Friday, March 3, 2017

ಜೀವನದಲ್ಲಿ ಜುಗುಪ್ಸೆ ವ್ಯಕ್ತಿಯ ಆತ್ಮ ಹತ್ಯೆ
                 ಜೀವನದಲ್ಲಿ ಜುಗುಪ್ಸೆಗೊಂಡು ಮಹಿಳೆಯೊಬ್ಬರು ವಿಷ ಕುಡಿದು ಆತ್ಮ ಹತ್ಯೆ ಮಾಡಿಕೊಂಡಿರುವ ಘಟನೆ ಹೊಸೂರು ಬೆಟ್ಟಗೇರಿ ಗ್ರಾಮದಿಂದ ವರದಿಯಾಗಿದೆ. ಹೊಸೂರು ಬೆಟ್ಟಗೇರಿ ಗ್ರಾಮದ ಮೂಕಾ ಎಸ್ಟೇಟ್ ನಲ್ಲಿ ವಾಸವಿರುವ ಗುರುವಮ್ಮ ಎಂಬುವವರು, ತಮ್ಮ ಪತಿ ಮೃತಪಟ್ಟಿದ್ದ ಕಾರಣ ಹಾಗೂ ಬಲಕೈ ಸ್ವಾದೀನ ಇಲ್ಲದೇ ಇದ್ದು ಇದನ್ನು ಮನಸ್ಸಿಗೆ ಹಚ್ಚಿಕೊಂಡು ಇದರಿಂದ ಮನನೊಂದು ದಿನಾಂಕ 02-03-2017 ರಂದು ವಿಷ ಸೇವಿಸಿ ಆತ್ಮ ಹತ್ಯೆ ಮಾಡಿಕೊಂಡಿರುವುದಾಗಿ ಮಗ ರಾಜೇಶ್ ರವರು ನೀಡಿದ ದೂರಿಗೆ ಸಿದ್ದಾಪುರ ಠಾಣೆಯಲ್ಲಿಪ್ರಕರಣ ದಾಖಲಾಗಿರುತ್ತದೆ.

ಜೇಬು ಕಳ್ಳತನ
                   ದಿನಾಂಕ 2-3-2017 ರಂದು ಕುಶಾಲನಗರದ ಕೂಡುಮಂಗಳೂರು ಗ್ರಾಮದ ನಿವಾಸಿ ಶಶಿಕಿರಣ್ ರವರು ಕೂಡಿಗೆ ಬಸ್ಸು ತಂಗುದಾಣದ ಬಳಿ ಸ್ನೇಹಿತನೊಂದಿಗೆ ನಿಂತುಕೊಂಡಿರುವಾಗ ಕೂಡ್ಲೂರು ನವಗ್ರಾಮದ ನಿವಾಸಿಯಾದ ಶ್ರೀನಿವಾಸ ಎಂಬುವವನು ಬಂದು ಪ್ಯಾಂಟಿನ ಹಿಂಬದಿ ಜೇಬಿನಲ್ಲಿದ್ದ ಪರ್ಸ್‌ ಕಳ್ಳತನ ಮಾಡಿಕೊಂಡು ಓಡುತ್ತಿದ್ದವನನ್ನು ಹಿಡಿದು ದೂರು ನೀಡಿದ ಮೇರೆಗೆ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಮೋಟಾರು ಸೈಕಲಿಗೆ ಬಸ್ಸು ಡಿಕ್ಕಿ
                  ಮೋಟಾರು ಸೈಕಲಿಗೆ ಕರ್ನಾಟಕ ಸಾರಿಗೆ ಬಸ್ಸು ಡಿಕ್ಕಿಯಾಗಿ ಸೈಕಲ್ ಸವಾರನಿಗೆ ಗಾಯವಾದ ಘಟನೆ ಮಡಿಕೇರಿ ಮಂಗಳೂರು ರಸ್ತೆಯಲ್ಲಿ ನಡೆದಿದೆ. ದಿನಾಂಕ 2-3-2017 ರಂದು ಪುತ್ತೂರಿನ ನಿವಾಸಿಯಾದ ಶೈನ್ ಅಬ್ರಾಹಂ ರವರು ಮೋಟಾರು ಸೈಕಲಿನಲ್ಲಿ ಮಡಿಕೇರಿ ಕಡೆಗೆ ಬರುತ್ತಿರುವಾಗ ಮಡಿಕೇರಿ ಕಡೆಯಿಂದ ಹೋಗುತ್ತಿದ್ದ ಕರ್ನಾಟಕ ಸಾರಿಗೆ ಬಸ್ಸನ್ನು ಚಾಲಕ ಚಂದ್ರಶೇಖರರವರು ಅಜಾಗರೂಕತೆಯಿಂದ ಚಾಲನೆ ಮಾಡಿ ಮೋಟಾರು ಸೈಕಲಿಗೆ ಡಿಕ್ಕಿ ಪಡಿಸಿದ್ದು, ಮೋಟಾರು ಸೈಕಲ್ ಸವಾರ ಶೈನ್ ಅಬ್ರಾಹಂ ರವರಿಗೆ ಗಾಯಗಳಾಗಿದ್ದುಈ ಬಗ್ಗೆ ಶೈನ್ ಅಬ್ರಾಹಂರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ನೇಣು ಬಿಗಿದುಕೊಂಡು ವ್ಯಕ್ತಿಯ ಆತ್ಮಹತ್ಯೆ
                 ವ್ಯಕ್ತಿಯೊಬ್ಬ ಜೀವನದಲ್ಲಿ ಜುಗುಪ್ಸೆಗೊಂಡು ನೇಣು ಬಿಗಿದುಕೊಂಡು ಆತ್ಮಹತ್ಯೆಮಾಡಿಕೊಂಡಿರುವ ಘಟನೆ ಸೋಮವಾರಪೇಟೆ ತಾಲೂಕಿನ ಬೆಳ್ಳೂರು ಗ್ರಾಮದಿಂದ ವರದಿಯಾಗಿದೆ. ಬೆಳ್ಳೂರು ಗ್ರಾಮದ ನಿವಾಸಿಯಾದ ಚೆಲುವರಾಜು ಎಂಬುವವರು ವಿಪರೀತ ಮದ್ಯಪಾನ ಮಾಡುತ್ತಿದ್ದು ಜೀವನದಲ್ಲಿ ಜುಗುಪ್ಸೆಗೊಂಡು ದಿನಾಂಕ 1-3-2017 ರಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಈ ಬಗ್ಗೆ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಟ್ರ್ಯಾಕ್ಟರ್
ಮಗುಚಿ ಇಬ್ಬರು ವ್ಯಕ್ತಿಗಳ ದುರ್ಮರಣ
                   ಟ್ರ್ಯಾಕ್ಟರೊಂದು ಚಾಲಕನ ನಿಯಂತ್ರಣ ತಪ್ಪಿ ಮಗುಚಿಬಿದ್ದು ಚಾಲಕ ಹಾಗೂ ಪಕ್ಕದಲ್ಲಿ ಕುಳಿತ್ತಿದ್ದ ವ್ಯಕ್ತಿಯೊಬ್ಬ ಮರಣಗೊಂಡ ಘಟನೆ ಮಾದಾಪುರ ರಸ್ತೆಯ ಗುಂಡುಕುಟ್ಟಿ ಜಂಕ್ಷನ್ ಎಂಬಲ್ಲಿ ಸಂಭವಿಸಿದೆ. ಪನ್ಯ ಎಸ್ಟೇಟ್ ನ ಲೈನ್ ಮನೆಯಲ್ಲಿ ವಾಸವಿರುವ ಕೆಲಸದವರರು ನಾಕೂರು ಗ್ರಾಮದ ಗಂಗಾಧರರವರ ಕಾಫಿ ತೋಟಕ್ಕೆ ಕೆಲಸಕ್ಕೆ ಹೋಗಿ ಕೆಲಸ ಮುಗಿಸಿ ವಾಪಾಸ್ಸು ಟ್ರ್ಯಾಕ್ಟರಿನಲ್ಲಿ ಹೋಗುತ್ತಿರುವಾಗ ಗುಂಡುಕುಟ್ಟಿ ಎಸ್ಟೇಟ್ ನ ಜಂಕ್ಷನ್ ಬಳಿ ತಲುಪುವಾಗ ಚಾಲಕ ಯೂಸುಫ್ ರವರು ಟ್ರ್ಯಾಕ್ಟರನ್ನು ಅಜಾಗರೂಕತೆಯಿಂದ ಚಾಲನೆ ಮಾಡಿ ರಸ್ತೆಯ ಎಡಬದಿಯ ಗುಂಡಿಗೆ ಬೀಳಿಸಿದ ಪರಿಣಾಮ ಟ್ರ್ಯಾಕ್ಟರ್ ಮಗುಚಿಬಿದ್ದು ಚಾಲಕ ಯೂಸುಫ್ ಮತ್ತು ಅಣ್ಣಮಲೈ ಎಂಬುವವರು ಮೃತಪಟ್ಟಿದ್ದು, ಮಾಣಿಕ್ಯ ಎಂಬುವವರಿಗೆ ಗಾಯಗಳಾಗಿದ್ದು, ಈ ಬಗ್ಗೆ ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.