Sunday, April 30, 2017

ಮದ್ಯ ಸೇವಿಸಿದ ಮಹಿಳೆ ಸಾವು:

        ವಿಪರೀತ ಮದ್ಯಸೇವಿಸಿದ ಮಹಿಳೆಯೊಬ್ಬರು ಸಾವನಪ್ಪಿದ ಘಟನೆ ವಿರಾಜಪೇಟೆ ಗ್ರಾಮಾಂತರ ಠಾಣಾ ಸರಹದ್ದಿನ ಕಂಡಂಗಾಲ ಗ್ರಾಮದಲ್ಲಿ ನಡೆದಿದೆ. ಕಂಡಂಗಾಲ ಗ್ರಾಮದ ನಿವಾಸಿ ಪಣಿಎರವರ ಬೇರ ಎಂಬವರ ಪತ್ನಿ ಶ್ರೀಮತಿ ಚಿಣ್ಣಿ ಎಂಬಾಕೆ ದಿನಾಂಕ 19-4-2017 ರಂದು ವಿಪರೀತ ಮದ್ಯ ಸೇವಿಸಿ ಮನೆಯಿಂದ ಹೊರಗೆ ಹೋಗಿದ್ದು, ಅದೇ ಗ್ರಾಮದ ಎ.ಕೆ.ನಾಣಯ್ಯ ಎಂಬವರ ಕಾಫಿತೋಟದಲ್ಲಿ ಮದ್ಯದ ಅಮಲಿನಿಂದ ಬಿದ್ದು ಸಾವನಪ್ಪಿದ್ದು, ವಿರಾಜಪೇಟೆ ಗ್ರಾಮಾಂತರ ಠಾಣಾ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಕಾರು ಅಪಘಾತ ಒಬ್ಬನ ಸಾವು:

     ಕಾರು ಅಪಘಾತಗೊಂಡು ಒಬ್ಬ ಸಾವನಪ್ಪಿ ಮೂವರು ಗಾಯಗೊಂಡ ಘಟನೆ ವಿರಾಜಪೇಟೆ ಗ್ರಾಮಾಂತರ ಠಾಣಾ ವ್ಯಾಪ್ತಿಯ ಮಾಕುಟ್ಟದಲ್ಲಿ ನಡೆದಿದೆ. ದಿನಾಂಕ 29-4-2017 ರಂದು ಕೇರಳ ರಾಜ್ಯದ ಕಣ್ಣನೂರಿನ ನಿವಾಸಿಗಳಾದ ಪ್ರಮೀಳಾ, ಪ್ರಮೋದ್, ರವೀಂದ್ರ, ರಿಜು ಹಾಗು ರಾಜೇಶ್ ಎಂಬವರು ಬೆಂಗಳೂರಿನಿಂದ ಕೇರಳ ರಾಜ್ಯಕ್ಕೆ ಹೋಗುತ್ತಿದ್ದಾಗ ಮಾಕುಟ್ಟ ಕಾಲೋನಿನ ಹತ್ತಿರ ರಸ್ತೆಬದಿ ಕಾರು ಮಗುಚಿ ಬಿದ್ದ ಕಾರಣ ಕಾರಿನಲ್ಲಿದ್ದ ಮೂವರು ಗಾಯಗೊಂಡು ಪ್ರಮೋದ್ ಎಂಬಾತ ಸಾವನಪ್ಪಿದ್ದು, ಈ ಸಂಬಂಧ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಕೆ. ಪ್ರಸಾದ್ ಎಂಬವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ. 

Wednesday, April 26, 2017

ಪತ್ರಿಕಾ ಪ್ರಕಟಣೆ.


ಜಿಲ್ಲೆಯನ್ನು ಅತ್ಯುತ್ತಮ ತಂಬಾಕು ನಿಯಂತ್ರಣ ಕಾಯ್ದೆ ಅನುಷ್ಠಾನಿತ ಜಿಲ್ಲೆಯಾಗಿಸಲು ಪೊಲೀಸರ ಸಂಕಲ್ಪ 

ಕೊಡಗುಏ.26: ಜಿಲ್ಲೆಯನ್ನು ತಂಬಾಕು ನಿಯಂತ್ರಣ ಕಾಯ್ದೆಯ ಅನುಷ್ಠಾನದಲ್ಲಿ ಅತ್ಯುತ್ತಮ ಜಿಲ್ಲೆಯಾಗಿಸುವ ನಿಟ್ಟಿನಲ್ಲಿಪೊಲೀಸ್ ಅಧಿಕಾರಿಗಳಿಗೆ ನಗರದಲ್ಲಿಂದು ತರಬೇತಿ ಕಾರ್ಯಾಗಾರ ನೆಡೆಸಲಾಯಿತು.

ನಗರದಲ್ಲಿನ ಪೊಲೀಸ್ ಮೈತ್ರಿ ಸಮುದಾಯಭವನಲ್ಲಿಂದು ನಡೆದ ತರಬೇತಿ ಕಾರ್ಯಾಗಾರದಲ್ಲಿ ತಾವು ಕಾರ್ಯನಿರ್ವಹಿಸುತ್ತಿರುವ ವಲಯದಲ್ಲಿ ಕೋಟ್ಪಾ-2003 (ಸಿಗರೇಟು ಮತ್ತು ಇತರೆ ತಂಬಾಕು ಉತ್ಪನ್ನಗಳ ನಿಯಂತ್ರಣ ಕಾಯ್ದೆ) ಕಾಯ್ದೆಯನ್ನು ಕಟ್ಟು ನಿಟ್ಟಾಗಿ ಜಾರಿಗೆ ತರುವಂತೆ ಎಲ್ಲಾ ಪೊಲೀಸ್ ಠಾಣೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಸಲಹೆ ಸೂಚನೆ ನೀಡಲಾಯಿತು. 

ಈ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಪೊಲೀಸ್ ಅಧೀಕ್ಷಕರು ಹಾಗು ಕೋಟ್ಪಾ ಕಾಯ್ದೆಯ ಅನುಷ್ಠಾನದ ನೋಡಲ್ ಅಧಿಕಾರಿಯೂ ಆದ ಶ್ರೀ.ರಾಜೇಂದ್ರ ಪ್ರಸಾದ್ ರವರುಇತ್ತೀಚಿನ ದಿನಗಳಲ್ಲಿ ಯುವಜನತೆ ತಂಬಾಕು ಚಟಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ದಾಸರಾಗುತ್ತಿದ್ದಾರೆಅದರಲ್ಲೂ ಶಾಲಾ ಕಾಲೇಜುಗಳ ಮುಂದೆ ಅಕ್ರಮ ಮಾರಾಟ ಹೆಚ್ಚುತ್ತಿದ್ದು ಇವುಗಳ ಮೇಲೆ ಕಡಿವಾಣ ಹಾಕುವುದು ಅತ್ಯವಶ್ಯಕವಾಗಿದೆ. ಕೇಂದ್ರ ಸರ್ಕಾರದ ಸೂಚನೆ ಹಿನ್ನೆಲೆಯಲ್ಲಿ ಕೋಟ್ಪಾ ಕಾಯ್ದೆಯನ್ನು ಉಲ್ಲಂಘಿಸುವ ಪ್ರಕರಣಗಳನ್ನು ಪೊಲೀಸ್ ಪ್ರಕರಣಗಳ ತಿಂಗಳ ಪಟ್ಟಿಯಲ್ಲಿ ಸೇರ್ಪಡೆ ಮಾಡುವ ನಿರ್ಧಾರವನ್ನು ಈಗಾಗಲೇ ಕೈಗೊಳ್ಳಲಾಗಿದೆ. ಅದರಂತೆ ಬಹುತೇಕ ಜಿಲ್ಲೆಗಳು ಮತ್ತು ವಲಯಗಳಲ್ಲಿ ಈ ಸಂಬಂಧ ಪೊಲೀಸ್ ಇಲಾಖೆ ಕಾರ್ಯಪ್ರವೃತ್ತವಾಗಿದೆ. ನಮ್ಮ ಜಿಲ್ಲೆಯನ್ನು ಸದ್ಯದಲ್ಲೇ ಅತ್ಯುತ್ತಮ ಕೋಟ್ಪಾ ಕಾಯ್ದೆ ಅನುಷ್ಠಾನಿತ ಜಿಲ್ಲೆಯನ್ನಾಗಿ ಮಾಡುವ ಉದ್ದೇಶ ಹೊಂದಿದ್ದುಈ ನಿಟ್ಟಿನಲ್ಲಿ ಅಧಿಕಾರಿಗಳು ಕಾಯ್ದೆಯ ಸಮರ್ಪಕ ಜಾರಿಗೆ ಶ್ರಮವಹಿಸಬೇಕೆಂದು ಆ ಮೂಲಕ ಸಾರ್ವಜನಿಕರ ಆರೋಗ್ಯ ರಕ್ಷಣೆಯಲ್ಲಿ ಪೊಲೀಸರು ತಮ್ಮ ಸಾಮಾಜಿಕ ಬದ್ಧತೆತೋರಬೇಕೆಂದು ತಿಳಿಸಿದರು. ಕೋಟ್ಪಾ ಕಾಯ್ದೆಯಲ್ಲಿನ ಪ್ರಮುಖ ನಿಯಮಗಳ ಮಹತ್ವ ಮತ್ತು ಅವುಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಬಗ್ಗೆ ಪೊಲೀಸರಿಗೆ ಅರಿವು ಮೂಡಿಸುವ ಉದ್ದೇಶ ಈ ಕಾರ್ಯಾಗಾರದ್ದಾಗಿದೆ ಎಂದು ತಿಳಿಸಿದರು. 

ಈ ಕೂಡಲೇ ಜಿಲ್ಲೆಯ ಎಲ್ಲಾ ಠಾಣೆಗಳಲ್ಲಿ ಕಾನೂನಿನನ್ವಯ ಸೂಚನಾಫಲಕಗಳನ್ನು ಪ್ರದರ್ಶಿಸಬೇಕೆಂದು ಹಾಗು ವಿಶೇಷ ಕಾರ್ಯಾಚರಣೆಗಳನ್ನು ಕೈಗೊಳ್ಳುವ ಬಗ್ಗೆ ಕಾರ್ಯಪ್ರವೃತ್ತರಾಗುವಂತೆ ಸೂಚನೆ ನೀಡಲಾಯಿತು. 

ಕಾರ್ಯಾಗಾರದಲ್ಲಿ ಉಪಸ್ಥಿತರಿದ್ದ ಕಾರ್ಯಾಗಾರದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಓ.ಆರ್. ಶ್ರೀರಂಗಪ್ಪ ಮಾತನಾಡಿಮಾನ್ಯ ಅಪರ ಜಿಲ್ಲಾಧಿಕಾರಿಗಳ ಸೂಚನೆಯನ್ವಯ ಪೊಲೀಸ್ ಹಾಗು ಆರೋಗ್ಯ ಇಲಾಖೆಗಳ ನೇತೃತ್ವದಲ್ಲಿ ಜಿಲ್ಲೆಯ ಪ್ರಮುಖ ಇಲಾಖೆಗಳ ಸಹಯೋಗದೊಂದಿಗೆ ಮೇ 8ರಿಂದ ನಿಯಮಿತವಾಗಿ ಜಿಲ್ಲೆಯಾಧ್ಯಂತ ವಿಶೇಷ ಕಾರ್ಯಾಚರಣೆಯನ್ನು ನೆಡೆಸಲು ಉದ್ದೇಶಿಸಿದ್ದುಈ ಕಾರ್ಯಾಚರಣೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. 

ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಇನ್‍ಸ್ಟಿಟ್ಯೂಟ್ ಆಪ್ ಪಬ್ಲಿಕ್ ಹೆಲ್ತ್ ನ ಡಾ. ಜಾನ್ ಕೆನಡಿ ಹಾಗು ಜಿಲ್ಲಾ ತಂಬಾಕು ನಿಯಂತ್ರಣ ಘಟಕದ ಡಾ. ಹನುಮಂತರಾಯಪ್ಪರವರು ಕೋಟ್ಪಾ ಕಾಯ್ದೆಯ ಬಗ್ಗೆ ಹಾಗು ತಂಬಾಕಿನಿಂದ ಸಾರ್ವಜನಿಕರ ಆರೋಗ್ಯದ ಮೇಲೆ ಉಂಟಾಗುತ್ತಿರುವ ದುಷ್ಪರಿಣಾಮದ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ತಯಾರಿಸಲಾದ ವಿಶೇಷ ದೃಶ್ಯ-ಶ್ರಾವ್ಯ ಪ್ರಾತ್ಯಕ್ಷಿಕೆಯ ಮೂಲಕ ಕಾರ್ಯಾಗಾರದಲ್ಲಿ ಅರಿವು ಮೂಡಿಸಿದರು. ಇದೇ ಸಂದರ್ಭದಲ್ಲಿ ತಂಬಾಕು ನಿಯಂತ್ರಣಕ್ಕೆ ಪೊಲೀಸರು ಸಂಕಲ್ಪ ಮಾಡುವ ಮೂಲಕ ತಮ್ಮ ಬದ್ಧತೆ ತೋರುವಂತೆ ತಿಳಿಸಲಾಯಿತು. 

ಕಾರ್ಯಾಗಾರದಲ್ಲಿ ಉಪಸ್ಥಿತರಿದ್ದ ಜಿಲ್ಲಾ ಭಾರತೀಯ ವೈದ್ಯಕೀಯ ಪರಿಷತ್ಕೊಡಗು ಘಟಕದ ಅಧ್ಯಕ್ಷರಾದ ಡಾ. ಮೋಹನ್ ಅಪ್ಪಾಜಿರವರು ತಂಬಾಕಿನ ಸೇವನೆಯಿಂದುಂಟಾಗುವ ದುಷ್ಪರಿಣಾಮಗಳ ಕುರಿತು ಉಪನ್ಯಾಸ ನೀಡಿದರು.

ಇಲ್ಲಿ ಪೊಲೀಸರಿಗೆ ಅರಿವು ಮೂಡಿಸಿದ ಪ್ರಮುಖ ಅಂಶಗಳು ಇಂತಿವೆ:-

•        ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧ ಪಾಲನೆಯಗುತ್ತಿರುವುದನ್ನು ಖಾತ್ರಿ ಮಾಡುವುದು. ಉಲ್ಲಂಘನೆ ಕಂಡುಬಂದಲ್ಲಿ ರೂ.200ರ ವರೆಗೂ ದಂಡ ಹಾಕುವುದಲ್ಲದೇ ಸೂಕ್ತ ಕ್ರಮ ಕೈಗೊಳ್ಳುವುದು.

•        ಎಲ್ಲಾ ವಿಧದ ತಂಬಾಕು ಉತ್ಪನ್ನಗಳ ಜಾಹೀರಾತುಗಳು ಕಾನೂನುಬಾಹಿರವಾಗಿದ್ದುಈ ಜಾಹೀರಾತುಗಳ ಪ್ರದರ್ಶಕರ ವಿರುದ್ಧ ಕ್ರಮಕೈಗೊಳ್ಳುವುದು.

•        ಶಾಲಾ ಕಾಲೇಜುಗಳ ಆವರಣದ 100 ಗಜಗಳ ಸುತ್ತಮುತ್ತಲ ಪ್ರದೇಶದಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ಹಾಗು ಸೇವನೆ ಕಾನೂನು ಬಾಹಿರವಾಗಿದ್ದುಉಲ್ಲಂಘನೆ ಕಂಡುಬಂದಲ್ಲಿ ಅಂತಹ ಅಂಗಡಿಗಳನ್ನು ತೆರವುಗೊಳಿಸಿ ಮಾಲೀಕರ ಮೇಲೆ ಸೂಕ್ತ ಕ್ರಮ ಜರುಗಿಸುವುದು.

•        ಶಾಸನ ವಿಧಿಸಿದ ಚಿತ್ರ ಸಹಿತ ಎಚ್ಚರಿಕೆ ಮುದ್ರಣ ಮಾಡಿರದ ತಂಬಾಕು ಉತ್ಪನ್ನಗಳ ಮಾರಾಟಕ್ಕೆ ಕಡಿವಾಣ ಹಾಕುವುದು.

•        ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳ ಹಾಗು ಪ್ರತಿ ಗ್ರಾಮಪಂಚಾಯಿತಿಗಳ ಮಟ್ಟದಲ್ಲಿ ಕೋಟ್ಪಾ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ನಿಯಮಿತವಾಗಿ ವಿಶೇಷ ಕಾರ್ಯಾಚರಣೆಯನ್ನು ಹಾಗು ಜಾಗೃತಿ ಕಾರ್ಯಕ್ರಮಗಳನ್ನು ಜಾರಿಗೆ ತರುವುದು.

•        ಜಿಲ್ಲೆಯೂ ಪ್ರಸಿದ್ಧ ಪ್ರವಾಸಿ ತಾಣಗಳನ್ನು ಹೊಂದಿದ್ದುಇಂತಹ ಪ್ರಮುಖ ಸ್ಥಳಗಳನ್ನು ಕಾನೂನಿನನ್ವಯ ಧೂಮಪಾನ ಮುಕ್ತ ವಲಯಗಳಾಗಿ ಪರಿವರ್ತಿಸುವುದು. 

ತಂಬಾಕು ನಿಯಂತ್ರಣದ ಅಗತ್ಯವೇನು?
ತಂಬಾಕು. ಇದು ಕೋಟ್ಯಂತರ ಜನರ ಆರೋಗ್ಯಕ್ಕೆ ಮಾರಕವಾಗಿ ಪರಿಣಮಿಸಿದೆ. ಈ ಮಾರಕ ತಂಬಾಕು ಸೇವನೆಯಿಂದಾಗಿ ಭಾರತದಲ್ಲಿ ಪ್ರತಿ ವರ್ಷ 10 ಲಕ್ಷ ಮಂದಿ ಸಾವನ್ನಪ್ಪುತ್ತಿದ್ದಾರೆ. ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಇತ್ತೀಚಿನ ಸಂಶೋಧನೆಗಳ ಪ್ರಕಾರ ದೇಶದಲ್ಲಿ ಪ್ರತಿ ಎಂಟು ಸೆಕೆಂಡಿಗೆ ಒಬ್ಬರು ತಂಬಾಕು ಸೇವನೆ ಮಾಡುವವರು ಕೊನೆ ಉಸಿರೆಳೆಯುತ್ತಿದ್ದಾರೆ. ನಮ್ಮ ರಾಜ್ಯದಲ್ಲಿ ಶೇ. 40 ರಷ್ಟು ಪುರುಷರು ಮತ್ತು ಶೇ.16 ರಷ್ಟು ಮಹಿಳೆಯರು ತಂಬಾಕು ಉತ್ಪನ್ನಗಳ ದಾಸರಾಗಿದ್ದಾರೆ. ಇದರ ಪರಿಣಾಮ ಕ್ಯಾನ್ಸರ್ಹೃದ್ರೋಗಶ್ವಾಸಕೋಶ ತೊಂದರೆ ಸೇರಿದಂತೆ ಮತ್ತಿತರೆ ಮಾರಣಾಂತಿಕ ರೋಗಗಳಿಗೆ ಲಕ್ಷಾಂತರ ಜನ ತುತ್ತಾಗುತ್ತಿದ್ದಾರೆ.

ಪೊಲೀಸ್ ಇಲಾಖೆಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ ಬೆಂಗಳೂರಿನ ಇನ್‍ಸ್ಟಿಟ್ಯೂಟ್ ಆಪ್ ಪಬ್ಲಿಕ್ ಹೆಲ್ತ್ ಈ ಕಾರ್ಯಾಗಾರವನ್ನು ಹಮ್ಮಿಕೊಂಡಿತ್ತು. ಇಂದು ನಡೆದ ಕಾರ್ಯಾಗಾರದಲ್ಲಿ ಕೊಡಗು ಜಿಲ್ಲಾ ವ್ಯಾಪ್ತಿಗೆ ಒಳಪಡುವ 35ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳು ಭಾಗವಹಿಸಿದ್ದರು.
ವಿದ್ಯಾರ್ಥಿಯ ದುರ್ಮರಣ
                        ಪ್ರವಾಸಕ್ಕೆಂದು ಕೊಡಗು ಜಿಲ್ಲೆಗೆ ಬಂದಿದ್ದ ವಿದ್ಯಾರ್ಥಿ ಮೃತಪಟ್ಟ ಘಟನೆ ಮಡಿಕೇರಿ ತಾಲೂಕಿನ ಚೇಲವಾರ ಎಂಬಲ್ಲಿ ವರದಿಯಾಗಿದೆ. ದಿನಾಂಕ 24-4-2017 ರಂದು ಕೇರಳ ರಾಜ್ಯದ ಕೋಯಿಕ್ಕೋಡಿನ ಬಿ ಟೆಕ್ ವಿದ್ಯಾರ್ಥಿ ಆನಂದ ಎಂಬುವವರು ಸ್ನೇಹಿತರೊಂದಿಗೆ ಚೇಲಾವರದ ಕಕ್ಕಬ್ಬೆ ಬೆಟ್ಟಕ್ಕೆ ಹೋಗಿದ್ದು ಬೆಟ್ಟ ಹತ್ತುವಾಗ ಆಕಸ್ನಿಕವಾಗಿ ಕಾಲು ಜಾರಿ ಆನಂದರವರು ಕೆಳಗೆ ಬಿದ್ದು ತಲೆಗೆ ಪೆಟ್ಟಾಗಿದ್ದು ವಿರಾಜಪೇಟೆ ಆಸ್ಪತ್ರೆಯಲ್ಲಿ ಚಿಕಿತ್ಸೆಕೊಡಿಸಿ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಕೇರಳದ ಪರಿಯಾರಂ ಮೆಡಿಕಲ್ ಕಾಲೇಜಿಗೆ ಕರೆದುಕೊಂಡು ಹೋಗುತ್ತಿರುವಾಗ ಮೃತಪಟ್ಟಿದ್ದು ಈ ಬಗ್ಗೆ ಸ್ನೇಹಿತ ರಾಮ ಕುಮಾರ್ ರವರು ನೀಡಿದ ದೂರಿನ ಮೇರೆಗೆ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ವ್ಯಕ್ತಿಯ ಮೇಲೆ ಹಲ್ಲೆ
                               ದಿನಾಂಕ 24-4-2017 ರಂದು ಮಡಿಕೇರಿ ತಾಲೂಕಿನ ಚೇರಂಗಾಲ ಗ್ರಾಮದ ನಿವಾಸಿಯಾದ ಪೂವಯ್ಯ, ಚರಣ್, ಅಮರಾವತಿ, ರೇಣುಕ, ಭಾರತಿರವರುಗಳು ಅದೇ ಗ್ರಾಮದ ಚಿದಾನಂದ ಎಂಬುವವರ ತೋಟದಲ್ಲಿ ಮರದ ಕೊಂಬೆಗಳನ್ನು ಕಡಿಯುತ್ತಿದ್ದವರನ್ನು ಕೇಳಿದಾಗ ಎಲ್ಲರೂ ಸೇರಿ ಚಿದಾನಂದರವರ ಮೇಲೆ ಹಲ್ಲೆ ನಡೆಸಿದ್ದು ಈ ಬಗ್ಗೆ ಭಾಗಮಂಡಲ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. 

ಕಾಳು ಮೆಣಸು ಕಳವು
              ಒಣಗಲು ಹಾಕಿದ್ದ ಕಾಳು ಮೆಣಸನ್ನು ಕಳವು ಮಾಡಿದ ಘಟನೆ ಸೋಮವಾರಪೇಟೆ ತಾಲೂಕಿನ ಯಡವಾರ ಗ್ರಾಮದಲ್ಲಿ ವರದಿಯಾಗಿದೆ. ಯಡವಾರ ಗ್ರಾಮದ ನಿವಾಸಿಯಾದ ನಿವೃತ್ತ ಡಿ ವೈ. ಎಸ್. ಪಿ. ಯಾದ ಸೋಮಣ್ಣ ಎಂಬುವವರು ಕುಯ್ಯಿಸಿದ ಕಾಳು ಮೆಣಸನ್ನು ಮನೆಯ ಮುಂದಿನ ಅಂಗಳದಲ್ಲಿ ಒಣಗಲು ಹಾಕಿದ್ದು ದಿನಾಂಕ 25-4-2017 ರಂದು ಬೆಳಿಗ್ಗೆ ನೋಡುವಾಗ ಸುಮಾರು 50 ಕೆ ಜಿ ಯಷ್ಟು ಕಾಳು ಮೆಣಸನ್ನು ಯಾರೋ ಕಳ್ಳರು ಕಳವು ಮಾಡಿರುವುದಾಗಿ ಕೊಟ್ಟ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಪಾದಚಾರಿಗೆ ಬೈಕ್ ಡಿಕ್ಕಿ
                   ಪಾದಾಚಾರಿಗೆ ಬೈಕ್ ಡಿಕ್ಕಿಯಾಗಿ ಗಾಯಗೊಂಡ ಘಟನೆ ಕುಶಾಲನಗರದಲ್ಲಿ ವರದಿಯಾಗಿದೆ. ಕುಶಾಲನಗರದ ಗುಮ್ಮನಕೊಲ್ಲಿಯ ನಿವಾಸಿ ಪ್ರದೀಪ್ ಕುಮಾರ್ ಮತ್ತು ಉಮೇಶ್ ರವರು ವೀರಭೂಮಿ ಸರ್ಕಲ್ ಹತ್ತಿರ ರಸ್ತೆ ದಾಟುತ್ತಿರುವಾಗ ಕುಶಾಲನಗರದ ಕಡೆಯಿಂದ ಒಂದು ಮೋಟಾರು ಸೈಕಲ್ ನ್ನು ಅದರ ಸವಾರ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಪ್ರದೀಪ್ ಕುಮಾರ್ ರವರಿಗೆ ಡಿಕ್ಕಿಪಡಿಸಿ ಗಾಯಪಡಿಸಿ ಬೈಕನ್ನು ನಿಲ್ಲಿಸದೇ ಹೊರಟು ಹೋಗಿದ್ದು ಈ ಬಗ್ಗೆ ಕುಶಾಲನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. 

 ವ್ಯಕ್ತಿಯ ಆತ್ಮಹತ್ಯೆ
                        ಜೀವನದಲ್ಲಿ ಜುಗುಪ್ಸೆಗೊಂಡು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿರಾಜಪೇಟೆ ತಾಲೂಕಿನ ಪೊನ್ನಂಪೇಟೆ ನಗರದ ಮುದ್ದಣಿ ಕಾಲೋನಿಯಲ್ಲಿ ವರದಿಯಾಗಿದೆ. ಪೊನ್ನಂಪೇಟೆ ನಗರದ ಮುದ್ದಣಿ ಕಾಲೋನಿಯ ನಿವಾಸಿಯಾದ 82 ವರ್ಷ ಪ್ರಾಯದ ಉತ್ತಪ್ಪ ಎಂಬುವವರು ಬಿ.ಪಿ ಮತ್ತು ಸಕ್ಕರೆ ಖಾಯಿಲೆಯಿಂದ ಬಳಲುತ್ತಿದ್ದು ಇದೇ ವಿಚಾರದಲ್ಲಿ ಜುಗುಪ್ಸೆಗೊಂಡು ದಿನಾಂಕ 25-4-2017 ರಂದು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮ ಹತ್ಯೆ ಮಾಡಿಕೊಂಡಿರುವುದಾಗಿ ತಂಗಮ್ಮನರವರು ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.ಅಪಘಾತ ಪ್ರಕರಣ

ದಿನಾಂಕ 24-4-2017 ರಂದು ಮೈಸೂರಿನ ಹೆಬ್ಬಾಳದ ಸತೀಶ್ ಎಂಬುವವರು ನಾಗೇಶ, ಮೂರ್ತಿ, ಪದ್ಮಾವತಿ, ಮೇಘರರವರೊಂದಿಗೆ ಧರ್ಮಸ್ಥಳದಿಂದ ಮರಳಿ ಮೈಸೂರಿಗೆ ಹೋಗುತ್ತಿರುವಾಗ ಮಡಿಕೇರಿ ಬಳಿಯ ಜೋಡುಪಾಲ ದಲ್ಲಿ ಎದುರುಗಡೆಯಿಂದ ಕೆಎಲ್-14-ಪಿ-8778 ರ ಕಾರನ್ನು ಅದರ ಚಾಲಕ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಸತೀಶ್ ರವರು ಚಾಲನೆ ಮಾಡುತ್ತಿದ್ದ ಕಾರಿಗೆ ಡಿಕ್ಕಿ ಪಡಿಸಿದ ಪರಿಣಾಮ ಕಾರು ಜಖಂಗೊಂಡಿದ್ದು ಕಾರಿನಲ್ಲಿದ್ದವರಿಗೆ ಗಾಯಗಳಾಗಿದ್ದು ಈ ಬಗ್ಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ

Tuesday, April 25, 2017

ಹಳೆ ದ್ವೇಷ, ಮಹಿಳೆ ಕೊಲೆ
                          ದಿನಾಂಕ 24/04/2017ರಂದು ಭಾಗಮಂಡಲ ಬಳಿಯ ಚೇರಂಗಾಲ ಗ್ರಾಮದ ನಿವಾಸಿ ಪೂವಯ್ಯ ಎಂಬವರು ಮಗ ಚರಣ್, ಪತ್ನಿ ಅಮರಾವತಿ  ಮತ್ತು ಅತ್ತಿಗೆ ರೇಣುಕಾರವರೊಂದಿಗೆ ತೋಟದಲ್ಲಿ ಕೆಲಸ ಮಾಡಿಕೊಂಡಿರುವಾಗ ಅದೇ ಗ್ರಾಮದ ನಿವಾಸಿಗಳಾದ ಚಿದಾನಂದ ಮತ್ತು ಭವ್ಯ ಎಂಬವರುಗಳು ಬಂದು ಹಳೆ ದ್ವೇಷದಿಂದ ಪೂವಯ್ಯನವರೊಂದಿಗೆ ಜಗಳವಾಡಿದ್ದು ಪೂವಯ್ಯನವರ ಪತ್ನಿ ಅಮರಾವತಿಯವರನ್ನು ಎಳೆದುಕೊಂಡು ಹೋಗಿದ್ದು ಜೊತೆಗೆ ರೇಣುಕಾಳು ಸಹಾ ಜೊತೆಗೆ ಹೋಗಿದ್ದು ಅದನ್ನು ಕಂಡು ಪೂವಯ್ಯನವರು ಹೋಗುವಷ್ಟರಲ್ಲಿ ಚಿದಾನಂದರವರು ಅಮರಾವತಿ ಹಾಗೂ ರೇಣುಕಾರವರಿಗೆ ಕೋವಿಯಿಂದ ಗುಂಡು ಹೊಡೆದಿದ್ದು ಅಮರಾವತಿಯವರು ಸ್ಥಳದಲ್ಲೇ ಮೃತರಾಗಿದ್ದು ರೇಣುಕಾರವರಿಗೆ ತೀವ್ರತರದ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಭಾಗಮಂಡಲ ಪೊಲೀಸರು  ಪ್ರಕರಣ  ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಜೀಪಿಗೆ ಕಾರು ಡಿಕ್ಕಿ
                     ದಿನಾಂಕ 24/04/2017ರಂದು ಮಡಿಕೇರಿ ನಗರದ ನಿವಾಸಿ ನಿವೃತ್ತ ಕರ್ನಲ್‌ ಕೆ.ಜಿ.ಉತ್ತಯ್ಯ ಎಂಬವರು  ಅವರ ಜೀಪು ಸಂಖ್ಯೆ ಎಂವೈಎಂ-3466 ರಲ್ಲಿ ಅವರ ಊರಾದ ಕಂಬಿಬಾಣೆಗೆ ಹೋಗುತ್ತಿರುವಾಗ ಇಬ್ನಿವಳವಾಡಿ ಗ್ರಾಮದ ಸಿಂಕೋನ ತೋಟದ ಬಳಿ ಎದುರುಗಡೆಯಿಂದ ಕೆಎ-02-ಎಎಫ್‌-5649ನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಉತ್ತಯ್ಯನವರ ಜೀಪಿಗೆ ಡಿಕ್ಕಿಪಡಿಸಿದ ಪರಿಣಾಮ ಉತ್ತಯ್ಯನವರ ಜೀಪಿಗೆ ಹಾನಿಯುಂಟಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಬೈಕಿಗೆ ಜೀಪು ಡಿಕ್ಕಿ
                     ದಿನಾಂಕ 24/04/2017ರಂದು ಚೆಂಬು ಗ್ರಾಮದ ನಿವಾಸಿ ನಿರುಪಮ್‌ ಎಂಬವರು ಅವರ ಚಿಕ್ಕಪ್ಪನಾದ ಗಿರೀಶ್‌ ಎಂಬವರ ಬೈಕಿನಲ್ಲಿ ಮಡಿಕೇರಿಯಿಂದ ಚೆಂಬು ಗ್ರಾಮಕ್ಕೆ ಹೋಗುತ್ತಿದ್ದು ಎದುರುಗಡೆಯಲ್ಲಿ ದಬ್ಬಡ್ಕ ನಿವಾಸಿಗಳಾದ ಜಯಂತ್‌ ಹಾಗೂ ಕೌಷಿಕ್‌  ಎಂಬವರು  ಕೆಎ-12-ಕ್ಯು-9540ರ ಮೋಟಾರು ಬೈಕಿನಲ್ಲಿ ಹೋಗುತ್ತಿದ್ದು ಜೋಡುಪಾಲದ ಬಳಿ ಸಂಪಾಜೆ ಕಡೆಯಿಂದ ಕೆಎ-10-ಎಂ-8883 ರ ಜೀಪನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು  ಬಂದು ಜಯಂತ್‌ ಚಾಲಿಸುತ್ತಿದ್ದ ಬೈಕಿಗೆ ಡಿಕ್ಕಿಪಡಿಸಿದ ಪರಿಣಾಮ ಜಯಂತ್‌ ಹಾಗೂ ಕೌಷಿಕ್‌ರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ  ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಹಲ್ಲೆ ಪ್ರಕರಣ
                     ದಿನಾಂಕ 24/04/2017ರಂದು ಸೋಮವಾರಪೇಟೆ ಬಳಿಯ ಹಾನಗಲ್ಲು ಬಾಣೆಯಲ್ಲಿ ನಡೆದ ದೇವರ ಉತ್ಸವದ ಖರ್ಚು ವೆಚ್ಚದ ಸಭೆಯಲ್ಲಿ ಅಲ್ಲಿನ ನಿವಾಸಿ ಬಿ.ಎಸ್.ಸುರೇಶ ಎಂಬವರು ಪೂಜಾ ಸಮಯದಲ್ಲಿ ಕುರ್ಚಿಗಳನ್ನು ಒಡೆದು ಹಾಕಿದ ಬಗ್ಗೆ ಪ್ರಸ್ತಾಪಿಸಿದ ಕಾರಣಕ್ಕೆ ಗ್ರಾಮದ ನಿವಾಸಿಗಳಾದ ಚಂದ್ರ, ಸಿಂಗ, ಪುಟ್ಟ, ಗುರುವ ಮತ್ತಿತತು ಸೇರಿಕೊಂಡು ಸುರೇಶರವರ ಮೇಲೆ ಕತ್ತಿಯಿಂದ ಹಲ್ಲೆ ಮಾಡಿರುವುದಾಗಿ ದೂರು ನೀಡಿದ್ದು, ಅದೇ  ರೀತಿ ಸುರೇಶ ಮತ್ತು ಗಣೇಶ ಎಂಬವರು ಸೇರಿಕೊಂಡು ಹಲ್ಲೆ ಮಾಡಿರುವುದಾಗಿ ಹೆಚ್‌.ಟಿ.ಸುರೇಶ ಎಂಬವರು ಸಹಾ ದೂರು ನೀಡಿದ್ದು ಸೋಮವಾರಪೇಟೆ ಪೊಲೀಸರು ಎರಡೂ ದೂರುಗಳಿಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವ್ಯಕ್ತಿಯ ಆಕಸ್ಮಿಕ ಸಾವು
                         ಸುಂಟಿಕೊಪ್ಪ ವ್ಯಾಪ್ತಿಯ ಕಾಂಡನಕೊಲ್ಲಿ ನಿವಾಸಿ ಗಂಗಮ್ಮ ಎಂಬವರ ಪತಿ ಚೀಯಣ್ಣ ಎಂಬವರು ದಿನಾಂಕ 24/04/2017ರಂದು ತೋಟಕ್ಕೆ ಕೆಲಸಕ್ಕೆ ಹೋಗಿ ಬರುವುದಾಗಿ ಹೋಗಿದ್ದು ಗಂಗಮ್ಮನವರು ಕೂಲಿ ಕೆಲಸಕ್ಕೆ ಹೋಗಿ ಸಂಜೆ ವೇಳೆ ಮನೆಗೆ ಮರಳಿದಾಗ ಪತಿ ಎ.ಪಿ.ಚೀಯಣ್ಣನವರು ಮನೆಗೆ ಬಾರದೆ ಇದ್ದುದನ್ನು ಕಂಡು ನೆರೆಯವರ  ಸಹಾಯದಿಂದ ಹುಡುಕಾಡಿದಾಗ ತೋಟದ ಇಳಿಜಾರಿನಲ್ಲಿ ಚೀಯಣ್ಣನವರು ಮೃತರಾಗಿರುವುದು ಕಂಡು ಬಂದಿದ್ದು, ಸುಮಾರು ಎರಡು ವರ್ಷಗಳಿಂದ ಚೇಯಣ್ಣನವರು ಎದೆ ನೋವಿನಿಂದ ಬಳಲುತ್ತಿದ್ದು ಈ ಕಾರಣದಿಂದ ಮೃತಪಟ್ಟಿರಬಹುದಾಗಿ ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Monday, April 24, 2017ಪತ್ರಿಕಾ ಪ್ರಕಟಣೆ
ಸುಧಾರಿತ ಗಸ್ತು - ಜನಸ್ನೇಹಿ ಪೊಲೀಸ್‌
                        ಏಪ್ರಿಲ್ 01, 2017 ರಿಂದ ಕರ್ನಾಟಕ ರಾಜ್ಯಾದ್ಯಂತ ಪೊಲೀಸ್‌ ಇಲಾಖೆಯಲ್ಲಿ ಸುಧಾರಿತ ಗಸ್ತು ವ್ಯವಸ್ಥೆಯು ಅಸ್ಥಿತ್ವಕ್ಕೆ ಬಂದಿದ್ದು, ಈ ಹಿಂದೆ ನಡೆಸುತ್ತಿದ್ದ ಬೀಟ್ ವ್ಯವಸ್ಥೆಯಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಿ "ಜನಸ್ನೇಹಿ ಪೊಲೀಸ್" ಮತ್ತು "ಸಮುದಾಯದತ್ತ ಪೊಲೀಸ್" ಎಂಬ ಪರಿಕಲ್ಪನೆಯಲ್ಲಿ ಪೊಲೀಸ್ ಠಾಣೆಗಳಲ್ಲಿರುವ ಒಂದು ಅಥವಾ ಎರಡು ಗ್ರಾಮಗಳಿಗೆ ಒಬ್ಬರು ಸಿಬ್ಬಂದಿಯಂತೆ ನೇಮಿಸಲಾಗಿದೆ. "ಪ್ರದೇಶಕೊಬ್ಬ ಪೊಲೀಸ್" ಎಂಬ ತತ್ವದಡಿಯಲ್ಲಿ ಗ್ರಾಮ ಗಸ್ತಿಗೆ ನೇಮಿಸಲ್ಪಟ್ಟ ಸಿಬ್ಬಂದಿಯವರು ಆ ಗಸ್ತಿನಲ್ಲಿ ಒಂದು ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಲಿದ್ದಾರೆ. ಸದರಿ ಸಿಬ್ಬಂದಿಯವರು ತಿಂಗಳಲ್ಲಿ ಎರಡು ಗ್ರಾಮ ಗಸ್ತುಗಳನ್ನು ನಿರ್ವಹಿಸಿ, ಸಾರ್ವಜನಿಕರ ಅಹವಾಲುಗಳನ್ನು ಆಲಿಸಿ ತಿಂಗಳಿಗೆ ಒಂದು ಬಾರಿ ಸದರಿ ಗ್ರಾಮದಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಗ್ರಾಮಗಳಲ್ಲಿ ಒಳ್ಳೆಯ ಚಾರಿತ್ರ್ಯ ಉಳ್ಳವರನ್ನು ಬೀಟ್ ಸದಸ್ಯರನ್ನಾಗಿ ನೇಮಿಸಿಕೊಂಡು ಅವರಿಂದ ಗ್ರಾಮಗಳ ಆಗುಹೋಗುಗಳ ಬಗ್ಗೆ ಮಾಹಿತಿ ಸಂಗ್ರಹಿಸಲಿದ್ದಾರೆ, ಹಾಗೂ ಸದರಿ ಗ್ರಾಮಕ್ಕೆ ಸಂಬಂಧಿಸಿದ ಎಲ್ಲಾ ದೂರು ಅರ್ಜಿ, ಪಾಸ್‌ಪೋರ್ಟ್‌  ವಿಚಾರಣೆ, ಗುಣ ನಡತೆ ವಿಚಾರಣೆ, ಇತ್ಯಾದಿಗಳನ್ನು ಆ ಸಿಬ್ಬಂದಿಯವರೇ ಮಾಡಲಿದ್ದಾರೆ. ಗ್ರಾಮ ಗಸ್ತಿಗೆ ನೇಮಿಸಿದ ಸಿಬ್ಬಂದಿಯವರಿಗೆ ಸಂಪೂರ್ಣ ಜವಾಬ್ದಾರಿಯನ್ನು ನೀಡಲಾಗಿದ್ದು, ಅವರು ಸದರಿ ಗ್ರಾಮದ ಸಾರ್ವಜನಿಕರ ಅಹವಾಲಿಗೆ ಸ್ಪಂದಿಸುವ ಬಗ್ಗೆ ಸೂಕ್ತ ತಿಳುವಳಿಕೆಯನ್ನು ನೀಡಲಾಗಿದ್ದು ಇದರಿಂದಾಗಿ ಸಾರ್ವಜನಿಕರು ಮತ್ತು ಪೊಲೀಸರ ಮಧ್ಯೆ ಸಾಮರಸ್ಯವೇರ್ಪಟ್ಟು ಉತ್ತಮ ಬಾಂಧವ್ಯ ನಿರ್ಮಾಣವಾಗಲು  ಸಹಕಾರಿಯಾಗುತ್ತದೆ. ಪೊಲೀಸ್ ಠಾಣೆಗಳಲ್ಲಿರುವ ಗ್ರಾಮಗಳಿಗೆ ಗಸ್ತು ಕರ್ತವ್ಯಕ್ಕೆ ನೇಮಕವಾಗುವ ಸಿಬ್ಬಂದಿಯವರ ಹೆಸರು, ಹುದ್ದೆ ಹಾಗೂ ದೂರವಾಣಿ ಸಂಖ್ಯೆಯನ್ನು ಪೊಲೀಸ್ ಠಾಣೆಯ ಮುಖ್ಯದ್ವಾರದ ಬಳಿ ಸಾರ್ವಜನಿಕರಿಗೆ ಕಾಣುವಂತೆ ಪ್ರದರ್ಶಿಸಲಾಗಿರುತ್ತದೆ . ಕೊಡಗು ಜಿಲ್ಲಾ ಪೊಲೀಸ್ ಉಪ-ವಿಭಾಗ, ವೃತ್ತ ಹಾಗೂ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುವ ಎಲ್ಲಾ ಅಧಿಕಾರಿ ಸಿಬ್ಬಂದಿಯವರಿಗೆ ಅನುಕೂಲವಾಗುವಂತೆ ನೂತನ ಸಿಮ್‌ ಕಾರ್ಡ್‌ಗಳನ್ನು  ನೀಡಲಾಗಿದ್ದು, ಈ ಎಲ್ಲಾ ದೂರವಾಣಿ ಸಂಖ್ಯೆಗಳನ್ನು ಕೊಡಗು ಪೊಲೀಸ್‌ ಬ್ಲಾಗ್‌ https://kodagupolice.blogspot.in Information about Police ವಿಭಾಗದಲ್ಲಿ ಪ್ರಕಟಿಸಲಾಗಿದ್ದು, ಆ ದೂರವಾಣಿ ಸಂಖ್ಯೆಯಲ್ಲಿ ಸಾರ್ವಜನಿಕರ ಸೇವೆಗೆ ಲಭ್ಯವಾಗಲಿದ್ದಾರೆ ಎಂದು ಕೊಡಗು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶ್ರೀ ರಾಜೇಂದ್ರ ಪ್ರಸಾದ್ ಐಪಿಎಸ್‌ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವ್ಯಕ್ತಿಯ ಮೇಲೆ ಹಲ್ಲೆ
                     ಮಡಿಕೇರಿ ತಾಲೂಕಿನ ಮರಗೋಡು ಗ್ರಾಮದ ನಿವಾಸಿ ಮುತ್ತುಕುಮಾರ ಎಂಬುವವರು ದಿನಾಂಕ 21-4-2017 ರಂದು ಕರ್ಣಯ್ಯನ ಭರತ ಎಂಬುವವರ ಜೊತೆ ಮಾತನಾಡಿಕೊಂಡಿರುವಾಗ ಅದೇ ಗ್ರಾಮದ ಶೇಖರ ಎಂಬುವವರು ಜಗಳ ತೆಗೆದು ಮರಳು ಲಾರಿಯನ್ನು ಪೊಲೀಸರಿಗೆ ಹಿಡಿದು ಕೊಟ್ಟಿರುವುದಾಗಿ ಆರೋಪಿಸಿ ಮುತ್ತುಕುಮಾರವರ ಮೇಲೆ ಹಲ್ಲೆ ನಡೆಸಿದ್ದು ಈ ಬಗ್ಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಕರಿ ಮೆಣಸು ಕಳವು
                        ವಿರಾಜಪೇಟೆ ತಾಲೂಕಿನ ಹಚ್ಚಿನಾಡು ಗ್ರಾಮದ ನಿವಾಸಿಯಾದ ಮಹೇಂದ್ರ ಎಂಬುವವರು ತಮ್ಮ ಗೋಡಾನ್ ನಲ್ಲಿ ಶೇಖರಿಸಿ ಇಟ್ಟಿದ್ದ ಕರಿಮೆಣಸಿನಲ್ಲಿ ಸುಮಾರು 200 ಕೆ ಜಿ ಯಷ್ಟು ಮೆಣಸನ್ನು ಯಾರೋ ಕಳ್ಳರು ದಿನಾಂಕ 21-4-2017 ಮತ್ತು 23-4-2017 ರ ಮದ್ಯದಲ್ಲಿ ಗೋಡಾನ್ ನ ಹಂಚನ್ನು ತೆಗೆದು ಕಳವು ಮಾಡಿರುವುದಾಗಿ ಮಹೇಂದ್ರ ರವರು ನೀಡಿದ ಪುಕಾರಿನ ಮೇರೆಗೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಮಹಿಳೆಯ ಆತ್ಮ ಹತ್ಯೆ
                            ಮಹಿಳೆಯೊಬ್ಬರು ಜೀವನದಲ್ಲಿ ಜುಗುಪ್ಸೆಗೊಂಡು ವಿಷ ಸೇವಿಸಿ ಆತ್ಮ ಹತ್ಯೆ ಮಾಡಿಕೊಂಡಿರುವ ಘಟನೆ ವಿರಾಜಪೇಟೆ ತಾಲೂಕಿನ ಬಿ ಶೆಟ್ಟಿಗೇರಿ ಗ್ರಾಮದಲ್ಲಿ ವರದಿಯಾಗಿದೆ. ಬಿ ಶೆಟ್ಟಿಗೇರಿಯ ಕಡೇಮಾಡ ದಿನೇಶರವರ ಲೈನ್ ಮನೆಯಲ್ಲಿ ವಾಸವಿರುವ ಜೇನುಕುರುಬರ ಸರೋಜ ಎಂಬುವವರ ಪತಿ ಸುಮಾರು 13 ವರ್ಷಗಳ ಹಿಂದೆ ಬಿಟ್ಟು ಹೋಗಿದ್ದು ಇದರಿಂದ ವಿಪರೀತ ಮದ್ಯಪಾನ ಮಾಡುತ್ತಿದ್ದು ದಿನಾಂಕ 21-4-2017 ರಂದು ಜೀವನದಲ್ಲಿ ಜುಗುಪ್ಸೆಗೊಂಡು ವಿಷ ಪದಾರ್ಥ ಸೇವಿಸಿದ್ದವರನ್ನು ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ 23-4-2017 ರಂದು ಮೃತಪಟ್ಟಿದ್ದು ಈ ಬಗ್ಗೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ನೇಣು ಬಿಗಿದುಕೊಂಡು ವ್ಯಕ್ತಿಯ ಆತ್ಮಹತ್ಯೆ
                          ಜೀವನದಲ್ಲಿ ಜುಗುಪ್ಸೆಗೊಂಡು ವ್ಯಕ್ತಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿರಾಜಪೇಟೆ ತಾಲೂಕಿನ ಚಿಕ್ಕಮಂಡೂರು ಗ್ರಾಮದಲ್ಲಿ ವರದಿಯಾಗಿದೆ. ಚಿಕ್ಕಮಂಡೂರು ಗ್ರಾಮದ ನಿವಾಸಿಯಾದ ಪಣಿಯರವರ ರಾಜು ಎಂಬುವವರ ಮಗ ಮನೆ ಬಿಟ್ಟು ಹೋಗಿದ್ದು ಇದೇ ವಿಚಾರದಲ್ಲಿ ಜೀವನದಲ್ಲಿ ಜುಗುಪ್ಸೆಗೊಂಡು ದಿನಾಂಕ 22-4-2017 ರಂದು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮ ಹತ್ಯೆ ಮಾಡಿಕೊಂಡಿದ್ದು ಈ ಬಗ್ಗೆ ಶ್ರೀಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಅಕ್ರಮ ಮರಳು ಸಾಗಾಟ
                                ಸರ್ಕಾರದ ಪರವಾನಿಗೆ ಇಲ್ಲದೇ ಅಕ್ರಮವಾಗಿ ಸೋಮವಾರಪೇಟೆ ತಾಲೂಕಿನ ಕೊಡ್ಲಿಪೇಟೆ ಎಂಬಲ್ಲಿ ಮರಳು ಸಾಗಾಟ ಮಾಡುತ್ತಿದ್ದು ಪಿಕ್ ಅಪ್ ಜೀಪನ್ನು ಮತ್ತು ಆರೋಪಿ ಪ್ರಮೋದ್ ಎಂಬುವವರನ್ನು ಶನಿವಾರಸಂತೆಯ ಪೊಲೀಸ್ ಉಪ ನಿರೀಕ್ಷಕರಾದ ಮರಿಸ್ವಾಮಿಯವರು ದಿನಾಕ 23-4-2017 ರಂದು ಪತ್ತೆ ಹಚ್ಚಿ ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಅಪಘಾತ ಪ್ರಕರಣ
                            ಹಾಸನ ಜಿಲ್ಲೆಯ ಹೊಳೆನರಸಿಪುರ ತಾಲೂಕಿನ ಮೆಣಗನ ಹಳ್ಳಿ ನಿವಾಸಿಯಾದ ಲೋಕೇಶ್ ಎಂಬುವವರು ದಿನಾಂಕ 22-4-2017 ರಂದು ಮೋಟಾರು ಸೈಕಲಿನಲ್ಲಿ ರಘು ಎಂಬುವವರೊಂದಿಗೆ ಕುಶಾಲನಗರಕ್ಕೆ ಬರುತ್ತಿರುವಾಗ ಕುಶಾಲನಗರದ ರಾಮ ಮರ ಮಿಲ್ಲಿನ ಹತ್ತಿರ ತಲುಪುವಾಗ ಎದುರುಗಡೆಯಿಂದ ಕೆಎಲ್-11-ಪಿ-7065 ರ ಪಿಕ್ ಅಪ್ ಜೀಪನ್ನು ಚಾಲಕ ಮೊಹಮ್ಮದ್ ರಿಯಾಜುದ್ದೀನ್ ಎಂಬುವವರು ಅಜಾಗರೂಕತೆಯಿಂದ ಚಾಲನೆ ಮಾಡಿ ಮೋಟಾರು ಸೈಕಲಿಗೆ ಡಿಕ್ಕಿಪಡಿಸಿದ ಪರಿಣಾಮ ಮೋಟಾರು ಸೈಕಲಿನಲ್ಲಿದ್ದ ಇಬ್ಬರಿಗೂ ಗಾಯವಾಗಿದ್ದು ಈ ಬಗ್ಗೆ ಕುಶಾಲನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಹಳೆ ವೈಷಮ್ಯ ವ್ಯಕ್ತಿಯ ಮೇಲೆ ಹಲ್ಲೆ
                                   ಸೋಮವಾರಪೇಟೆ ತಾಲೂಕಿನ ಇಗ್ಗೋಡ್ಲು ಗ್ರಾಮದ ಆಶ್ರಯ ಕಾಲೋನಿಯ ನಿವಾಸಿಯಾದ ಮನು ಎಂಬುವವರು ದಿನಾಂಕ 22-4-2017 ರಂದು ಮನೆಗೆ ಸಾಮಾನು ತೆಗೆದುಕೊಂಡು ಹೋಗುತ್ತಿರುವಾ ಇಗ್ಗೋಡ್ಲು ಗ್ರಾಮದ ನಿವಾಸಿಯಾದ ಪಾಪಣ್ಣ, ಅಶ್ವಥ್, ಮಣಿಕಂಠ, ವಿರೇಶ ಮತ್ತು ಜಂಬೂರು ಗ್ರಾಮದ ನಿವಾಸಿಯಾದ ವಿಶ್ವನಾಥ, ಕಾರೆಕಾಡುವಿನ ನಿವಾಸಿಯಾದ ಅನಿಲ್ ರವರುಗಳು ಹಳೇ ವೈಷಮ್ಯದಿಂದ ದಾರಿ ತಡೆದು ಹಲ್ಲೆ ನಡೆಸಿದ್ದು ಈ ಬಗ್ಗೆ ಮನುರವರು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Sunday, April 23, 2017

ವ್ಯಕ್ತಿಯ ಮೇಲೆ ಹಲ್ಲೆ

                   ಸೋಮವಾರಪೇಟೆ ನಗರದ ನಿವಾಸಿಯಾದ ಸತ್ಯಜಿತ್ ಎಂಬುವವರು ದಿನಾಂಕ 22-4-2017 ರಂದು ಮಾಟ್ನಳ್ಳಿ ಗ್ರಾಮದಲ್ಲಿರುವ ತಮ್ಮ ತೋಟಕ್ಕೆ ಜೀಪಿನಲ್ಲಿ ಹೋಗುತ್ತಿರುವಾಗ ಮಾಟ್ನಳ್ಳಿ ಗ್ರಾಮದ ರಸ್ತೆ ಮದ್ಯದಲ್ಲಿ ಮಾಟ್ನಳ್ಳಿಯ ನಿವಾಸಿಯಾದ ಸುರೇಶ ಎಂಬುವವರು ಜೀಪನ್ನು ರಸ್ತೆಯ ಮದ್ಯದಲ್ಲಿ ನಿಲ್ಲಿಸಿಕೊಂಡಿದ್ದು ಸತ್ಯಜಿತ್ ರವರು ಹಾರನ್ ಮಾಡಿದಾಗ ಜೀಪನ್ನು ಸೈಡಿಗೆ ತೆಗೆಯದೇ ಜೀಪಿನಿಂದ ಇಳಿದು ಸತ್ಯಜಿತ್ ರವರ ಹತ್ತಿರ ಹೋಗಿ ಚಾಕುವಿನಿಂದ ಚುಚ್ಚಿ ಗಾಯಪಡಿಸಿದ್ದು ಈ ಬಗ್ಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಅಪಘಾತ ಪ್ರಕರಣ

                    ಕೊಣನೂರುವಿನ ನಿವಾಸಿ ಮೋಹನ್ ಎಂಬುವವರು ದಿನಾಂಕ 22-4-2017 ರಂದು ಮೋಟಾರು ಸೈಕಲಿನಲ್ಲಿ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಕೂಡಿಗೆ ಗ್ರಾಮ ದೇವತೆಯ ಹಬ್ಬಕ್ಕೆಂದು ಹೋಗುತ್ತಿರುವಾಗ ಹಳೆಕೂಡಿಗೆ ಜಂಕ್ಷನ್ ಹತ್ತಿರ ರಸ್ತೆಯ ಎಡಬದಿಗೆ ನಿಲ್ಲಿಸಿಕೊಂಡಿರುವಾಗ ಕುಶಾಲನಗರ ಕಡೆಯಿಂದ ಸೃಜಿತ್ ಎಂಬುವವರು ಮೋಟಾರು ಸೈಕಲನ್ನು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ನಿಲ್ಲಿಸಿದ್ದ ಮೋಟಾರು ಸೈಕಲಿಗೆ ಡಿಕ್ಕಿಪಡಿಸಿದ ಪರಿಣಾಮ ಮೋಹನ್, ಅವರ ಪತ್ನಿ ಮತ್ತು ಇಬ್ಬರು ಮಕ್ಕಳಿಗೆ ಹಾಗೂ ಡಿಕ್ಕಿಪಡಿಸಿದ ಮೋಟಾರು ಸೈಕಲಿನ ಸವಾರ ಸೃಜಿತ್ ಮತ್ತು ಹಿಂಬದಿ ಸವಾರ ಅಜಯ್ ರವರಿಗೂ ಗಾಯವಾಗಿದ್ದು ಈ ಬಗ್ಗೆ ಕುಶಾಲನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Saturday, April 22, 2017

ಅಂಗಡಿ ಕಳವು
                      ಮೂರ್ನಾಡಿನ ನಾಣುಸ್ ಬೇಕರಿಯಲ್ಲಿ ಕೆಲಸ ಮಾಡಿಕೊಂಡಿರುವ ಮೊಪುಲ್ ಜಿತ್ ಮೋಹನ್ ಎಂಬವರು ದಿನಾಂಕ 20/04/2017ರಂದು ರಾತ್ರಿ ವೇಳೆ ಬೇಕರಿಯ ಕೆಲಸ ಮುಗಿಸಿ ಬೇಕರಿಗೆ ಬೀಗ ಹಾಕಿ ಮನೆಗೆ  ಹೋಗಿದ್ದು ಮಾರನೆ ದಿನ 21/04/2017ರಂದು ಬೇಕರಿ ತೆರೆಯಲೆಂದು ಬಂದಾಗ ಬೇಕರಿಯ ಮುಂಭಾಗದ ಶಟರ್ಸ್‌ನ್ನು ಮೇಲಕ್ಕೆತ್ತಿರುವುದು ಕಂಡು  ಬಂದಿದ್ದು  ಒಳಗೆ   ಹೋಗಿ  ನೋಡಿದಾಗ ಒಳಗಿನ ಕೆಲವು ವಸ್ತುಗಳು ಚೆಲ್ಲಾಪಿಲ್ಲಿಯಾಗಿದ್ದು ಹಣದ ಡ್ರಾಯರ್‌ನಲ್ಲಿಟ್ಟಿದ್ದ ರೂ.20,400/-ನ್ನು ಯಾರೋ ಕಳ್ಳರು ಕಳವು ಮಾಡಿರುವುದು ಕಂಡು ಬಂದಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 ಅಂಗಡಿ  ಕಳವು
                    ಮೂರ್ನಾಡಿನ ಸೌಭಾಗ್ಯ ಮೆಡಿಕಲ್ಸ್‌ ಔಷಧಿ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿರುವ ಮಹಮದ್ ಅಶ್ರಫ್ ಎಂಬವರು ದಿನಾಂಕ 20/04/2017ರ ರಾತ್ರಿ ವೇಳೆ ಅಂಗಡಿ ವ್ಯಾಪಾರ ಮುಗಿಸಿ ಮನೆಗೆ ಹೋಗಿದ್ದು ಮಾರನೆ ದಿನ ಅಂಗಡಿಗೆ ಬಂದಾಗ ಅಂಗಡಿಯ ಮುಂದಿನ ಶಟರ್ಸ್ ಅನ್ನು ಯಾರೋ ತೆರೆದಿರುವುದು ಕಂಡು ಬಂದಿದ್ದು ಒಳಗೆ ಹೋಗಿ ನೋಡಿದಾಗ  ಅಂಗಡಿಯ  ಡ್ರಾಯರ್‌ನಲ್ಲಿಟ್ಟಿದ್ದ ರೂ. 11,300/-ನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದು ಕಂಡು ಬಂದಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು  ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಬೈಕಿಗೆ ಕಾರು ಡಿಕ್ಕಿ
                      ದಿನಾಂಕ 21/04/2017ರಂದು ಸೋಮವಾರಪೇಟೆ ನಿವಾಸಿ ಎಂ.ಎಂ.ವಿಜಯ್‌ ಎಂಬವರು ಸ್ನೇಹಿತ ರಾಜೇಶ್‌ ಎಂಬವರೊಂದಿಗೆ ಅವರ ಮೋಟಾರು ಬೈಕ್ ಸಂಖ್ಯೆ ಕೆಎ-12-ಆರ್‌-2300ರಲ್ಲಿ ಮಡಿಕೇರಿ ಸಮೀಪದ ಬಿಳಿಗೇರಿಯಿಂದ ಮಡಿಕೇರಿಗೆ ಹೋಗುತ್ತಿರುವಾಗ ಹಾಕತ್ತೂರಿನ ಬಳಿ ಎದುರುಗಡೆಯಿಂದ ಕೆಎ-12-ಪಿ-3884ರ ಕಾರನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಬೈಕಿಗೆ ಡಿಕ್ಕಿ ಪಡಿಸಿದ ಪರಿಣಾಮ ವಿಜಯ ಹಾಗೂ ರಾಜೇಶ್‌ರವರಿಗೆ ಗಾಯಗಳಾಗಿರುವುದಾಗಿ ನೀಡಿದ  ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ  ಕೈಗೊಂಡಿದ್ದಾರೆ. 

ವ್ಯಕ್ತಿಯ ಮೇಲೆ ಹಲ್ಲೆ
                   ದಿನಾಂಕ 25/02/2017ರಂದು ಕುಟ್ಟ ಬಳಿಯ ಚೂರಿಕಾಡು ನಿವಾಸಿ ಜೇನುಕುರುಬರ ಕರಿಯ ಎಂಬವರ ಪತ್ನಿ ಲಿಂಗಿ ಎಂಬವರ ಮೇಲೆ  ಅದೇ ಗ್ರಾಮದ ರಾಮು ಮತ್ತು ಮುತ್ತಿ ಎಂಬವರು ಹಲ್ಲೆ ಮಾಡಿದ್ದು ಇದನ್ನು ವಿಚಾರಿಸಿದ ಕರಿಯರವರ ಮೇಲೂ ದೊಣ್ಣೆಯಿಂದ ಹೊಡೆದು ಹಲ್ಲೆ ಮಾಡಿದ್ದು ಕೊಲೆ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ಕುಟ್ಟ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಪರಸ್ಪರ ಕಾರು ಡಿಕ್ಕಿ
                       ದಿನಾಂಕ 21/04/2017ರಂದು ಕುಶಾಲನಗರ ಬಳಿಯ ಗೊಂದಿಬಸವನಹಳ್ಳಿ ನಿವಾಸಿ ವಸಂತ ರೈ ಎಂಬವರು ಅವರ ಪತ್ನಿಯೊಂದಿಗೆ ಕೆಎ-21-ಎಂ-9528ರ ಕಾರಿನಲ್ಲಿ ಹೋಗುತ್ತಿರುವಾಗ ಬಸವನಹಳ್ಳಿಯ ಬಳಿ ಎದುರುಗಡೆಯಿಂದ ಕೆಎ-04-ಎಂಎ-2345ರ ಮಾರುತಿ ಓಮಿನಿ  ವ್ಯಾನನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ವಸಂತ ರೈರವರ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ವಸಂತ ರೈರವರಿಗೆ ಗಾಯಗಳಾಗಿ ಕಾರು ಹಾನಿಗೊಳಗಾಗಿರುವುದಾಗಿ  ನೀಡಿದ ದೂರಿನ ಮೇರೆಗೆ ಕುಶಾಲನಗರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Friday, April 21, 2017

 ಅಕ್ರಮ ಮರಳು ಶೇಖರಣೆ 

               ಅಕ್ರಮವಾಗಿ ಮರಳು ಶೇಖರಣೆ ಮಾಡಿರುವ ಸ್ಥಳಕ್ಕೆ ದಾಳಿ ಮಾಡಿ ಮರಳನ್ನು ವಶಪಡಿಸಿಕೊಂಡಿರುವ ಘಟನೆ ವಿರಾಜಪೇಟೆ ತಾಲೂಕಿನ ಮಾಯಮುಡಿ ಗ್ರಾಮದಲ್ಲಿ ವರದಿಯಾಗಿದೆ. ಗೋಣಿಕೊಪ್ಪ ಠಾಣೆಯ ಅಪರಾಧ ವಿಭಾಗದ ಉಪನಿರೀಕ್ಷಕರಾದ ಶ್ರೀ ಹೆಚ್ ವೈ ರಾಜುರವರಿಗೆ ಸಿಕ್ಕಿದ ಖಚಿತ ವರ್ತಮಾನದ ಮೇರೆಗೆ ಮಾಯಮುಡಿ ಗ್ರಾಮದ ಕೊಂಗಂಡ ವಿನೋದ್ ಕುಟ್ಟಪ್ಪ ಮತ್ತು ಇತರರು ಸೇರಿ ಸರ್ಕಾರದ ಪರವಾನಿಗೆ ಇಲ್ಲದೇ ಅಕ್ರಮವಾಗಿ ಕೊಂಗಂಡ ಕುಟುಂಬಸ್ಥರ ಗದ್ದೆಯ ಪಕ್ಕದ ತೋಡಿನಿಂದ ಮರಳನ್ನು ತೆಗೆದು ಸುಮಾರು 3 ಟಿಪ್ಪರ್ ಲಾರಿಯಷ್ಟು ಶೇಖರಣೆ ಮಾಡಿದ್ದ ಸ್ಥಳಕ್ಕೆ ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಮರಳನ್ನು ವಶಪಡಿಸಿಕೊಂಡು ಆರೋಪಿಗಳ ವಿರುದ್ದ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ಕಳವು ಪ್ರಕರಣ

         ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಮನೆಯ ಹಿಂದಿನ ಬಾಗಿಲು ಮುರಿದು ಒಳಗೆ ನುಗ್ಗಿ ಕಳ್ಳತನ ಮಾಡಿರುವ ಘಟನೆ ವಿರಾಜಪೇಟೆ ತಾಲೂಕಿನ ನಾಂಗಾಲ ಗ್ರಾಮದಲ್ಲಿ ವರದಿಯಾಗಿದೆ. ನಾಂಗಾಲ ಗ್ರಾಮದ ನಿವಾಸಿ ಕುಪ್ಪಂಡ ಪೂವಮ್ಮ ಎಂಬುವವರು ದಿನಾಂಕ 19-4-2017 ರಂದು ವಿರಾಜಪೇಟೆಗೆ ಹೋಗಿ ವಾಪಾಸ್ಸು ಮನೆಗೆ ಬಂದು ನೋಡುವಾಗ ಯಾರೋ ಕಳ್ಳರು ಮನೆಯ ಹಿಂದಿನ ಬಾಗಿಲನ್ನು ಮುರಿದು ಒಳನುಗ್ಗಿ 10,000 ರೂ ನಗದು ಹಾಗೂ 5 ಗ್ರಾಂ ಚಿನ್ನದ ಉಂಗುರವನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ಪೂವಮ್ಮರವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಬೈಕಿಗೆ ಕಾರು ಡಿಕ್ಕಿ

          ವಿರಾಜಪೇಟೆ ತಾಲೂಕಿನ ಬಾಳುಗೋಡು ಗ್ರಾಮದ ಏಕಲವ್ಯ ಶಾಲೆಯಲ್ಲಿ ಅಡುಗೆ ಕೆಲಸ ಮಾಡಿಕೊಂಡಿರುವ ಸುಜಿತ್ ರವರು ಮಕ್ಕಳಾದ ಸುಸ್ಮಿತಾ ಮತ್ತು ಮಿಥುನ್ ರವರೊಂದಿಗೆ ಕೆಂಡಗಣ್ಣರವರೊಂದಿಗೆ ಮೋಟಾರು ಸೈಕಲಿನಲ್ಲಿ ದಿನಾಂಕ 20-4-2017 ರಂದು ಹುಣಸೂರಿಗೆ ಹೋಗುತ್ತಿರುವಾಗ ಕೊಳ್ತೋಡು ಬೈಗೋಡು ಗ್ರಾಮಕ್ಕೆ ತಲುಪುವಾಗ ರಸ್ತೆಯ ಅಂಚಿನಲ್ಲಿ ನಿಲ್ಲಿಸಿದ್ದ ಕಾರನ್ನು ಚಾಲಕ ನಿಶಾಂತ್ ಎಂಬುವವರು ಅಜಾಗರೂಕತೆಯಿಂದ ಬಲಕ್ಕೆ ತಿರುಗಿಸಿ ಮೋಟಾರು ಸೈಕಲಿಗೆ ಡಿಕ್ಕಿಪಡಿಸಿದ ಪರಿಣಾಮ ಮೋಟಾರು ಸೈಕಲಿನಲ್ಲಿದ್ದ ಸುಜಿತ್, ಸುಸ್ಮಿತಾ ಮತ್ತು ಮಿಥುನ್ ರವರಿಗೆ ಗಾಯಗಳಾಗಿದ್ದು ಬಗ್ಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. 

ವ್ಯಕ್ತಿಯ ಆತ್ಮಹತ್ಯೆ

        ಜೀವನದಲ್ಲಿ ಜಿಗುಪ್ಸೆಗೊಂಡು ವ್ಯಕ್ತಿಯೊಬ್ಬರು ಬಂದೂಕಿನಿಂಧ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿರಾಜಪೇಟೆ ತಾಲೂಕಿನ ನಾಲ್ಕೇರಿ ಗ್ರಾಮದಲ್ಲಿ ವರದಿಯಾಗಿದೆ. ನಾಲ್ಕೇರಿ ಗ್ರಾಮದ ನಿವಾಸಿಯಾದ 66 ವರ್ಷ ಪ್ರಾಯದ ದೇವಯ್ಯ @ ಚೋಟು ಎಂಬುವವರು ಸುಮಾರು 20 ವರ್ಷಗಳಿಂದ ಸೊಂಟ ನೋವಿನಿಂದ ಬಳಲುತ್ತಿದ್ದು ಇದೇ ವಿಚಾರದಲ್ಲಿ ಜಿಗುಪ್ಸೆಗೊಂಡು ದಿನಾಂಕ 20-4-2017 ರಂದು ಬಂದೂಕಿನಿಂದ ಗುಂಡು ಹೊಡೆದುಕೊಂಡು ಆತ್ನ ಹತ್ಯೆ ಮಾಡಿಕೊಂಡಿರುವುದಾಗಿ ಪತ್ನಿ ತಂಗಮ್ಮನವರು ನೀಡಿದ ದೂರಿನ ಮೇರೆಗ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಮೋಟಾರು ಸೈಕಲ್ ಗಳ ಡಿಕ್ಕಿ

                 ಮಡಿಕೇರಿ ತಾಲೂಕಿನ ಕುಂಜಿಲ ಗ್ರಾಮದ ನಿವಾಸಿ ಮಂಜುನಾಥ್ ಎಂಬುವವರು ದಿನಾಂಕ 20-4-2017 ರಂದು ಮೋಟಾರು ಸೈಕಲಿನಲ್ಲಿ ಪೊನ್ನಂಪೇಟೆಗೆ ಹೋಗುತ್ತಿರುವಾಗ ಮೂರ್ನಾಡು ನಗರದ ಬಲಮುರಿ ಮತ್ತು ನಾಪೋಕ್ಲು ಜಂಕ್ಷನ್ ತಲುಪುವಾಗ ಬಲಮುರಿ ಕಡೆಯಿಂದ ಕೆಎ-12-ಕ್ಯೂ-9705 ರ ಮೋಟಾರು ಸೈಕಲನ್ನು ಅದರ ಸವಾರ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಮಂಜುನಾಥರವರು ಚಾಲನೆ ಮಾಡುತ್ತಿದ್ದ ಮೋಟಾರು ಸೈಕಲಿಗೆ ಡಿಕ್ಕಿಪಡಿಸಿ ಮಂಜುನಾಥರವರಿಗೆ ಗಾಯವಾಗಿದ್ದು ಈ ಸಂಬಂದ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಕಾರುಗಳ ಡಿಕ್ಕಿ

                  ಮದೆನಾಡು ಗ್ರಾಮದ ನಿವಾಸಿ ಸುರೇಶ ಎಂಬುವವರು ದಿನಾಂಕ 20-4-2017 ರಂದು ಕಾರಿನಲ್ಲಿ ಸ್ನೇಹಿತ ಗಿರಿ ಎಂಬುವವರೊಂದಿಗೆ ಮಡಿಕೇರಿಯಿಂದ ಮದೆನಾಡುವಿಗೆ ಹೋಗುತ್ತಿರುವಾಗ ಕಾಟಕೇರಿ ಎಂಬಲ್ಲಿಗೆ ತಲುಪುವಾಗ ತಿರುವು ರಸ್ತೆಯಲ್ಲಿ ಎದುರುಗಡೆಯಿಂದ ಕೆಎ-12-ಪಿ-1150 ರ ಕಾರನ್ನು ಅದರ ಚಾಲಕ ಅಜಾಗರೂಕತೆಯಿಂದ ಚಾಲನೆ ಮಾಡಿ ಸುರೇಶರವರ ಚಾಲನೆ ಮಾಡುತ್ತಿದ್ದ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಕಾರುಗಳ ಜಖಂಗೊಂಡು ಸುರೇಶರವರಿಗೆ ಗಾಯವಾಗಿದ್ದು, ಡಿಕ್ಕಿಪಡಿಸಿದ ಕಾರಿನಲ್ಲಿದ್ದವರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು ಈ ಬಗ್ಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಸರ್ಕಾರಿ ಕೆಲಸಕ್ಕೆ ಅಡ್ಡಿ

           ದಿನಾಂಕ 20-42017 ರಂದು ಸೋಮವಾರಪೇಟೆಯ ಬೇಳೂರು ಅರಣ್ಯ ಶಾಖೆಯ ಉಪ ವಲಯ ಅರಣ್ಯಾಧಿಕಾರಿ ಮಹದೇವ ನಾಯಕ್ ರವರು ನೇಗಳೆ ಗ್ರಾಮದಲ್ಲಿ ಕರ್ತವ್ಯದಲ್ಲಿರುವಾಗ ಸೋಮವಾರಪೇಟೆ ಕಡೆಯಿಂದ ಬಂದ ಕೆಎ-12-ಎ-7548ರ ಪಿಕ್ ಅಪ್ ಜೀಪಿನಲ್ಲಿ ಮರದ ದಿಮ್ಮಿಗಳನ್ನು ತುಂಬಿಸಿಕೊಂಡು ಹೋಗುತ್ತಿದ್ದುದನ್ನು ನಿಲ್ಲಿಸುವಂತೆ ಸೂಚಿಸಿದರೂ ಜೀಪಿನ ಚಾಲಕ ನಿಖಿಲ್ ಎಂಬಾತ ಜೀಪನ್ನು ನಿಲ್ಲಿಸದೆ ಹೋಗಿದ್ದು ಆ ಜೀಪನ್ನು ಹಿಂಬಾಲಿಸುವ ಸಮಯದಲ್ಲಿ ಹೊಸಳ್ಳಿ ಗ್ರಾಮದ ಬಳಿ ಕಲ್ಕಂದೂರು ನಿವಾಸಿ ಫಾಲಾಕ್ಷ ಎಂಬಾತನು ಕೆಎ-12-ಎ-9985ರ ಇನ್ನೊಂದು ಪಿಕ್ ಅಪ್ ಜೀಪಿನಲ್ಲಿ ಬಂದು ಮಹದೇವ ನಾಯಕ್ ರವರ ಜೀಪನ್ನು ಹಿಂದೆ ಹಾಕಿ ಆತನ ಪಿಕ್ ಅಪ್ ಜೀಪನ್ನು ಮಹದೇವ ನಾಯಕ್ ರವರ ಜೀಪಿಗೆ ಅಡ್ಡ ನಿಲ್ಲಿಸಿ ಮರದ ದಿಮ್ಮಿಗಳನ್ನು ಸಾಗಿಸುತ್ತಿದ್ದ ಪಿಕ್ ಅಪ್ ಜೀಪು ತಪ್ಪಿಸಿಕೊಳ್ಳಲು ಸಹಾಯ ಮಾಡಿ ಮಹದೇವ ನಾಯಕ್ ರವರ ಸರ್ಕಾರಿ ಕೆಲಸಕ್ಕೆ ಅಡ್ಡಿ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಶಾಂತಿ ಭಂಗ ವ್ಯಕ್ತಿಯ ಬಂಧನ

           ಸಾರ್ವಜನಿಕ ಸ್ಥಳದಲ್ಲಿ ವ್ಯಕ್ತಿಯೊಬ್ಬ ಶಾಂತಿಗೆ ಭಂಗ ಉಂಟು ಮಾಡುತ್ತಿದ್ದ ಘಟನೆ ಸುಂಟಿಕೊಪ್ಪ ನಗರದಲ್ಲಿ ವರದಿಯಾಗಿದೆ. ದಿನಾಂಕ 20-4-2017 ರಂದು ರಾತ್ರಿ 9-00 ಗಂಟೆಗೆ ಅಂದೆಗೋವೆ ಗ್ರಾಮದ ನಿವಾಸಿಯಾದ ವಸಂತ ಎಂಬುವವರು ಸುಂಟಿಕೊಪ್ಪ ನಗರದ ವಂದನಾ ಬಾರ್ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಮಾರುತಿ ಓಮಿನಿ ವ್ಯಾನನ್ನು ನಿಲ್ಲಿಸಿಕೊಂಡು ಕೈಯಲ್ಲಿ ಬಂದೂಕನ್ನು ಹಿಡಿದುಕೊಂಡು ಸಾರ್ವಜನಿಕರ ಶಾಂತಿಗೆ ಭಂಗ ಉಂಟಾಗುವಂತೆ ಬಾಯಿಗೆ ಬಂದಂತೆ ಬೈಯುತ್ತಾ ಅನುಚಿತವಾಗಿ ವರ್ತಿಸುತ್ತಿದ್ದವನ್ನು ರಾತ್ರಿ ಗಸ್ತು ಸಿಬ್ಬಂದಿಯವರು ವಿಚಾರಿಸಿದಾಗ ಕೋವಿಯಿಂದ ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿದ್ದು ಕೂಡಲೇ ಸಿಬ್ಬಂದಿಯವರು ಆತನನ್ನು ವಶಕ್ಕೆ ಪಡೆದು ಠಾಣೆಗೆ ಹಾಜರುಪಡಿಸಿದ್ದು ಈ ಬಗ್ಗೆ ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

 

Thursday, April 20, 2017

ಅಪಘಾತ ಗಾಯಾಳು ಮರಣ
                    ದಿನಾಂಕ 09/04/2017ರಂದು ಮಡಿಕೇರಿ ಸಮೀಪದ ಬೋಯಿಕೇರಿಯ ಸಿಂಕೋನ ಎಂಬಲ್ಲಿ ಕಮಲ ಎಂಬ ಮಹಿಳೆಯು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಮಡಿಕೇರಿ ಕಡೆಯಿಂದ ಬಂದ ಕೆಎ-3-ಎಡಿ-9358 ರ ಕಾರಿನ ಚಾಲಕ ಆಂದ್ರ ಪ್ರದೇಶದ ರಾಜೇಶ್‌ ಎಂಬಾತನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಕಾರನ್ನು ಚಾಲಿಸಿಕೊಂಡು ಬಂದು ಕಮಲಳಿಗೆ ಡಿಕ್ಕಿ ಪಡಿಸಿದ ಪರಿಣಾಮ ತೀವ್ರವಾಗಿ ಗಾಯಗೊಂಡ ಕಮಲಳನ್ನು ಮಂಗಳೂರಿನ ವೆನ್‌ಲಾಕ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 18/04/2017ರಂದು ಗಾಯಾಳು  ಕಮಲಳು  ಮೃತರಾಗಿರುವುದಾಗಿ  ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಗಾಯಾಳು ಮರಣ
                       ದಿನಾಂಕ 15/04/2017ರಂದು ಮಂಡ್ಯ ಜಿಲ್ಲೆಯ ಬಾಬು ಎಂಬವರು ಅಮ್ಮತ್ತಿ ಕೊಡವ ಸಮಾಜದಲ್ಲಿ ಲೈಟಿಂಗ್‌ ಕೆಲಸ ಮಾಡುತ್ತಿದ್ದ ಸಮಯದಲ್ಲಿ ಛಾವಣಿಯ ಮೇಲ್ಬಾಗದಿಂದ ಕೆಳಗೆ ಬಿದ್ದು ಗಾಯಗಳಾಗಿ  ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಬಾಬುರವರು ದಿನಾಂಕ 18/04/2017ರಂದು ಮೃತರಾಗಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Wednesday, April 19, 2017

ಯುವಕ ಆತ್ಮಹತ್ಯೆ
                      ದಿನಾಂಕ 17/04/2017ರಂದು ಮಡಿಕೇರಿ ಸಮೀಪದ ಕಡಗದಾಳು ನಿವಾಸಿ ಕಿರಣ್ ಕುಮಾರ್ ಎಂಬ ಯುವಕನು ಆತನ ಸ್ನೇಹಿತ ಹರೀಶ್‌ ಎಂಬಾತನಿಗೆ ಕರೆ ಮಾಡಿ ತಾನು ವಿಷ ಸೇವಿಸ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ತಿಳಿಸಿದ್ದು, ಕೂಡಲೇ ಹರೀಶ್‌ ಮತ್ತು ಪ್ರೇಮ ಎಂಬವರು ಕಿರಣ್‌ಕುಮಾರನ ಮನೆಗೆ ಧಾವಿಸಿ ಅಲ್ಲಿ ವಿಷ ಸೇವಿಸಿ ಅಸ್ವಸ್ಥನಾಗಿದ್ದ ಕಿರಣ್‌ ಕುಮಾರನನ್ನು ಚಿಕಿತ್ಸೆಗಾಗಿ ಮಡಿಕೇರಿಯ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಜೆ.ಎಸ್‌.ಎಸ್‌. ಆಸ್ಪತ್ರೆಗೆ ಕರೆದೊಯ್ದಿದ್ದು ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 18/04/2017ರಂದು ಮೃತನಾಗಿದ್ದು ವಿಫಲ ಪ್ರೇಮವೇ ಆತ್ಮಹತ್ಯೆಗೆ ಕಾರಣವಾಗಿರಬಹುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ/

ಅಕ್ರಮ ಮರಳು ಸಾಗಾಟ
                     ದಿನಾಂಕ 18/04/2017ರಂದು ಶನಿವಾರಸಂತೆ ಠಾಣಾ ಪಿಎಸ್‌ಐ ಶ್ರೀ ಹೆಚ್‌.ಎಂ.ಮರಿಸ್ವಾಮಿರವರು ಗಸ್ತು ಕರ್ತವ್ಯದಲ್ಲಿರುವಾಗ ಕೊಡ್ಲಿಪೇಟೆ ಬಳಿಯ ಕೆಳಕೊಡ್ಲಿ ಗ್ರಾಮದ ಹೇಮಾವತಿ ನದಿಯ ಹಿನ್ನೀರಿನ ಪ್ರದೇಶದಲ್ಲಿ ಕೆಎ-11-ಎ-8150 ಸಂಖ್ಯೆಯ ಒಂದು ಟಿಪ್ಪರ್‌ ಲಾರಿ ಮಗುಚಿಕೊಂಡಿರುವುದು ಕಂಡು ಅಲ್ಲಿಗೆ ತೆರಳಿ ನೋಡಿದಾಗ ಲಾರಿಯಲ್ಲಿ ಅಕ್ರಮವಾಗಿಸರ್ಕಾರದ ಪರವಾನಗಿ ಇಲ್ಲದೆ ಸಾಗಿಸುತ್ತಿದ್ದ ಮರಳು ಕಂಡು ಬಂದಿದ್ದು ಲಾರಿಯನ್ನು ಅಮಾನತುಪಡಿಸಿಕೊಂಡು ಶನಿವಾರಸಂತೆ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಅಕ್ರಮ ಪ್ರವೇಶ, ಕೊಲೆ ಬೆದರಿಕೆ
                     ದಿನಾಂಕ 14/04/2017ರಂದು ಸೋಮವಾರಪೇಟೆ ನಗರದ ಮಹಿಳಾ ಸಮಾಜ ರಸ್ತೆಯಲ್ಲಿರುವ ಹೆಚ್‌.ಟಿ.ಉದಯ ಎಂಬವರ ಮನೆಗೆ ಮನೆಯ ಗೇಟನ್ನು ಹಾರಿ ಅಕ್ರಮವಾಘಿ ಪ್ರವೇಶಿಸಿದ ಮನೋಜ್‌ ಕುಮಾರ್‌ ಎಂಬಾತನು ಉದಯರವರನ್ನು 200 ರೂ. ಹಣ ಕೇಳಿದ್ದು ಉದಯರವರು ನಿರಾಕರಿಸಿದ ಕಾರಣಕ್ಕೆ ಮನೆಯ ಮುಂದೆ ಇದ್ದ ಎರಡು ಹೂಕುಂಡಗಳನ್ನು ಒಡೆದು ನಷ್ಟಪಡಿಸಿ ಕೊಲೆ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಪಾದಚಾರಿಗೆ ರಿಕ್ಷಾ ಡಿಕ್ಕಿ
                   ದಿನಾಂಕ 18/04/2017ರಂದು ಸಕಲೇಶಪುರದ ಕುಡುಗೆರೆ ನಿವಾಸಿ ಸುಮಯ್ಯಾ ಎಂಬವರ ಪುತ್ರಿ ಹಿಬಾ ಫಾತಿಮಾ ಎಂಬಾಕೆಯು ಸೋಮವಾರಪೇಟೆ ನಗರದ ಎಸ್‌ಜೆಎಂ ಶಾಲೆಯ ಬಳಿ ನಡೆದುಕೊಂಡು ಹೋಗುತ್ತಿರುವಾಗ ಬಸವೇಶ್ವರ ದೇವಸ್ಥಾನ ರಸ್ತೆಯ ಕಡೆಯಿಂದ ಕೆಎ-12-ಬಿ-3006ರ ಆಟೋ ರಿಕ್ಷಾವನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಹಿಬಾ ಫಾತಿಮಾಳಿಗೆ ಡಿಕ್ಕಿಪಡಿಸಿದ ಪರಿಣಾಮ ಆಕೆಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವ್ಯಕ್ತಿಯ ಮೇಲೆ ಹಲ್ಲೆ
                     ದಿನಾಂಕ 18/042017ರಂದು  ಸೋಮವಾರಪೇಟೆ ಬಳಿಯ ಕಲ್ಕಂದೂರು ನಿವಾಸಿ ಶಶಿಕುಮಾರ್‌ ಎಂಬವರ ಅಕ್ಕ ಮಧು ಎಂಬವರು ಸೋಮವಾರಪೇಟೆ ನಗರದಲ್ಲಿ ಪಿಗ್ಮಿ ಹಣ ಸಂಗ್ರಹಿಸುತ್ತಾ ನಗರದ ಅಮ್ಮಣ್ಣ ಗ್ಯಾರೇಜ್‌ ಬಳಿ ಹೋದಾಗ ಅಲ್ಲಿ ಗಣೇಶ ಎಂಬಾತನ್ನು ಕಂಡು ಆತನು ಮಧುರವರಿಗೆ ಕೊಡಬೇಕಾದ ಸಾಲದ ಹಣವನ್ನು ಕೇಳಿದಾಗ ಆತನು ಮಧುರವರೊಂದಿಗೆ ಜಗಳವಾಡಿದ್ದನ್ನು ಪ್ರಶ್ನಿಸಿದ ಶಶಿಕುಮಾರ್‌ರವರಿಗೆ ಗಣೇಶನು ದೊಣ್ಣೆಯಿಂದ ಹೊಡೆದು ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕಾರಿಗೆ ಬೈಕ್‌ ಡಿಕ್ಕಿ
                 ದಿನಾಂಕ 18/04/2017ರಂದು ಬೆಂಗಳೂರಿನ ನಿವಾಸಿ ಕೆ.ಎಸ್.ಸಂದೀಪ್‌ ಎಂಬವರು ಸೋಮವಾರಪೇಟೆ ನಗರದ ವಿವೇಕಾನಂದ ವೃತ್ತದ  ಬಳಿ ಅವರ ಕಾರನ್ನು ಶಾಂತಳ್ಳಿ ಕಡೆಗೆ ಹೋಗುವ ರಸ್ತೆಗೆ ತಿರುಗಿಸುತ್ತಿರುವಾಗ ಹಿಂದಿನಿಂದ ಕೆಎ-13-ಇಎಫ್‌-6888ರ ಮೋಟಾರು ಬೈಕನ್ನು ಅದರ ಚಾಲಕ ಸಂದೀಪ್ ಎಂಬಾತನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಸಂದೀಪ್‌ರವರ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಬೈಕ್‌ ಸವಾರ ಸಂದೀಪ್‌ ಮತ್ತು ಹಿಂಬದಿ ಸವಾರ ಮಂಜು ಎಂಬಾತನಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವ್ಯಕ್ತಿಯ ಮೇಲೆ ಹಲ್ಲೆ
                    ದಿನಾಂಕ 18/04/2017ರಂದು ಸೋಮವಾರಪೇಟೆ ಬಳಿಯ ತೋಳೂರು ಶೆಟ್ಟಳ್ಳಿ ನಿವಾಸಿ ಡಿ.ಕೆ.ಪ್ರಸನ್ನ ಎಂಬವರ ಮನೆಯ ಮುಂದೆ ಸಂಜೆ ವೇಳೆ ಜಯೇಂದ್ರ ಎಂಬಾತನು ನಿಂತಿದ್ದನ್ನು ಪ್ರಶ್ನಿಸಿದ ಕಾರಣಕ್ಕೆ ಜಯೇಂದ್ರ ಮತ್ತು ಆತನ ಸಂಗಡಿಗರಾದ ವಿನಯ ಮತ್ತು ಯೋಗೇಶರವರು ಪ್ರಸನ್ನರವರ ಮೇಲೆ ಹಾಗೂ ಗಲಾಟೆಯನ್ನು ತಡೆಯಲು ಬಂದ ಪ್ರಸನ್ನರವರ ಪತ್ನಿ ಗೌರಮ್ಮನವರ ಮೇಲೆ ಹಲ್ಲೆ ಮಾಡಿರುವುದಾಗಿ  ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಮನೆ ಕಳವು
                     ವಿರಾಜಪೇಟೆ ಬಳಿಯ ಅರಮೇರಿ ನಿವಾಸಿ ಕಂಡ್ರತಂಡ ಗೀತಾ ಎಂಬವರು ದಿನಾಂಕ 12/04/2017ರಂದು ಅವರ ಬೆಂಗಳೂರಿನಲ್ಲಿರುವ ಮನೆಗೆ ಹೋಗಿದ್ದು ನಂತರ ದಿನಾಂಕ 16/04/2017ರಂದು ಮರಳಿ ಬರುವಾಗ ಮನೆಯಲ್ಲಿದ್ದ ಸುಮಾರು ರೂ.20,000/- ಮೌಲ್ಯದ ಪಾತ್ರೆ ಸಾಮಾಗ್ರಿಗಳನ್ನು ಯಾರೋ ಕಳ್ಳರು ಕಳವು ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Tuesday, April 18, 2017

                        ಪತ್ರಿಕಾ ಪ್ರಕಟಣೆ

          ಕೊಡಗು ಜಿಲ್ಲೆಯಲ್ಲಿ ರಾತ್ರಿಯ ವೇಳೆ ಕಳವು ಪ್ರಕರಣಗಳು ನೆಡೆಯುತ್ತಿದ್ದು, ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಮಡಿಕೇರಿ, ವಿರಾಜಪೇಟೆ, ಸೋಮವಾರಪೇಟೆ, ಕುಶಾಲನಗರದಲ್ಲಿ ತಂಡಗಳನ್ನು ರಚಿಸಿ ವಿಶೇಷ ರಾತ್ರಿ ಗಸ್ತು ನೆಡೆಸುವ ಬಗ್ಗೆ ಈ ತಂಡಗಳಿಗೆ ತಿಳುವಳಿಕೆಯನ್ನು ನೀಡಿದ್ದು, ದಿನಾಂಕ: 17-04-2017 ರಂದು ರಾತ್ರಿ ಕುಶಾಲನಗರ ಟೌನ್ ಪಿಎಸ್ಐ ಶ್ರೀ ಪಿ. ಜಗದೀಶ್ ರವರು ಕುಶಾಲನಗರ ಪಟ್ಟಣದಲ್ಲಿ ವಿಶೇಷ ರಾತ್ರಿ ಗಸ್ತಿನಲ್ಲಿರುವಾಗ್ಗೆ, 17/18.04.2017 ರ 00.15 ಗಂಟೆಗೆ ಕುಶಾಲನಗರ ಗುಂಡೂರಾವ್ ಬಡಾವಣೆಯ ಜಾತ್ರೆ ಮೈದಾನದ ಬಳಿ ಇರುವ ಮರದ ಕೆಳಗೆ 5 ಜನ ವ್ಯಕ್ತಿಗಳು ಒಂದು ಆಟೋ ರಿಕ್ಷಾ ನಿಲ್ಲಿಸಿಕೊಂಡು ಅಪಾಯಕಾರಿ ಆಯುಧಗಳೊಂದಿಗೆ ಗುಂಪು ಸೇರಿಕೊಂಡು ದರೋಡೆ ನೆಡೆಸಲು ಸಂಚು ರೂಪಿಸುತ್ತಿರುವುದಾಗಿ ಬಂದ ಖಚಿತ ವರ್ತಮಾನದ ಮೇರೆಗೆ ಪಿಎಸ್ಐ ರವರು ಸದರಿ ವಿಷಯವನ್ನು ಮೇಲಾಧಿಕಾರಿಗಳಿಗೆ ತಿಳಿಸಿದ್ದು, ಈ ಮಾಹಿತಿಯನ್ನು ಆಧರಿಸಿ ಕುಶಾಲನಗರ ವೃತ್ತದ ವೃತ್ತ ನಿರೀಕ್ಷಕರಾದ ಶ್ರೀ ಕ್ಯಾತೇಗೌಡ ರವರು ಹಾಗೂ ಕುಶಾಲಕಗರ ಟೌನ್ ಪೊಲೀಸ್ ಠಾಣೆಯ ಪಿಎಸ್ಐ ಶ್ರೀ ಪಿ ಜಗದೀಶ್ ಹಾಗೂ ಸಿಬ್ಬಂದಿಯವರೊಂದಿಗೆ ಗುಂಡೂರಾವ್ ಬಡಾವಣೆಯ ಜಾತ್ರೆ ಮೈದಾನದಲ್ಲಿ ಮಾಹಿತಿ ಬಂದ ಜಾಗದಲ್ಲಿ ದಾಳಿ ಮಾಡಲಾಗಿ, ಸದರಿ ಸ್ಥಳದಲ್ಲಿ 5 ಜನರು ಒಂದು ಆಟೋ ರಿಕ್ಷಾ ಸಂಖ್ಯೆ. ಕೆಎ-12 ಎ-4940 ರಲ್ಲಿ ಇದ್ದು ಪೊಲೀಸರನ್ನು ನೋಡಿ ಪರಾರಿಯಾಗಲು ಯತ್ನಿಸಿದವರನ್ನು ವಶಕ್ಕೆ ಪಡೆದು ವಿಚಾರಿಸಲಾಗಿ ಸದರಿಯವರ ಹೆಸರುಗಳು ಈ ಕೆಳಕಂಡಂತೆ ಇರುತ್ತದೆ.

1. ಸಂಜಯ್ ಕುಮಾರ್ @ ಸಂಜಯ್ ಎಂ.ಎ ತಂದೆ ಅರವಿಂದ, 25 ವರ್ಷ, ವಾಸ ಗಾಂಧಿನಗರ, ಸೋಮವಾರಪೇಟೆ

2. ರವಿ ಪಿ.ಕೆ ತಂದೆ ಚಿದಂಬರನ್, 30 ವರ್ಷ, ಗಾರೆ ಕೆಲಸ, ವಾಸ ಗಾಂಧಿ ನಗರ ಬಾಣೆ, ಚೌಡ್ಲು ಗ್ರಾಮ, ಸೋಮವಾರಪೇಟೆ 

3. ಇಸ್ಮಾಯಿಲ್ .ಎ ತಂದೆ ಲೇ|| ಅನ್ವರ್, 28 ವರ್ಷ, ಆಟೋ ಚಾಲಕ, ವಾಸ ಎಣ್ಣೆ ವ್ಯಾಪಾರಿ ಮಧುರವರ ಬಾಡಿಗೆ            
    ಮನೆಯಲ್ಲಿ,  ಗೌಡ ಸಮಾಜ ರಸ್ತೆ, ಗಾಂಧಿನಗರ, ಸೋಮವಾರಪೇಟೆ.

4. ಸುದೇವ. ಸಿ.ಎಸ್ ತಂದೆ ಲೇ|| ಶಾಂತಪ್ಪ, 35 ವರ್ಷ, ವ್ಯವಸಾಯ, ವಾಸ ಆಲೇಕಟ್ಟೆ ರಸ್ತೆ, ಚೌಡ್ಲು ಗ್ರಾಮ,
    ಸೋಮವಾರಪೇಟೆ.

5. ಚಂದ್ರ .ಎನ್.ಸಿ ತಂದೆ ಲೇ|| ಚಂಗಪ್ಪ, 42 ವರ್ಷ, ಕೂಲಿ ಕೆಲಸ, ವಾಸ ಭಾರತಿ ಕಂಪೆನೆ ಎಸ್ಟೇಟ್ ಲೈನ್ ಮನೆ,
    ಹಾನಗಲ್ಲು   ಗ್ರಾಮ, ಸೋಮವಾರಪೇಟೆ.          

          ಸದರಿ ಸ್ಥಳದಲ್ಲಿದ್ದ ಆಟೋರಿಕ್ಷಾವನ್ನು ಪರಿಶೀಲಿಸಲಾಗಿ ಅದರಲ್ಲಿ 2 ಕಬ್ಬಿಣದ ಲಾಂಗ್ಗಳು, 2 ಕಾಡುಮರದ ದೊಣ್ಣೆಗಳು, ನೂಲಿನ ಹಗ್ಗ, ಮತ್ತು ಮೆಣಸಿನಪುಡಿಯ ಕವರ್ ಇವುಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ.

         ಸದರಿ ಆರೋಪಿಗಳು ವಿಚಾರಣಾ ವೇಳೆಯಲ್ಲಿ ಪ್ರಮುಖ ಆರೋಪಿ ಸಂಜಯ್ ಕುಮಾರ್ @ ಸಂಜಯ್ ಈತನು ಸೋಮವಾರಪೇಟೆ, ಮಡಿಕೇರಿ, ಸುಂಟಿಕೊಪ್ಪ, ಮೈಸೂರು ಮುಂತಾದ ಕಡೆಗಳಲ್ಲಿ 5 ಮನೆಕನ್ನಾಕಳವು, 1 ಕರಿಮೆಣಸು ಕಳವು, 3 ದೇವಸ್ಥಾನ ಕಳವು, 3 ಮೋಟಾರ್ಸೈಕಲ್ ಕಳವು ಪ್ರಕರಣಗಳು ಸೇರಿ ಒಟ್ಟು 12 ಪ್ರಕರಣಗಳಲ್ಲಿ ಭಾಗಿಯಾಗಿರುವುದು ವಿಚಾರಣೆಯ ವೇಳೆ ತಿಳಿದುಬಂದಿರುತ್ತದೆ. ಉಳಿದ ಆರೋಪಿಗಳು ತಲಾ ಒಂದೊಂದು ಕನ್ನಾ ಕಳವು ಪ್ರಕರಣಗಳನ್ನು ಭಾಗಿಯಾಗಿರುವುದು ತಿಳಿದುಬಂದಿರುತ್ತದೆ.

        ಮೇಲ್ಕಂಡ ಆರೋಪಿಗಳು ಡಕಾಯಿತಿ ಮಾಡಲು ಸಂಚು ರೂಪಿಸುತ್ತಿದ್ದುದರ ಬಗ್ಗೆ ಕುಶಾಲನಗರ ನಗರ ಪೊಲೀಸ್ ಠಾಣೆ : ಮೊ.ಸಂ. 27/17 ಕಲಂ 399, 402 ಐಪಿಸಿ ರಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆಯಲ್ಲಿರುತ್ತದೆ.

       ಅಲ್ಲದೇ ಪ್ರಮುಖ ಆರೋಪಿ ಸಂಜಯ್ಕುಮಾರ್ ವಿರುದ್ಧ ಕುಶಾಲನಗರ ನ್ಯಾಯಾಲಯದ 2 ಪ್ರಕರಣಗಳಲ್ಲಿ ಸೋಮವಾರಪೇಟೆ ನ್ಯಾಯಾಲಯದ 5 ಪ್ರಕರಣಗಳಲ್ಲಿ ಚೆನ್ನರಾಯಪಟ್ಟಣ ನ್ಯಾಯಾಲಯದ 1 ಪ್ರಕರಣದಲ್ಲಿ ಹಾಗೂ ಅರಕಲಗೂಡು ನ್ಯಾಯಾಲಯದ 1 ಪ್ರಕರಣ ಸೇರಿ ಒಟ್ಟು 9 ಪ್ರಕರಣಗಳಲ್ಲಿ ದಸ್ತಗಿರಿ ವಾರಂಟ್ ಜಾರಿಯಾಗಿದ್ದು, ಆರೋಪಿಯು ಸದರಿ ಪ್ರಕರಣಗಳ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿರುತ್ತಾನೆ. ಮತ್ತೊಬ್ಬ ಆರೋಪಿ ರವಿ.ಪಿ.ಕೆ ಗೆ ಸೋಮವಾರಪೇಟೆ ಠಾಣೆಯ ಮೊಕದ್ದಮೆ ಸಂಖ್ಯೆ. 95/2009 ಕಲಂ. 457, 380 ಐಪಿಸಿ ಪ್ರಕರಣದಲ್ಲಿ 2010 ನೇ ಸಾಲಿನಲ್ಲಿ ಸಜೆ ಆಗಿದ್ದು, ಪೂರ್ವಸಜಾ ಆಸಾಮಿಯಾಗಿರುತ್ತಾನೆ.

        ಈ ಪ್ರಕರಣದಲ್ಲಿ ಪೊಲೀಸ್ ಅಧೀಕ್ಷಕರು, ಕೊಡಗು ಜಿಲ್ಲೆ ರವರ ಮಾರ್ಗದರ್ಶನದಲ್ಲಿ, ಡಿವೈಎಸ್ಪಿ ಸೋಮವಾರಪೇಟೆ ರವರ ನೇತೃತ್ವದಲ್ಲಿ ಕುಶಾಲನಗರ ಸಿಪಿಐ, ಕುಶಾಲನಗರ ನಗರ ಪೊಲೀಸ್ ಠಾಣೆಯ ಪಿಎಸ್ಐ ಶ್ರೀ ಜಗದೀಶ್. ಪಿ, ಕುಶಾಲನಗರದ ವಿಶೇಷ ಅಪರಾಧ ಪತ್ತೆ ತಂಡದ ಎಎಸ್ಐ ಶ್ರೀ ಗೋಪಾಲ್ ಸಿಬ್ಬಂದಿಯವರಾದ ಶ್ರೀ. ಸಜಿ, ಶ್ರೀ.ಸುಧೀಶ್ ಕುಮಾರ್, ಶ್ರೀ. ಸುರೇಶ್, ಶ್ರೀ ಮುಸ್ತಾಫ, ಶ್ರೀ ಉದಯಕುಮಾರ್, ಶ್ರೀ ಸಂಪತ್ ರೈ, ಶ್ರೀ ಅಜಿತ್, ಶ್ರೀ.ಲೋಕೇಶ್, ಚಾಲಕರಾದ ಶ್ರೀ ಪ್ರವೀಣ್ ಮತ್ತು ಶ್ರೀ. ಗಣೇಶ್, ಶ್ರೀ ರಾಜೇಶ್ ಹಾಗೂ ಶ್ರೀ.ಗಿರೀಶ್ ರವರು ಸದರಿ ಆರೋಪಿಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿರುತ್ತಾರೆ.
       ಸದರಿ ಆರೋಪಿಗಳಿಂದ ರೂ. 8,81,000/- ಬೆಲೆಯ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ. ವಿವರ ಈ ಕೆಳಕಂಡಂತಿರುತ್ತದೆ.

1) 200 ಗ್ರಾಂ ಚಿನ್ನಾಭರಣ ಅಂದಾಜು ಮೌಲ್ಯ ರೂ. 600,000/-.
2) 150 ಗ್ರಾಂ ಬೆಳ್ಳಿ ಆಭರಣಗಳು, ಅಂದಾಜು ಮೌಲ್ಯ ರೂ. 6000/-.
3) 3 ಮೋಟಾರ್ ಸೈಕಲ್ಗಳು, ಅಂದಾಜು ವೌಲ್ಯ ರೂ 1.50,000/-.
4) 225 ಕೆಜಿ ಕರಿಮೆಣಸು, ಅಂದಾಜು ಮೌಲ್ಯ ರೂ. 1,25,000/-.
       ಮೇಲ್ಕಂಡ ಎಲ್ಲಾ ಆರೋಪಿಗಳನ್ನು ಪತ್ತೆಹಚ್ಚಿ ಹಲವಾರು ಕಳವು ಪ್ರಕರಣಗಳನ್ನು ಪತ್ತೆಹಚ್ಚಿದ ಮೇಲ್ಕಂಡ ಅಧಿಕಾರಿ ಹಾಗೂ ಸಿಬ್ಬಂದಿಯವರ ಕಾರ್ಯವನ್ನು ಶ್ಲಾಘಿಸಿ ಮಾನ್ಯ ಪೊಲೀಸ್ ಅಧೀಕ್ಷಕರು ಕೊಡಗು ಜಿಲ್ಲೆ ರವರು ಅಭಿನಂದನೆಗಳನ್ನು ತಿಳಿಸಿರುತ್ತಾರೆ.
ವ್ಯಕ್ತಿಯ ಆಕಸ್ಮಿಕ ಸಾವು
                  ದಿನಾಂಕ 16/04/2017ರಂದು ಪೊನ್ನಂಪೇಟೆ ಬಳಿಯ ನಲ್ಲೂರು ಗ್ರಾಮದಲ್ಲಿ ಸೇತುವೆ ಕೆಲಸ ಮಾಡಿಕೊಂಡಿದ್ದ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬೇಗೂರು ನಿವಾಸಿ ಬಸವಶೆಟ್ಟಿ ಎಂಬವರು ನಲ್ಲೂರು ಗ್ರಾಮದ ನಿವಾಸಿ ಪುಳ್ಳಂಗಡ ನರೇಂದ್ರ ಎಂಬವರ ತೋಟದ ಕೆರೆಯಲ್ಲಿ ಸ್ನಾನ ಮಾಡಲೆಂದು ಹೋಗಿದ್ದು ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದು ಮುಳುಗಿ ಸಾವಿಗೀಡಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಸಾಕಾನೆ ಧಾಳಿ, ವ್ಯಕ್ತಿ ಮರಣ
                 ದಿನಾಂಕ 17/04/2017ರಂದು ಸಿದ್ದಾಪುರ ಬಳಿಯ  ಕರಡಿಗೋಡು ಗ್ರಾಮದ ದುಬಾರೆ ಹಾಡಿಯ ನಿವಾಸಿ ಅಣ್ಣು ಎಂಬವರು ಅವರ ಮನೆಯ ಮುಂದೆ ಕಟ್ಟಿ ಹಾಕಿದ್ದ ರಂಜನ್ ಎಂಬ ಆನೆಯನ್ನು ಕ್ಯಾಂಪ್‌ಗೆ ಕರೆದುಕೊಂಡು ಹೋಗಲು ಸರಪಳಿ ಬಿಚ್ಚುತ್ತಿರುವಾಗ ಪಕ್ಕದಲ್ಲಿದ್ದ ಕಾರ್ತಿಕ್‌ ಎಂಬ ಸಾಕಾನೆಯು ಏಕಾ ಏಕಿ ಅಣ್ಣುರವರನ್ನು ಸೊಂಡಿಲಿನಿಂದ ಎಳೆದು ದಂತದಿಂದ ಹೊಟ್ಟೆಯ ಬಲಭಾಗಕ್ಕೆ ಚುಚ್ಚಿ ಗಾಯಗೊಳಿಸಿದ ಪರಿಣಾಮ ಅಣ್ಣುರವರು ಮೃತರಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಪರಸ್ಪರ ಟ್ಯಾಂಕರ್ ಡಿಕ್ಕಿ
                   ದಿನಾಂಕ 17/04/2017ರಂದು ಮಂಗಳೂರು ನಿವಾಸಿ ನಾಗೇಶ ಎಂಬವರು ಮಂಗಳೂರಿನಿಂದ ಇಂಡಿಯನ್‌ ಆಯಿಲ್ ಕಂಪೆನಿಯ ಡೀಸೆಲ್ನ್ನು ಕೆಎ-04-ಡಿ-8738ರ ಟ್ಯಾಂಕರ್ ಲಾರಿಯಲ್ಲಿ ತುಂಬಿಸಿಕೊಂಡು ಕೂಡಿಗೆಯ ಕಡೆಗೆ ಬರುತ್ತಿರುವಾಗ ಮಡಿಕೇರಿಯ ಬಳಿ ಜೋಡುಪಾಲ ಎಂಬಲ್ಲಿ ಎದುರಿನಿಂದ ಕೆಎ-30-8355 ಸಂಖ್ಯೆಯ ಟ್ಯಾಂಕರನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ನಾಗೇಶ್‌ರವರು ಚಾಲಿಸುತ್ತಿದ್ದ ಟ್ಯಾಂಕರ್‌ಗೆ ಡಿಕ್ಕಿಪಡಿಸಿದ ಪರಿಣಾಮ ನಾಗೇಶ್‌ರವರಿಗೆ ಗಾಯಗಳಾಗಿದ್ದು ಟ್ಯಾಂಕರ್‌ಗೆ ಹಾನಿಯುಂಟಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ

ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯ ಮೇಲೆ ಹಲ್ಲೆ
                     ದಿನಾಂಕ 17/04/2017ರಂದು ಕೊಡ್ಲಿಪೇಟೆ ಬಳಿಯ  ಶಿವಾರಳ್ಳಿ ನಿವಾಸಿ ಎಸ್‌.ಪಿ.ಸುಬ್ರಾಯ ಎಂಬವರು ಅವರ ಮನೆಯ ಮುಂದೆ ಅಳವಡಿಸಿದ್ದ ಪಂಚಾಯಿತಿಯ ನಲ್ಲಿಯಿಂದ ನೀರು ಹಿಡಿಯುತ್ತಿರುವಾಗ ಅದೇ ಗ್ರಾಮದ ಕುಶಾಲ ಮತ್ತು ಸವಿತ ಎಂಬವರು ಬಂದು ನೀರು ಹಿಡಿಯುವ ವಿಚಾರದಲ್ಲಿ ಜಗಳವಾಡಿ ಸುಬ್ರಾಯರವರ ಮೇಲೆ ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Monday, April 17, 2017

 ಪತ್ರಿಕಾ ಪ್ರಕಟಣೆ
ಸುಧಾರಿತ ಗಸ್ತು - ಜನಸ್ನೇಹಿ ಪೊಲೀಸ್‌
                        ಏಪ್ರಿಲ್ 01, 2017 ರಿಂದ ರ್ನಾಟಕ ರಾಜ್ಯಾದ್ಯಂತ ಪೊಲೀಸ್‌ ಇಲಾಖೆಯಲ್ಲಿ ಸುಧಾರಿತ ಗಸ್ತು ವ್ಯವಸ್ಥೆಯು ಅಸ್ಥಿತ್ವಕ್ಕೆ ಬಂದಿದ್ದು, ಹಿಂದೆ ನಡೆಸುತ್ತಿದ್ದ ಬೀಟ್ ವ್ಯವಸ್ಥೆಯಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಿ "ಜನಸ್ನೇಹಿ ಪೊಲೀಸ್" ಮತ್ತು "ಸಮುದಾಯದತ್ತ ಪೊಲೀಸ್" ಎಂಬ ಪರಿಕಲ್ಪನೆಯಲ್ಲಿ ಪೊಲೀಸ್ ಠಾಣೆಗಳಲ್ಲಿರುವ ಒಂದು ಅಥವಾ ಎರಡು ಗ್ರಾಮಗಳಿಗೆ ಒಬ್ಬರು ಸಿಬ್ಬಂದಿಯಂತೆ ನೇಮಿಸಲಾಗಿದೆ. "ಪ್ರದೇಶಕೊಬ್ಬ ಪೊಲೀಸ್" ಎಂಬ ತತ್ವದಡಿಯಲ್ಲಿ ಗ್ರಾಮ ಗಸ್ತಿಗೆ ನೇಮಿಸಲ್ಪಟ್ಟ ಸಿಬ್ಬಂದಿಯವರು ಗಸ್ತಿನಲ್ಲಿ ಒಂದು ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಲಿದ್ದಾರೆ. ಸದರಿ ಸಿಬ್ಬಂದಿಯವರು ತಿಂಗಳಲ್ಲಿ ಎರಡು ಗ್ರಾಮ ಗಸ್ತುಗಳನ್ನು ನಿರ್ವಹಿಸಿ, ಸಾರ್ವಜನಿಕರ ಅಹವಾಲುಗಳನ್ನು ಆಲಿಸಿ ತಿಂಗಳಿಗೆ ಒಂದು ಬಾರಿ ಸದರಿ ಗ್ರಾಮದಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಗ್ರಾಮಗಳಲ್ಲಿ ಒಳ್ಳೆಯ ಚಾರಿತ್ರ್ಯ ಉಳ್ಳವರನ್ನು ಬೀಟ್ ಸದಸ್ಯರನ್ನಾಗಿ ನೇಮಿಸಿಕೊಂಡು ಅವರಿಂದ ಗ್ರಾಮಗಳ ಆಗುಹೋಗುಗಳ ಬಗ್ಗೆ ಮಾಹಿತಿ ಸಂಗ್ರಹಿಸಲಿದ್ದಾರೆ, ಹಾಗೂ ಸದರಿ ಗ್ರಾಮಕ್ಕೆ ಸಂಬಂಧಿಸಿದ ಎಲ್ಲಾ ದೂರು ಅರ್ಜಿ, ಪಾಸ್‌ಪೋರ್ಟ್‌  ವಿಚಾರಣೆ, ಗುಣ ನಡತೆ ವಿಚಾರಣೆ, ಇತ್ಯಾದಿಗಳನ್ನು ಸಿಬ್ಬಂದಿಯವರೇ ಮಾಡಲಿದ್ದಾರೆ. ಗ್ರಾಮ ಗಸ್ತಿಗೆ ನೇಮಿಸಿದ ಸಿಬ್ಬಂದಿಯವರಿಗೆ ಸಂಪೂರ್ಣ ಜವಾಬ್ದಾರಿಯನ್ನು ನೀಡಲಾಗಿದ್ದು, ಅವರು ಸದರಿ ಗ್ರಾಮದ ಸಾರ್ವಜನಿಕರ ಅಹವಾಲಿಗೆ ಸ್ಪಂದಿಸುವ ಬಗ್ಗೆ ಸೂಕ್ತ ತಿಳುವಳಿಕೆಯನ್ನು ನೀಡಲಾಗಿದ್ದು ಇದರಿಂದಾಗಿ ಸಾರ್ವಜನಿಕರು ಮತ್ತು ಪೊಲೀಸರ ಮಧ್ಯೆ ಸಾಮರಸ್ಯವೇರ್ಪಟ್ಟು ಉತ್ತಮ ಬಾಂಧವ್ಯ ನಿರ್ಮಾಣವಾಗಲು  ಸಹಕಾರಿಯಾಗುತ್ತದೆ. ಪೊಲೀಸ್ ಠಾಣೆಗಳಲ್ಲಿರುವ ಗ್ರಾಮಗಳಿಗೆ ಗಸ್ತು ಕರ್ತವ್ಯಕ್ಕೆ ನೇಮಕವಾಗುವ ಸಿಬ್ಬಂದಿಯವರ ಹೆಸರು, ಹುದ್ದೆ ಹಾಗೂ ದೂರವಾಣಿ ಸಂಖ್ಯೆಯನ್ನು ಪೊಲೀಸ್ ಠಾಣೆಯ ಮುಖ್ಯದ್ವಾರದ ಬಳಿ ಸಾರ್ವಜನಿಕರಿಗೆ ಕಾಣುವಂತೆ ಪ್ರದರ್ಶಿಸಲಾಗಿರುತ್ತದೆ . ಕೊಡಗು ಜಿಲ್ಲಾ ಪೊಲೀಸ್ ಉಪ-ವಿಭಾಗ, ವೃತ್ತ ಹಾಗೂ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುವ ಎಲ್ಲಾ ಅಧಿಕಾರಿ ಸಿಬ್ಬಂದಿಯವರಿಗೆ ಅನುಕೂಲವಾಗುವಂತೆ ನೂತನ ಸಿಮ್‌ ಕಾರ್ಡ್‌ಗಳನ್ನು  ನೀಡಲಾಗಿದ್ದು, ದೂರವಾಣಿ ಸಂಖ್ಯೆಯಲ್ಲಿ ಸಾರ್ವಜನಿಕರ ಸೇವೆಗೆ ಲಭ್ಯವಾಗಲಿದ್ದಾರೆ ಎಂದು ಕೊಡಗು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶ್ರೀ ರಾಜೇಂದ್ರ ಪ್ರಸಾದ್ ಐಪಿಎಸ್‌ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪಾದಚಾರಿಗೆ ಬೈಕ್ ಡಿಕ್ಕಿ
                     ದಿನಾಂಕ 15/04/2017ರಂದು ಕುಶಾಲನಗರ ಬಳಿಯ ಕೂಡಿಗೆ ನಿವಾಸಿ ರಾಮು ಎಂಬವರು ಕೂಡಿಗೆ ಕ್ರೀಡಾ ಶಾಲೆಗೆ ಕೆಲಸಕ್ಕೆಂದು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಕುಶಾಲನಗರ ಕಡೆಯಿಂದ ಕೆಎ-12-ಕ್ಯು-6061ರ ಮೋಟಾರು ಬೈಕನ್ನು ಅದರ ಚಾಲಕ ಯಲಕನೂರು ಹೊಸಳ್ಳಿ ನಿವಾಸಿ ವೆಂಕಟೇಶ್‌ ಎಂಬವರು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ರಾಮುರವರಿಗೆ ಡಿಕ್ಕಿಪಡಿಸಿದ ಪರಿಣಾಮ ರಾಮುರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಸಂಚಾರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವ್ಯಕ್ತಿಯ ಆತ್ಮಹತ್ಯೆ
                    ದಿನಾಂಕ 16/04/2017ರಂದು ಶ್ರೀಮಂಗಲ ಬಳಿಯ ಬೀರುಗ ನಿವಾಸಿ ನಾಗ ಎಂಬವರು ಮನೆಯ ಅಡುಗೆ ಕೋಣೆಯ ಮಾಡಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಮೃತ ನಾಗ ಅನಾರೋಗ್ಯಪೀಡಿತನಾಗಿದ್ದು  ವಿಪರೀತ ಮದ್ಯವ್ಯಸನಿಯಾಗಿದ್ದು ಜೀವನದಲ್ಲಿ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದಾಗಿ ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವಿಷ ಸೇವಿಸಿ ವ್ಯಕ್ತಿಯ ಸಾವು
                     ಪೊನ್ನಂಪೇಟೆ ನಗರದ ಜನತಾ ಕಾಲೋನಿ ನಿವಾಸಿ ಸೈದಾಲಿ ಎಂಬವರು ಸುಮಾರು ಒಂದು ವರ್ಷದಿಂದ ಗ್ಯಾಸ್ಟ್ರಿಕ್ ಕಾಯಿಲೆಯಿಂದ ಬಳಲುತ್ತಿದ್ದು ದಿನಾಂಕ 14/04/2017ರಂದು ವಿಪರೀತ ಹೊಟ್ಟೆನೋವು  ಬಂದಿದ್ದು  ಅದನ್ನು ತಾಳಲಾರದೆ ಮನೆಯಲ್ಲಿದ್ದ ಯಾವುದೋ ವಿಷ ಪದಾರ್ಥವನ್ನು ಸೇವಿಸಿದ್ದು ಅವರನ್ನು ಮಂಗಳೂರಿನ ಯೆನಪೋಯಾ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿ ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 16/04/2017ರಂದು ಮೃತರಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.