Thursday, March 16, 2017

 ಅಕ್ರಮ ಜೂಜಾಟ ಆರೋಪಿಗಳ ಬಂಧನ

                  ದಿನಾಂಕ 15-3-2017 ರಂದು ವಿರಾಜಪೇಟೆ ಗ್ರಾಮಾಂತರ ಠಾಣಾ ಸರಹದ್ದಿನ ಮಾಕುಟ್ಟ ಉಪ ಠಾಣಾ ವ್ಯಾಪ್ತಿಯ ಕಾಕೆತೋಡು ಭಗವತಿ ಜಾತ್ರೆಯು ಜರುಗಿದ್ದು, ಈ ಸಂದರ್ಭದಲ್ಲಿ ಜೂಜಾಟ ಆಡುತ್ತಿರುವುದಾಗಿ ಬಂದ ಖಚಿತ ವರ್ತಮಾನದ ಮೇರೆಗೆ ಕೊಡಗು ಜಿಲ್ಲಾ ಪೊಲೀಸ್ ಅಧೀಕ್ಷಕರುರವರ ಮಾರ್ಗದರ್ಶನದಲ್ಲಿ ಪಿಐ ಡಿಸಿಬಿ, ಎಂ ಮಹೇಶ್, ಡಿಸಿಐಬಿ ಸಿಬ್ಬಂದಿಯವರಾದ ಹಮೀದ್, ತಮ್ಮಯ್ಯ, ಅನಿಲ್, ವೆಂಕಟೇಶ್, ನಿರಂಜನ್, ವಸಂತ, ಯೋಗೇಶ್, ಗಣೇಶ, ಶೇಷಪ್ಪ, ಶಶಿಧರ ರವರೊಂದಿಗೆ ಮಾಕುಟ್ಟ ರಕ್ಷಿತಾರಣ್ಯದ ಮದ್ಯದಲ್ಲಿ ಜೂಜಾಡುತ್ತಿದ್ದ ಗುಂಪಿನ ಮೇಲೆ ಧಾಳಿ ನಡೆಸಿ 16 ಜನ ಆರೋಪಿಗಳನ್ನು ವಶಕ್ಕೆ ಪಡೆದು, 55,980 ರೂ ನಗದು ಹಾಗೂ ಜೂಜಾಟಕ್ಕೆ ಬಳಸಿದ ವಸ್ತುಗಳನ್ನು ವಶಕ್ಕೆ ಪಡೆದಿದ್ದು, ಈ ಬಗ್ಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

 ಆಕಸ್ಮಿಕ ಮರಣ

             ದಿನಾಂಕ 14-3-2017 ರಂದು ವಿರಾಜಪೇಟೆ ತಾಲೂಕಿನ ಅಂಬಟ್ಟಿ ಗ್ರಾಮದ ನಿವಾಸಿ ಸುಬ್ಬಯ್ಯ ಎಂಬುವವರು ವಿಪರೀತ ಮದ್ಯಪಾನ ಮಾಡಿ ಮದ್ಯದ ಅಮಲಿನಲ್ಲಿ ಗ್ಯಾಸ್ಟ್ರಿಕ್ ಔಷಧಿ ಎಂದು ಕ್ರಿಮಿನಾಶಕ ಔಷಧಿಯನ್ನು ಆಕಸ್ಮಿಕವಾಗಿ ಸೇವಿಸಿ ಮೃತಪಟ್ಟಿದ್ದು ಈ ಬಗ್ಗೆ ಪತ್ನಿ ಮಮತಾರವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

 ಕ್ಲುಲ್ಲಕ ಕಾರಣಕ್ಕೆ ವ್ಯಕ್ತಿಯ ಮೇಲೆ ಹಲ್ಲೆ

           ಕ್ಲುಲ್ಲಕ ಕಾರಣಕ್ಕೆ ವ್ಯಕ್ತಿಯ ಮೇಲೆ ಕತ್ತಿಯಿಂದ ಕಡಿದು ಗಾಯಪಡಿಸಿದ ಘಟನೆ ವಿರಾಜಪೇಟೆ ತಾಲೂಕಿನ ಕುಟ್ಟ ಬಳಿಯ ಮಂಚಳ್ಳಿ ಗ್ರಾಮದಲ್ಲಿ ನಡೆದಿದೆ. ಮಂಚಳ್ಳಿ ಗ್ರಾಮದ ಎಂ ಪಿ ಸೋಮಯ್ಯನವರ ಲೈನ್ ಮನೆಯಲ್ಲಿ ವಾಸವಿರುವ ಜವನ ಎಂಬುವವರು ದಿನಾಂಕ 14-3-2017 ರಂದು ಸಮಯ ರಾತ್ರಿ ಮನೆಯಲ್ಲಿ ಟಿ.ವಿ ನೋಡಿಕೊಂಡಿರುವಾಗ ಪಕ್ಕದಲ್ಲೇ ವಾಸವಿರುವ ಜವನರವರ ತಮ್ಮ ಬೊಳಕನು ಮದ್ಯಪಾನ ಮಾಡಿಕೊಂಡು ಮನೆಯ ಹತ್ತಿರ ಹೋಗಿ ಜಗಳ ತೆಗೆದು ಕತ್ತಿಯಿಂದ ತಲೆಗೆ ಕಡಿದು ಗಾಯಪಡಿಸಿದ್ದು ಈ ಬಗ್ಗೆ ಕುಟ್ಟ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ

            ಸೋಮವಾರಪೇಟೆ ತಾಲೂಕಿನ ಕೊಣ್ಣಿಗನಹಳ್ಳಿ ಗ್ರಾಮದ ನಿವಾಸಿ ಕೆ ಆರ್ ರಂಗಸ್ವಾಮಿ ಎಂಬುವವರು ಹಾಸನದಲ್ಲಿ ಉಪನ್ಯಾಸಕರಾಗಿದ್ದು ಕೊಣ್ಣಗನಹಳ್ಳಿಯ ತಮ್ಮ ಮನೆಯಲ್ಲಿ ಕಾಫಿ ಮತ್ತು ಕಾಳುಮೆಣಸನ್ನು ಮನೆಯ ಒಳಗಡೆ ಶೇಖರಿಸಿ ಇಟ್ಟಿದ್ದು, ದಿನಾಂಕ 14-3-2017 ರಂದು ಮನೆಗೆ ಬೀಗ ಹಾಕಿ ಹಾಸನದಲ್ಲಿರುವ ಮನೆಗೆ ಹೋಗಿದ್ದು ದಿನಾಂಕ 15-3-2017 ರಂದು ಸಹೋದರ ಸುಬ್ಬೇಗೌಡರು ದೂರವಾಣಿ ಕರೆ ಮಾಡಿ ಮನೆಯಲ್ಲಿಟ್ಟಿದ್ದ ಕಾಫಿ ಮತ್ತು ಕಾಳು ಮೆಣಸು ಕಳುವಾದ ಬಗ್ಗೆ ತಿಳಿಸಿದ ಮೇರೆಗೆ ಮನೆಗೆ ಬಂದು ನೋಡುವಾಗ 8 ಕ್ವಿಂಟಾಲ್ ಕಾಳು ಮೆಣಸು, 150 ಕೆ ಜಿ ರೋಬಸ್ಟಾ ಕಾಫಿ ಮತ್ತು 3 ಚೀಲ ತೆನೆ ಬಿಡಿಸದ ಹಸಿ ಕರಿ ಮೆಣಸನ್ನು ಕಳವು ಮಾಡಿರುವುದು ಕಂಡು ಬಂದಿದ್ದು, ಈ ಕಳವನ್ನು ಕೂಲಿ ಕೆಲಸ ಮಾಡುವ ಶಿವ, ಕುಮಾರ, ಸುರೇಶ ಮತ್ತು ಇತರರು ಮಾಡಿರುವುದಾಗಿ ಗುಮಾನಿ ಇರುವುದಾಗಿ ಕೊಟ್ಟ ಪುಕಾರಿನ ಮೇರೆಗೆ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

 ಮೋಟಾರು ಸೈಕಲ್ ಅಪಘಾತ ವ್ಯಕ್ತಿಯ ದುರ್ಮರಣ

             ದಿನಾಂಕ 11-3-2017 ರಂದು ಮಾದಾಪುರದ ಮೂವತ್ತೋಕ್ಲು ಗ್ರಾಮದ ನಿವಾಸಿ ರವಿರವರು ಸುಂಟಿಕೊಪ್ಪದಿಂದ ಮನೆಗೆ ಹೋಗುತ್ತಿರುವಾಗ ಗರಗಂದೂರು ಗ್ರಾಮದ ಸರ್ಕಾರಿ ಶಾಲೆಯ ಮುಂಭಾಗ ತಲುಪುವಾಗ ಅಜಾಗರೂಕತೆಯಿಂಧ ಚಾಲನೆ ಮಾಡಿ ನಿಯಂತ್ರಣ ತಪ್ಪಿ ಮಗುಚಿಬಿದ್ದು ಗಾಯಗೊಂಡವರನ್ನು ಚಿಕಿತ್ಸೆಯ ಬಗ್ಗೆ ಮೈಸೂರಿನ ಕೆ ಆರ್ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ 14-3-2017 ರಂದು ಮೃತಪಟ್ಟಿದ್ದು ಈ ಬಗ್ಗೆ ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

 ಕೆರೆಯಲ್ಲಿ ಈಜಲು ತೆರಳಿ ವ್ಯಕ್ತಿಯ ದುರ್ಮರಣ

               ವಿರಾಜಪೇಟೆ ತಾಲೂಕಿನ ಟಿ ಶೆಟ್ಟಿಗೇರಿ ಗ್ರಾಮದ ವಸಂತ ಎಂಬುವವರ ಲೈನ್ ಮನೆಯಲ್ಲಿ ವಾಸವಿರುವ ರಂಜು ಎಂಬುವವರು ದಿನಾಂಕ 14-3-2017 ರಂದು ಕೂಲಿ ಕೆಲಸ ಮುಗಿಸಿ ಸ್ನಾನ ಮಾಡಲು ಕೆರೆಗೆ ಹೋಗಿದ್ದು ಈಜುವ ಸಂದರ್ಭ ತಾವರೆ ಗಿಡದ ಬೇರು ಸಿಕ್ಕಿಹಾಕಿಕೊಂಡು ಈಜಲು ಸಾದ್ಯವಾಗದೇ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು ಈ ಬಗ್ಗೆ ಶ್ರೀಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

 ಸರಣಿ ಅಪಘಾತ

             ದಿನಾಂಕ 15-3-2017 ರಂದು ಕುಶಾಲನಗರದ ನಿವಾಸಿ ಕೃಷ್ಣಪ್ಪ ಎಂಬುವವರು ಮಾದಪಟ್ಟಣ ಗ್ರಾಮದ ಶಿವಣ್ಣ ಎಂಬುವರೊಂದಿಗೆ ಮೋಟಾರು ಬೈಕಿನಲ್ಲಿ ಕೆಲಸಕ್ಕೆಂದು ಕಂಬಿ ಬಾಣೆಗೆ ಹೋಗಿ ವಾಪಾಸ್ಸು ಬರುವಾಗ ಆನೆ ಕಾಡು ಎಂಬಲ್ಲಿಗೆ ತಲುಪುವಾಗ ರಾಜ್ಯ ಹೆದ್ದಾರಿಯಲ್ಲಿ ಕೆಎಲ್- 41 -ಎಫ್-6633 ನಂಬರಿನ ಇನ್ನೋವಾ ಕಾರಿನ ಚಾಲಕ ಅತೀ ವೇಗ ಮತ್ತು ಆಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ರಿಟ್ಜ್ ಕಾರಿಗೆ ಡಿಕ್ಕಿಪಡಿಸಿದಾಗ ರಿಟ್ಜ್ ಕಾರಿನ ಚಾಲಕ ನಿಯಂತ್ರಣ ತಪ್ಪಿ ಮುಂದೆ ಹೋಗುತ್ತಿದ್ದ ಮೋಟಾರು ಸೈಕಲಿಗೆ ಡಿಕ್ಕಿ ಪಡಿಸಿದ ಪರಿಣಾಮ ಬೈಕ್ ಸವಾರ ಶಿವಣ್ಣ ಮತ್ತು ಕೃಷ್ಣಪ್ಪನವರಿಗೆ ಗಾಯವಾಗಿದ್ದು ಈ ಬಗ್ಗೆ ಕುಶಾಲನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

 ವಿದ್ಯುತ್ ತಂತಿಗೆ ಏಣಿ ತಾಗಿ ವ್ಯಕ್ತಿಯ ದುರ್ಮರಣ

                    ಕರಿಮೆಣಸನ್ನು ಕುಯ್ಯುತ್ತಿರುವಾಗ ಅಲ್ಯುಮಿನಿಯಂ ಏಣಿ ವಿದ್ಯುತ್ ತಂತಿಗೆ ತಾಗಿ ವ್ಯಕ್ತಿಯು ಮರಣ ಹೊಂದಿದ ಘಟನೆ ವಿರಾಜಪೇಟೆ ತಾಲೂಕಿನ ಕಣ್ಣಂಗಾಲ ಗ್ರಾಮದಲ್ಲಿ ನಡೆದಿದೆ. ದಿನಾಂಕ 15-3-2017 ರಂದು ಕುಕ್ಲೂರು ಗ್ರಾಮದ ನಿವಾಸಿ ಬಿದ್ದಪ್ಪ ಎಂಬುವವರ ಕಣ್ಣಂಗಾಲದಲ್ಲಿರುವ ತೋಟದಲ್ಲಿ ಕುಮಾರ ಎಂಬುವವರು ಅಲ್ಯಮಿನಿಯಂ ಏಣಿಯನ್ನು ಉಪಯೋಗಿಸಿ ಕರಿಮೆಣಸನ್ನು ಕುಯ್ಯುತ್ತಿರುವಾಗ ಏಣಿಯು ವಿದ್ಯುತ್ ತಂತಿಗೆ ತಾಗಿ ವಿದ್ಯುತ್ ಹರಿದು ಕುಮಾರರವರು ಮೃತಪಟ್ಟಿದ್ದು ಈ ಬಗ್ಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.