Thursday, March 30, 2017


ಕ್ಷುಲ್ಲಕ ಕಾರಣಕ್ಕೆ ಹಲ್ಲೆ
                ಕ್ಷುಲ್ಲಕ ಕಾರಣಕ್ಕೆ ಮಹಿಳೆಯ ಮೇಲೆ ಹಲ್ಲೆ ನಡೆಸಿದ ಘಟನೆ ಸೋಮವಾರಪೇಟೆ ತಾಲೂಕಿನ ಮಸಗೋಡು ಗ್ರಾಮದಿಂದ ವರದಿಯಾಗಿದೆ. ಮಸಗೋಡು ಗ್ರಾಮದ ನಿವಾಸಿ ಜಯಲಕ್ಷ್ಮಿಯವರ ಮನೆಯ ಪಕ್ಕದ ನಿವಾಸಿ ನವೀನ್ ಎಂಬುವವರು ಮದ್ಯಪಾನ ಮಾಡಿಕೊಂಡು ಹೋಗಿ ತಿನ್ನಲು ಕೋಳಿ ಮಾಂಸ ಕೊಡಿ ಎಂದು ಹೇಳಿ ಜಗಳ ತೆಗೆದು ಹಲ್ಲೆ ನಡೆಸಿದ್ದು ಈ ಬಗ್ಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಅಪಘಾತ ಗಾಯಗೊಂಡ ವ್ಯಕ್ತಿಯ ಸಾವು
                   ಅಪಘಾತಗೊಂಡು ಗಾಯಗೊಂಡಿದ್ದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಘಟನೆ ವರದಿಯಾಗಿದೆ. ದಿನಾಂಕ 28-3-2017 ರಂದು ರಾತ್ರಿ ಪಂಜರುಪೇಟೆಯ ನಿವಾಸ ಟೋನಿ ಎಂಬುವವರು ಬಿಟ್ಟಂಗಾಲದಲ್ಲಿ ನಡೆಯುತ್ತಿದ್ದ ಮುತ್ತಪ್ಪ ತೆರೆ ಕಾರ್ಯಕ್ರಮಕ್ಕೆ ನಡೆದುಕೊಂಡು ಹೋಗುತ್ತಿರುವಾಗ ಬಿಟ್ಟಂಗಾಲದಲ್ಲಿರುವ ರೋಟರಿ ಶಾಲೆಯ ಹತ್ತಿರ ತಲುಪುವಾಗ ಎದುರುಗಡೆಯಿಂದ ನಾಂಗಾಲ ಗ್ರಾಮದ ನಿವಾಸಿ ಪ್ರವೀಣ್ ಎಂಬುವವರು ಮೋಟಾರು ಸೈಕಲನ್ನು ಅಜಾಗರೂಕತೆಯಿಂಧ ಚಾಲನೆ ಮಾಡಿಕೊಂಡು ಹೋಗಿ ಡಿಕ್ಕಿ ಪಡಿಸಿ ಗಾಯಗೊಂಡವನ್ನು ಚಿಕಿತ್ಸೆಯ ಬಗ್ಗೆ ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ 29-3-2017 ರಂದು ಮೃತಪಟ್ಟಿದ್ದು ಈ ಬಗ್ಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಬೈಕ್ ಕಳ್ಳತನ
                   ನಿಲ್ಲಿಸಿದ್ದ ಬೈಕನ್ನು ಕಳ್ಳತನ ಮಾಡಿರುವ ಘಟನೆ ಸುಂಟಿಕೊಪ್ಪ ನಗರದಲ್ಲಿ ವರದಿಯಾಗಿದೆ. ನಾಕೂರು ಗ್ರಾಮದ ನಿವಾಸಿ ವಿನೀಶ್ ಎಂಬುವವರು ದಿನಾಂಕ ದಿನಾಂಕ 13-3-2017 ರಂದು ರಾತ್ರಿ ಸುಂಟಿಕೊಪ್ಪ ನಗರದ ಮಾದಾಪುರ ರಸ್ತೆಯಲ್ಲಿರುವ ರಮೇಶರವರ ವರ್ಕ್ ಶಾಪ್ ಬಳಿ ಅವರ ಪಲ್ಸರ್ ಮೋಟಾರು ಸೈಕಲನ್ನು ನಿಲ್ಲಿಸಿ ಮನೆಗೆ ಹೋಗಿದ್ದು ಮಾರನೆಯ ದಿನ ಬೆಳಿಗ್ಗೆ ನೋಡುವಾಗ ಬೈಕ್ ಕಳವು ಆಗಿದ್ದು ಈ ಬಗ್ಗೆ ಎಲ್ಲಾ ಕಡೆ ಹುಡುಕಾಡಿ ಬೈಕ್ ಪತ್ತೆಯಾಗದೇ ಇರುವುದರಿಂದ ದಿನಾಂಕ 29-3-2017 ರಂದು ಪುಕಾರು ನೀಡಿದ್ದು ಈ ಬಗ್ಗೆ ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಹಳೇ ದ್ವೇಷ ವ್ಯಕ್ತಿಯ ಮೇಲೆ ಹಲ್ಲೆ
                 ಹಳೇ ದ್ವೇಷದಿಂದ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ ಘಟನೆ ವಿರಾಜಪೇಟೆ ತಾಲೂಕಿನ ತಿತಿಮತಿ ಗ್ರಾಮದಲ್ಲಿ ನಡೆದಿದೆ. ಭದ್ರಗೋಳ ಗ್ರಾಮದ ಪೋಡಮಾಡ ಮುತ್ತಣ್ಣನವರ ತೋಟದ ರೈಟರ್ ಆಗಿ ಕೆಲಸ ಮಾಡಿಕೊಂಡಿರುವ ವಿನೋದ್ ರವರು ದಿನಾಂಕ 29-3-2017 ರಂದು ಪಾಲಿಬೆಟ್ಟಕ್ಕೆ ಹೋಗಿದ್ದವರು ಮೋಟಾರು ಸೈಕಲಿನಲ್ಲಿ ವಾಪಾಸ್ಸು ಮನೆಗೆ ಹೋಗುತ್ತಿರುವಾಗ ತಿತಿಮತಿಯ ವಿವೇಕಾನಂದ ಆಸ್ಪತ್ರೆಯ ಬಳಿ ಚೆನ್ನಂಗೊಲ್ಲಿಯ ನಿವಾಸಿ ಅನಿ, ತಿತಿಮತಿಯ ಜನತಾ ಕಾಲೋನಿಯ ನಿವಾಸಿ ಅಪ್ಪಿ ಎಂಬುವವರು ಕಾರಿನಲ್ಲಿ ಬಂದು ಬೈಕನ್ನು ತಡೆದು ಅಪ್ಪಿಯು ನೀನು ಕೆಲಸ ಬಿಟ್ಟು ಹೋಗು ಎಂದು ಜಗಳ ತೆಗೆದು ಎಲ್ಲರೂ ಸೇರಿ ವಿನೋದ್ ರವರ ಮೇಲೆ ಹಲ್ಲೆ ನಡೆಸಿದ್ದು ಈ ಬಗ್ಗೆ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.