Tuesday, March 7, 2017

ಜೀವನದಲ್ಲಿ ಜುಗುಪ್ಸೆ ವ್ಯಕ್ತಿಯ ಆತ್ಮ ಹತ್ಯೆ
             ಜೀವನದಲ್ಲಿ ಜುಗುಪ್ಸೆಗೊಂಡು ವ್ಯಕ್ತಿಯೊಬ್ಬರು ವಿಷ ಕುಡಿದು ಆತ್ಮ ಹತ್ಯೆ ಮಾಡಿಕೊಂಡಿರುವ ಘಟನೆ ಮಡಿಕೇರಿತಾಲೂಕಿನ ಹೊದ್ದೂರು ಗ್ರಾಮದ ವಾಟೆಕಾಡು ಎಂಬಲ್ಲಿ ವರದಿಯಾಗಿದೆ. ವಾಟೆಕಾಡುವಿನ ನಿವಾಸಿ ಗಣೇಶ ಎಂಬುವವರು ಪಾಶ್ವವಾಯು ಖಾಯಿಲೆಯಿಂದ ಬಳಲುತ್ತಿದ್ದು ಇದೇ ವಿಚಾರದಲ್ಲಿ ಮನನೊಂದು ದಿನಾಂಕ 6-3-2017 ರಂದು ವಿಷ ಸೇವಿಸಿ ಆತ್ಮ ಹತ್ಯೆ ಮಾಡಿಕೊಂಡಿದ್ದು ಈ ಬಗ್ಗೆ ಮಡಿಕೇರಿ ಗ್ರಾಮಾಂತರ ಪ್ರಕರಣ ದಾಖಲಾಗಿರುತ್ತದೆ.

ವಾಹನ ಅಪಘಾತ
                  ದಿನಾಂಕ 6-3-2017 ರಂದು ಚಿತ್ತಾರ ವಾಹಿನಿಯ ನಿರ್ಧೇಶಕರಾದ ಸವಿತಾ ರೈ ರವರು ತಮ್ಮ ಸ್ಕೂಟಿಯಲ್ಲಿ ಕಚೇರಿಗೆ ಹೋಗುತ್ತಿರುವಾಗ ಮಡಿಕೇರಿ ನಗರದ ಎಂ ಎಂ ವೃತ್ತದ ಡಿಸಿಸಿ ಬ್ಯಾಂಕಿನ ಗೇಟಿನ ಬಳಿ ಎಂ ಎಂ ವೃತ್ತದ ಕಡೆಯಿಂದ ಕಾರನ್ನು ಚಾಲಕ ಆಶೀಶ್ ಎಂಬುವವರು ದುಡುಕಿನಿಂದ ಚಾಲನೆ ಮಾಡಿಕೊಂಡು ಹೋಗಿ ಸ್ಕೂಟಿಗೆ ಡಿಕ್ಕಿಪಡಿಸಿ ಸವಿತಾ ರೈರವರಿಗೆ ಗಾಯವಾಗಿದ್ದು ಈ ಬಗ್ಗೆ ಮಡಿಕೇರಿ ಸಂಚಾರಿ ಠಾಣೆಯಲ್ಲಿ ಪ್ರಕ್ರಣದಾಖಲಾಗಿರುತ್ತದೆ.

ಕಾಫಿ ಕಳವು
               ಮನೆಯ ಮುಂದಿನ ವರಾಂಡದಲ್ಲಿ ಇಟ್ಟಿದ್ದ ಕಾಫಿ ಯನ್ನು ಕಳವು ಮಾಡಿದ ಘಟನೆ ಮಡಿಕೇರಿ ತಾಲೂಕಿನ ದೊಡ್ಡ ಪುಲಿಕೋಟೆ ಗ್ರಾಮದಲ್ಲಿ ವರದಿಯಾಗಿದೆ. ದೊಡ್ಡ ಪುಲಿಕೋಟೆ ಗ್ರಾಮದ ನಿವಾಸಿ ಶ್ರೀಮತಿ ಸುನಂದ ಎಂಬುವವರು ತಮ್ಮ ಮನೆಯ ವರಾಂಡದಲ್ಲಿ 7 ಚೀಲಗಳಷ್ಟು ಕಾಫಿ ಯನ್ನು ಇಟ್ಟಿದ್ದು, ದಿನಾಂಕ 5-3-2017 ರ ರಾತ್ರಿ ಸಮಯದಲ್ಲಿ ಯಾರೋ ಕಳ್ಳರು ಸದ್ರಿ ಕಾಫಿಯನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ಶ್ರೀಮತಿ ಸುನಂದರವರು ನೀಡಿದ ದೂರಿನ ಮೇರೆಗೆ ಭಾಗಮಂಡಲ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ವಾಹನ ಅಪಘಾತ
                      ಸೋಮವಾರಪೇಟೆ ತಾಲೂಕಿನ ಕೊಡ್ಲಿಪೇಟೆಯ ಕಟ್ಟೆಪುರ ಗ್ರಾಮದ ನಿವಾಸಿಯಾದ ಶಶಿಕುಮಾರ್ ರವರು ಹಿಂಬದಿಯಲ್ಲಿ ಲಿಖಿತ್ ಮತ್ತು ಪವನ್ ರವರನ್ನು ಕೂರಿಸಿಕೊಂಡು ಮೋಟಾರ್ ಸೈಕಲನ್ನು ಚಾಲನೆ ಮಾಡಿಕೊಂಡು ಸೋಮವಾರಪೇಟೆಯಿಂದ ವಾಪಾಸ್ಸು ಹೋಗುತ್ತಿರುವಾಗ ಸೋಮವಾರಪೇಟೆ ನಗರದ ಆದರ್ಶ ಬಾರ್ ಹತ್ತಿರ ತಲುಪುವಾಗ ಎದುರುಗಡೆಯಿಂದ ಆಟೋರಿಕ್ಷಾವನ್ನು ಅದರ ಚಾಲಕ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಮೋಟಾರ್ ಸೈಕಲ್ ಗೆ ಡಿಕ್ಕಿಪಡಿಸಿದ ಪರಿಣಾಮ ಮೋಟಾರ್ ಸೈಕಲ್ ನಲ್ಲಿದ್ದ ಮೂವರು ಕೆಳಗೆ ಬಿದ್ದು ಗಾಯಗಳಾಗಿದ್ದುಈ ಬಗ್ಗೆ ಶಿವಕುಮಾರ್ ರವರು ನೀಡಿದ ಪುಕಾರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.