Friday, April 14, 2017

ಅಕ್ರಮ ಮರಳು ಸಾಗಾಟ
              ದಿನಾಂಕ 13-04-2017 ರಂದು ಗೋಣಿಕೊಪ್ಪ ಠಾಣೆಯ ಅಪರಾಧ ವಿಭಾಗದ ಉಪನಿರೀಕ್ಷಕರಾದ ಹೆಚ್ ವೈ ರಾಜುರವರಿಗೆ ಮಾಯಮುಡಿ ಗ್ರಾಮದ ಸಾರ್ವಜನಿಕ ರಸ್ತೆಯಲ್ಲಿ ಗೋಣಿಕೊಪ್ಪ ಕಡೆಗೆ ಅಕ್ರಮವಾಗಿ ಒಂದು ಈಚರ್ ಟಿಪ್ಪರ್ ಲಾರಿಯಲ್ಲಿ ಮರಳನ್ನು ಸಾಗಿಸುತ್ತಿರುವುದಾಗಿ ಸಿಕ್ಕಿದ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗುತ್ತಿರುವಾಗ ಮಾಯಮುಡಿಯ ಬುಟ್ಟಿಯಂಡ ಮುತ್ತಣ್ಣ ರವರ ಕಾಫಿ ತೋಟದ ಗೇಟಿನ ಬಳಿ  ಎದುರುಗಡೆಯಿಂದ ಬಂದ ಟಿಪ್ಪರ್ ಲಾರಿಯನ್ನು ತಡೆದಾಗ ಲಾರಿಯ ಚಾಲಕನು ಲಾರಿಯನ್ನು ನಿಲ್ಲಿಸಿ ಪರಾರಿಯಾಗಿದ್ದು, ಲಾರಿಯಲ್ಲಿ ಪರವಾನಿಗೆ ಇಲ್ಲದೇ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಮರಳು ಕಂಡು ಬಂದಿದ್ದು ಲಾರಿ ಸಮೇತ ಮರಳನ್ನು ವಶಪಡಿಸಕೊಂಡು  ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ಮನುಷ್ಯ ಕಾಣೆ ಪ್ರಕರಣ
     ಮಡಿಕೇರಿ ತಾಲೂಕಿನ ಕೈಕಾಡು ಗ್ರಾಮದ ನಿವಾಸಿಯಾದ 35 ವರ್ಷ ಪ್ರಾಯದ ರಮೇಶ ಎಂಬುವವರು ದಿನಾಂಕ 20-3-2017 ರಂದು ನಾಪೋಕ್ಲುವಿಗೆ ಸಂತೆಗೆ ಹೊಗಿದ್ದು ಮನೆಗೆ ಬಾರದೇ ಇದ್ದ ಕಾರಣ ದೂರವಾಣಿ ಕರೆ ಮಾಡಿದಾಗ ಅಮ್ಮತ್ತಿಯಲ್ಲಿ ಕೆಲಸ ಮಾಡಿಕೊಂಡಿರುವುದಾಗಿ ಹೇಳಿ 10 ದಿನಗಳು ಕಳೆದು ಮನೆಗೆ ಬರುವುದಾಗಿ ಹೇಳಿದ್ದು, ಆದರೆ ಇದುವರೆಗೂ ಬಾರದೇ ಇದ್ದು ಮೊಬೈಲ್ ಫೋನ್ ಸ್ವಿಚ್ ಆಪ್ ಆಗಿದ್ದು ಪತಿಯನ್ನು ಪತ್ತೆ ಹಚ್ಚಿಕೊಡಬೇಕೆಂದು ಪತ್ನಿ ಶ್ರೀಮತಿ ಸುಶೀಲಾ ರವರು ನೀಡಿದ ದೂರಿನ ಮೇರೆಗೆ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.