Monday, March 27, 2017

ಮೋಟಾರು ಸೈಕಲ್ ಕಳವು
           ನಿಲ್ಲಿಸಿದ್ದ ಮೋಟಾರು ಸೈಕಲನ್ನು ಕಳವು ಮಾಡಿರುವ ಘಟನೆ ಸೋಮವಾರಪೇಟೆಯ ಬಜೆಗುಂಡಿ ಎಂಬಲ್ಲಿ ನಡೆದಿದೆ. ದಿನಾಂಕ 24-3-2017 ರಂದು ಬಜೆಗುಂಡಿಯ ನಿವಾಸಿ ವಿಜಯಕುಮಾರ್ ಎಂಬುವವರು ತಮ್ಮ ಪಲ್ಸರ್ ಮೋಟಾರು ಸೈಕಲನ್ನು ಬಜೆಗುಂಡಿಯ ಕಲ್ಲು ಬಂಗಲೆಯ ಹತ್ತಿರ ನಿಲ್ಲಿಸಿ ಕುಶಾಲನಗರಕ್ಕೆ ಹೋಗಿ ವಾಪಾಸ್ಸು ಬಂದು ನೋಡುವಾಗ ಕಳುವಾಗಿದ್ದು ಈ ಬಗ್ಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ವ್ಯಕ್ತಿಯ ಆತ್ಮಹತ್ಯೆ
              ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೋಮವಾರಪೇಟೆ ತಾಲೂಕಿನ ಶಾಂತಳ್ಳಿ ಗ್ರಾಮದಲ್ಲಿ ನಡೆದಿದೆ. ಶಾಂತಳ್ಳಿಯ ನಿವಾಸಿ ಧರ್ಮಪ್ಪ ಎಂಬುವವರು ದಿನಾಂಕ 20-3-2017 ರಂದು ತನ್ನ ಪತ್ನಿಯನ್ನು ಕೊಲೆ ಮಾಡಿ ತಲೆಮರೆಸಿಕೊಂಡಿದ್ದು ದಿನಾಂಕ 26-3-2017 ರಂದು ಧರ್ಮಪ್ಪರವರ ಅಣ್ಣ ಪೊನ್ನಪ್ಪರವರು ತೋಟದ ಕಡೆಗೆ ಹೋಗುತ್ತಿರುವಾಗ ಕಾಡು ಪ್ರದೇಶದಲ್ಲಿ ಕೆಟ್ಟ ವಾಸನೆ ಬರುತ್ತಿದ್ದುದ್ದನ್ನು ಕಂಡು ಹೋಗಿ ನೋಡಲಾಗಿ ಧರ್ಮಪ್ಪರವರು ನೇಣು ಬಿಗಿದುಕೊಂಡು ಆತ್ಮ ಹತ್ಯೆ ಮಾಡಿಕೊಂಡು ದೇಹವು ಕೊಳೆತ ಸ್ಥಿತಿಯಲ್ಲಿದ್ದು ಈ ಬಗ್ಗೆ ಪೊನ್ನಪ್ಪನವರು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಆಟೋ ರಿಕ್ಷಾಕ್ಕೆ ಟಾಟಾ ಸುಮೋ ಡಿಕ್ಕಿ
              ಆಟೋ ರಿಕ್ಷಾಕ್ಕೆ ಟಾಟಾ ಸುಮೋ ಡಿಕ್ಕಿಯಾಗಿ  ಪ್ರಯಾಣಿಕರು ಗಾಯಗೊಂಡ ಘಟನೆ ವಿರಾಜಪೇಟೆ ತಾಲೂಕಿನ ಕುಂದ ಗ್ರಾಮದಲ್ಲಿ ವರದಿಯಾಗಿದೆ. ದಿನಾಂಕ 26-3-2017 ರಂದು ಕುಂದ ಗ್ರಾಮದ ನಿವಾಸಿಸಿಯಾದ ಪ್ರೇಮ ಮತ್ತು ಪ್ರತೀಕರವರು ಆಟೋದಲ್ಲಿ ಮನೆಗೆ ಹೋಗುತ್ತಿರುವಾಗ ಹಳ್ಳಿಗಟ್ಟು ಎಂಬಲ್ಲಿ ಎದುರುಗಡೆಯಿಂದ ಟಾಟಾ ಸುಮೋವನ್ನು ಚಾಲಕ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಆಟೋ ರಿಕ್ಷಾಕ್ಕೆ ಡಿಕ್ಕಿಪಡಿಸಿದ ಪರಿಣಾಮ ಆಟೋ ಚಾಲಕ ಪೊನ್ನಪ್ಪ ಹಾಗೂ ಪ್ರಯಾಣಿಕರಿಬ್ಬರಿಗೂ ಗಾಯಗಳಾಗಿದ್ದು ಈ ಬಗ್ಗೆ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

 ಕಾಫಿ ಕಳವು
             ಕಾಫಿ ಕಣದಲ್ಲಿ ಒಣಗಲು ಹಾಕಿದ್ದ ಕಾಫಿಯನ್ನು ಕಳವು ಮಾಡಿರುವ ಘಟನೆ ವಿರಾಜಪೇಟೆ ತಾಲೂಕಿನ ಹೆಗ್ಗಳ ಗ್ರಾಮದಲ್ಲಿ ವರದಿಯಾಗಿದೆ. ಹೆಗ್ಗಳ ಗ್ರಾಮದ ನಿವಾಸಿಯಾದ ಶ್ರೀಮತಿ ಸುಶೀಲಾ ರಾಮ್ ದಾಸ್ ರವರು ತಮ್ಮ ಕಾಫಿ ಕಣದಲ್ಲಿ ಒಣಗಲು ಹಾಕಿದ್ದ ಕಾಫಿಯಲ್ಲಿ ಸುಮಾರು 7 ಚೀಲದಷ್ಟು ಕಾಫಿಯನ್ನು ದಿನಾಂಕ 25-3-2017 ರ ರಾತ್ರಿ ಯಾರೋ ಕಳವು ಮಾಡಿರುವುದಾಗಿ ಕೊಟ್ಟ ಪುಕಾರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

 ಪಾದಾಚಾರಿಗೆ ಕಾರು ಡಿಕ್ಕಿ
                  ಪಾದಾಚಾರಿ ಬಾಲಕನಿಗೆ ಕಾರು ಡಿಕ್ಕಿಯಾಗಿ ಬಾಲಕ ಗಾಯಗೊಂಡ ಘಟನೆ ವಿರಾಜಪೇಟೆಯ ಪೆರಂಬಾಡಿ ಎಂಬಲ್ಲಿ ವರದಿಯಾಗಿದೆ. ದಿನಾಂಕ 25-3-2017 ರಂದು ಪೆರಂಬಾಡಿಯ ನಿವಾಸಿ ಗಣೇಶರವರ ಮಗ 7 ವರ್ಷ ಪ್ರಾಯದ ಲತೀಶ್ ಅಯ್ಯಪ್ಪ ಎಂಬುವವನು ಅಂಗಡಿಗೆ ಹೋಗಿ ವಾಪಾಸ್ಸು ಮನೆಗೆ ಹೋಗುತ್ತಿರುವಾಗ 1 ನೇ ಪೆರಂಬಾಡಿ ಜಂಕ್ಷನ್ ಬಳಿ ಕಾರನ್ನು ಚಾಲಕ ಅಜಾಗರೂಕತೆಯಿಂಧ ಚಾಲನೆ ಮಾಡಿಕೊಂಡು ಹೋಗಿ ಡಿಕ್ಕಿಪಡಿಸಿದ ಪರಿಣಾಮ ಲತೀಶ್ ಅಯ್ಯಪ್ಪನಿಗೆ ಗಾಯವಾಗಿದ್ದು ಈ ಬಗ್ಗೆ ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಬೈಕ್ ಅಪಘಾತ 
                 ಬೈಕು ಅಪಘಾತಗೊಂಡು ಹಿಂಬದಿ ಸವಾರ ಗಾಯಗೊಂಡ ಘಟನೆ ಕುಶಾಲನಗರದಲ್ಲಿ ವರದಿಯಾಗಿದೆ. ದಿನಾಂಕ 25-3-2017 ರಂದು ಕುಶಾಲನಗರದ ನಿವಾಸಿಯಾದ ಮೊಹಮ್ಮದ್ ಆಶಿಕ್ ಮತ್ತು ಪನಿಷಾರವರು ಮೋಟಾರು ಸೈಕಲಿನಲ್ಲಿ ಹೋಗುತ್ತಿರುವಾಗ ಟಾಪ್ ಇನ್ ಟೌನ್ ಹೊಟೆಲ್ ಹತ್ತಿರ ಬೈಕ್ ನಿಯಂತ್ರಣ ತಪ್ಪಿ ಬಿದ್ದು ಹಿಂಬದಿ ಸವಾರ ಪನಿಷಾ ರವರಿಗೆ ತಲೆಗೆ ಗಾಯವಾಗಿದ್ದು ಈ ಬಗ್ಗೆ ಕುಶಾಲನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.