Saturday, April 1, 2017

 ಬೀಗ ಮುರಿದು ಚಿನ್ನಾಭರಣ ಕಳವು:

      ಮನೆಯ ಬೀಗ ಮುರಿದು ಚಿನ್ನಾಭರಣ ಕಳವು ಮಾಡಿದ ಘಟನೆ ಕುಶಾಲನಗರದ ನಂಜುಂಡೇಶ್ವರ ಬಡಾವಣೆಯಲ್ಲಿ ನಡೆದಿದೆ. ಕುಶಾಲನಗರ ಟೌನ್ ಠಾಣಾ ವ್ಯಾಪ್ತಿಯ ನಂಜುಂಡೇಶ್ವರ ಬಡಾವಣೆಯಲ್ಲಿರುವ ಡಾ: ಉದಯಕುಮಾರ್ ಎಂಬವರ ಮನೆಗೆ ದಿನಾಂಕ 30-3-2017 ರಂದು ಸಮಯ 9-45 ಎಎಂ ರಿಂದ ರಾತ್ರಿ 9-20 ಅವಧಿಯೊಳಗೆ ಯಾರೋ ಕಳ್ಳರು ಮನೆಯ ಮುಂದಿನ ಬಾಗಿಲಿನ ಬೀಗವನ್ನು ಮುರಿದು ಮನೆಯೊಳಗಿನಿಂದ ಸುಮಾರು 3 ಲಕ್ಷ ಮೌಲ್ಯದ ಚಿನ್ನಾಭರಣವನ್ನು ಕಳವುಮಾಡಿಕೊಂಡು ಹೋಗಿದ್ದು, ಕುಶಾಲನಗರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ. 

ಮಹಿಳೆ ಆತ್ಮಹತ್ಯೆ:

      ಮಹಿಳೆಯೊಬ್ಬರು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಶಾಲನಗರ ಗ್ರಾಮಾಂತರ ಠಾಣಾ ಸರಹದ್ದಿನ ಜೇನುಕಲ್ಲುಬೆಟ್ಟ ಗ್ರಾಮದಲ್ಲಿ ನಡೆದಿದೆ. ಜೇನುಕಲ್ಲು`ಬೆಟ್ಟದಲ್ಲಿ ವಾಸವಾಗಿರುವ ಹರೀಶ ಎಂಬವರ ಪತ್ನಿ ಶ್ರೀಮತಿ ಗೀತಾ ಎಂಬವರು ದಿನಾಂಕ 31-3-2017 ರಂದು ಬೆಳಿಗ್ಗೆ 7-00 ಗಂಟೆಯ ಸಮಯದಲ್ಲಿ ತಮ್ಮ ವಾಸದ ಮನೆಯಲ್ಲಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಣದ ವಿಚಾರದಲ್ಲಿ ಪತ್ನಿಮೇಲೆ ಪತಿಯಿಂದ ಹಲ್ಲೆ:

     ಮದ್ಯಪಾನ ಮಾಡಲು ಹಣ ನೀಡದ ವಿಚಾರದಲ್ಲಿ ವ್ಯಕ್ತಿಯೊರ್ವ ತನ್ನ ಪತ್ನಿಮೇಲೆ ಹಲ್ಲೆ ಮಾಡಿದ ಘಟನೆ ನಡೆದಿದೆ. ಪೊನ್ನಂಪೇಟೆ ಠಾಣಾ ಸರಹದ್ದಿನ ಬೆಸಗೂರು ಗ್ರಾಮದ ನಿವಾಸಿ ಶ್ರೀಮತಿ ಸೀತಮ್ಮ ಎಂಬವರೊಂದಿಗೆ ಮದ್ಯಪಾನ ಮಾಡಲು ಹಣ ನೀಡಲಿಲ್ಲ ಎಂಬ ಕಾರಣಕ್ಕೆ ಆಕೆಯ ಗಂಡ ನಂಜಪ್ಪ ಎಂಬವರು ಕೇಬಲ್ ವಯರ್ ನಿಂದ  ಹಲ್ಲೆ ಮಾಡಿ ಗಾಯಪಡಿಸಿದ್ದು, ಈ ಸಂಬಂಧ ಶ್ರೀಮತಿ ಸೀತಮ್ಮನವರ ಮಗಳು ದಿವ್ಯ ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಕ್ಷುಲ್ಲಕ ಕಾರಣ ವ್ಯಕ್ತಿ ಮೇಲೆ ಹಲ್ಲೆ:

     ವಿರಾಜಪೇಟೆ ಗ್ರಾಮಾಂತರ ಠಾಣಾ ಸರಹದ್ದಿನ ಕದನೂರು ಗ್ರಾಮದ ನಿವಾಸಿ ಸುಬ್ಬಯ್ಯ ಎಂಬವರಿಗೆ ಹಾಗು ಅವರ ಚಿಕ್ಕಪ್ಪನ ಮಗಳಾದ ಪ್ರೇಮ ರವರ ನಡುವೆ ಬಟ್ಟೆ ಒಣಗಲು ಕಟ್ಟಿದ ವಯರ್ ಬಗ್ಗೆ ಜಗಳ ನಡೆದು ಪ್ರೇಮರವರು ಸುಬ್ಬಯ್ಯನವರ ಮೇಲೆ ಹಂಚಿನ ಚೂರಿನಿಂದ ಹಲ್ಲೆನಡೆಸಿದ್ದು ಅಲ್ಲದೆ ಅವಾಚ್ಯ ಶಬ್ದಗಳಿಂದ ನಿಂದಿಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹಿಳೆ ಕಾಣೆ:
     ಸಿದ್ದಾಪುರ ಠಾಣಾ ಸರಹದ್ದಿನ ನೆಲ್ಲಿಹುದಿಕೇರಿ ಗ್ರಾಮದ ನಿವಾಸಿ ಹೆಚ್.ಆರ್. ರವಿ ಎಂಬವರ ಪತ್ನಿ ಶ್ರೀಮತಿ ಮಲರ್ ಎಂಬವರು ದಿನಾಂಕ 30-3-2017 ರಂದು ಗೋಣಿಕೊಪ್ಪಲು ನಗರಕ್ಕೆ ಹೋಗಿ ಬರುವುದಾಗಿ ಹೇಳಿ ಹೋಗಿದ್ದು, ನಂತರ ಮನೆಗೆ ಬಾರದೆ ಕಾಣೆಯಾಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.