Tuesday, March 28, 2017

ವಿಷ ಸೇವಿಸಿದ್ದ  ಮಹಿಳೆ ಸಾವು
                     ದಿನಾಂಕ 22/03/2017ರಂದು ಪೊನ್ನಂಪೇಟೆ ಬಳಿಯ ನಿಟ್ಟೂರು ಕಾರ್ಮಾಡು ನಿವಾಸಿ ಪಣಿ ಎರವರ ಚೋಂದು ಎಂಬಾಕೆಯು ಯಾವುದೋ ಕಾರಣಕ್ಕೆ ಜೀವನದಲ್ಲಿ ಜುಗುಪ್ಸೆಗೊಂಡು ವಿಷ ಸೇವಿಸಿದ್ದಾಕೆಯನ್ನು ಚಿಕಿತ್ಸೆಗಾಗಿ ಮಡಿಕೇರಿಯ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಚೋಂದುರವರು ದಿನಾಂಕ 27/03/2017ರಂದು ಆಸ್ಪತ್ರೆಯಲ್ಲಿ ಮೃತರಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವ್ಯಕ್ತಿಯ ಮೇಲೆ ಹಲ್ಲೆ
                         ದಿನಾಂಕ 26/03/2017ರಂದು ರಾತ್ರಿ ವೇಳೆ ವಿರಾಜಪೇಟೆ ಬಳಿಯ ಕೊಳತ್ತೋಡು ಬೈಗೋಡು ನಿವಾಸಿ ಪಣಿ ಎರವರ ಬಸವ ಎಂಬವರು ಮನೆಯಲ್ಲಿರುವಾಗ ನೆರೆಮನೆಯ ರಾಜಪ್ಪ ಎಂಬವರು ಅವರ ಹೆಂಡತಿಯೊಂದಿಗೆ ಮದ್ಯಪಾನ ಮಾಡಿಕೊಂಡು ಗಲಾಟೆ ಮಾಡುತ್ತಿದ್ದುದನ್ನು ವಿಚಾರಿಸಿದ ಕಾರಣಕ್ಕೆ ರಾಜಪ್ಪನವರ ಪತ್ನಿ ಪ್ರಿಯಾಂಕ ಎಂಬಾಕೆಯು ಬಸವರವರ ಮೇಲೆ ಹಲ್ಲೆ ನಡೆಸಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಅಕ್ರಮ ಮದ್ಯ ಮಾರಾಟ
                      ದಿನಾಂಕ 27/03/2017ರಂದು ಕುಟ್ಟ ಬಳಿಯ ನಾಲ್ಕೇರಿ ಗ್ರಾಮದ ನಿವಾಸಿ ಪಿ.ಜೆ.ಬಾಬು ಯಾನೆ ಯೋಹಾನನ್ ಎಂಬವರು ಅವರ ಅಂಗಡಿಯ ಹಿಂಭಾಗದಲ್ಲಿ ಅಕ್ರಮವಾಗಿ ಸರ್ಕಾರದ ಪರವಾನಗಿ ಇಲ್ಲದೆ ಮದ್ಯ ಮಾರಾಟ ಮಾಡುತ್ತಿದ್ದುದನ್ನು ಪತ್ತೆ ಹಚ್ಚಿದ ಕುಟ್ಟ ಠಾಣೆಯ ಪಿಎಸ್‌ಐ ರವಿಕಿರಣ್‌ರವರು ಆರೋಪಿ ಪಿ.ಜೆ.ಬಾಬುರವರನ್ನು ಬಂಧಿಸಿ ಕುಟ್ಟ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಬೈಕ್‌ ಡಿಕ್ಕಿ
                           ದಿನಾಂಕ 27/03/2017ರಂದು ಕುಶಾಲನಗರದ ಮಾದಾಪಟ್ನ ನಿವಾಸಿ  ಮಂಜುನಾಥ  ಎಂಬವರು  ಅವರ ಗೆಳೆಯ  ರಾಜು ಎಂಬವರೊಂದಿಗೆ ರಾಜುರವರ ಮೋಟಾರು ಬೈಕಿನಲ್ಲಿ ಕುಶಾಲನಗರದಿಂದ ಗುಡ್ಡೆಹೊಸೂರಿಗೆ  ಹೋಗುತ್ತಾ ದಾರಿಯಲ್ಲಿ ಸಿದ್ದೇಶ್ವರ ಅಕ್ಕಿ ಗಿರಣಿಯ ಬಳಿ ರಸ್ತೆಯಲ್ಲಿ ನಿಂತುಕೊಂಡಿರುವಾಗ ಹಿಂದಿನಿಂದ ಬೆಂಗಳೂರಿನ ನಿವಾಸಿ ಟರ್ಲಿನ್‌ ಎಂಬವರು ಕೆಎ-05-ಜೆಎಕ್ಸ್-9774ರ ಮೋಟಾರು ಬೈಕನ್ನು ಅತಿ ವೇಗ  ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು  ಮಂಜುನಾಥರವರು ಚಾಲಿಸುತ್ತಿದ್ದು ನಿಲ್ಲಿಸಿದ್ದ ಬೈಕಿಗೆ ಡಿಕ್ಕಿಪಡಿಸಿದ ಪರಿಣಾಮ ಬೈಕಿನ ಹಿಂಬದಿಯಲ್ಲಿ ಕುಳಿತಿದ್ದ ರಾಜುರವರಿಗೆ ತೀವ್ರತರದ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.