Saturday, March 18, 2017

ಕಾಫಿ ಗಿಡ ಕಡಿದು ನಷ್ಟ:

          ಸಿದ್ದಾಪುರ ಠಾಣಾ ಸರಹದ್ದಿನ ಯಡೂರು ಗ್ರಾಮದ ಐನಂಡ ಬೋಪಣ್ಣ ನವರ ಕಾಫಿ ತೋಟಕ್ಕೆ ದಿನಾಂಕ 15-3-2017 ರಂದು ಅದೇ ಗ್ರಾಮದ ಬಲ್ಲಚಂಡ ಕುಟ್ಟಪ್ಪ ನವರು ಕಾಫಿ ತೋಟಕ್ಕೆ ಪ್ರವೇಶ ಮಾಡಿ ಬೆಳೆದು ನಿಂತ ಸುಮಾರು 30 ರಿಂದ 50 ಕಾಫಿ ಗಿಡಗಳನ್ನು ಕಡಿದು ನಷ್ಟ ಪಡಿಸಿದ್ದು ಈ ಬಗ್ಗೆ ಬೋಪಣ್ಣನವರು ನೀಡಿದ ದೂರಿನ ಮೇರೆಗೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಮಹಿಳೆಗೆ ಬೆಂಕಿ ತಾಗಿ ಮೃತ
         ಮಹಿಳೆಯ ಬಟ್ಟೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಸುಟ್ಟ ಗಾಯಗಳಾಗಿ ಮೃತಪಟ್ಟ ಘಟನೆ ಮಡಿಕೇರಿ ತಾಲೂಕಿನ ನಾಲಡಿ ಗ್ರಾಮದಲ್ಲಿ ನಡೆದಿದೆ. ದಿನಾಂಕ 28-2-2017 ರಂದು ನಾಲಡಿ ಗ್ರಾಮದ ನಿವಾಸಿ ಚಂದ್ರಶೇಖರರವರ ಪತ್ನಿ ಗೀತಾರವರು ತಮ್ಮ ಮನೆಯಲ್ಲಿ ಕೆಲಸ ಮಾಡುತ್ತಿರುವಾಗ ದೀಪಕ್ಕೆ ಕೈ ತಾಗಿ ಕೆಳಗೆ ಬಿದ್ದು ಗೀತಾರವರು ಧರಿಸಿದ್ದ ಬಟ್ಟೆಗೆ ತಾಗಿ ಬೆಂಕಿ ಹತ್ತಿಕೊಂಡು ಸುಟ್ಟ ಗಾಯಗಳಾಗಿದ್ದು ಸದರಿಯವರನ್ನು ಸುಳ್ಯದ ಕೆ.ವಿ.ಜಿ ಆಸ್ಪತ್ರೆಗೆ ಚಿಕಿತ್ಸೆಯ ಬಗ್ಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ 17-3-2017 ರಂದು ಸದರಿಯವರು ಮೃತಪಟ್ಟಿದ್ದು ಈ ಬಗ್ಗೆ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಬೈಕಿಗೆ ಕಾರು ಡಿಕ್ಕಿ:

                ಬೈಕಿಗೆ ಕಾರು ಡಿಕ್ಕಿಯಾಗಿ ಬೈಕ್ ಸವಾರನಿಗೆ ಗಾಯವಾದ ಘಟನೆ ವಿರಾಜಪೇಟೆ ತಾಲೂಕಿನ ಕೈಕೇರಿ ಎಂಬಲ್ಲಿ ನಡೆದಿದೆ.  ದಿನಾಂಕ 17-3-2017ರಂದು ತಿತಿಮತಿಯ ಭದ್ರಗೋಳ ಗ್ರಾಮದ ನಿವಾಸಿ ವಿನೋದ್ ಎಂಬುವವರು ಗೋಣಿಕೊಪ್ಪದಿಂದ ವಿರಾಜಪೇಟೆ ಕಡೆಗೆ ಹೋಗುತ್ತಿರುವಾಗ ಕೈಕೇರಿ ಎಂಬಲ್ಲಿಗೆ ತಲುಪುವಾಗ ಎದುರುಗಡೆಯಿಂದ ಕಾರನ್ನು ಅದರ ಚಾಲಕ ನಿರ್ಲಕ್ಷತನದಿಂದ ಚಾಲನೆ ಮಾಡಿಕೊಂಡು ಬಂದು ಬೈಕಿಗೆ ಡಿಕ್ಕಿ ಪಡಿಸಿದ ಪರಿಣಾಮ ವಿನೋದ್ ರವರಿಗೆ ಗಾಯವಾಗಿದ್ದು ಈ ಬಗ್ಗೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಅಕ್ರಮ ಮದ್ಯ ಮಾರಾಟ ಆರೋಪಿಯ ಬಂಧನ:
           ಶ್ರೀಮಂಗಲ ಪೊಲೀಸ್ ಠಾಣಾ ಉಪ ನಿರೀಕ್ಷಕರಾದ ಸಣ್ಣಯ್ಯರವರಿಗೆ ಸಿಕ್ಕಿದ ಮಾಹಿತಿ ಮೇರೆಗೆ ಬೆಳ್ಳೂರು ಗ್ರಾಮದ ನಿವಾಸಿ ನೂರೆರ ದಿಲೀಪ್ ಎಂಬುವವರು ಮನೆಯ ಪಕ್ಕ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದವನ್ನು ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಪತ್ತೆ ಹಚ್ಚಿ ಆತನ ಬಳಿ ಇದ್ದ 90 ಎಂಎಲ್ ನ 16 ಅಮೃತ್ ಸಿಲ್ವರ್ ಕಪ್ ರೇರ ಬ್ರಾಂದಿ ಪ್ಯಾಕೆಟ್ ಮತ್ತು 120 ರೂ ನಗದನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಅಕ್ರಮ ಮದ್ಯ ಮಾರಾಟ:

         ಸೋಮವಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ದೊಡ್ಡಬ್ಬೂರು ಗ್ರಾಮದ ನಿವಾಸಿ ದೇವರಾಜಮ್ಮ @ ಮಂಜುಳ ಎಂಬುವವರು ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೆಂಬ ಮಾಹಿತಿ ಮೇರೆಗೆ ಸೋಮವಾರಪೇಟೆ ಪೊಲೀಸ್ ಠಾಣೆಯ ಉಪ ನಿರೀಕ್ಷಕರಾದ ಮಂಚಯ್ಯರವರು ತಮ್ಮ ಸಿಬ್ಬಂದಿಯವರೊಂದಿಗೆ ದಿನಾಂಕ 17-3-2017 ರಂದು ದಾಳಿ ಮಾಡಿ ಆರೋಪಿ ದೇವರಾಜಮ್ಮ ನವರಿಂದ  90 ಎಂಎಲ್ ನ ಒರಿಜಿನಲ್ ಚಾಯ್ಸ್ 52 ಪ್ಯಾಕೆಟ್, 90 ಎಂಎಲ್ ನ ಕೋಡೆಸ್ ರಮ್ 5 ಪ್ಯಾಕೆಟ್ ಮತ್ತು 90 ಎಂಎಲ್ ನ ಒರಿಜಿನಲ್ ವಿಸ್ಕಿ 7 ಪ್ಲಾಸ್ಟಿಕ್ ಬಾಟಲಿಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿರುತ್ತಾರೆ.