Wednesday, April 19, 2017

ಯುವಕ ಆತ್ಮಹತ್ಯೆ
                      ದಿನಾಂಕ 17/04/2017ರಂದು ಮಡಿಕೇರಿ ಸಮೀಪದ ಕಡಗದಾಳು ನಿವಾಸಿ ಕಿರಣ್ ಕುಮಾರ್ ಎಂಬ ಯುವಕನು ಆತನ ಸ್ನೇಹಿತ ಹರೀಶ್‌ ಎಂಬಾತನಿಗೆ ಕರೆ ಮಾಡಿ ತಾನು ವಿಷ ಸೇವಿಸ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ತಿಳಿಸಿದ್ದು, ಕೂಡಲೇ ಹರೀಶ್‌ ಮತ್ತು ಪ್ರೇಮ ಎಂಬವರು ಕಿರಣ್‌ಕುಮಾರನ ಮನೆಗೆ ಧಾವಿಸಿ ಅಲ್ಲಿ ವಿಷ ಸೇವಿಸಿ ಅಸ್ವಸ್ಥನಾಗಿದ್ದ ಕಿರಣ್‌ ಕುಮಾರನನ್ನು ಚಿಕಿತ್ಸೆಗಾಗಿ ಮಡಿಕೇರಿಯ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಜೆ.ಎಸ್‌.ಎಸ್‌. ಆಸ್ಪತ್ರೆಗೆ ಕರೆದೊಯ್ದಿದ್ದು ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 18/04/2017ರಂದು ಮೃತನಾಗಿದ್ದು ವಿಫಲ ಪ್ರೇಮವೇ ಆತ್ಮಹತ್ಯೆಗೆ ಕಾರಣವಾಗಿರಬಹುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ/

ಅಕ್ರಮ ಮರಳು ಸಾಗಾಟ
                     ದಿನಾಂಕ 18/04/2017ರಂದು ಶನಿವಾರಸಂತೆ ಠಾಣಾ ಪಿಎಸ್‌ಐ ಶ್ರೀ ಹೆಚ್‌.ಎಂ.ಮರಿಸ್ವಾಮಿರವರು ಗಸ್ತು ಕರ್ತವ್ಯದಲ್ಲಿರುವಾಗ ಕೊಡ್ಲಿಪೇಟೆ ಬಳಿಯ ಕೆಳಕೊಡ್ಲಿ ಗ್ರಾಮದ ಹೇಮಾವತಿ ನದಿಯ ಹಿನ್ನೀರಿನ ಪ್ರದೇಶದಲ್ಲಿ ಕೆಎ-11-ಎ-8150 ಸಂಖ್ಯೆಯ ಒಂದು ಟಿಪ್ಪರ್‌ ಲಾರಿ ಮಗುಚಿಕೊಂಡಿರುವುದು ಕಂಡು ಅಲ್ಲಿಗೆ ತೆರಳಿ ನೋಡಿದಾಗ ಲಾರಿಯಲ್ಲಿ ಅಕ್ರಮವಾಗಿಸರ್ಕಾರದ ಪರವಾನಗಿ ಇಲ್ಲದೆ ಸಾಗಿಸುತ್ತಿದ್ದ ಮರಳು ಕಂಡು ಬಂದಿದ್ದು ಲಾರಿಯನ್ನು ಅಮಾನತುಪಡಿಸಿಕೊಂಡು ಶನಿವಾರಸಂತೆ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಅಕ್ರಮ ಪ್ರವೇಶ, ಕೊಲೆ ಬೆದರಿಕೆ
                     ದಿನಾಂಕ 14/04/2017ರಂದು ಸೋಮವಾರಪೇಟೆ ನಗರದ ಮಹಿಳಾ ಸಮಾಜ ರಸ್ತೆಯಲ್ಲಿರುವ ಹೆಚ್‌.ಟಿ.ಉದಯ ಎಂಬವರ ಮನೆಗೆ ಮನೆಯ ಗೇಟನ್ನು ಹಾರಿ ಅಕ್ರಮವಾಘಿ ಪ್ರವೇಶಿಸಿದ ಮನೋಜ್‌ ಕುಮಾರ್‌ ಎಂಬಾತನು ಉದಯರವರನ್ನು 200 ರೂ. ಹಣ ಕೇಳಿದ್ದು ಉದಯರವರು ನಿರಾಕರಿಸಿದ ಕಾರಣಕ್ಕೆ ಮನೆಯ ಮುಂದೆ ಇದ್ದ ಎರಡು ಹೂಕುಂಡಗಳನ್ನು ಒಡೆದು ನಷ್ಟಪಡಿಸಿ ಕೊಲೆ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಪಾದಚಾರಿಗೆ ರಿಕ್ಷಾ ಡಿಕ್ಕಿ
                   ದಿನಾಂಕ 18/04/2017ರಂದು ಸಕಲೇಶಪುರದ ಕುಡುಗೆರೆ ನಿವಾಸಿ ಸುಮಯ್ಯಾ ಎಂಬವರ ಪುತ್ರಿ ಹಿಬಾ ಫಾತಿಮಾ ಎಂಬಾಕೆಯು ಸೋಮವಾರಪೇಟೆ ನಗರದ ಎಸ್‌ಜೆಎಂ ಶಾಲೆಯ ಬಳಿ ನಡೆದುಕೊಂಡು ಹೋಗುತ್ತಿರುವಾಗ ಬಸವೇಶ್ವರ ದೇವಸ್ಥಾನ ರಸ್ತೆಯ ಕಡೆಯಿಂದ ಕೆಎ-12-ಬಿ-3006ರ ಆಟೋ ರಿಕ್ಷಾವನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಹಿಬಾ ಫಾತಿಮಾಳಿಗೆ ಡಿಕ್ಕಿಪಡಿಸಿದ ಪರಿಣಾಮ ಆಕೆಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವ್ಯಕ್ತಿಯ ಮೇಲೆ ಹಲ್ಲೆ
                     ದಿನಾಂಕ 18/042017ರಂದು  ಸೋಮವಾರಪೇಟೆ ಬಳಿಯ ಕಲ್ಕಂದೂರು ನಿವಾಸಿ ಶಶಿಕುಮಾರ್‌ ಎಂಬವರ ಅಕ್ಕ ಮಧು ಎಂಬವರು ಸೋಮವಾರಪೇಟೆ ನಗರದಲ್ಲಿ ಪಿಗ್ಮಿ ಹಣ ಸಂಗ್ರಹಿಸುತ್ತಾ ನಗರದ ಅಮ್ಮಣ್ಣ ಗ್ಯಾರೇಜ್‌ ಬಳಿ ಹೋದಾಗ ಅಲ್ಲಿ ಗಣೇಶ ಎಂಬಾತನ್ನು ಕಂಡು ಆತನು ಮಧುರವರಿಗೆ ಕೊಡಬೇಕಾದ ಸಾಲದ ಹಣವನ್ನು ಕೇಳಿದಾಗ ಆತನು ಮಧುರವರೊಂದಿಗೆ ಜಗಳವಾಡಿದ್ದನ್ನು ಪ್ರಶ್ನಿಸಿದ ಶಶಿಕುಮಾರ್‌ರವರಿಗೆ ಗಣೇಶನು ದೊಣ್ಣೆಯಿಂದ ಹೊಡೆದು ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕಾರಿಗೆ ಬೈಕ್‌ ಡಿಕ್ಕಿ
                 ದಿನಾಂಕ 18/04/2017ರಂದು ಬೆಂಗಳೂರಿನ ನಿವಾಸಿ ಕೆ.ಎಸ್.ಸಂದೀಪ್‌ ಎಂಬವರು ಸೋಮವಾರಪೇಟೆ ನಗರದ ವಿವೇಕಾನಂದ ವೃತ್ತದ  ಬಳಿ ಅವರ ಕಾರನ್ನು ಶಾಂತಳ್ಳಿ ಕಡೆಗೆ ಹೋಗುವ ರಸ್ತೆಗೆ ತಿರುಗಿಸುತ್ತಿರುವಾಗ ಹಿಂದಿನಿಂದ ಕೆಎ-13-ಇಎಫ್‌-6888ರ ಮೋಟಾರು ಬೈಕನ್ನು ಅದರ ಚಾಲಕ ಸಂದೀಪ್ ಎಂಬಾತನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಸಂದೀಪ್‌ರವರ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಬೈಕ್‌ ಸವಾರ ಸಂದೀಪ್‌ ಮತ್ತು ಹಿಂಬದಿ ಸವಾರ ಮಂಜು ಎಂಬಾತನಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವ್ಯಕ್ತಿಯ ಮೇಲೆ ಹಲ್ಲೆ
                    ದಿನಾಂಕ 18/04/2017ರಂದು ಸೋಮವಾರಪೇಟೆ ಬಳಿಯ ತೋಳೂರು ಶೆಟ್ಟಳ್ಳಿ ನಿವಾಸಿ ಡಿ.ಕೆ.ಪ್ರಸನ್ನ ಎಂಬವರ ಮನೆಯ ಮುಂದೆ ಸಂಜೆ ವೇಳೆ ಜಯೇಂದ್ರ ಎಂಬಾತನು ನಿಂತಿದ್ದನ್ನು ಪ್ರಶ್ನಿಸಿದ ಕಾರಣಕ್ಕೆ ಜಯೇಂದ್ರ ಮತ್ತು ಆತನ ಸಂಗಡಿಗರಾದ ವಿನಯ ಮತ್ತು ಯೋಗೇಶರವರು ಪ್ರಸನ್ನರವರ ಮೇಲೆ ಹಾಗೂ ಗಲಾಟೆಯನ್ನು ತಡೆಯಲು ಬಂದ ಪ್ರಸನ್ನರವರ ಪತ್ನಿ ಗೌರಮ್ಮನವರ ಮೇಲೆ ಹಲ್ಲೆ ಮಾಡಿರುವುದಾಗಿ  ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಮನೆ ಕಳವು
                     ವಿರಾಜಪೇಟೆ ಬಳಿಯ ಅರಮೇರಿ ನಿವಾಸಿ ಕಂಡ್ರತಂಡ ಗೀತಾ ಎಂಬವರು ದಿನಾಂಕ 12/04/2017ರಂದು ಅವರ ಬೆಂಗಳೂರಿನಲ್ಲಿರುವ ಮನೆಗೆ ಹೋಗಿದ್ದು ನಂತರ ದಿನಾಂಕ 16/04/2017ರಂದು ಮರಳಿ ಬರುವಾಗ ಮನೆಯಲ್ಲಿದ್ದ ಸುಮಾರು ರೂ.20,000/- ಮೌಲ್ಯದ ಪಾತ್ರೆ ಸಾಮಾಗ್ರಿಗಳನ್ನು ಯಾರೋ ಕಳ್ಳರು ಕಳವು ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.