Friday, March 31, 2017

ಹಣದ ವಿಚಾರಕ್ಕೆ ಜಗಳ
       ಹಣದ ವಿಚಾರದಲ್ಲಿ ಜಗಳ ಮಾಡಿ ಗಾಯಪಡಿಸಿರುವ ಘಟನೆ ಸೋಮವಾರಪೇಟೆ ತಾಲೂಕಿನ ಕೊಡ್ಲಿಪೇಟೆ ಎಂಬಲ್ಲಿ ವರದಿಯಾಗಿದೆ. ಕೊಡ್ಲಿಪೇಟೆಯ ದೊಡ್ಡಕೊಡ್ಲಿ ಗ್ರಾಮದ ನಿವಾಸಿಯಾದ ಗಣೇಶ ಎಂಬುವವರ ಮಗನೊಂದಿಗೆ ಅಭೀಷೇಕ್  ಎಂಬುವವನೊಂದಿಗೆ ಗೆಳೆಯರಾದ ದಿಲೀಪ್ ಮತ್ತು ಸಂದೀಪ್ ರವರು 100 ರೂ ಹಣದ ವಿಚಾರದಲ್ಲಿ ಜಗಳವಾಡಿ ಹಲ್ಲೆ ನಡೆಸಿದ್ದು ಈ ಬಗ್ಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಕಾಳು ಮೆಣಸು ಕಳವು
     ಗೋದಾಮಿನಲ್ಲಿಟ್ಟಿದ್ದ ಕಾಳು ಮೆಣಸನ್ನು ಕಳವು ಮಾಡಿರುವ ಘಟನೆ ವಿರಾಜಪೇಟೆ ತಾಲೂಕಿನ ಕಣ್ಣಂಗಾಲ ಗ್ರಾಮದಲ್ಲಿ ವರದಿಯಾಗಿದೆ. ಪುಲಿಯೇರಿ ಗ್ರಾಮದ ನಿವಾಸಿಯಾದ ರಿಯಾಜ್ ಎಂಬುವವರು ಕೊಂಗಂಡ ರಾಧಾ ಬಿದ್ದಪ್ಪನವರ ಮಕ್ಕಳಾದ ಗಂಗಾ ಮತ್ತು ಲಾಕ್ ಮಿ ರವರಿಗೆ ಸೇರಿದ ಕಣ್ಣಂಗಾಲ ಗ್ರಾಮದಲ್ಲಿರುವ ಕಾಫಿ ತೋಟವನ್ನು ಭೋಗ್ಯಕ್ಕೆ ಪಡೆದಿದ್ದು, ತೋಟದಲ್ಲಿ ಬೆಳೆದ ಕಾಳುಮೆಣಸನ್ನು ಒಣಗಿಸಿ ಗೋದಾಮಿನಲ್ಲಿ ಶೇಖರಿಸಿಟ್ಟಿದ್ದು ದಿನಾಂಕ 29-3-2017ರ ರಾತ್ರಿ  ಗೋದಾಮಿನ ಬೀಗವನ್ನು ಮುರಿದು ಸುಮಾರು 300 ಕೆ.ಜಿ ಯಷ್ಟು ಕರಿಮೆಣಸನ್ನು ಯಾರೋ ಕಳವು ಮಾಡಿದ್ದು ಈ ಬಗ್ಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಮೋಟಾರು ಸೈಕಲ್ ಅಪಘಾತ
     ಮೋಟಾರು ಸೈಕಲ್ ಅಪಘಾತಗೊಂಡು ಸವಾರ ಗಾಯಗೊಂಡ ಘಟನೆ ಸುಂಟಿಕೊಪ್ಪದ ಕೊಡಗರಹಳ್ಳಿಯಲ್ಲಿ ವರದಿಯಾಗಿದೆ. ಅರಕಲಗೋಡುವಿನ ನಿವಾಸಿಯಾದ ಧರ್ಮರವರ ಜೆ.ಸಿ.ಬಿಯಲ್ಲಿ ಚಾಲಕನಾಗಿರುವ ಮಂಜುನಾಥ ಎಂಬುವವರು ದಿನಾಂಕ  28-3-2017 ರಂದು ರಾತ್ರಿ 11-00 ಗಂಟೆಗೆ ಕೆಲಸ ಮುಗಿಸಿ ಮೋಟಾರು ಸೈಕಲಿನಲ್ಲಿ ಕುಶಾಲನಗರದಿಂದ ಮಡಿಕೇರಿ ಕಡೆಗೆ ಹೋಗುತ್ತಿರುವಾಗ ಕೊಡಗರಹಳ್ಳಿ ಎಂಬಲ್ಲಿಗೆ ತಲುಪುವಾಗ ಮೋಟಾರು ಸೈಕಲ್ ನಿಯಂತ್ರಣ ತಪ್ಪಿ ಮಗುಚಿಬಿದ್ದು ಗಾಯಗೊಂಡಿದ್ದು ಈ ಬಗ್ಗೆ ಧರ್ಮರವರು ನೀಡಿದ ದೂರಿನ ಮೇರೆ ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಆಟವಾಡುತ್ತಿದ್ದ ಮಗುವಿಗೆ ಬೈಕ್ ಡಿಕ್ಕಿ
       ಆಟವಾಡುತ್ತಿದ್ದ ಮಗುವಿಗೆ ಬೈಕ್ ಡಿಕ್ಕಿಯಾಗಿ ಮಗು ಗಾಯಗೊಂಡ ಘಟನೆ ಸಿದ್ದಾಪುರ ಠಾಣಾ ಸರಹದ್ದಿನ ಬಾಡಗ ಬಾಣಂಗಾಲ ಗ್ರಾಮದ ಹುಂಡಿ ಎಂಬಲ್ಲಿ ವರದಿಯಾಗಿದೆ. ಬಾಡಗ ಬಾಣಂಗಾಲ ಗ್ರಾಮದ ನಿವಾಸಿಯಾದ ರಮೇಶರವರ 4 ವರ್ಷ ಪ್ರಾಯ ಮಗಳು ಶ್ರಾವ್ಯಳು ಮನೆಯ ಮುಂದಿನ ರಸ್ತೆಯಲ್ಲಿ ಆಟವಾಡುತ್ತಿದ್ದಾಗ ಅದೇ ಗ್ರಾಮದ ನಿವಾಸಿ ಅಪ್ಸಲ್ ಎಂಬುವವನು ಮೋಟಾರು ಸೈಕಲನ್ನು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಡಿಕ್ಕಿಪಡಿಸಿದ ಪರಿಣಾಮ ಶ್ರಾವ್ಯಳಿಗೆ ಗಾಯವಾಗಿದ್ದು ಸವಾರನು ಮೋಟಾರು ಸೈಕಲನ್ನು ನಿಲ್ಲಿಸದೇ ಹೋಗಿದ್ದು ಈ ಬಗ್ಗೆ ರಮೇಶರವರು ನೀಡಿದ ದೂರಿನ ಮೇರೆಗೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಆಟೋ ರಿಕ್ಷಾಕ್ಕೆ ಸ್ಕೂಟಿ ಡಿಕ್ಕಿ
     ನಿಲ್ಲಿಸಿದ್ದ ಆಟೋರಿಕ್ಷಕ್ಕೆ ಸ್ಕೂಟಿ ಡಿಕ್ಕಿಯಾಗಿ ಸವಾರರಿಬ್ಬರು ಗಾಯಗೊಂಡ ಘಟನೆ ಕುಶಾಲನಗರದಲ್ಲಿ ವರದಿಯಾಗಿದೆ. ಬೈಲುಕೊಪ್ಪದ ನಿವಾಸಿಯಾದ ಸಾದಿಕ್ ಎಂಬುವವರು ಆಟೋರಿಕ್ಷಾವನ್ನು ದಿನಾಂಕ 30-3-2017 ರಂದು ಕುಶಾಲನಗರದ ಮಾರ್ಕೆಟ್ ಹತ್ತಿರ ಹಾದು ಹೋಗುವ ರಾಜ್ಯ ಹೆದ್ದಾರಿಯ ಪಕ್ಕದಲ್ಲಿ ನಿಲ್ಲಿಸಿದ್ದಾಗ ಎದುರಿನಿಂದ ಕುಶಾಲನಗರದ ನಿವಾಸಿಯಾದ ಮನೋಜ್ ಎಂಬುವವರು ಸ್ಕೂಟಿಯನ್ನು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ನಿಲ್ಲಿಸಿದ್ದ ಆಟೋ ರಿಕ್ಷಾಕ್ಕೆ ಡಿಕ್ಕಿಪಡಿಸಿದ ಪರಿಣಾಮ ಸ್ಕೂಟಿಯಲ್ಲಿದ್ದ ಮನೋಜ್ ಮತ್ತು ದರ್ಶನ್ ರವರಿಗೆ ಗಾಯಗಳಾಗಿದ್ದು ಈ ಬಗ್ಗೆ ಕುಶಾಲನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಸಂಗಡಿಗರಿಂದ ವ್ಕಕ್ತಿಯ ಕೊಲೆ
    ವ್ಯಕ್ತಿಯೊಬ್ಬನನ್ನು ಸಹಚರರು ಕೊಲೆ ಮಾಡಿ ಕೆರೆಯಲ್ಲಿ ಹಾಕಿರುವ ಘಟನೆ ವಿರಾಜಪೇಟೆ ತಾಲೂಕಿನ ಕುಟ್ಟದ ನಾಥಂಗಲ್ ಎಂಬಲ್ಲಿ ವರದಿಯಾಗಿದೆ. ಕುಟ್ಟ ಗ್ರಾಮದ ನಾಥಂಗಲ್ ನಿವಾಸಿ ಮಾಚಿಮಾಡ ಸುಬ್ಬಯ್ಯ ಎಂಬುವವರ ತೋಟಕ್ಕೆ ಕರಿಮೆಣಸು ಕುಯ್ಯಲು ಕೇರಳ ರಾಜ್ಯದಿಂದ ದಿನಾಂಕ 21-3-2017 ರಂದು ಬಂದಿದ್ದ ಸುರೇಶ, ವಿಜಯ, ಹ್ಯಾಸ್ಲಿ ಜಾನ್ ಮತ್ತು ರಘು ಎಂಬುವವರ ದಿನಾಂಕ 21-3-2017 ರಂದು ಬಂದು ಸುರೇಶ ಎಂಬವನ್ನು ಯಾವುದೋ ಕಾರಣಕ್ಕೆ  ವಿಜಯ, ಹ್ಯಾಸ್ಲಿ ಜಾನ್ ಮತ್ತು ರಘು ರವರುಗಳು ಸೇರಿ ಕೊಲೆ ಮಾಡಿ ಮೃತದೇಹವನ್ನು ಕೆರೆಯೊಂದರಲ್ಲಿ ಹಾಕಿ ಹೋಗಿದ್ದು,  ದಿನಾಂಕ 30-3-2017 ರಂದು ತೋಟದ ಮಾಲಿಕ ಸುಬ್ಬಯ್ಯನವರು ತೋಟಕ್ಕೆ ಕೆರೆಯಿಂದ ನೀರನ್ನು ಹಾರಿಸಲು ಹೋದಾಗ ಕೆರೆಯಲ್ಲಿ ಸುರೇಶರವರ ಮೃತ ದೇಹ ಪತ್ತೆಯಾಗಿದ್ದು,  ಈ ಸಂಬಂಧ ಕುಟ್ಟ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿರುತ್ತಾರೆ.