Friday, March 17, 2017

ಅಕ್ರಮ ಮರಳು ಸಾಗಾಟ:

      ವ್ಯಕ್ತಿಯೊಬ್ಬರು ಲಾರಿಯಲ್ಲಿ ಅಕ್ರಮ ಮರಳು ಸಾಗಾಟ ಮಾಡುತ್ತಿದ್ದುನ್ನು ಪತ್ತೆಹಚ್ಚಿದ ಸೋಮವಾರಪೇಟೆ ಪೊಲೀಸ್ ರು ಪ್ರಕರಣ ದಾಖಲಿಸಿದ್ದಾರೆ. ಕೆಎಲ್ 58 ಈ 0301 ರ ಟಿಪ್ಪರ್ ಚಾಲಕ ಹ್ಯಾರೀಸ್  ಎಂಬವರು ದಿನಾಂಕ 14-03-2017 ರಂದು ಇಗ್ಗೋಡ್ಲು ಗ್ರಾಮದದಲ್ಲಿ ಟಿಪ್ಪರ್ ಲಾರಿಯಲ್ಲಿ ಅಕ್ರಮವಾಗಿ ಮರಳನ್ನು ತುಂಬಿಸಿಕೊಂಡು ಸಾಗಾಟ ಮಾಡುತ್ತಿದ್ದನ್ನು ಪತ್ತೆಹಚ್ಚಿದ ಸೋಮವಾರಪೇಟೆ ಪೊಲೀಸ್ ಠಾಣೆಯ ಮಾದಾಪುರ ಉಪಠಾಣೆಯ ಸಿಹೆಚ್ ಸಿ ಕೆ.ಕೆ.ಶಶಿಧರ್ ರವರು ಲಾರಿಯಲ್ಲಿ ಮರಳನ್ನು ಸಾಗಿಸುತ್ತಿದ್ದನ್ನು ಚಾಲಕ ಹ್ಯಾರೀಸ್ ನವರಲ್ಲಿ ವಿಚಾರಿಸಿದಾಗ ಸದರಿ ಲಾರಿಯ ಚಾಲಕ ಪೊಲೀಸ್ ಸಿಬ್ಬಂದಿಯನ್ನು ತಳ್ಳಿ ಲಾರಿಯನ್ನು ಚಾಲಿಸಿಕೊಂಡು ಸ್ಥಳದಿಂದ ಪರಾರಿಯಾಗಿದ್ದು, ಈ ಬಗ್ಗೆ ಸೋಮವಾರಪೇಟೆ ಠಾಣೆಯಲ್ಲಿ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಜೀಪು ಅಪಘಾತ, ಚಾಲಕ ಸೇರಿ ಇಬ್ಬರ ಸಾವು:

     ಚಾಲಕನ ನಿಯಂತ್ರಣ ಕಳೆದ ಪರಿಣಾಮ ಜೀಪೊಂಡು ಅಪಘಾತಕ್ಕೀಡಾಗಿ ಚಾಲಕ ಸಾವನಪ್ಪಿದ ಘಟನೆ ಶ್ರೀಮಂಗಲ ಠಾಣಾ ಸರಹದ್ದಿನ ಕಾಕೂರು ಗ್ರಾಮದಲ್ಲಿ ನಡೆದಿದೆ. ದಿನಾಂಕ 16-3-2017 ರಂದು ಕೇರಳ ರಾಜ್ಯದ ಅರಣಪಾರ ತೋಲ್ಪಟ್ಟಿ ಗ್ರಾಮದ ನಿವಾಸಿ ಅಜೀಜ್ ಎಂಬ ವ್ಯಕ್ತಿ ಕೆಲಸದಾಳುಗಳನ್ನು ತನ್ನ ಜೀಪಿನಲ್ಲಿ ಹರಿಹರ ಗ್ರಾಮಕ್ಕೆ ಕರಿಮೆಣಸು ಕುಯ್ಯುವ ಕೆಲಸದ ಬಾಪ್ತು ಹೋಗುತ್ತಿದ್ದಾಗ ಸದರಿ ಜೀಪು ಅಪಘಾತಕ್ಕೀಡಾಗಿ ಚಾಲಕ ಅಜೀಶ್ ಮತ್ತು ಶಿನೋಜ್ ರವರುಗಳು ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವ ವೇಳೆ ಇಬ್ಬರು ಸಾವನಪ್ಪಿದ್ದು, ಶ್ರೀಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.