Thursday, March 2, 2017


ಮನೆಗೆ ನುಗ್ಗಿ ಚಿನ್ನಾಭರಣ ಕಳವು
                  ಮನೆಯ ಬೀಗ ಮುರಿದು ಒಳನುಗ್ಗಿ ಚಿನ್ನಾಭರಣ ಕಳವು ಮಾಡಿದ ಪ್ರಕರಣ ಮಡಿಕೇರಿ ನಗರದ ಮಂಗಳಾದೇವಿ ನಗರದಲ್ಲಿ ನಡೆದಿದೆ. ದಿನಾಂಕ 30-1-2017 ರಂದು ಮಂಗಳಾದೇವಿ ನಗರದ ನಿವಾಸಿಯಾದ ಕೆ ಎಂ ಗಣಪತಿ ಎಂಬುವವರು ಕುಶಾಲನಗರಕ್ಕೆ ಹೋಗಿದ್ದು ದಿನಾಂಕ 25-2-2017 ರಂದು ವಾಪಾಸ್ಸು ಮನೆಗೆ ಬಂದು ನೋಡುವಾಗ್ಗೆ ಮನೆಯ ಮುಂದಿನ ಬಾಗಿಲಿನ ಬೀಗವನ್ನು ಯಾರೋ ಕಳ್ಳರು ಮುರಿದು ಒಳ ನುಗ್ಗಿ ಬೆಡ್ ರೂಮಿನಲ್ಲಿದ್ದ ಬೀರುವಿನಲ್ಲಿ ಇಟ್ಟಿದ್ದ 86,000 ರೂ ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಹೋಗಿದ್ದು ಈ ಬಗ್ಗೆ ಗಣಪತಿಯವರು ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಅಪರಿಚಿತ ವ್ಯಕ್ತಿಗೆ ಡಿಕ್ಕಿ ಬೈಕ್ ಡಿಕ್ಕಿ
                 ಅಪರಿಚಿತ ವ್ಯಕ್ತಿಗೆ ಬೈಕ್ ಡಿಕ್ಕಿಯಾಗಿ ಮೃತಪಟ್ಟಿರುವ ಘಟನೆ ವಿರಾಜಪೇಟೆ ತಾಲೂಕಿನ ಅಮ್ಮತ್ತಿ ಎಂಬಲ್ಲಿ ವರದಿಯಾಗಿದೆ. ದಿನಾಂಕ 28-02-2017 ರಂದು ಅಮ್ಮತ್ತಿಯ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಅಪರಿಚಿತ ವ್ಯಕ್ತಿಗೆ ಕಾವಾಡಿ ಗ್ರಾಮದ ವಾಸಿ ಎಂ ಎಂ ಮಾಚಯ್ಯ ಎಂಬುವವರು ಮೋಟಾರು ಸೈಕಲನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಡಿಕ್ಕಿಪಡಿಸಿ ನಿಲ್ಲಿಸದೇ ಹೊರಟು ಹೋಗಿದ್ದು, ಗಾಯಾಳು ವ್ಯಕ್ತಿಯು ಮೃತಪಟ್ಟಿದ್ದು ಈ ಬಗ್ಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಮನುಷ್ಯ ಕಾಣೆ
                 ವ್ಯಕ್ತಿಯೊಬ್ಬರು ಕಾಣೆಯಾದ ಪ್ರಕರಣ ಮಡಿಕೇರಿ ನಗರದ ಗಣಪತಿ ಬೀದಿಯಲ್ಲಿ ವರದಿಯಾಗಿದೆ. ಮಡಿಕೇರಿ ನಗರದ ನಿವಾಸಿ ಬಿ.ಆರ್.ಪ್ರತಾಪ ರವರು ಮಡಿಕೇರಿ ನಗರದಲ್ಲಿ ಆಟೋ ಓಡಿಸಿಕೊಂಡು ಜೀವನ ಸಾಗಿಸುತ್ತಿದ್ದು. ದಿನಾಂಕ: 25-2-2017 ರಂದು ಮದ್ಯಾಹ್ನ ಮನೆಯಿಂದ ಹೋದವರು ಮನೆಗೆ ವಾಪಾಸ್ಸು ಬಾರದೆ ಕಾಣೆಯಾಗಿದ್ದು, ಈ ಬಗ್ಗೆ ಪತ್ನಿ ಜಯರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಮೋಟಾರು ಸೈಕಲಿಗೆ ಜೀಪು ಡಿಕ್ಕಿ
                     ಮೋಟಾರು ಸೈಕಲಿಗೆ ಪಿಕ್ ಅಪ್ ಜೀಪು ಡಿಕ್ಕಿಯಾಗಿ ಮೋಟಾರು ಸೈಕಲ್ ಸವಾರ ಗಾಯಗೊಂಡ ಘಟನೆ ಸೋಮವಾರಪೇಟೆ ತಾಲೂಕಿನ ಬಾಣವಾರ ಗ್ರಾಮದಲ್ಲಿ ನಡೆದಿದೆ. ದಿನಾಂಕ 28-2-2017 ರಂದು ಹಾಸನ ಜಿಲ್ಲೆಯ ಕೊಣನೂರಿನ ನಿವಾಸಿ ಮಹೇಶ ಎಂಬುವವರು ಬಾಣವಾರ ಅರಣ್ಯ ತಪಾಸಣಾ ಗೇಟಿನ ಹತ್ತಿರ ತಲುಪುವಾಗ ಎದುರಿನಿಂದ ಬಂದ ಪಿಕ್ ಅಪ್ ಜೀಪನ್ನು ಚಾಲಕ ಅಬ್ದುಲ್ ಆಸಿಮ್ ರವರು ಅಜಾಗರೂಕತೆಯಿಂದ ಚಾಲನೆ ಮಾಡಿ ಮೋಟಾರು ಸೈಕಲಿಗೆ ಡಿಕ್ಕಿಪಡಿಸಿ ಮಹೇಶರವರಿಗೆ ಗಾಯವಾಗಿದ್ದು ಈ ಬಗ್ಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಕೊಲೆಗೆ ಯತ್ನ
                       ವಿರಾಜಪೇಟೆ ತಾಲೂಕಿನ ಬಾಳುಗೋಡು ಗ್ರಾಮದಲ್ಲಿ ಆಸ್ತಿಯ ವಿಚಾರದಲ್ಲಿ ವ್ಯಕ್ತಿಯ ಮೇಲೆ ಗುಂಡು ಹಾರಿಸಿದ ಪ್ರಕರಣ ವರದಿಯಾಗಿರುತ್ತದೆ. ಬಾಳುಗೋಡು ಗ್ರಾಮದ ನಿವಾಸಿಗಳಾದ ಜಯರಾಜ್ ಮತ್ತು ಮೋಹನ್ ರವರಿಗೆ ಆಸ್ತಿಯ ವಿಚಾರದಲ್ಲಿ ವೈಮನಸ್ಸು ಇದ್ದು ಇದೇ ವಿಚಾರದಲ್ಲಿ ದಿನಾಂಕ 1-3-2017 ರಂದು ಜಯರಾಜ್ ಮತ್ತು ಅನಿಲ್ ರವರು ಜಗಳ ತೆಗೆದು ಕೊಲೆಮಾಡುವ ಉದ್ದೇಶದಿಂದ ಮೋಹನ್ ರವರ ಮೇಲೆ ಕೋವಿಯಿಂದ ಗುಂಡು ಹಾರಿಸಿದ್ದು ಈ ಬಗ್ಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.