Sunday, April 23, 2017

ವ್ಯಕ್ತಿಯ ಮೇಲೆ ಹಲ್ಲೆ

                   ಸೋಮವಾರಪೇಟೆ ನಗರದ ನಿವಾಸಿಯಾದ ಸತ್ಯಜಿತ್ ಎಂಬುವವರು ದಿನಾಂಕ 22-4-2017 ರಂದು ಮಾಟ್ನಳ್ಳಿ ಗ್ರಾಮದಲ್ಲಿರುವ ತಮ್ಮ ತೋಟಕ್ಕೆ ಜೀಪಿನಲ್ಲಿ ಹೋಗುತ್ತಿರುವಾಗ ಮಾಟ್ನಳ್ಳಿ ಗ್ರಾಮದ ರಸ್ತೆ ಮದ್ಯದಲ್ಲಿ ಮಾಟ್ನಳ್ಳಿಯ ನಿವಾಸಿಯಾದ ಸುರೇಶ ಎಂಬುವವರು ಜೀಪನ್ನು ರಸ್ತೆಯ ಮದ್ಯದಲ್ಲಿ ನಿಲ್ಲಿಸಿಕೊಂಡಿದ್ದು ಸತ್ಯಜಿತ್ ರವರು ಹಾರನ್ ಮಾಡಿದಾಗ ಜೀಪನ್ನು ಸೈಡಿಗೆ ತೆಗೆಯದೇ ಜೀಪಿನಿಂದ ಇಳಿದು ಸತ್ಯಜಿತ್ ರವರ ಹತ್ತಿರ ಹೋಗಿ ಚಾಕುವಿನಿಂದ ಚುಚ್ಚಿ ಗಾಯಪಡಿಸಿದ್ದು ಈ ಬಗ್ಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಅಪಘಾತ ಪ್ರಕರಣ

                    ಕೊಣನೂರುವಿನ ನಿವಾಸಿ ಮೋಹನ್ ಎಂಬುವವರು ದಿನಾಂಕ 22-4-2017 ರಂದು ಮೋಟಾರು ಸೈಕಲಿನಲ್ಲಿ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಕೂಡಿಗೆ ಗ್ರಾಮ ದೇವತೆಯ ಹಬ್ಬಕ್ಕೆಂದು ಹೋಗುತ್ತಿರುವಾಗ ಹಳೆಕೂಡಿಗೆ ಜಂಕ್ಷನ್ ಹತ್ತಿರ ರಸ್ತೆಯ ಎಡಬದಿಗೆ ನಿಲ್ಲಿಸಿಕೊಂಡಿರುವಾಗ ಕುಶಾಲನಗರ ಕಡೆಯಿಂದ ಸೃಜಿತ್ ಎಂಬುವವರು ಮೋಟಾರು ಸೈಕಲನ್ನು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ನಿಲ್ಲಿಸಿದ್ದ ಮೋಟಾರು ಸೈಕಲಿಗೆ ಡಿಕ್ಕಿಪಡಿಸಿದ ಪರಿಣಾಮ ಮೋಹನ್, ಅವರ ಪತ್ನಿ ಮತ್ತು ಇಬ್ಬರು ಮಕ್ಕಳಿಗೆ ಹಾಗೂ ಡಿಕ್ಕಿಪಡಿಸಿದ ಮೋಟಾರು ಸೈಕಲಿನ ಸವಾರ ಸೃಜಿತ್ ಮತ್ತು ಹಿಂಬದಿ ಸವಾರ ಅಜಯ್ ರವರಿಗೂ ಗಾಯವಾಗಿದ್ದು ಈ ಬಗ್ಗೆ ಕುಶಾಲನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.