Sunday, March 26, 2017

ಮಹಿಳೆ ಮತ್ತು ಮಕ್ಕಳು ಕಾಣೆ
                 ಅಸ್ಸಾಂ ರಾಜ್ಯದ ಮೂಲದವರಾದ ರಾಮ್ ಬುಯನ್ ಎಂಬುವವರು ಸಂಸಾರದೊಂದಿಗೆ 2 ವರ್ಷಗಳಿಂದ ವಿರಾಜಪೇಟೆ ತಾಲೂಕಿನ ನರಿಯಂದಡ ಗ್ರಾಮದ ಬಷೀರ್ ರವರ ಲೈನ್ ಮನೆಯಲ್ಲಿ ವಾಸವಾಗಿದ್ದು ದಿನಾಂಕ 20-3-2017 ರಂದು ರಾಮ್ ಬುಯನ್ ರವರ ಪತ್ನಿ ರೀಟಾ ಮಕ್ಕಳಾದ ರಾಜ್, ರಾಜೇಶ್, ಗಿಟ್ಟಿಕಾರವರು ಕಾಣೆಯಾಗಿದ್ದು ಈ ಬಗ್ಗೆ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ದೇವಸ್ಥಾನದ ಹುಂಡಿ ಕಳವು
                  ಕುಶಾಲನಗರದ ಗೊಂದಿಬಸವನಹಳ್ಳಿ ದೇವಿ ಕೆರೆಯಮ್ಮ ದೇವಸ್ಥಾನದ ಭಂಡಾರದ ಹುಂಡಿಯನ್ನು ಕಳವು ಮಾಡಿದ ಘಟನೆ ನಡೆದಿದೆ. ದಿನಾಂಕ 25-3-2017 ರಂದು ಗೊಂದಿಬಸವನಹಳ್ಳಿಯ ನಿವಾಸಿಯಾದ ಸಂತೋಷರವರು ಸ್ನೇಹಿತರೊಂದಿಗೆ ಕುಶಾಲನಗರಕ್ಕೆ ಹೋಗುತ್ತಿರುವಾಗ ಅದೇ ಗ್ರಾಮದ ನಿವಾಸಿಯಾದ ಯೋಗೇಶ ಎಂಬುವವರು ಗೊಂದಿಬಸವನಹಳ್ಳಿ ದೇವಿ ಕೆರೆಯಮ್ಮ ದೇವಸ್ಥಾನದ ಮುಂಭಾಗದಲ್ಲಿದ್ದ ಭಂಡಾರದ ಹುಂಡಿಯನ್ನು ಕಳವು ಮಾಡಿಕೊಂಡು ಹೋಗುತ್ತಿದ್ದವನನ್ನು ಹಿಡಿದು ಠಾಣೆಗೆ ಒಪ್ಪಿಸಿದ್ದು ಈ ಬಗ್ಗೆ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಮೋಟಾರು ಸೈಕಲಿಗೆ ಕಾರು ಡಿಕ್ಕಿ
                  ಮೋಟಾರು ಸೈಕಲಿಗೆ ಕಾರು ಡಿಕ್ಕಿಯಾಗಿ ಸವಾರ ಗಾಯಗೊಂಡ ಘಟನೆ ಕುಶಾಲನಗರದ ಗಂಧದಕೋಟೆ ಎಂಬಲ್ಲಿ ನಡೆದಿದೆ. ದಿನಾಂಕ 24-3-2017 ರಂದು ಬಸವನಹಳ್ಳಿಯ ನಿವಾಸಿಯಾದ ಪುರುಷೋತ್ತಮ ಎಂಬುವವರು ಕುಶಾಲನಗರದ ಕಡೆಗೆ ಹೋಗುತ್ತಿರುವಾಗ ಹಿಂದುಗಡೆಯಿಂದ ಮಾರುತಿ ಕಾರಿನ ಚಾಲಕ ಗಂಧದಕೋಟೆಯ ನಿವಾಸಿ ವೇಣುಗೋಪಾಲ ಎಂಬುವವರು ಅಜಾಗರೂಕತೆಯಿಂದ ಚಾಲನೆ ಮಾಡಿ ಹಿಂದುಗಡೆಯಿಂದ ಮೋಟಾರು ಸೈಕಲಿಗೆ ಡಿಕ್ಕಿ ಪಡಿಸಿ ಪುರುಷೋತ್ತಮರವರಿಗೆ ಗಾಯಗಳಾಗಿದ್ದು ಈ ಬಗ್ಗೆ ಕುಶಾಲನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.