Tuesday, April 4, 2017

ಅಕ್ರಮ ಮರಳು ಸಾಗಾಟ:

     ಅಕ್ರಮ ಮರಳು ಸಾಗಾಟ ಮಾಡುತ್ತಿದ್ದ ಲಾರಿಯ ಮೇಲೆ ಸೋಮವಾರಪೇಟೆ ಪೊಲೀಸರು ದಾಳಿ ನಡೆಸಿ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಲಾರಿಯಲ್ಲಿ ಅಕ್ರಮವಾಗಿ ಮರಳನ್ನು ತುಂಬಿ ಸಾಗಾಟ ಮಾಡುತ್ತಿರುವ ಬಗ್ಗೆ ಬಂದ ಮಾಹಿತಿ ಆದಾರದ ಮೇರೆಗೆ ಸೋಮವಾರಪೇಟೆ ಉಪ ವಿಭಾಗ ಡಿವೈ.ಎಸ್.ಪಿ. ಶ್ರೀ ಸಂಪತ್ ಕುಮಾರ್ ಹಾಗು ಸಿಬ್ಬಂದಿಗಳು ದಿನಾಂಕ 02/03-04-2017 ರಂದು ರಾತ್ರಿ ಸಮಯ 00.15 ಗಂಟೆಗೆ ಸೋಮವಾರಪೇಟೆ ಠಾಣಾ ಸರಹದ್ದಿನ ಕಲ್ಕಂದೂರು ಗ್ರಾಮದಲ್ಲಿ ಅಕ್ರಮವಾಗಿ ಮರಳು ತುಂಬಿಕೊಂಡು ಬರುತ್ತಿದ್ದ ಕೆಎ-12, ಬಿ-0523 ರ ಟಿಪ್ಪರ್ ಲಾರಿಯ ಮೇಲೆ ದಾಳಿ ನಡೆಸಿ ಲಾರಿಯನ್ನು ವಶಕ್ಕೆ ಪಡೆದು ಲಾರಿ ಚಾಲಕ ಮತ್ತು ಲಾರಿ ಮಾಲಿಕನ ಮೇಲೆ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ. 

ಬೀಗ ಮುರಿದು ಚಿನ್ನಾಭರಣ ಕಳವು:

      ಮನೆಯ ಬೀಗ ಮುರಿದು ಚಿನ್ನಾಭರಣ ಕಳವು ಮಾಡಿಕೊಂಡು ಹೋದ ಘಟನೆ ಸೋಮವಾರಪೇಟೆ ಪೊಲೀಸ್ ಠಾಣಾ ಸರಹದ್ದಿನ ಸೋಮವಾರಪೇಟೆ ನಗರದ ಕಾಲೇಜು ರಸ್ತೆಯಲ್ಲಿ ನಡೆದಿದೆ. ಸೋಮವಾರಪೇಟೆ ನಗರದ ಜೂನಿಯರ್ ಕಾಲೇಜು ರಸ್ತೆಯಲ್ಲಿರುವ ಫಿರ್ಯಾದಿ ಆರ್.ಎನ್. ಮೊಗಪ್ಪ ಎಂಬವರ ಮನೆಯಲ್ಲಿ ದಿನಾಂಕ 30-3-2017 ರಿಂದ 3-4-2017ರ ನಡುವಿನ ಅವಧಿಯಲ್ಲಿ ಯಾರೋ ಕಳ್ಳರು ಮನೆಯ ಮುಂದಿನ ಬಾಗಿಲ ಲಾಕ್ ನ್ನು ಯಾವುದೋ ಆಯುಧದಿಂದ ಕಿತ್ತುಹಾಕಿ ಮನೆಯೊಳಗೆ ಪ್ರವೇಶ ಮಾಡಿ ಗಾಡ್ರೇಜ್ ಬೀರುವಿನಿಂದ ಅಂದಾಜು ರೂ.45,000/-ಬೆಲೆಬಾಳುವ 25 ಗ್ರಾಂ ತೂಕದ ಮೂರು ಜೊತೆ ಚಿನ್ನದ ಓಲೆ, ಮತ್ತು 6 ಜೊತೆ ಬೆಳ್ಳಿಯ ಕಾಲು ಚೈನ್ ಗಳನ್ನು ಕಳವು ಮಾಡಿಕೊಂಡು ಹೋಗಿದ್ದು, ಈ ಸಂಬಂಧ ಫಿರ್ಯಾದಿಯವರು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.  

ವಿಷ ಸೇವಿಸಿ ಮಹಿಳೆ ಆತ್ಮಹತ್ಯೆ: 

     ಅನಾರೋಗ್ಯದ ಹಿನ್ನೆಲೆಯಲ್ಲಿ ಜೀವನದಲ್ಲಿ ಜುಗುಪ್ಸೆಗೊಂಡು ಮಹಿಳೆಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರಪೇಟೆ ತಾಲೋಕು ಜಂಬೂರು ಗ್ರಾಮದಿಂದ ವರದಿಯಾಗಿದೆ. ಜಂಬೂರು ಗ್ರಾಮದ ನಿವಾಸಿ ರುದ್ರಕುಮಾರ್ ಎಂಬವರ ಪತ್ನಿ ಶ್ರೀಮತಿ ಶೈಲಕುಮಾರಿ ಎಂಬವರು ಕೆಲವು ಸಮಯದಿಂದ ಹೊಟ್ಟೆನೋವಿನಿಂದ ಬಳಲುತ್ತಿದ್ದು, ಇದೇ ಕಾರಣದಿಂದ ಜುಗುಪ್ಸೆಗೊಂಡು ದಿನಾಂಕ 2-4-2017 ರಂದು ವಿಷ ಪದಾರ್ಥವನ್ನು ಸೇವಿಸಿದ್ದು, ಚಿಕಿತ್ಸೆ ಬಗ್ಗೆ ಆಸ್ಪತ್ರೆಗೆ ದಾಖಲಿಸಿದ್ದು, ದಿನಾಂಕ 3-4-2017 ರಂದು ಆಕೆ ಮೃತಪಟ್ಟಿದ್ದು, ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ದೇವಸ್ಥಾನದ ವಿಚಾರದಲ್ಲಿ ಜಗಳ: 

     ದೇವಸ್ಥಾನದ ವಿಚಾರದಲ್ಲಿ ಎರಡು ಕಡೆಯವರ ನಡುವೆ ಜಗಳ ಏರ್ಪಟ್ಟು ಒಂದು ಕಡೆಯವರು ಹಲ್ಲೆಗೊಳಗಾದ ಘಟನೆ ಕುಶಾಲನಗರ ಗ್ರಾಮಾಂತರ ಠಾಣಾ ಸರಹದ್ದಿನ ಶಿರಂಗಾಲ ಗ್ರಾಮದಲ್ಲಿ ನಡೆದಿದೆ. ದಿನಾಂಕ 2-4-2017 ರಂದು ಶಿರಂಗಾಲ ಗ್ರಾಮದ ನಿವಾಸಿಗಳಾದ ಚಂದ್ರಶೇಖರ, ಸಿದ್ದಪ್ಪ, ವಿಶ್ವನಾಥ ರವರುಗಳು ಅದೇ ಗ್ರಾಮದ ವರದರಾಜು, ಜಗದೀಶ ಮತ್ತು ಚಂದ್ರಶೇಖರ ರವರ ದಾರಿ ತಡೆದು ದೇವಸ್ಥಾನದ ವಿಚಾರವಾಗಿ ಜಗಳ ಮಾಡಿ ಮೂವರ ಮೇಲೆ ಕೈಗಳಿಂದ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಹಳೆ ದ್ವೇಷ, ದಾರಿ ತಡೆದು ಹಲ್ಲೆ:
 
     ದಿನಾಂಕ 02-04-2017ರಂದು ಕುಶಾಲನಗರ ಗ್ರಾಮಾಂತರ ಠಾಣಾ ಸರಹದ್ದಿನ ಶಿರಂಗಾಲ ಗ್ರಾಮದಲ್ಲಿ ರಾತ್ರಿ ಸಮಯ 09-15 ಗಂಟೆಗೆ ಪಿರ್ಯಾದಿ ಚಂದ್ರಶೇಖರ್ ರವರು ತನ್ನ ತಮ್ಮ ಸಿದ್ದಪ್ಪನೊಂದಿಗೆ ಮನೆಗೆ ಹೋಗುತ್ತಿರುವಾಗ್ಗೆ ಸಂತೋಷ್ ಬಾರ್ ಮುಂಭಾಗದ ತಾರು ರಸ್ತೆಯಲ್ಲಿ ಅದೇ ಗ್ರಾಮದ ನಿವಾಸಿಗಳಾದ ಚಂದ್ರಶೇಖರ, ಮಧು, ಗಣೇಶ, ಸ್ವಾಮಿ, ಉಪರ್ ರವರುಗಳು ಹಳೇಯ ವೈಷಮ್ಯದಿಂದ ದಾರಿ ತಡೆದು ಬಾಟಲಿನಿಂದ ಹಲ್ಲೆ ನಡೆಸಿ, ಚಾಕುವಿನಿಂದ ಗಾಯಪಡಿಸಿದ್ದು ಅಲ್ಲದೆ ಕೊಲೆ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. 

ಮನೆಗೆ ನುಗ್ಗಿ ಕಾಣಿಕೆ ಡಬ್ಬ ಕಳವು:

    ವಿರಾಜಪೇಟೆ ಗ್ರಾಮಾಂತರ ಠಾಣಾ ಸರಹದ್ದಿನ ಕಡಂಗ ಮರೂರು ಗ್ರಾಮದ ನಿವಾಸಿ ಚೋಳಂಡ ಎ.ಮುದ್ದಯ್ಯ ಎಂಬವರು ಅವರ ಕುಟುಂಬಸ್ಥರ ಐನ್ ಮನೆಯಲ್ಲಿ ವಾಸವಾಗಿದ್ದು, ದಿನಾಂಕ 31-3-2017 ರಂದು ಸದರಿ ಮನೆಯ ಹೆಂಚುಗಳನ್ನು ತೆಗೆದು ಮನೆಯೊಳಗೆ ನುಗ್ಗಿದ ಕಳ್ಳರು ಮನೆಯಲ್ಲಿದ್ದ ಕಾಣಿಕೆ ಡಬ್ಬಿ ಹಾಗು ಅದರಲ್ಲಿದ್ದ ರೂ.5000/- ಗಳನ್ನು ಕಳವು ಮಾಡಿಕೊಂಡು ಹೋಗಿದ್ದು, ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.