾರಿಗಳಲ್ಲಿ ಸರ್ಕಾರದ ಪರವಾನಗಿ ಇಲ್ಲದೆ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿರುವುದನ್ನು ಪತ್ತೆ ಹಚ್ಚಿ ಮರಳು ಸಮೇತ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಕಾರಿಗೆ ಜೀಪು ಡಿಕ್ಕಿ
                      ದಿನಾಂಕ 04/03/2017ರಂದು ಸೋಮವಾರಪೇಟೆ ನಗರದ ಬಾಣಾವಾರ ರಸ್ತೆ ನಿವಾಸಿ ಶಿವಕುಮಾರ್‌ ಎಂಬವರು ಅವರ ಕಾರು ಸಂಖ್ಯೆ ಕೆಎ-12-ಜೆಡ್‌-91780ರಲ್ಲಿ ಬಾಬು ಎಂಬವರು ಮತ್ತು ಶಿವಕುಮಾರ್‌ರವರ ಮಗ ಸದಾನಂದರವರೊಂದಿಗೆ ಶನಿವಾರಸಂತೆಯಿಂದ ಸೋಮವಾರಪೇಟೆ ಕಡೆಗೆ ಬರುತ್ತಿರುವಾಗ ನಗರದ ಕುವೆಂಪು ಕಾಲೇಜು ಬಳಿ ಕಲ್ಕಂದೂರು ನಿವಾಸಿ ಶೇಖರ ಎಂಬವರು ಅವರ ಬೊಲೆರೋ ವಾಹನವನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಶಿವಕುಮಾರ್‌ರವರ ಕಾರಿಗೆ ಹಿಂದಿನಿಂದ ಡಿಕ್ಕಿಪಡಿಸಿದ ಪರಿಣಾಮ ಕಾರಿಗೆ ಹಾನಿಯುಂಟಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ವ್ಯಕ್ತಿಯ ಮೇಲೆ ಹಲ್ಲೆ 
                          ದಿನಾಂಕ 02/03/2017ರಂದು ಮಾದಾಪುರ ಬಳಿಯ ಕುಂಬೂರು ನಿವಾಸಿ ಮಹೇಂದ್ರ ಎಂಬವರು ಕುಂಬೂರು ಗ್ರಾಮದ ಜಂಕ್ಷನ್ ಬಳಿ ನಿಂತಿರುವಾಗ ಅಲ್ಲಿಗೆ ಕುಂಬೂರು ನಿವಾಸಿ ಶಿವ ಎಂಬವರು ಅವರ ಪಿಕ್‌ ಅಪ್ ಜೀಪಿನಲ್ಲಿ ಬಂದು ವಿನಾ ಕಾರಣ ಮಹೆಂದ್ರರವರ ಜೊತೆ ಜಗಳವಾಡಿ ಕಬ್ಬಿಣದ ರಾಡಿನಿಂದ ಹಲ್ಲೆ ನಡೆಸಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.