Wednesday, April 5, 2017

ವಿಪರೀತ ಮದ್ಯ ಸೇವಿಸಿದ ವ್ಯಕ್ತಿ ಸಾವು:

        ಮೈಸೂರು ಜಿಲ್ಲೆಯ ವರುಣಾ ಹೋಬಳಿಯ ಮಹಾದೇವಿ ಕಾಲೋನಿಯ ವಾಸಿ 45 ವರ್ಷ ಪ್ರಾಯದ ನಾರಗಾಜು ಎಂಬವರು ಕೊಡಗು ಜಿಲ್ಲೆಯ ಪೊನ್ನಂಪೇಟೆ ನಗರದಲ್ಲಿ ಬಂದು ಕೂಲಿ ಕೆಲಸ ಮಾಡಿಕೊಂಡಿದ್ದು, ವಿಪರೀತ ಮದ್ಯಸೇವನೆ ಮಾಡುವ ಚಟವಿದ್ದು, ದಿನಾಂಕ 4-4-2017 ರಂದು ಸದರಿ ನಾಗರಾಜು ವಿಪರೀತ ಮದ್ಯಸೇವನೆ ಮಾಡಿದ ಪರಿಣಾಮ ಮೃತಪಟ್ಟಿದ್ದು, ಈ ಸಂಬಂಧ ಮೃತರ ಪುತ್ರ ಎಸ್. ಮಹೇಶ್ ಎಂಬವರು ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗೀಸರ್ ಕಳ್ಳತನ:

        ಮಡಿಕೇರಿ ತಾಲೋಕು ನಾಪೋಕ್ಲು ಪೊಲೀಸ್ ಠಾಣಾ ಸರಹದ್ದಿನ ಕುಂಬಳದಾಳು ಗ್ರಾಮದ ರವಿ ಕರುಂಬಯ್ಯ ಎಂಬವರಿಗೆ ಸೇರಿದ ತೋಟದ ಮನೆಯಲ್ಲಿ ಅಳವಡಿಸಿದ ಎರಡು ಇಟಲಿ ಗೀಸರ್ ಗಳನ್ನು ದಿನಾಂಕ 25-3-2017 ರಂದು ರಾತ್ರಿ ಕಳ್ಳತನ ಮಾಡಿಕೊಂಡುಹೋಗಿದ್ದು, ಈ ಸಂಬಂಧ ತೋಟದ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದ ವ್ಯಕ್ತಿ ಪಿ.ಇ. ತಿಮ್ಮಯ್ಯ ರವರು ನೀಡಿದ ದೂರಿನ ಮೇರೆಗೆ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.