Thursday, March 23, 2017

 ಹಳೆ ದ್ವೇಷ, ವ್ಯಕ್ತಿಯ ಕೊಲೆ
                       ದಿನಾಂಕ22/03/2017ರಂದು  ನಗರದ  ಕನ್ನಂಡ ಬಾಣೆ ನಿವಾಸಿ ಗೋಕುಲ ಎಂವರು ನಗರದ ಕಡೆ ಹೋಗಿ ಬರುವುದಾಗಿ ಹೇಳಿ ಅವರ ಮೋಟಾರು  ಬೈಕಿನಲ್ಲಿ ಹೋಗಿದ್ದು, ನಂತರ ರಾತ್ರಿ 10 ಗಂಟೆಯಾದರೂ ಮನೆಗೆ  ಬಾರದಿದ್ದು, ಅದೇ ಸಮಯಕ್ಕೆ ಕನ್ನಂಡ ಬಾಣೆಯ ಮತ್ತೋರ್ವ ನಿವಾಸಿ ಪ್ರದೀಪ್‌ ಎಂಬವರು ಗೋಕುಲನ ತಂಗಿ ಕಾವ್ಯಶ್ರೀ ಎಂಬಾಕೆಗೆ ಮೊಬೈಲ್‌ ಕರೆ ಮಾಡಿ ಆಕೆಯ ಅಣ್ಣ ಗೋಕುಲ ಕನ್ನಂಡ ಬಾಣೆಯ ಪಂಪ್‌ ಹೌಸ್‌ ಬಳಿ ಬಿದ್ದಿರುವುದಾಗಿ ತಿಳಿಸಿದ್ದು ಕಾವ್ಯಶ್ರೀರವರು ಒಡನೆ ಅಲ್ಲಿಗೆ ಹೋದಾಗ ಗೋಕುಲನ ಬೈಕ್‌ ರಸ್ತೆಯ ಮದ್ಯದಲ್ಲಿ ಬಿದ್ದಿದ್ದು, ರಸ್ತೆಯ ಬದಿಯಲ್ಲಿ ಗೋಕುಲನು ರಕ್ತದ ಮಡುವಿನಲ್ಲಿ ಬಿದ್ದು ಮೈಯಲ್ಲಿ ತೀವ್ರವಾಗಿ ಕಡಿದ ಗಾಯಗಳನ್ನು ಕಂಡು ಕೂಡಲೇ ಆಸ್ಪತ್ರೆಗೆ ಸಾಗಿಸಿದಾಗ ಆಸ್ಪತ್ರೆಯಲ್ಲಿ ವೈದ್ಯರು ಗೋಕುಲನು ಮೃತನಾಘಿರುವುದಾಗಿ ತಿಳಿಸಿದರೆನ್ನಲಾಗಿದೆ. ಕಾವ್ಯಶ್ರೀಯ ಅಣ್ಣ ಗೋಕುಲ ಹಾಗೂ ನಗರದ ಚಾಮುಂಡೇಶ್ವರಿ ನಗರದ ನಿವಾಸಿ ಕಾರ್ತಿಕ್‌ ಎಂಬಾತನಿಗೆ ವೈಮನಸ್ಸಿದ್ದು ಆತನೇ ಗೋಕುಲನನ್ನು ಕೊಲೆ ಮಾಡಿರಬಹುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವ್ಯಕ್ತಿಯ ಆಕಸ್ಮಿಕ ಸಾವು
                  ದಿನಾಂಕ 15/03/2017ರಂದು ಕುಟ್ಟ ಬಳಿಯ ನಾಲ್ಕೇರಿ ನಿವಾಸಿ ಪಣಿ ಎರವರ ಅಪ್ಪು ಎಂಬವರು ಅವರ ಮನೆಯಲ್ಲಿ ಮಲಗಿದ್ದಾಗ ಸೀಮೆಣ್ಣೆ ಬುಡ್ಡಿ ದೀಪವು ಮಗುಚಿ ಅಪ್ಪುರವರು ಮಲಗಿದ್ದ ಚಾಪಯ ಮೇಲೆ ಬಿದ್ದು ಬೆಂಕಿ ಹತ್ತಿಕೊಂಡ ಪರಿಣಾಮ ತೀವ್ರವಾಗಿ ಸುಟ್ಟು ಗಾಯಾಳುವಾದ ಅಪ್ಪುವನ್ನು ಚಿಕಿತ್ಸೆಗಾಗಿ ಮೈಸೂರಿನ ಕೆ.ಅರ್.ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 22/03/2017ರಂದು ಅಪ್ಪುರವರು ಮೃತರಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಟ್ಟ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ನಕಲಿ ಸಹಿ, ಮೋಸ
               ಪೊನ್ನಂಪೇಟೆ  ಬಳಿಯ ನಲ್ಲೂರು ಗ್ರಾಮದ ನಿವಾಸಿಯಾಗಿರುವ ಟಿ.ಯು.ಮಂಜು ಎಂಬವರ ತಂದೆಯ ಹೆಸರಿನಲ್ಲಿರುವ ಕಾಫಿ ತೋಟದ ವಿಚಾರವಾಗಿ ನ್ಯಾಯಾಲಯದಲ್ಲಿ ವ್ಯಾಜ್ಯವಿದ್ದು ಈ ಸಂಬಂಧ ಪೊನ್ನಪ್ಪ ಸಂತೆಯ ಟಿ.ಯು.ಬೋಪಣ್ಣ, ಬೆಂಗಳೂರಿನ ಎಂ.ಕೆ.ಗೋಪಾಲ ಮತ್ತು ಎ.ಎನ್‌.ಅಶೋಕ ಎಂಬವರು ವಿವಿಧ ದಾಖಲೆಗಳಿಗೆ ನಕಲಿ ಸಹಿ ಮಾಡಿ ವಂಚಿಸಿರುವುದಾಗಿ ನೀಡಿದ ದೂರಿನ ಮೇರೆಗೆ  ಪೊನ್ನಂಪೇಟೆ  ಪೊಲೀಸರು ಪ್ರಕರಣ  ದಾಖಲಿಸಿ  ತನಿಖೆ  ಕೈಗೊಂಡಿದ್ದಾರೆ. 

ವ್ಯಕ್ತಿಯ ಆಕಸ್ಮಿಕ ಸಾವು
                       ದಿನಾಂಕ 22/03/2017ರಂದು ಕುಟ್ಟ ಬಳಿಯ ಕೋತೂರು ನಿವಾಸಿ ಪಣಿ ಎರವರ ಮಣಿ ಎಂಬವರು ಅದೇ ಗ್ರಾಮದ ನಿವಾಸಿ ಬಾಲಕೃಷ್ಣ ಎಂಬವರ ಗದ್ದೆಯ ಬದಿಯಲ್ಲಿ ಕುಳಿತ್ತಿದ್ದಾತನು ಕುಳಿತಲ್ಲೇ ಮೃತನಾಗಿದ್ದು, ಅತೀವ ಮದ್ಯವ್ಯಸನಿಯಾಗಿರುವ ಕಾರಣದಿಂದ ಮಣಿಯು ಮೃತನಾಗಿರಬಹುದಾಗಿ ಆತನ ಪತ್ನಿ ಪಣಿ ಎರವರ ಪಾಲಿರವರು ನೀಡಿದ ದೂರಿನ ಮೇರೆಗೆ ಕುಟ್ಟ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವ್ಯಕ್ತಿಯ ಆತ್ಮಹತ್ಯೆ
                     ದಿನಾಂಕ 22/03/2017ರಂದು ಗೋಣಿಕೊಪ್ಪ ಬಳಿಯ ಬಿ.ಶೆಟ್ಟಿಗೇರಿ ಗ್ರಾಮದ ನಿವಾಸಿ ಪಣಿ ಎರವರ ಮುತ್ತ ಎಂಬವರು ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಮನೆಯ ಹಿಂಭಾಗದಲ್ಲಿ ಮನೆಯ ಮಾಡಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಆತನ ಪತ್ನಿ ತೀರಕೊಂಡ ಕಾರಣಕ್ಕೆ ಅತೀವ ಮದ್ಯ ವ್ಯಸನಿಯಾಗಿ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದಾಗಿ ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಹಣ ಕಳವು
                     ದಿನಾಂಕ 20/03/2017ರಂದು ಕೇರಳದ ಇರಿಟ್ಟಿ ನಿವಾಸಿ ಕುಂಞಿರಾಮನ್‌ ಎಂಬಾತನನ್ನು ಸುಳ್ಯದ ಸುರೇಶ್‌ ಕುಮಾರ್‌ ಎಂಬವನು ಇರಿಟ್ಟಿಯಲ್ಲಿ ಬೇಟೆಯಾಡಲು ಬರುವಂತೆ ಒತ್ತಾಯಿಸಿ ಮಡಿಕೇರಿಗೆ ಕರೆದುಕೊಂಡು ಬಂದಿದ್ದು ಮಡಿಕೇರಿಯ ಬಾರ್‌ ಒಂದರಲ್ಲಿ ಇಬ್ಬರೂ ಮದ್ಯಪಾನ ಮಾಡಿ ನಂತರ ರಾತ್ರಿ ನಗರದ ಬಸ್‌ ಸ್ಟ್ಯಾಂಡ್‌ನಲ್ಲಿ ಮಲಗಿದ್ದರೆನ್ನಲಾಗಿದೆ. ಮಾರನೇ ದಿನ ಬೆಳಿಗ್ಗೆ ಕುಂಞಿರಾಮನ್‌ರವರು ಎದ್ದು ನೋಡುವಾಗ ಸುರೇಶ್‌ ಕುಮಾರನು ಕಾಣೆಯಾಗಿದ್ದು ಕುಂಞಿರಾಮನ್‌ರವರು ಕೇರಳದಲ್ಲಿ ಲಾಟರಿ ಮಾರಾಟ ಮಾಡಿ ಸಂಪಾದಿಸಿದ ರೂ.80,000/- ಹಣವನ್ನು ಜೊತೆಯಲ್ಲಿಯೇ ಇಟ್ಟುಕೊಂಡಿದ್ದು ಆ ಹಣವೂ ಸಹಾ ಕಾಣೆಯಾಗಿದ್ದು, ಜೊತೆಗಿದ್ದ ಸುರೇಶ್‌ ಕುಮಾರನೇ ಕಳವು ಮಾಡಿರಬಹುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಕಾಫಿ ಕಳವು
                    ಸಿದ್ದಾಪುರ ಬಳಿಯ ಪಾಲಿಬೆಟ್ಟ ನಿವಾಸಿ ಟಿ.ಜಿ.ವಿಜೇಶ್‌ ಎಂಬವರು ಪಾಲಿಬೆಟ್ಟ ನಗರದಲ್ಲಿ ಕಾಫಿ ವ್ಯಾಪಾರ ಮಾಡುತ್ತಿದ್ದು ಖರೀದಿಸಿದ ಕಾಫಿಯನ್ನು ಅವರ ಅಂಗಡಿಯ ಕಟ್ಟಡದಲ್ಲಿರುವ ಗೋದಾಮಿನಲ್ಲಿ ಇಡುತ್ತಿದ್ದು ದಿನಾಂಕ 22/03/2017ರಂದು ಬೆಳಿಗ್ಗೆ ಗೋದಾಮಿನೆಡೆ ಹೋಗಿ ನೋಡಿದಾಗ ಯಾರೋ ಕಳ್ಳರು ಗೋದಾಮಿನ ಬಾಗಿಲಿನ ಬೀಗ ಮುರಿದು ಒಳ ಪ್ರವೇಶಿಸಿ ಅಲ್ಲಿಟ್ಟಿದ್ದ ಒಣಗಿದ ಕಾಫಿಗಳಿದ್ದ ಚೀಲಗಳ ಪೈಕಿ ಸುಮಾರು ರೂ.24,000/- ಬೆಲೆಯ 14 ಚೀಲ ಕಾಫಿಯನ್ನು ಕಳವು ಮಾಡಿಕೊಂಡು ಹೋಗಿರುವುದು ಕಂಡು ಬಂದಿರುವುದಾಗಿ ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಬೈಕಿಗೆ ಕಾರು ಡಿಕ್ಕಿ
               ದಿನಾಂಕ 22/03/2017ರಂದು ಸಿದ್ದಾಪುರ ಬಳಿಯ ಗುಹ್ಯ ನಿವಾಸಿರವಿ ಎಂಬವರು ಕುಮಾರಿ ಗಣ್ಯ ಎಂಬವರೊಂದಿಗೆ ಅವರ ಮೋಟಾರು ಸೈಕಲಿನಲ್ಲಿ ಪಾಲಿಬೆಟ್ಟದ ಕಡೆಗೆ ಹೋಗುತ್ತಿರುವಾಗ ಆರ್ಕಾಡ್‌ ಟಾಟಾ ಕಾಫಿ ತೋಟದ ಲೈನು ಮನೆಯ ಬಳಿ ಎದುರಿನಿಂದ ಕೆಎ-20-ಎಂ-7336ರ ಕಾರನ್ನು ಅದರ ಚಾಲಕ ಗೋಕುಲ ಎಂಬಾತನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಬೈಕಿಗೆ ಡಿಕ್ಕಿಪಡಿಸಿದ ಪರಿಣಾಮ ರವಿ ಹಾಗೂ ಗಣ್ಯರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.