Friday, April 7, 2017

ಕಾರು ಅಪಘಾತ:

        ಕಾರು ಮಗುಚಿ ಬಿದ್ದು ಜಖಂಗೊಂಡ ಘಟನೆ ಸೋಮವಾರಪೇಟೆ ತಾಲೂಕಿನ ಹೆಗ್ಗಡೆ ಮನೆ ಗ್ರಾಮದಿಂದ ವರದಿಯಾಗಿದೆ. ದಿನಾಂಕ 6-4-2017 ರಂದು ಸೋಮವಾರಪೇಟೆ ನಗರದ ನಿವಾಸಿ ಕಾರ್ತಿಕ್ ಎಂಬುವವರು ಜಗದೀಶ್ ಮತ್ತು ಪ್ರೇಮ್ ಕುಮಾರ್ ಎಂಬುವವರೊಂದಿಗೆ ಪುಷ್ಪಗಿರಿಯಲ್ಲಿರುವ ಶಾಂತಮಲ್ಲಿಕಾರ್ಜುನ ದೇವಸ್ಥಾನಕ್ಕೆ ಕಾರಿನಲ್ಲಿ ಹೋಗುತ್ತಿರುವಾಗ ಹೆಗ್ಗಡೆ ಮನೆ ಗ್ರಾಮಕ್ಕೆ ತಲುಪುವಾಗ ಕಾರನ್ನು ಪ್ರೇಮ್ ಕುಮಾರ್ ರವರು ಅಜಾಗರೂಕತೆಯಿಂದ ಚಾಲನೆ ಮಾಡಿ ಮರಕ್ಕೆ ಡಿಕ್ಕಿಪಡಿಸಿದ ಪರಿಣಾಮ  ಕಾರು ಜಖಂಗೊಂಡಿದ್ದು ಈ ಬಗ್ಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. 
 
ಮಹಿಳೆ ಮೇಲೆ ಹಲ್ಲೆ:
 
      ಹಳೇ ದ್ವೇಷದ ಹಿನ್ನೆಲೆಯಲ್ಲಿ ನಾಲ್ವರು ಸೇರಿ ಇಬ್ಬರು ಮಹಿಳೆಯರ ಮೇಲೆ ಹಲ್ಲೆ ನಡೆಸಿದ ಘಟನೆ ಮಡಿಕೇರಿ ನಗರದ ಚೈನ್ ಗೇಟ್ ಬಳಿ ನಡೆದಿದೆ.  ದಿನಾಂಕ 6-4-2017 ರಂದು ಬೆಳಿಗ್ಗೆ 11-00 ಗಂಟೆಯ ಸಮಯದಲ್ಲಿ  ಮಡಿಕೇರಿ ನಗರದ ಚೈನ್ ಗೇಟ್ ಬಳಿ ವಾಸವಾಗಿರುವ  ಶ್ರೀಮತಿ ಕಾವ್ಯ  ಹಾಗು ಗೌರಮ್ಮ ಎಂಬವರ ಮೇಲೆ ಆರೋಪಿಗಳಾದ ಉಣ್ಣಿಕೃಷ್ಣ, ಪುಷ್ಪ, ಸುರೇಂದ್ರ ಮತ್ತು ಇತರರು ಸೇರಿ ಹಲ್ಲೆ ನಡೆಸಿದ ಬಗ್ಗೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 
    ಈ ವಿಚಾರವಾಗಿ  ಪುಟಾಣಿನಗರದ ನಿವಾಸಿ ಶ್ರೀಮತಿ ಪುಷ್ಪಾರವರ ಮೇಲೆ ಜೆ. ಸ್ವಾಮಿ ಮತ್ತು ಇತರು ಹಲ್ಲೆ ನಡೆಸಿರುವ ಬಗ್ಗೆ ಶ್ರೀಮತಿ ಪುಷ್ಪಾರವರು ನೀಡಿದ ದೂರಿನ ಮೇಲೆ ಪ್ರತ್ಯೇಕ ಮತ್ತೊಂದು ಪ್ರಕರಣ ದಾಖಲಾಗಿದೆ.