Sunday, April 30, 2017

ಮದ್ಯ ಸೇವಿಸಿದ ಮಹಿಳೆ ಸಾವು:

        ವಿಪರೀತ ಮದ್ಯಸೇವಿಸಿದ ಮಹಿಳೆಯೊಬ್ಬರು ಸಾವನಪ್ಪಿದ ಘಟನೆ ವಿರಾಜಪೇಟೆ ಗ್ರಾಮಾಂತರ ಠಾಣಾ ಸರಹದ್ದಿನ ಕಂಡಂಗಾಲ ಗ್ರಾಮದಲ್ಲಿ ನಡೆದಿದೆ. ಕಂಡಂಗಾಲ ಗ್ರಾಮದ ನಿವಾಸಿ ಪಣಿಎರವರ ಬೇರ ಎಂಬವರ ಪತ್ನಿ ಶ್ರೀಮತಿ ಚಿಣ್ಣಿ ಎಂಬಾಕೆ ದಿನಾಂಕ 19-4-2017 ರಂದು ವಿಪರೀತ ಮದ್ಯ ಸೇವಿಸಿ ಮನೆಯಿಂದ ಹೊರಗೆ ಹೋಗಿದ್ದು, ಅದೇ ಗ್ರಾಮದ ಎ.ಕೆ.ನಾಣಯ್ಯ ಎಂಬವರ ಕಾಫಿತೋಟದಲ್ಲಿ ಮದ್ಯದ ಅಮಲಿನಿಂದ ಬಿದ್ದು ಸಾವನಪ್ಪಿದ್ದು, ವಿರಾಜಪೇಟೆ ಗ್ರಾಮಾಂತರ ಠಾಣಾ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಕಾರು ಅಪಘಾತ ಒಬ್ಬನ ಸಾವು:

     ಕಾರು ಅಪಘಾತಗೊಂಡು ಒಬ್ಬ ಸಾವನಪ್ಪಿ ಮೂವರು ಗಾಯಗೊಂಡ ಘಟನೆ ವಿರಾಜಪೇಟೆ ಗ್ರಾಮಾಂತರ ಠಾಣಾ ವ್ಯಾಪ್ತಿಯ ಮಾಕುಟ್ಟದಲ್ಲಿ ನಡೆದಿದೆ. ದಿನಾಂಕ 29-4-2017 ರಂದು ಕೇರಳ ರಾಜ್ಯದ ಕಣ್ಣನೂರಿನ ನಿವಾಸಿಗಳಾದ ಪ್ರಮೀಳಾ, ಪ್ರಮೋದ್, ರವೀಂದ್ರ, ರಿಜು ಹಾಗು ರಾಜೇಶ್ ಎಂಬವರು ಬೆಂಗಳೂರಿನಿಂದ ಕೇರಳ ರಾಜ್ಯಕ್ಕೆ ಹೋಗುತ್ತಿದ್ದಾಗ ಮಾಕುಟ್ಟ ಕಾಲೋನಿನ ಹತ್ತಿರ ರಸ್ತೆಬದಿ ಕಾರು ಮಗುಚಿ ಬಿದ್ದ ಕಾರಣ ಕಾರಿನಲ್ಲಿದ್ದ ಮೂವರು ಗಾಯಗೊಂಡು ಪ್ರಮೋದ್ ಎಂಬಾತ ಸಾವನಪ್ಪಿದ್ದು, ಈ ಸಂಬಂಧ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಕೆ. ಪ್ರಸಾದ್ ಎಂಬವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.