Saturday, March 25, 2017

ಮೋಟಾರು ಸೈಕಲ್ ಗೆ ಲಾರಿ ಡಿಕ್ಕಿ
      ಮೋಟಾರು ಸೈಕಲಿಗೆ ಹಿಂದಿನಿಂದ ಕಂಟೇನರ್ ಲಾರಿ ಡಿಕ್ಕಿಯಾಗಿ ಸವಾರ ಗಾಯಗೊಂಡ ಘಟನೆ ಕುಶಾಲನಗರದ ಮುಳ್ಳುಸೋಗೆ ಎಂಬಲ್ಲಿಂದಸವರದಿಯಾಗಿದೆ. ದಿನಾಂಕ 22-3-2017 ರಂದು ಬೈಲ್ ಕೊಪ್ಪದ ನಿವಾಸಿ ರಮೇಶರವರು ಟಿವಿಎಸ್ ಮೊಪೆಡ್ ನಲ್ಲಿ ಹೋಗುತ್ತಿರುವಾಗ ಮುಳ್ಳುಸೋಗೆ ಎಂಬಲ್ಲಿಗೆ ತಲುಪುವಾಗ ಹಿಂದಿನಿಂದ ಬಂದ ಕಂಟೈನರ್ ಲಾರಿಯನ್ನು ಚಾಲಕ ತೀರ್ಥರಾಮ ಎಂಬುವವರು ಅಜಾಗರೂಕತೆಯಿಂದ ಚಾಲನೆ ಮಾಡಿ ಡಿಕ್ಕಿ ಪಡಿಸಿದ ಪರಿಣಾಮ ರಮೇಶರವರಿಗೆ ಗಾಯಗಳಾಗಿದ್ದು ಈ ಬಗ್ಗೆ ಕುಶಾಲನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
 
ಕ್ಷುಲ್ಲಕ ಕಾರಣಕ್ಕೆ ಜಗಳ:
      ಶ್ರೀಮಂಗಲ ಠಾಣಾ ಸರಹದ್ದಿನ ಬಾಡಗರಕೇರಿ ಗ್ರಾಮದ ನಿವಾಸಿಯಾದ ಮಲ್ಲೇಂಗಡ ತಿಮ್ಮಯ್ಯ ಎಂಬುವವರು  ಅದೇ ಗ್ರಾಮದ ಮಲ್ಲೇಂಗಡ ಮಾದಪ್ಪ ಎಂಬುವವರ ತೋಟದ ಒಳಗೆ ಪ್ರವೇಶ ಮಾಡಿ ಸ್ಪಿಂಕ್ಲರ್ ಪೈಪುಗಳನ್ನು ಜೋಡಿಸಿದ್ದು ಈ ಬಗ್ಗೆ ತಿಮ್ಮಯ್ಯನವರನ್ನು ವಿಚಾರಿಸಿದಾಗ ಜಗಳ ತೆಗೆದು ಗುದ್ದಿ ನೋವು ಪಡಿಸಿ ಅವ್ಯಾಚ ಶಬ್ದಗಳಿಂದ ಬೈದಿದ್ದು ಈ ಬಗ್ಗೆ ಶ್ರೀಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ವ್ಯಕ್ತಿ ಕಾಣೆ:
        ಕೆಲಸಕ್ಕೆ ಹೋದ ವ್ಯಕ್ತಿ ವಾಪಾಸ್ಸು ಮನೆಗೆ ಬಾರದೇ ಕಾಣೆಯಾಗಿರುವ ಘಟನೆ ವಿರಾಜಪೇಟೆ ತಾಲೂಕಿನ ಕೈಕೇರಿ ಗ್ರಾಮದಿಂದ ವರದಿಯಾಗಿದೆ. ದಿನಾಂಕ 16-3-2017 ರಂದು ಕೈಕೇರಿ ಗ್ರಾಮದ ಈರಣ್ಣ ಕಾಲೋನಿಯ ನಿವಾಸಿ 30 ವರ್ಷ ಪ್ರಾಯದ ಸುಬ್ರಮಣಿ ಎಂಬುವವರು ಸೆಂಟ್ರಿಂಗ್ ಕೆಲಸಕ್ಕೆ ಹೋಗುವುದಾಗಿ ಹೇಳಿ ಹೋದವರು ಒಂದು ವಾರವಾದರೂ ಮನೆಗೆ ಬಾರದೇ ಇದ್ದು ಈ ಬಗ್ಗೆ ಸುಬ್ರಮಣಿಯವರ ಪತ್ನಿ ರತ್ನ ರವರು ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
 
ಕಾಡಾನೆ ದಾಳಿಗೆ ಕಾಲೇಜು ವಿದ್ಯಾರ್ಥಿನಿ ಬಲಿ:
      ವಿರಾಜಪೇಟೆ ತಾಲೂಕಿನ ತಾರಿಕಟ್ಟೆ ಭದ್ರಗೋಳ ಗ್ರಾಮದ ನಿವಾಸಿಯಾದ ಮುಸ್ತಫಾ ಎಂಬುವವರ ಮಗ ಸಾಕೀರ್ ಮತ್ತು ಮಗಳು ಸಫಾನ ಎಂಬುವವರು ಗೋಣಿಕೊಪ್ಪ ಕಾವೇರಿ ಕಾಲೇಜಿನಲ್ಲಿ ಬಿ.ಕಾಂ. ವ್ಯಾಸಾಂಗ ಮಾಡುತ್ತಿದ್ದು ದಿನಾಂಕ 24-3-2017 ರಂದು ಎಂದಿನಂತೆ ಕಾಲೇಜಿಗೆ ಸ್ಕೂಟಿಯಲ್ಲಿ ಇಬ್ಬರು ಹೋಗುತ್ತಿರುವಾಗ ಕಾಫಿ ತೋಟದ ಒಳಗಿನಿಂದ ಕಾಡಾನೆಯೊಂದು ಹಠಾತ್ ದಾಳಿ ನಡೆಸಿ ಸಫಾನರವರನ್ನು ಸಾಯಿಸಿದ್ದು, ಶಾಕೀರ್ ರವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಈ ಬಗ್ಗೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಕೊಲೆಗೆ ಯತ್ನ:
      ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬರಿಗೆ ಚೂರಿಯಿಂದ ಇರಿದು ಗಾಯಗೊಳಿಸಿದ ಘಟನೆ ಮಡಿಕೇರಿ ತಾಲೂಕಿನ ಕಗ್ಗೋಡ್ಲು ಗ್ರಾಮದಲ್ಲಿ ವರದಿಯಾಗಿದೆ. ಕಗ್ಗೋಡ್ಲು ಗ್ರಾಮದ ಸ್ಟಾರ್ಸನ್ ರವರ ಲೈನು ಮನೆಯಲ್ಲಿ ವಾಸವಿರುವ ರಾಜು ಎಂಬುವವರು ಅವರ ಪತ್ನಿ ಯೊಂದಿಗೆ ಜಗಳಮಾಡಿದಾಗ ರಾಜುವಿನ ಪತ್ನಿ ದಿವ್ಯರವರು ಮಗುವನ್ನು ಕರೆದುಕೊಂಡು ಗುರುಪ್ರಸಾದ್ ರವರ ಮನೆಗೆ ಬಂದಾಗ ಗುರುಪ್ರಸಾದ್ ರವರು ಏಕೆ ಹೆಂಡತಿಯೊಂದಿಗೆ ಜಗಳ ಮಾಡುತ್ತೀಯಾ ಎಂದು ಕೇಳಿದ ವಿಷಯದಲ್ಲಿ  ಜಗಳ ತೆಗೆದು  ಚಾಕುವಿನಿಂದ ಗುರುಪ್ರಸಾದ್ ರವರ ಗಲ್ಲ, ಕುತ್ತಿಗೆಯ ಭಾಗಕ್ಕೆ  ತಿವಿದು ಗಾಯಪಡಿಸಿ ಕೊಲೆ ಮಾಡಲು ಯತ್ನಿಸಿದ್ದು ಈ ಬಗ್ಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಹಳೇ ದ್ವೇಷ ವ್ಯಕ್ತಿಯ ಮೇಲೆ ಹಲ್ಲೆ:
      ಹಳೇ ದ್ವೇಷದಿಂದ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿ ಗಾಯಗೊಳಿಸಿದ ಘಟನೆ ಮಡಿಕೇರಿ ತಾಲೂಕಿನ ಹೆರವನಾಡು ಗ್ರಾಮದಲ್ಲಿ ವರದಿಯಾಗಿದೆದಿನಾಂಕ 24-3-2017 ರಂದು ಹೆರವನಾಡು ಗ್ರಾಮದ ನಿವಾಸಿಯಾದ ಹೊನ್ನಪ್ಪರವರು ಐನ್ ಮನೆಯಿಂದ ನಡೆದುಕೊಂಡು ತಮ್ಮ ಮನೆಗೆ ಹೋಗುತ್ತಿರುವಾಗ ಗೋಪಾಲಕೃಷ್ಣ, ಇಂದಿರ ಮತ್ತು ಲವರವರು ಜಗಳ ತೆಗೆದು ಕೈಗಳಿಂದ ಹಾಗೂ ಕತ್ತಿಯಿಂದ ಹಲ್ಲೆ ನಡೆಸಿ ಗಾಯಪಡಿಸಿದ್ದು ಈ ಬಗ್ಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.