Thursday, April 6, 2017

 ಕೆರೆಗೆ ಹಾರಿ ಯುವತಿ ಆತ್ಮಹತ್ಯೆ:

     ಯುವತಿಯೊಬ್ಬಳು ಕರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ವಿರಾಜಪೇಟೆ ಗ್ರಾಮಾಂತರ ಠಾಣಾ ಸರಹದ್ದಿನ ವಿ.ಬಾಡಗ ಗ್ರಾಮದಲ್ಲಿ ನಡೆದಿದೆ. ವಿ.ಬಾಡಗ ಗ್ರಾಮದ ನಿವಾಸಿ ಚೇಮಿರ ಎ.ಪೂಣಚ್ಚ ಎಂಬವರ ಮಗಳಾದ 25 ವರ್ಷ ಪ್ರಾಯದ ಶೃತಿ ಎಂಬವರು ದಿನಾಂಕ 5-4-2017 ರಂದು ವಿರಾಜಪೇಟೆ ನಗರದ ಸಮೀಪದ ಬಿಟ್ಟಂಗಾಲ ಗ್ರಾಮದ ಕಂಜಿತಂಡ ಸಬಿತಾ ಎಂಬವರ ಮನೆಯ ಹತ್ತಿರವಿರುವ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮೃತಳ ತಂದೆ ಚೇಮಿರ ಎ.ಪೂಣಚ್ಚ ಎಂಬವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.

ಬೈಕ್ ಅಪಘಾತ ಸವಾರನಿಗೆ ಗಾಯ:

     ವಿರಾಜಪೇಟೆ ತಾಲೋಕು ಕೆದಮುಳ್ಳೂರು ಗ್ರಾಮದ ನಿವಾಸಿ ಸುನಿಲ್ ಕುಮಾರ್ ಎಂಬವರು ದಿನಾಂಕ 5-4-2017 ರಂದು ತಮ್ಮ ಮೋಟಾರ್ ಸೈಕಲಿನಲ್ಲಿ ತನ್ನ ಸ್ನೇಹಿತನೊಂದಿಗೆ ನಾಪೋಕ್ಲುವಿನಿಂದ ವಿರಾಜಪೇಟೆ ಕಡೆಗೆ ಹೋಗುತ್ತಿದ್ದಾಗ ಬೇತು ಗ್ರಾಮದಲ್ಲಿ ಬೈಕಿಗೆ  ಅಡ್ಡ ಬಂದ ಮಕ್ಕಳಿಗೆ ಅಪಘಾತವಾಗುವುದನ್ನು ತಪ್ಪಿಸಲು ಹೋಗಿ ಬೈಕ್ ಅಪಘಾತಕ್ಕೀಡಾಗಿ ಸವಾರ ಸುನಿಲ್ ಕುಮಾರ್ ಗಾಯಗೊಂಡಿದ್ದು,  ಈ ಸಂಬಂಧ ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ವಿದ್ಯುತ್ ಕಂಬದ ಗುಂಡಿಗೆ ಬಿದ್ದು ವ್ಯಕ್ತಿಯ ಸಾವು:

     ವಿದ್ಯುತ್ ಕಂಬ ನೆಡಲು ತೋಡಿದ ಗುಂಡಿಗೆ ವ್ಯಕ್ತಿಯೊಬ್ಬರು ಬಿದ್ದು ಸಾವನಪ್ಪಿದ ಘಟನೆ ಸಿದ್ದಾಪುರ ಠಾಣಾ ಸರಹದ್ದಿನ ಸುಣ್ಣದಗೂಡು ಎಂಬಲ್ಲಿ ನಡೆದಿದೆ. ಸಿದ್ದಾಪುರ ಸಮೀಪದ ಸುಣ್ಣದಗೂಡು ಎಂಬಲ್ಲಿ ವಾಸವಾಗಿರುವ ಶ್ರೀಮತಿ ಕೆ.ಗೀತಾ ಎಂಬವರ ಗಂಡ ಶಶಿ (42) ಎಂಬವರು  ದಿನಾಂಕ 4-4-2017 ರಂದು ಸಂಜೆ 5-00 ಗಂಟೆಗೆ ಸಿದ್ದಾಪುರ ಪಟ್ಟಣಕ್ಕೆ ಹೋಗಿದ್ದು, ಮರಳಿ ಮನೆಗೆ ಬರುವಾಗ ರಸ್ತಬದಿಯಲ್ಲಿ ಕೆ.ಇ.ಬಿ. ಇಲಾಖೆಯವರು ವಿದ್ಯುತ್ ಕಂಬವನ್ನು ನೆಡಲು ತೋಡಿರುವ ಗುಂಡಿಗೆ ಆಕಸ್ಮಿಕವಾಗಿ ತಲೆಕೆಳಗಾಗಿ ಬಿದ್ದು, ಗುಂಡಿಯಲ್ಲಿಯೇ ಸಾವನಪ್ಪಿದ್ದು, ಈ ಸಂಬಂಧ ಶ್ರೀಮತಿ ಗೀತಾರವರು ನೀಡಿದ ದೂರಿನ ಮೇರೆಗೆ ಆರೋಪಿ ಹರೀಶ ಮತ್ತು ಕೆ.ಇ.ಬಿ.ಅಧಿಕಾರಿಗಳ ವಿರುದ್ಧ  ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಕ್ರಮ ಪ್ರವೇಶ , ಹಲ್ಲೆ:

     ಶನಿವಾರಸಂತೆ ಠಾಣಾ ಸರಹದ್ದಿನ ಗುಡುಗಳಲೆ ಗ್ರಾಮದ ನಿವಾಸಿ ಹೆಚ್.ಎಸ್. ಅಶೋಕ್ ಎಂಬವರು ಸದರಿ ಗ್ರಾಮದಲ್ಲಿ ಕಾಫಿ ವ್ಯಾಪಾರವನ್ನು ನಡೆಸುತ್ತಿದ್ದು ದಿನಾಂಕ 5-4-2017 ರಂದು ರಾತ್ರಿ 9-30 ಗಂಟೆಗೆ ತಮ್ಮ ತಾಯಿ ಮತ್ತು ಪತ್ನಿಯೊಂದಿಗೆ ತಮ್ಮ ಮನೆಗೆ ಹೊರಡಲು ತಯಾರಾಗುತ್ತಿದ್ದ ವೇಳೆಗೆ ಆರೋಪಿಗಳಾದ ಪ್ರದೀಪ್, ಅಶೋಕ ಮತ್ತು ಇಬ್ಬರು ಅಲ್ಲಿಗೆ ಬಂದು ಅಂಗಡಿಗೆ ಅಕ್ರಮ ಪ್ರವೇಶ ಮಾಡಿ ಕೈಗಳಿಂದ ಹಲ್ಲೆ ನಡೆಸಿ ಕೊಲೆಬೆದರಿಕೆ ಒಡ್ಡಿ ಹೋಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ. 

ವ್ಯಕ್ತಿಮೇಲೆ ಹಲ್ಲೆ, ಕೊಲೆಗೆ ಯತ್ನ:

     ಶನಿವಾರಸಂತೆ ಠಾಣಾ ಸರಹದ್ದಿನ ಕೂಗೆಕೋಡಿ ಗ್ರಾಮದಲ್ಲಿ ವಾಸವಾಗಿರುವ ಹೆಚ್.ಆರ್. ಅಶೋಕನವರು ಶನಿವಾರಸಂತೆ ನಗರದ ಕುಮಾರಲಿಂಗೇಶ್ವರ ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡಿಕೊಂಡಿದ್ದು, ದಿನಾಂಕ 4-4-2017 ರಂದು ರಾತ್ರಿ 9-15 ಗಂಟೆಗೆ ಕೆಲಸ ಮುಗಿಸಿ ಮನೆಯ ಕಡೆಗೆ ಹೋಗುವಾಗ ಗುಡುಗಳಲೆ ನಂದಿನ ಕೇಂದ್ರಕ್ಕೆ ಮೊಸಲು ಕೊಂಡುಕೊಳ್ಳಲು ಹೋಗಿದ್ದು  ಅಲ್ಲಿ ಇದ್ದ ಆರೋಪಿಗಳಾದ ಅಶೋಕ, ಸರೀತಾ ಮತ್ತು  ಚಿನ್ನಮ್ಮ ಎಂಬವರುಗಳು  ಫಿರ್ಯಾದಿ ಹೆಚ್.ಆರ್. ಅಶೋಕನವರ ಮಾಲಿಕ ಪ್ರದೀಪನವರಿಗೆ ಕೊಡಲು ಬಾಕಿ ಇರುವ ಸಾಲದ ಹಣದ ವಿಚಾರವಾಗಿ ಜಗಳ ಮಾಡಿ ಫಿರ್ಯಾದಿಗೆ ಅವಾಚ್ಯ ಶಬ್ದಗಳಿಂದ ಜಾತಿ ನಿಂದನೆ ಮಾಡಿ ಮೂವರು ಸೇರಿ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದಾರೆಂದು ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಮನೆಗೆ ನುಗ್ಗಿ ವ್ಯಕ್ತಿ ಮೇಲೆ ಹಲ್ಲೆ:

      ಸೋಮವಾರಪೇಟೆ ಠಾಣಾ ವ್ಯಾಪ್ತಿಯ ನಗರೂರು ಗ್ರಾಮದ ನಿವಾಸಿ ಆರ್. ಗಿರೀಶ್ ರವರು ದಿನಾಂಕ 4-4-2017 ರಂದು ರಾತ್ರಿ 9-30 ಗಂಟೆಯ ಸಮಯದಲ್ಲಿ ಮನೆಯಲ್ಲಿ ಇದ್ದು, ಆ ಸಮಯದಲ್ಲಿ  ಆರೋಪಿಗಳಾದ ಉಮೇಶ, ಬಾನು, ರಂಗ ಮತ್ತು ಸುಜಾತ ಎಂಬವರುಗಳು ಬಂದು ಮನೆಗೆ ಅಕ್ರಮ ಪ್ರವೇಶ ಮಾಡಿ ಆರ್. ಗಿರೀಶ್ ನವರನ್ನು  ಅವಾಚ್ಯ ಶಬ್ದಗಳಿಂದ ಬೈದು ಮರದ ಸೌದೆಯಿಂದ ಹಲ್ಲೆ ನಡೆಸಿ ಗಾಯಪಡಿಸಿದ್ದು, ಈ ಸಂಬಂಧ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.