Thursday, April 13, 2017

ಸ್ಕೂಟರಿನಿಂದ ಬಿದ್ದು ವ್ಯಕ್ತಿಗೆ ಗಾಯ:

    ನಾಪೋಕ್ಲು ಪೊಲೀಸ್ ಠಾಣಾ ಸರಹದ್ದಿನ ಹಳೆ ತಾಲೋಕಿನಲ್ಲಿ ವಾಸವಾಗಿರುವ ಫಿರ್ಯಾದಿ ಮೊಯಿಜುದ್ದೀನ್ ರವರು ದಿನಾಂಕ 8-4-2017 ರಂದು ನಾಪೋಕ್ಲು ನಗರದ ನಿವಾಸಿ ಖಾದರ್ ಎಂಬವರೊಂದಿಗೆ  ಸ್ಕೂಟರ್ ನಲ್ಲಿ ಹೋಗುತ್ತಿದ್ದಾಗ ಸದರಿ ಸ್ಕೂಟರ್ ನ್ನು ಸವಾರ ಖಾದರ್ ರವರು ದುಡುಕಿನಿಂದ ಚಾಲನೆ ಮಾಡಿದ ಪರಿಣಾಮಫಿರ್ಯಾದಿ ಮೊಹಿಜುದ್ದೀನ್ ರವರು ಸ್ಕೂಟರಿನಿಂದ ಬಿದ್ದು ಗಾಯಗೊಂಡಿದ್ದು ಈ ಸಂಬಂಧ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದಾರಿ ತಡೆದು ವ್ಯಕ್ತಿ ಮೇಲೆ ಹಲ್ಲೆ:

      ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಸಂಪಾಜೆ ಗ್ರಾಮದ ನಿವಾಸಿ ರಂಜೀತ್ ಎಂಬವರು ದಿನಾಂಕ 31-03-2017 ರಂದು ಜೀಪಿನಲ್ಲಿ ಮನೆಗೆ ಹೋಗುತ್ತಿದ್ದಾಗ ಅವರ ಮನೆಯ ಬಳಿಯ ರಸ್ತೆಯಲ್ಲಿ ಅದೇ ಗ್ರಾಮದ ಆರೋಪಿ ಕೆ.ಕೆ ಗೋಪಾಲ ರವರು ಕೆಎ-12-ಜೆಡ್-9258 ರ ಓಮಿನಿ ವ್ಯಾನ್ ನಲ್ಲಿ ಹಾಗೂ ಕೆಎ-12-ಹೆಚ್-4180 ರ ಮೋಟಾರ್ ಬೈಕ್ ನಲ್ಲಿ ಆರೋಪಿಗಳಾದ ದೀಕ್ಷಿತ್ ಮತ್ತು ಚರಿತ್ ರವರು ಬಂದು ದಾರಿ ತಡೆದು ದೊಣ್ಣೆಯಿಂದ ಹಲ್ಲೆ ಮಾಡಿ ಗಾಯಪಡಿಸಿದ್ದು ಅಲ್ಲದೆ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಬಗ್ಗೆ ಫಿರ್ಯಾದಿ ರಂಜಿತ್ ರವರು ನ್ಯಾಯಾಲಯಕ್ಕೆ ನೀಡಿದ ದೂರಿನ ಮೇರೆಗೆ ನ್ಯಾಯಾಲಯದ ನಿರ್ದೇಶನದಂತೆ ಮಡಿಕೇರಿ ಗ್ರಾಮಾಂತರ ಪೊಲೀಸರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.