Tuesday, April 11, 2017

 ಬಾಗಿಲು ಮುರಿದು ಹಣ ಕಳವು:

       ಮನೆಯ ಬಾಗಿಲನ್ನು ಮುರಿದು ಹಣ ದೋಚಿದ ಘಟನೆ ಸೋಮವಾರಪೇಟೆ ಠಾಣಾ ವ್ಯಾಪ್ತಿಯ ಹಾನಗಲ್ಲು ಗ್ರಾಮದಲ್ಲಿ ನಡೆದಿದೆ. ದಿನಾಂಕ 26-3-2017 ಹಾಗು ದಿನಾಂಕ 10-4-2017ರ ನಡುವೆ ಹಾನಗಲ್ಲು ಗ್ರಾಮದಲ್ಲಿರುವ ಫಿರ್ಯಾದಿ ಕೆ.ಆರ್. ರವೀಂದ್ರರವರ ಮನೆಯ ಬಾಗಿಲನ್ನು ಮುರಿದು ಒಳಗೆ ಪ್ರವೇಶಿಸಿದ ಕಳ್ಳರು ಗಾಡ್ರೇಜ್ ಬೀರುವಿನಿಂದ ರೂ.15,000-00 ರೂ.ಗಳನ್ನು ಕಳ್ಳತನಮಾಡಿಕೊಂಡು ಹೋಗಿದ್ದು, ಈ ಬಗ್ಗೆ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ. 

ಮನೆಗೆ ನುಗ್ಗಿ ಚಿನ್ನಾಭರಣ ಕಳವು:

     ದಿನಾಂಕ 9-4-2017 ಮತ್ತು 10-4-2017ರ ನಡುವಿನ ಅವಧಿಯೊಳಗೆ ಸೋಮವಾರಪೇಟೆ ಠಾಣಾ ಸರಹದ್ದಿನ ಸೋಮವಾರಪೇಟೆ ನಗರದ 6ನೇ ವಿಭಾಗದ ಮುಖ್ಯ ರಸ್ತೆಯಲ್ಲಿರುವ ಫಿರ್ಯಾದಿ ಶ್ರೀಮತಿ ಬಿ.ಸಿ. ಚಂದ್ರಾವತಿಯವರ ಮನೆಗೆ ಯಾರೋ ಕಳ್ಳರು ಮನೆಯ ಬಾಗಿಲನ್ನು ಮುರಿದು ಒಳಗೆ ಪ್ರವೇಶಿಸಿ ಸುಮಾರು 23,000/- ರೂ. ಬೆಲೆಬಾಳುವ ಚಿನ್ನಾಭರಣವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ಈ ಬಗ್ಗೆ ಶ್ರೀಮತಿ ಬಿ.ಸಿ. ಚಂದ್ರಾವತಿಯವರು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ. 

ಕಾರು ಅಪಘಾತ ಇಬ್ಬರಿಗೆ ಗಾಯ:

     ದಿನಾಂಕ 10-4-2017 ರಂದು ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಬೆಟ್ಟಗೇರಿ ಗ್ರಾಮದ ನಿವಾಸಿ ಶ್ರೀಮತಿ ಮರಿಯಮ್ಮ ಎಂಬವರು ತನ್ನ ಸಹೋದರ ಮಸೂದ್ ರವರ ಬಾಪ್ತು ಕಾರಿಯಲ್ಲಿ ಮಸೂದ್ ರವರ ಪತ್ನಿಯೊಂದಿಗೆ ಮಡಿಕೇರಿಯಿಂದ ಅಯ್ಯಂಗೇರಿ ಕಡೆಗೆ ಹೋಗುತ್ತಿದ್ದಾಗ ಚಾಲಕ ಮಸೂದ್ ಕಾರನ್ನು ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿದ ಪರಿಣಾಮ ಕಾರು ರಸ್ತೆಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿಯಾದ ಪರಿಣಾಮ ಕಾರಿನಲ್ಲಿದ್ದ ಫಿರ್ಯಾದಿ ಮರಿಯಮ್ಮ ಹಾಗು ಚಾಲಕ ಮಸೂದ್ ರವರ ಪತ್ನಿ ಐಫಾ ರವರಿಗೆ ಗಾಯಗಳಾಗಿದ್ದು, ಈ ಸಂಬಂಧ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.