Monday, March 6, 2017

ಆಸ್ತಿಯ ವಿಚಾರದಲ್ಲಿ ಹಲ್ಲೆ

            ವಿರಾಜಪೇಟೆ ತಾಲೂಕಿನ ಗುಹ್ಯ ಗ್ರಾಮದ ಗೂಡುಗದ್ದೆಯ ನಿವಾಸಿ ರಾಧಮಣಿ ಮತ್ತು ಅದೇ ಗ್ರಾಮದ ನಿವಾಸಿ ದಿವಾಕರರವರಿಗೆ ಆಸ್ತಿಯ ವಿಚಾರದಲ್ಲಿ ತಕರಾರು ಇದ್ದು ಇದೇ ವಿಚಾರದಲ್ಲಿ ದಿನಾಂಕ 5-3-2017 ರಂದು ಎರಡೂ ಕಡೆಯವರು ಪರಸ್ಪರ ಹೊಡೆದಾಡಿಕೊಂಡಿದ್ದು ಈ ಸಂಬಂದ ಉಭಯ ಕಡೆಯವರು ನೀಡಿದ ದೂರಿನ ಮೇರೆಗೆ ಸಿದ್ದಾಪುರ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿರುತ್ತವೆ. .

ವಿದ್ಯುತ್ ತಂತಿ ಸ್ಪರ್ಶಿಸಿ ವ್ಯಕ್ತಿಯ ಸಾವು
               ಕೆಲಸ ಮಾಡುತ್ತಿರುವಾಗ ಕಬ್ಬಿಣದ ಏಣಿಗೆ ವಿದ್ಯುತ್ ತಂತಿ ಸ್ಪರ್ಶಿಸಿ ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ವಿರಾಜಪೇಟೆ ತಾಲೂಕಿನ ಟಿ ಶೆಟ್ಟಿಗೇರಿ ಗ್ರಾಮದಲ್ಲಿ ವರದಿಯಾಗಿದೆ. ದಿನಾಂಕ 5-3-2017 ರಂದು ರಶೀದ್ ಆಲಿ ಮತ್ತು ಸೈಯದ್ ರೆಹಮಾನ್ ರವರು ಟಿ ಶೆಟ್ಟಿಗೇರಿ ಗ್ರಾಮದ ಕೈಬುಲಿರ ಚೇತನ್ ರವರಿಗೆ ಸೇರಿದ ಕಾಫಿ ತೋಟದಲ್ಲಿ ಕಬ್ಬಿಣದ ಏಣಿ ಉಪಯೋಗಿಸಿ ಕಾಳು ಮೆಣಸನ್ನು ಕುಯ್ಯುತ್ತಿದ್ದು, ಏಣಿಯ ಮೂಲಕ ಕೆಳಗೆ ಇಳಿಯುತ್ತಿರುವಾಗ ಆಕಸ್ಮಿಕವಾಗಿ ಏಣಿಯು ಜಾರಿ ಅಲ್ಲೇ ಹಾದು ಹೋದ ವಿದ್ಯುತ್ ತಂತಿಗೆ ತಗುಲಿ ವಿದ್ಯುತ್ ಸ್ಪರ್ಶವಾಗಿ ಸೈಯದ್ ರೆಹಮಾನ್ ರವರು ಮೃತಪಟ್ಟಿದ್ದು ಈ ಬಗ್ಗೆ ರಶೀದ್ ಆಲಿಯವರು ನೀಡಿದ ಪುಕಾರಿನ ಮೇರೆಗೆ ಶ್ರೀಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಹಣಕಾಸಿನ ವಿಚಾರದಲ್ಲಿ ಹೊಡೆದಾಟ
                ದಿನಾಂಕ 5-3-2017 ರಂದು ಸೋಮವಾರಪೇಟೆ ತಾಲೂಕಿನ ಚಿಕ್ಕಬೆಟಗೇರಿ ಗ್ರಾಮದ ನಿವಾಸಿಯಾದ ಮೈಕೆಲ್ ರವರು ಗುಡ್ಡೆಹೊಸೂರುವಿನ ಹಾರಂಗಿ ರಸ್ತೆಯಲ್ಲಿ ಸ್ನೇಹಿತನೊಂದಿಗೆ ಮಾತನಾಡಿಕೊಂಡಿರುವಾಗ ಅಲ್ಲಿಗೆ ಅತ್ತೂರು ಗ್ರಾಮದ ನಿವಾಸಿಯಾದ ಸುನಿಲ್ ರವರು ಬಂದು ಹಣದ ವಿಚಾರದಲ್ಲಿ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈದು ಕಲ್ಲಿನಿಂದ ತಲೆಗೆ ಹೊಡೆದು ಗಾಯಪಡಿಸಿರುವುದಾಗಿ ಮೈಕೆಲ್ ರವರು ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಸಾರ್ವಜನಿಕ ಸ್ಥಳದಲ್ಲಿ ಹೊಡೆದಾಟ
                     ದಿನಾಂಕ 5—3-2017 ರಂದು ಕುಶಾಲನಗರದ ಪ್ರಾಥಮಿಕ ಶಾಲಾ ಮೈದಾನದಲ್ಲಿ ನೆಡೆಯುತ್ತಿದ್ದ ಹೊನಲು ಬೆಳಕಿನ ಕಬ್ಬಡ್ಡಿ ಪಂಧ್ಯಾಟ ಸ್ಥಳದ ಪ್ರವೇಶ ದ್ವಾರದ ಬಳಿ ಸಾರ್ವಜನಿಕ ಸ್ಥಳದಲ್ಲಿ ಹೊಡೆದಾಟ ಮಾಡುತ್ತಿದ್ದ ಕುಶಾಲನಗರದ ನಿವಾಸಿಗಳಾದ ಮಹದೇವ್, ಉಮೇಶ್ ಮತ್ತು ಮಹದೇವ್ ರವರ ಮೇಲೆ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಕರ್ತವ್ಯದಲ್ಲಿದ್ದ ಕುಶಾಲನಗರ ಠಾಣೆಯ ಸಿಬ್ಬಂದಿಯವರಾದ ಲೋಕೇಶ್ ರವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿರುತ್ತದೆ.