Friday, March 24, 2017

ಮರದಿಂದ ಬಿದ್ದು ಗಾಯಗೊಂಡು ವ್ಯಕ್ತಿಯ ಮರಣ

              ವ್ಯಕ್ತಿಯೊಬ್ಬ ಕರಿಮೆಣಸನ್ನು ಕುಯ್ಯುತ್ತಿರುವಾಗ ಏಣಿಯಿಂದ ಕೆಳಕ್ಕೆ ಬಿದ್ದು ಗಾಯಗೊಂಡು ಮೃತಪಟ್ಟ ಘಟನೆ ಮಡಿಕೇರಿ ತಾಲೂಕಿನ ಕೈಕಾಡು ಗ್ರಾಮದಲ್ಲಿ ನಡೆದಿದೆ. ದಿನಾಂಕ 20-3-2017 ರಂದು ಬಲ್ಲಮಾವಟಿ ಗ್ರಾಮದ ನಿವಾಸಿ ನಾಣಯ್ಯ ಎಂಬುವವರು ಕೈಕಾಡು ಗ್ರಾಮದ ಬಟ್ಟಿಯಂಡ ರಮೇಶರವರ ಕಾಫಿ ತೋಟದಲ್ಲಿ ಕರಿಮೆಣಸನ್ನು ಕುಯ್ಯುತ್ತಿರುವಾಗ ಆಕಸ್ಮಿಕವಾಗಿ ಏಣಿಯಿಂದ ಕೆಳಗೆ ಬಿದ್ದು ಗಾಯಗೊಂಡವರನ್ನು ಚಿಕಿತ್ಸೆಯ ಬಗ್ಗೆ ಸುಳ್ಯದ ಕೆ.ವಿ.ಜಿ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ 23-3-2017 ರಂದು ಮೃತಪಟ್ಟಿದ್ದು ಈ ಬಗ್ಗೆ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಕರಿ ಮೆಣಸು ಕಳವು

                 ಸೋಮವಾರಪೇಟೆ ತಾಲೂಕಿನ ನೇಗಳ್ಳೆ ಗ್ರಾಮದ ನಿವಾಸಿ ಅಜಿತ್ ಕುಮಾರ್ ಎಂಬುವವರು ಕಾಳು ಮೆಣಸನ್ನು ಕುಯ್ದು ತನ್ನ ಮನೆಯ ಅಂಗಳದಲ್ಲಿ ಇಟ್ಟಿದ್ದು, ದಿನಾಂಕ 18-3-2017 ರಂದು ಬೆಳಿಗ್ಗೆ ನೋಡುವಾಗ 14 ಚೀಲಗಳ ಪೈಕಿ 8 ಚೀಲ ಕಾಳು ಮೆಣಸು ಕಳವು ಆಗಿದ್ದು, ಈ ಬಗ್ಗೆ ಮೋಹನ ಮತ್ತು ಸಿಂದು ಎಂಬುವವರ ಮೇಲೆ ಗುಮಾನಿ ಇರುವುದಾಗಿ ದಿನಾಂಕ 23-3-2017 ರಂದು ಕೊಟ್ಟ ಪುಕಾರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಅಕ್ರಮ ಮರಳು ಸಾಗಾಟ
               ಮಡಿಕೇರಿಯ ಗಣಿ ಮತ್ತು ಭೂ ಇಲಾಖೆಯ ಭೂ ವಿಜ್ಞಾನಿ ಶ್ರೀ ಎಸ್ ನಾಗೇಂದ್ರಪ್ಪರವರು ದಾಳಿ ನಡೆಸಿ ಅಕ್ರಮವಾಗಿ ಸರ್ಕಾರದ ಪರವಾನಿಗೆ ಇಲ್ಲದೆ ಮರಳನ್ನು ಸಾಗಾಟ ಮಾಡುತ್ತಿದ್ದ ಲಾರಿಯನ್ನು ವಶಪಡಿಸಿಕೊಂಡ ಘಟನೆ ವಿರಾಜಪೇಟೆ ತಾಲೂಕಿನ ಹರಿಹರ ಗ್ರಾಮದಲ್ಲಿ ನಡೆದಿದೆ. ದಿನಾಂಕ 23-3-2017 ರಂದು ಶ್ರೀ ಎಸ್ ನಾಗೇಂದ್ರ ರವರು ಬೆಳಿಗ್ಗೆ 6-00 ಗಂಟೆಯ ಸಮಯದಲ್ಲಿ ಹರಿಹರ ಗ್ರಾಮದಲ್ಲಿ ವಾಹನಗಳನ್ನು ಪರಿಶೀಲಿಸುತ್ತಿರುವಾಗ ಹರಿಹರ ಕಡೆಯಿಂದ ಬೆಳ್ಳೂರು ಕಡೆ ಹೋಗುವ ರಸ್ತೆಯಲ್ಲಿ ಬಂದಂತಹ ಕೆಎ-12-ಎ-9145 ರ ಸ್ವರಾಜ್ ಮಜ್ದಾ ವಾಹನವನ್ನು ತಡೆದು ಪರಿಶೀಲಿಸಿದಾಗ ಅದರಲ್ಲಿ ಮರಳು ತುಂಬಿದ್ದು, ಚಾಲಕನು ಓಡಿಹೋಗಿದ್ದು ಈ ಬಗ್ಗೆ ಶ್ರೀ ಎಸ್ ನಾಗೇಂದ್ರಪ್ಪ ರವರು ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ವಿದ್ಯುತ್ ತಂತಿ ತಾಗಿ ವ್ಯಕ್ತಿಯ ದುರ್ಮರಣ
                 ಕಾಳು ಮೆಣಸು ಕುಯ್ಯುತ್ತಿರುವಾಗ ಅಲ್ಯುಮಿನಿಯಂ ಏಣಿಗೆ ವಿದ್ಯುತ್ ತಂಗಿ ತಾಗಿ ವ್ಯಕ್ತಿ ಮೃತಪಟ್ಟ ಘಟನೆ ಸುಂಟಿಕೊಪ್ಪ ಠಾಣಾ ಸರಹದ್ದಿನ ಹಾಲೇರಿ ಗ್ರಾಮದಲ್ಲಿ ವರದಿಯಾಗಿದೆ. ದಿನಾಂಕ 23-3-2017 ರಂದು ತಮಿಳುನಾಡು ರಾಜ್ಯದ ಸೇಲಂ ಜಿಲ್ಲೆಯ ನಿವಾಸಿ ಪಳನಿ ಸ್ವಾಮಿ ಎಂಬುವವರು ಹಾಲೇರಿ ಗ್ರಾಮದ ಬಾಲಕೃಷ್ಣ ರೈ ರವರ ತೋಟದಲ್ಲಿ ಕಾಳು ಮೆಣಸು ಕುಯ್ಯುತ್ತಿರುವಾಗ ಅಲ್ಯೂಮೀನಿಯಂ ಏಣಿಯನ್ನು ಒಂದು ಮರದಿಂದ ಇನ್ನೋಂದು ಮರಕ್ಕೆ ಬದಲಾಯಿಸುವಾಗ ಆಕಸ್ಮಿಕವಾಗಿ ವಿದ್ಯುತ್ ತಂತಿ ತಗುಲಿ ಪಳನಿಸ್ವಾಮಿಯವರು ಮೃತಪಟ್ಟಿದ್ದು ಈ ಬಗ್ಗೆ ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.