Wednesday, March 29, 2017


ಕಳವು ಪ್ರಕರಣ
         ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಮನೆಯ ಒಳಗೆ ನುಗ್ಗಿ ಕಳ್ಳತನ ಮಾಡಿರುವ ಘಟನೆ ಸೋಮವಾರಪೇಟೆ ತಾಲೂಕಿನ ಅಭ್ಯತ್ ಮಂಗಲ ಗ್ರಾಮದಲ್ಲಿ ವರದಿಯಾಗಿದೆ. ಅಭ್ಯತ್ ಮಂಗಲ ಗ್ರಾಮದ ನಿವಾಸಿ ಶ್ರೀಮತಿ ರತ್ನರವರು ದಿನಾಂಕ 26-3-2017 ರಂದು ಪತಿ ಸುಬ್ರಮಣ್ಯರವರೊಂದಿಗೆ ತಮ್ಮ ತವರು ಮನೆಗೆ ಹೋಗಿದ್ದು ವಾಪಾಸ್ಸು ಮನೆಗೆ ದಿನಾಂಕ 27-3-2017 ರಂದು ಬಂದು ನೋಡುವಾಗ ಮನೆಯ ಡೈನಿಂಗ್ ಹಾಲ್ ನ ಶೀಟನ್ನು ಒಡೆದು ಒಳನುಗ್ಗಿ ಶೋಕೇಸ್ ನಲ್ಲಿ ಇಟ್ಟಿದ್ದ 1,12,000 ರೂ ನಗದನ್ನು ಯಾರೋ ಕಳವು ಮಾಡಿದ್ದು ಈ ಬಗ್ಗೆ ಶ್ರೀಮತಿ ರತ್ನರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.